October 22, 2024

Vijayanagara Express

Kannada News Portal

ಪಿಯುಸಿ ಶುಲ್ಕ ವಸೂಲಿ, ವಿದ್ಯಾರ್ಥಿಗಳಿಂದ ಪ್ರತಿಭಟನೆ : ಕರುಣಾಕರ ರೆಡ್ಡಿ ಮಧ್ಯಸ್ಥಿಕೆ ಬಗೆಹರಿಯದ ಶುಲ್ಕ ಸಮಸ್ಯೆ

1 min read

ಪಿಯುಸಿ ಶುಲ್ಕ ವಸೂಲಿ, ವಿದ್ಯಾರ್ಥಿಗಳಿಂದ ಪ್ರತಿಭಟನೆ : ಕರುಣಾಕರ ರೆಡ್ಡಿ ಮಧ್ಯಸ್ಥಿಕೆ ಬಗೆಹರಿಯದ ಶುಲ್ಕ ಸಮಸ್ಯೆ

 

ಹರಪನಹಳ್ಳಿ: ಪಿಯುಸಿ ಪ್ರವೇಶಾತಿಯಲ್ಲಿ ಮಿತಿ ಮೀರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಮುಖಂಡರಿಂದ ಪ್ರತಿಭಟನೆ ನಡೆಯುವ ವೇಳೆ ಸ್ಥಳೀಯ ಶಾಸಕ ಗಾಲಿ ಕರುಣಾಕರ ರೆಡ್ಡಿ ಅವರು ಮದ್ಯ ಪ್ರವೇಶಿಸಿ ಮಾತುಕತೆ ನಡೆಸಿದ ಘಟನೆ ಪಟ್ಟಣದ ಎಸ್ ಎಸ್ ಹೆಚ್ ಜೈನ ಪಿಯುಸಿ ಕಾಲೇಜಿನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಪಟ್ಟಣದ ಬಳ್ಳಾರಿಯ ವಿ ವಿ ಸಂಘದ ಅಡಿಯಲ್ಲಿ ನಡೆಯುತ್ತಿರುವ ಅನುದಾನ ರಹಿತ ಪಿಯು ಕಾಲೇಜ್ ಆದ ಶೇಷಾಜಿ ಹಸ್ತಿಮಹಲ್ ಜೈನ್ ಕಾಲೇಜಿನಲ್ಲಿ ಮನಸ್ಸಿಗೆ ಬಂದಂತೆ ವಿದ್ಯಾರ್ಥಿಗಳಿಗೆ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿ ಮುಖಂಡರು ಹಾಗೂ ಪೋಷಕರಿಂದ ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಏಕೆಂದರೆ ಇತ್ತ ಕಡೆ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಾಗಲಿ ಆಡಳಿತ ಮಂಡಳಿ ಅಧ್ಯಕ್ಷರಾಗಲಿ, ಪ್ರಾಚಾರ್ಯರಾಗಲಿ ಸೌಜನ್ಯಕ್ಕಾದರೂ ತಿರುಗಿ ನೋಡಿಲ್ಲ ಎಂದು ಹೇಳಲಾಗುತ್ತದೆ.

ಹೀಗಾಗಿ ಶುಕ್ರವಾರವು ಸಹ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರಿಂದ ಪಟ್ಟಣದಲ್ಲೇ ಉಳಿದು ಕೊಂಡಿದ್ದ ಶಾಸಕರ ಗಮನಕ್ಕೆ ಈ ವಿಷಯ ಬಂದಿದೆ ಕೂಡಲೇ ಶಾಸಕರು ತಮ್ಮ ಕಾರ್ಯಕರ್ತರೊಂದಿಗೆ ಕಾಲೇಜ್ ಗೆ ಭೇಟಿ ನೀಡಿದ ಅವರು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಯವರಿಂದ ಎಲ್ಲಾ ಕಡತಗಳನ್ನು ಪರಿಶೀಲಿಸಿ ಹಾಜರಿ ಪುಸ್ತಕದಲ್ಲಿ ಪ್ರಾಚಾರ್ಯರು ಸಿಹಿ ಇಲ್ಲದ್ದನ್ನು ಗಮನಿಸಿ ಅಲ್ಲೇ ಹಾಜರಿದ್ದ ಸುದ್ದಿಗಾರರಿಗೆ ತೋರಿಸಿದರು.


ಶುಲ್ಕ ಸರ್ಕಾರ ವಿಧಿಸಿರುವ ಪಟ್ಟಿಯನ್ನು ತರಿಸಿಕೊಂಡು ಪರಿಶೀಲಿಸಿದರು ಅದರಲ್ಲಿ ಅನುದಾನರಹಿತ ಕಾಲೇಜಿಗೆ ಪ್ರವೇಶಕ್ಕೆ 1800 ರೂ ಇದ್ದದ್ದನ್ನು ಗಮನಿಸಿ ದಂಗಾಗಿಹೋದರು ಅದಾದ ನಂತರ ಯಾಕೆ ಹೀಗೆ ಮನಸ್ಸಿಗೆ ಬಂದಂತೆ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಶುಲ್ಕವನ್ನು ವಸೂಲಾತಿ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು ಇದಕ್ಕೆ ಸಿಬ್ಬಂದಿಯು ಅರೆಬರೆ ಉತ್ತರವನ್ನು ನೀಡಿ ಜಾರಿಕೊಳ್ಳಲು ಮುಂದಾದರು ಆಗ ಶಾಸಕರು ಸಂಬಂಧಪಟ್ಟ ಇಲಾಖೆಯ ಉಪನಿರ್ದೇಶಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಮಾತನಾಡಿದಾಗ ಇಲ್ಲಿ ಶುಲ್ಕ ಹೆಚ್ಚಿಸುತ್ತಿದ್ದಾರೆ ಎಂಬ ಆರೋಪವಿದೆ ಬಗೆಹರಿಸಲು ಆಡಳಿತ ಮಂಡಳಿ ಅಧ್ಯಕ್ಷರಾಗಲಿ ಆಗಲಿ ಕಾರ್ಯದರ್ಶಿಗಳಾದ ಇಲ್ಲದೆ ಇದೊಂದು ದಿಕ್ಕಿಲ್ಲದಂತ ಕಾಲೇಜು ಆದಂತಾಗಿದೆ ಎಂದರು.

ಆಗ ಮಾತನಾಡಿದ ಉಪನಿರ್ದೇಶಕರು ನನ್ನದು ಸೋಮವಾರ ಕೋರ್ಟ್ ಕೆಲಸವಿರುತ್ತದೆ ಅದಾದನಂತರ ಕಾಲೇಜಿಗೆ ಬಂದು ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದರು ಇದಕ್ಕೆ ಅಲ್ಲೇ ಇದ್ದ ವಿದ್ಯಾರ್ಥಿ ಮುಖಂಡರುಗಳು ಕಳೆದ ಒಂದು ವಾರದಿಂದ ಇದರ ಬಗ್ಗೆ ತಾಲೂಕು ದಂಡಾಧಿಕಾರಿಗಳಿಗೆ ದೂರು ನೀಡಿದ್ದೇವೆ ಇದಕ್ಕೆ ಉಪನಿರ್ದೇಶಕರು ಬರುತ್ತೇವೆಂದು ಸತಾಯಿಸಿ ಕಳೆದ ಸೋಮವಾರವೇ ನನ್ನದು ಕೋರ್ಟ್ ಕೆಲಸವಿದೆ ಮಂಗಳವಾರ ಬರುತ್ತೇನೆಂದು ಸಬೂಬು ಹೇಳಿ ಜಾರಿಕೊಂಡಿದ್ದರು ಎಂದು ನಡೆದಿದ್ದ ಘಟನೆಯನ್ನು ಶಾಸಕರಿಗೆ ಮನವರಿಕೆ ಮಾಡಲು ಪ್ರಯತ್ನ ಪಟ್ಟರೂ ಅದು ಪ್ರಯೋಜನವಾಗಲಿಲ್ಲ ಶಾಸಕರ ಗಮನಕ್ಕೆ 1800 ರೂ ಪಿಯು ಶುಲ್ಕ ಇರುವುದು ನಿಜ ಎಂದು ಮನವರಿಕೆಯಾದರೂ ಅದರ ಬಗ್ಗೆ ಯೋಚನೆ ಮಾಡಿ ಮಾತಾನಾಡದೆ , ಎಲ್ಲರೂ 11 ಸಾವಿರ ರೂಪಾಯಿಗಳನ್ನು ಇದರಲ್ಲಿ ಇದ್ದಂತೆ ಕಟ್ಟಿ ಎಂದು ಹೇಳಿದ್ದು ಹಾಸ್ಯಾಸ್ಪದವಾಗಿದೆ ಎಂದು ಕೆಲ ವಿದ್ಯಾರ್ಥಿ ಮುಖಂಡರುಗಳು ಗೊಣಗಿದರು.


ಈ ಶುಲ್ಕ ವಸೂಲಿ ಪಟ್ಟಿಯು ಕಾಲೇಜು ಆಡಳಿತ ಮಂಡಳಿ ಯವರು ತಮ್ಮಿಚ್ಚಿಗೆ ತಕ್ಕಂತೆ ಮಾಡಿಕೊಂಡಿರುವುದಕ್ಕೆ ನಾವೇಕೆ ಶುಲ್ಕ ಕಟ್ಟಬೇಕು ಎಂದು ವಿದ್ಯಾರ್ಥಿ ಮುಖಂಡರು ವಾದಿಸಿದರು.

ಯಾವ ಪುರುಷಾರ್ಥಕ್ಕಾಗಿ ಶಾಸಕರು ಈ ರೀತಿಯ ಕಾಲೇಜು ಭೇಟಿಯನ್ನು ಮಾಡಬೇಕು ಇದರಿಂದ ಯಾರಿಗೆ ಪ್ರಯೋಜನ ಎಂದು ಕೆಲ ವಿದ್ಯಾರ್ಥಿ ಮುಖಂಡರು ಅವರವರಲ್ಲೇ ಪ್ರಶ್ನಿಸಿಕೊಂಡರು ಶಾಸಕರ ಹೇಳಿಕೆಯಿಂದ ವಿದ್ಯಾರ್ಥಿ ಮುಖಂಡರುಗಳ ಕಣ್ಣು ಕೆಂಪಾದವು ಏಕೆಂದರೆ ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕೂ ಆಡಳಿತ ಮಂಡಳಿ ನಿಗದಿಗೊಳಿಸಿರುವ ಶುಲ್ಕಕ್ಕೂ ಅಜಗಜಾಂತರ ವ್ಯತ್ಯಾಸವಿದೆ ಗ್ರಾಮಾಂತರ ಭಾಗದ ಬಡವರ್ಗದ ಕಾರ್ಮಿಕ ವರ್ಗದ ಇಂಥವರೇ ಹೆಚ್ಚಾಗಿ ವಾಸವಿರುವ ಈ ತಾಲೂಕಿನಲ್ಲಿ ದುಬಾರಿ ಶುಲ್ಕವು ಕಬ್ಬಿಣದ ಕಡಲೆಯಾಗಿ ಪರಿಣಮಿಸಿದೆ ಒಂದು ವೇಳೆ ಹೀಗೆ ಮುಂದುವರಿದರೆ ಈ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ಮರೀಚಿಕೆಯಾಗುತ್ತಿದೆ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ .

ಈ ಸಂದರ್ಭದಲ್ಲಿ  ಬಾಗಳಿ ಕೊಟ್ರೇಶಪ್ಪ, ಮಾಚಿಹಳ್ಳಿ ಮಲ್ಲೇಶ್ ನಾಯ್ಕ್ ,ಗೌರಿಹಳ್ಳಿ ಗೌಳಿ ಕೊಟ್ರೇಶ್, ನಿಟ್ಟೂರು ಪ್ರಶಾಂತ್,ಕೆ ಪ್ರಕಾಶ್, ವಿದ್ಯಾರ್ಥಿ ಮುಖಂಡರಾದ ಬಸವರಾಜ್, ನಾಗರಾಜ್, ಮುಂತಾದವರು ಹಾಜರಿದ್ದರು.

 

 

ಇಂದಿನ ಸಭೆಯಲ್ಲಿ ಶಾಸಕರು ಖಾಸಗಿ ಶಿಕ್ಷಣ ಸಂಸ್ಥೆಗಳು ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಡೊನೇಷನ್ ವಸೂಲಿ ಮಾಡುತ್ತಿರುವ ಸಂಸ್ಥೆಗಳಿಗೆ ಕಡಿವಾಣ ಹಾಕಿ ಬಡವಿದ್ಯಾರ್ಥಿ ಗಳ ಪರವಾಗಿ ಮಾತಾಡಬೇಕಿತ್ತು ಅದರೆ ಆ ರೀತಿ ಮಾಡದೆ ಹನ್ನೊಂದು ಸಾವಿರ ರೂಪಾಯಿಗಳನ್ನು ಶುಲ್ಕ ಕಟ್ಟಿರಿ ಎಂದು ಹೇಳಿದ್ದು ನಮಗೆ ಬೇಸರದ ತಂದಿದೆ.

ತಾಲೂಕು ಕಾರ್ಯದರ್ಶಿ ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆ.

ಹರಪನಹಳ್ಳಿ ಶಾಸಕರಾದ ಜಿ ಕರುಣಾಕರ ರೆಡ್ಡಿ ರವರು ಪಿಯು ಕಾಲೇಜ್ ಡೊನೇಷನ್ ಹೆಚ್ಚಳ ಕುರಿತು ವಿದ್ಯಾರ್ಥಿಗಳಿಗೆ ಸ್ಪಂದನೆ ನೀಡಲಿಲ್ಲ ಎಂದು ನನ್ನ ವಿರೋಧವಿದೆ .


ಎಂ.ಡಿ.ಶ್ರೀಕಾಂತ್ ಯಾದವ್
NSUI(ವಿದ್ಯಾರ್ಥಿ ಕಾಂಗ್ರೆಸ್) ಬಳ್ಳಾರಿ ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷರು

Leave a Reply

Your email address will not be published. Required fields are marked *