Vijayanagara Express

Kannada News Portal

ಜಿಲ್ಲೆಯಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯ ಮೊದಲ ವಸತಿ ನಿಲಯ -ಶಾಸಕ ಗಾಲಿ ಕರುಣಾಕರ ರೆಡ್ಡಿ

1 min read

ಜಿಲ್ಲೆಯಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯ ಮೊದಲ ವಸತಿ ನಿಲಯ -ಶಾಸಕ ಗಾಲಿ ಕರುಣಾಕರ ರೆಡ್ಡಿ

ಹರಪನಹಳ್ಳಿ: ಪಟ್ಟಣದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನ ರೀತಿಯ ವಿದ್ಯಾರ್ಥಿನಿಲಯಗಳೆರಡು ಜಿಲ್ಲೆ ಯಲ್ಲಿಯೇ ಪ್ರಥಮವಾದವಾಗಿವೆ ಎಂದು ತಾಲೂಕಿನ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರು ಹೇಳಿದರು .

ಪಟ್ಟಣದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ತಾಲೂಕಿನ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ವಿದ್ಯಾರ್ಥಿ ನಿಲಯ ಅವಶ್ಯಕತೆ ಇದ್ದು ಅವುಗಳನ್ನು ಇಲ್ಲಿ ಹೊಸ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಸಮಸ್ಯೆ ನಿವಾರಿಸಿದಂತಾಗಿದೆ ಎಂದರು .
○ಒಟ್ಟು ಎರಡು ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗಿದೆ ಒಂದು ಬಾಪೂಜಿ ನಗರದ ಮೆಟ್ರಿಕ್ ನಂತರದ ಬಾಲಕಿಯರಿಗಾಗಿ ಸುಮಾರು 250ರಿಂದ 300 ವಿದ್ಯಾರ್ಥಿ ನಿಯರು ತಂಗಬಹುದಾದ ಸುಸಜ್ಜಿತವಾದ ಕಟ್ಟಡ ನಿರ್ಮಾಣ ಪಟ್ಟಣದ ಕೊಟ್ಟೂರು ಬೈಪಾಸ್ ರಸ್ತೆಯ ತಳಪರೆಯ ಹತ್ತಿರ 5 ಕೋಟಿ ರೂಪಾಯಿ ವೆಚ್ಚದಲ್ಲಿ 40 ಕೊಠಡಿಗಳ ವಸತಿ ನಿಲಯವನ್ನು ನಿರ್ಮಿಸಲಾಗಿದೆ ಇನ್ನೊಂದು ಹರಿಹರ ರಸ್ತೆಯಲ್ಲಿರುವ ಕೆಎಸ್ಸಾರ್ಟಿಸಿ ಬಸ್ ಡಿಪೋ ಇಂಬಾಗ 7 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ ಇದು ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಆಗಿರುತ್ತದೆ ಇದರಲ್ಲಿ ಸುಮಾರು97 ಕೊಠಡಿಗಳಿದ್ದು 300ರಿಂದ 400ವಿದ್ಯಾರ್ಥಿಗಳು ವಾಸಿಸಲು ಅವಕಾಶ ಮಾಡಿಕೊಡಲಾಗಿದೆ ಎಂದ ಅವರು
ಈ ಎರಡೂ ಕಟ್ಟಡಗಳು ಸಹ ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಬರುವ ವಿಧ್ಯಾರ್ಥಿಗಳಿಗೆ ನಿರ್ಮಿಸಲಾಗಿದೆ ಎರಡೂ ಕಟ್ಟಡಗಳು ಸೇರಿ ಒಟ್ಟು 12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಕಟ್ಟಡ ಅತ್ಯಾಧುನಿಕ ಶೈಲಿಯಲ್ಲಿ ಕಟ್ಟಲಾಗಿದೆ ಉತ್ತಮ ಆಧುನಿಕ ತಂತ್ರಜ್ಞಾನ ಬಳಸಿ ಶುದ್ದಕುಡಿಯುವ ನೀರಿನ ಘಟಕ ಹಾಗೂ ನೀರಿನ ಪುನರ್ ಬಳಕೆಯನ್ನು ಮಾಡಿಕೊಳ್ಳಲು ತಂತ್ರಜ್ಞಾನವನ್ನು ಅಳವಡಿಸಲಾಗಿದೆ ಆ ಮೂಲಕ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಯನ್ನು ಮಾಡಲಾಗಿದೆ ಎಂದರು.
ಸುಂದರ ಮತ್ತು ಸುಸಜ್ಜಿತವಾದ ಕಟ್ಟಡ ಇದಾಗಿದ್ದು ಮುಂದಿನ ದಿನಗಳಲ್ಲಿ ಇನ್ನಷ್ಟು ಅನುದಾನವನ್ನು ತಾಲೂಕಿಗೆ ತಂದು ಇನ್ನೂ ಕೊರತೆ ಇರುವ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಲಾಗುವುದು ಎಂದರು .

ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕಿ ರೇಣಾಕದೇವಿ ಮಾತನಾಡಿ ನಮ್ಮ ಇಲಾಖೆಗೆ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಇನ್ನೂ ಮೂರು ವಸತಿ ನಿಲಯಗಳ ಅವಶ್ಯಕತೆ ಇದ್ದು, ಪ್ರಸ್ತುತ ಒಂದು ವಸತಿ ನಿಲಯ ಮಂಜೂರಾಗಿದ್ದು ಸ್ಥಳದ ಅಗತ್ಯವಿದೆ, ಈ ಸಂಬಂಧ ಶಾಸಕ ಜಿ.ಕರುಣಾಕರರೆಡ್ಡಿರವರ ಗಮನಕ್ಕೆ ತರಲಾಗಿದೆ ಎಂದರು.

ಕಳೆದ ಹತ್ತು ಇಪ್ಪತ್ತು ವರ್ಷಗಳ ಹಿಂದೆ ಹರಪನಹಳ್ಳಿ ತಾಲೂಕಿನಲ್ಲಿ ಸಾಕಷ್ಟು ವಿದ್ಯಾರ್ಥಿಗಳು ವಿದ್ಯಾರ್ಥಿ ನಿಲಯ ಗಳ ವ್ಯವಸ್ಥೆಇಲ್ಲದೆ ಗ್ರಾಮಾಂತರ ಪ್ರದೇಶದಿಂದ ಬಂದಂತಹ
ಬಡವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಿದ್ದರು ಯಾವುದಾದರೂ ಒಂದು ವಿದ್ಯಾರ್ಥಿ ನಿಲಯದಲ್ಲಿ ಪ್ರವೇಶ ಪಡೆಯಲು ಅರ್ಜಿ ಸಲ್ಲಿಸಿದ್ದ ವಿದ್ಯಾರ್ಥಿಯೊಬ್ಬ 2001-2002 ರಲ್ಲಿ ಕರ್ನಾಟಕದ ಅಂದಿನ ಮುಖ್ಯಮಂತ್ರಿ ಯಾಗಿದ್ದ ಎಸ್.ಎಂ.ಕೃಷ್ಣರ ಬಳಿ ಹೋಗಿ ಲೆಟರ್ ತಂದು ವಸತಿ ನಿಲಯಕ್ಕೆ ಸೇರಿಸಿಕೊಳ್ಳುವಂತೆ ಶಿಫಾರಸ್ಸು ಮಾಡಿಸಿದ್ದು ಉಂಟು ಇದನ್ನು ಮನಗಂಡ ಹರಪನಹಳ್ಳಿ ತಾಲೂಕಿನ ವಿದ್ಯಾರ್ಥಿ ಮುಖಂಡರು, ಹೋರಾಟಗಾರರು,

ಜನಸಾಮಾನ್ಯರು,ಕೆಲವು ಜನಪ್ರತಿನಿಧಿಗಳು, ಬುದ್ದಿಜೀವಿಗಳು ಅನೇಕ ಬಾರಿ ಹೋರಾಟಗಳನ್ನು ನೆಡೆಸಿ ಮುಷ್ಕರಗಳನ್ನು ಮಾಡಿದ್ದ ನಿಷ್ಪಕ್ಷಪಾತವಾದ ಅಂತಹ ಹೋರಾಟಗಳನ್ನು ಇಲ್ಲಿಸ್ಮರಿಸಿಕೊಳ್ಳಬಹುದು ಇವುಗಳೆಲ್ಲದರ ಪ್ರತಿಫಲವಾಗಿಯೇ ಇಲ್ಲಿನ ಶಾಸಕರು ಅನುದಾನ ತಂದು ಹಿಂದುಳಿದ ಬಡ ಜನರಿಗೆ ಅನುಕೂಲವಾಗಲು ಇಂತಹ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡಿರುವುದು ಸ್ಥಳೀಯ ಶಾಸಕರ ಇಚ್ಚಾಶಕ್ತಿಯೇ ಕಾರಣವಾಗಿದೆ ಎಂದೇ ಆವರನ್ನು ತಾಲೂಕಿನ ಜನತೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಬಹುದಾಗಿದೆ ಹಾಗೂ ವಿದ್ಯಾರ್ಥಿಗಳು ವಸತಿ ನಿಲಯಕ್ಕೆ ಪೈಪೋಟಿ ನಡೆಸುವ ಪರಿಸ್ಥಿತಿ ಈಗ ನಿವಾರಣೆಯಾದಂತಾಗಿದೆ ಎಂದೇ ಹೇಳಬಹುದು.

ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ವಿಷ್ಣುವರ್ಧನ್ ರೆಡ್ಡಿ, ಆರ್.ಲೋಕೇಶ್, ಬಾಗಳಿ ಕೊಟ್ರಪ್ಪ, ಮ್ಯಾಕಿ ದುರುಗಪ್ಪ, ಪುರಸಭೆ ಮಾಜಿ ಅಧ್ಯಕ್ಷ ಮೆಹಬೂಬ್ ಸಾಬ್ , ಪುರಸಭೆ ಸದಸ್ಯ ರೊಕ್ಕಪ್ಪ ,ಕಿರಣ್ ಶಾನುಭೋಗ, ಹಾರಾಳ್ ಹೆಚ್ ಅಶೋಕ್ ಪುರಸಭೆ ಸದಸ್ಯರು, ಸತ್ತಾರ್ ಸಾಬ್,
ಮಾಚಿಹಳ್ಳಿ ಮಲ್ಲೇಶ್ ನಾಯ್ಕ್, ಶಿವಪುರದ ಪೂರ್ಯ ನಾಯ್ಕ್, ಗೌರಿ ಹಳ್ಳಿ ಗೌಳಿ ಕೊಟ್ರೇಶ್ ,ಭರಮಣ್ಣ ಅಳಿಗಂಚಿಕೇರಿ,ಶಿರಗಾನಹಳ್ಳಿ ವಿಶ್ವನಾಥ್, ಸಮಾಜಕಲ್ಯಾಣ ಇಲಾಖೆಯ ಸಿಬ್ಬಂದಿ ದೇವೇಂದ್ರಪ್ಪ,ಎನ್ ಜಿ.ಬಸವರಾಜ್, ರಾಘವೇಂದ್ರ,ನಿಲಯಪಾಲಕರಾದ ಸುನೀತಾ,ಯಲ್ಲಮ್ಮ , ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *