Vijayanagara Express

Kannada News Portal

ಪಟ್ಟಣವನ್ನು ಹಸಿರೀಕರಣ ಮಾಡುತ್ತೇನೆ. ಹಾರಳ್ ಹೆಚ್.ಎಂ. ಅಶೋಕ

1 min read

ಪಟ್ಟಣವನ್ನು ಹಸಿರೀಕರಣ ಮಾಡುತ್ತೇನೆ. ಹಾರಳ್ ಹೆಚ್.ಎಂ. ಅಶೋಕ

 

ಹರಪನಹಳ್ಳಿ: ಪಟ್ಟಣವನ್ನು ಹಸಿರೀಕರಣ ಮಾಡುತ್ತೇನೆ ಎಂದು ಪುರಸಭೆ ಸದಸ್ಯ ಹಾರಳ್ ಹೆಚ್.ಎಂ. ಅಶೋಕರವರು ಹೇಳಿದರು.

ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಗಿಡ ನೆಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು ಈ ವೇಳೆ ಮಾತನಾಡಿದ ಅವರು ಮನುಷ್ಯನ ಮಿತಿಮೀರಿದ ಅನಂತ ಬಯಕೆಗಳು , ಏರುತ್ತಿರುವ ಜನಸಂಖ್ಯೆ ವೈಭವೋಪೇತ ಜೀವನದ ಬಯಕೆಗಳು ಪರಿಸರವನ್ನು ಹಾಳುಮಾಡುತ್ತಿವೆ. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಮಕ್ಕಳಂತೆ ಪೋಷಿಸಿದಾಗ ಪರಿಸರವನ್ನು ಉಳಿಸುವುದಕ್ಕೆ ಸಾಧ್ಯವಾಗುತ್ತದೆ ಎಂದು ಪುರಸಭೆ ಸದಸ್ಯರು ಹಾಗೂ ಬಿಜೆಪಿ ಮುಖಂಡರಾದ ಹಾರಳು ಅಶೋಕ ಹೇಳಿದರು .


ಪಟ್ಟಣದ ಆಚಾರ್ಯ ಬಡಾವಣೆ ಯಲ್ಲಿರುವ ಗಣಪತಿ ದೇವಸ್ಥಾನದ ಮುಂಭಾಗ ಮತ್ತು ಬಾಪೂಜಿ ನಗರದ ಸಮೀಪದಲ್ಲಿರುವ ಸ್ಮಾಶಾನದಲ್ಲಿ ಹಾರಳು ಅಶೋಕ್ ರವರ ಹುಟ್ಟು ಹಬ್ಬದ ಅಂಗವಾಗಿ ಸಸಿ ನೇಡುವ ಮೂಲಕ ಬಿಜೆಪಿ ಮುಖಂಡರ ನೇತೃತ್ವದಲ್ಲಿ ಸಸಿ ನೇಡಿ ಮೂಲಕ ೫೨ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು .
ಹರಪನಹಳ್ಳಿ ಪಟ್ಟಣವನ್ನು ಹಸಿರೀಕರಣಮಾಡುವ ಗುರಿಯನ್ನು ಹೊಂದಿದ್ದೇನೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಸಂಬಂಧಪಟ್ಟ ಅಧಿಕಾರಿಗಳು ಸಲಹೆ ಸಹಕಾರ ನೀಡಿದರೆ ಹರಪನಹಳ್ಳಿ ಪಟ್ಟಣವನ್ನು ಹಸಿರೀಕರಣವನ್ನಾಗಿ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಾಯುಮಾಲಿನ್ಯ : ವಾಯು ಜೀವಧಾತು ಗಾಳಿಯಿಲ್ಲಿದಿದ್ದರೆ ಜೀವಸಂಕುಲ ಒಂದು ಕ್ಷಣವೂ ಈ ಭೂಮಿಯ ಮೇಲೆ ಇರಲು ಸಾಧ್ಯವಿಲ್ಲ ಅಷ್ಟು ವಾಯು ವಿಷವಾಗುತ್ತದೆ.

ಶಬ್ದಮಾಲಿನ್ಯ ಅತಿಯಾದ ಶಬ್ದ ಮನುಷ್ಯನ ಮಾನಸಿಕ ನೆಮ್ಮದಿಯನ್ನು ಹಾಳುಮಾಡುತ್ತದೆ, ವಾಹನ ದಟ್ಟಣೆ, ಕೈಗಾರಿಕೆ, ಯಂತ್ರಗಳು , ಧ್ವನಿವರ್ಧಕಗಳು ಶಬ್ದಮಾಲಿನ್ಯಕ್ಕೆ ಮೂಲ ಕಾರಣಗಳು ಇಂದು ಮಧುಮೇಹ, ರಕ್ತದೊತ್ತಡದಂತ ಮಾರಕ ಖಾಯಿಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ ಇದಕ್ಕೆ ನಮ್ಮ ಜೀವನ ಶೈಲಿ ಆಹಾರ ಕ್ರಮಗಳ ಜೊತೆಗೆ ಅತಿಯಾದ ಶಬ್ದವೂ ಕಾರಣವಾಗುತ್ತದೆ ಎಂದು ವಿವರಿಸಿದರು.

 

ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡ ಆರ್. ಲೋಕೇಶ್, ಪುರಸಭೆ ಸದಸ್ಯರಾದ ಡಿ. ರೊಕ್ಕಪ್ಪ, ಎಸ್.ಕೆ. ಜಾವೀದ್, ವಿನಯ್ ಕುಮಾರ್, ಅಸ್ಲಾಂ, ಹನುಮಂತಪ್ಪ, ವಾಗೇಶ್,ಕಿರಣ್ ಶ್ಯಾನಬೋಗ, ಹೊನ್ನಪ್ಪ, ರಾಹುಲ್, ನಾಗರಾಜ್, ಭರಮಪ್ಪ, ಮತ್ತು ಇತರರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *