Vijayanagara Express

Kannada News Portal

ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಅತ್ಯೂನ್ನತ ಶ್ರೇಣಿ ಪಡೆದ ಗ್ರಾಮೀಣ ಪ್ರತಿಭೆ-ಎಂ ಜಿ ಕಾವ್ಯ ಗೆ ಸನ್ಮಾನ

1 min read

ವಿಜ್ಞಾನ ವಿಭಾಗದಲ್ಲಿ ಜಿಲ್ಲೆಗೆ ಅತ್ಯೂನ್ನತ ಶ್ರೇಣಿ ಪಡೆದ ಗ್ರಾಮೀಣ ಪ್ರತಿಭೆ-ಎಂ ಜಿ ಕಾವ್ಯ ಗೆ ಸನ್ಮಾನ

ಹರಪನಹಳ್ಳಿ: ತಾಲೂಕಿನ ತಲುವಾಗಲು ಗ್ರಾಮದ ಕೊಟ್ರೇಶ್ ಮಲ್ಲನಗೌಡ ಮತ್ತು ಕವಿತಾ ಯು ದಂಪತಿಯ ಮಗಳಾದ ಎಂ.ಜಿ. ಕಾವ್ಯ ರವರು ದಾವಣಗೆರೆ ಜಿಲ್ಲೆಗೆ ವಿಜ್ಞಾನ ವಿಭಾಗದಲ್ಲಿ 600ಅಂಕಗಳಿಗೆ 595ಅಂಕಗಳನ್ನು ಪಡೆಯುವ ಮೂಲಕ ಅವರು ದಾವಣಗೆರೆ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಪ್ರತಿಭೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ ಇವರಿಗೆ ಬಸವ ಸೈನ್ಯ ಸಂಘಟನೆಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು .

ಹರಪನಹಳ್ಳಿ ತಾಲೂಕಿನ ಕುಗ್ರಾಮವಾದ ತಲುವಾಗಲು ಗ್ರಾಮದ ಕೊಟ್ರೇಶಪ್ಪ ಮಲ್ಲನಗೌಡ ಮತ್ತು ಕವಿತಾ ದಂಪತಿಗಳ ಮಗಳಾದ ಕಾವ್ಯ ಎಂ ಜಿ ರವರು ದಾವಣಗೆರೆ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ವಿಶ್ವಚೇತನ ವಸತಿ ಪ್ರೌಢಶಾಲೆಯಲ್ಲಿ ಅಭ್ಯಾಸ ಮಾಡಿದ್ದು 600 ಅಂಕಗಳಿಗೆ 595 ಅಂಕಗಳನ್ನು ಶೇಕಡಾ 99 ಪಡೆದು ವಿಜ್ಞಾನ ವಿಭಾಗದಲ್ಲಿ ರಾಜ್ಯದಲ್ಲಿ ಮೂರನೇ ಅತ್ಯುನ್ನತ ಶ್ರೇಣಿ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ಅತ್ಯುನ್ನತ ಶ್ರೇಣಿಯನ್ನು ಪಡೆಯುವ ಮೂಲಕ ನಗರಕ್ಕೆ ,ಕುಟುಂಬಕ್ಕೆ ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.

ಗ್ರಾಮಾಂತರ ಪ್ರದೇಶಗಳಿಂದ ಬಂದಂತ ಮಲ್ಲನಗೌಡ ಕವಿತಾ ದಂಪತಿಯ ಪುತ್ರಿಯಾದ ಕಾವ್ಯ ರವರ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಸಂಸ್ಥಾಪಕ ರಾದ ವಿಜಯಲಕ್ಷ್ಮೀ, ಅಧ್ಯಕ್ಷರಾದ ಕಿರಣ್ ಕುಮಾರ್ ರೆಡ್ಡಿ, ಪ್ರಾಚಾರ್ಯರಾದ ವಿನೋದ್ ಕುಮಾರ್ , ನಿರ್ದೇಶಕರಾದ ಪವನ್ ಕುಮಾರ್ ಹಾಗೂ ಸಿಬ್ಬಂದಿಗಳು ಪೋಷಕರು ಬಾಂಧವರು ಹಿತೈಷಿಗಳು ವಿದ್ಯಾರ್ಥಿನಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ .

ಕಂಚಿಕೇರಿ ಗ್ರಾಮದ ಪಂಚಮಸಾಲಿ ಸಮಾಜದ ಬಸವ ಸೈನ್ಯ ಸಂಘಟನೆಯ ಮುಖಂಡರಾದ ಜಯಣ್ಣ ಚಿಕ್ಕಮೇಗಳಗೇರಿ ಮತ್ತು ಕುಟುಂಬ ವರ್ಗದವರು ಹಾಗೂ ಸಿದ್ದೇಶ್ ಮತ್ತು ಕುಟುಂಬ ವರ್ಗದವರು , ಕೊಟ್ರೇಶ್ ರವರು ಕಾವ್ಯರವರನ್ನು ಸನ್ಮಾನಿಸಿ ಗೌರವಿಸಿದ್ದಾರೆ ಹಾಗೂ ಅವರ ಮುಂದಿನ ವಿದ್ಯಾಭ್ಯಾಸವು ಇನ್ನೂ ಉನ್ನತ ಮಟ್ಟಕ್ಕೆ ಏರಲಿ ಸಮಾಜದಲ್ಲಿ ಉತ್ತಮ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಆಶಿಸಿ ಅಭಿನಂದಿಸಿದ್ದಾರೆ ಈ ಸಂದರ್ಭದಲ್ಲಿ ಸಿದ್ದೇಶ್, ಡಾಕ್ಟರ್ ಜಯಣ್ಣ ,ಕೊಟ್ರೇಶ್ ,ಮುಂತಾದವರು ಉಪಸ್ಥಿತರಿದ್ದರು

 

ಆರಂಭ ದಿಂದಲೂ ಉತ್ತಮ ವಾದ ಮತ್ತು ನಿರಂತರ ವಾದ ಪರಿಶ್ರಮದಿಂದ ಅಭ್ಯಾಸವನ್ನು ಮಾಡಿದ್ದಕ್ಕಾಗಿ ಈ ಫಲಿತಾಂಶ ಸಾದ್ಯವಾಗಿದೆ ಎಂದ ಅವರು ಮುಂದೆ ವೈದ್ಯೆ ಯಾಗುವ ಕನಸನ್ನು ಹೊಂದಿದ್ದೇನೆ .


ಕಾವ್ಯ ಎಂ.ಜಿ. ವಿದ್ಯಾರ್ಥಿನಿ

ನಾನು ದಾವಣಗೆರೆಯಲ್ಲಿ ಅನುದಾನಿತ ಪ್ರೌಢಶಾಲೆ ಶಿಕ್ಷಕ ವೃತ್ತಿ ಯಲ್ಲಿ ಕೆಲಸ ಮಾಡುತ್ತಿರುವೆ ನನ್ನ ಮಗಳ ಓದಿಗೆ ಪೂರಕವಾದ ವಾತಾವರಣ ಮತ್ತು ಪುಸ್ತಕ ಸಾಮಾಗ್ರಿಗಳನ್ನು ಒದಗಿಸಿದ್ದೆವು ನಿರಂತರವಾಗಿ ಕಠಿಣ ಪರಿಶ್ರಮ ಹಾಕಿ ಉತ್ತಮ ಸಾಧನೆ ಮಾಡಿದ್ದಾಳೆ ಮಗಳು ವೈದ್ಯೆ ಯಾಗುವ ಗುರಿಯನ್ನು ಹೊಂದಿದ್ದಾಳೆ ಅದಕ್ಕೆ ಪ್ರೂತ್ಸಹ ಸಹಕಾರ ನೀಡುತ್ತೇನೆ .


ವಿದ್ಯಾರ್ಥಿ ನಿ ತಂದೆ ಕೊಟ್ರೇಶ್ ಮಲ್ಲನಗೌಡ ರವರು

 

 

 

 

 

 

 

 

 

 

 

 

Leave a Reply

Your email address will not be published. Required fields are marked *