November 6, 2024

Vijayanagara Express

Kannada News Portal

ಮಾರಕ ರೋಗಗಳ ನಿವಾರಣೆಗೆ, ಮಳೆ ಬೆಳೆ ಗಾಗಿ ಅಜ್ಜಿಅಮ್ಮ ಹಬ್ಬ ಆಚರಣೆ

1 min read

ಮಾರಕ ರೋಗಗಳ ನಿವಾರಣೆಗೆ, ಮಳೆ ಬೆಳೆ ಗಾಗಿ ಅಜ್ಜಿಅಮ್ಮ ಹಬ್ಬ ಆಚರಣೆ

ಹರಪನಹಳ್ಳಿ : ಪಟ್ಟಣದ ವಾಲ್ಮೀಕಿ ನಗರದಲ್ಲಿ ಪ್ರತಿ ವರ್ಷದ ಪದ್ದತಿಯಂತೆ ಈ ವರ್ಷವೂ ಸಹ ಅಜ್ಮಿ ಅಮ್ಮನ ಹಬ್ಬವನ್ನು
ಪಟ್ಟಣದ ವಾಲ್ಮೀಕಿ ನಗರದಲ್ಲಿ ಮಾರಕ ರೋಗಗಳು ನಿವಾರಣೆಗೆ, ಮಳೆ ಬೆಳೆ ಗಾಗಿ ಅಜ್ಜಿಅಮ್ಮ ಹಬ್ಬವನ್ನು ಆಚರಿಸಲಾಯಿತು.

ಚಿಕ್ಕೇರಿಗೇರಿ, ಕೊರಮರಗೇರಿ, ಆಂಜನೇಯ ಬಡಾವಣೆ, ಭಾರತಿನಗರ ಅಂಬೇಡ್ಕರ್ ನಗರ ಸೇರಿದಂತೆ ಮಾರಕ ರೋಗಗಳು ಬಾರದಿರಲಿ ಮತ್ತು ಮಳೆ ಬೆಳೆ ಚೆನ್ನಾಗಿ ಆಗಲಿ ಎಂದು ಅಜ್ಜಿಅಮ್ಮ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಅಜ್ಜಿ ಅಮ್ಮನ ಹಬ್ಬವನ್ನು ಆಚರಿಸಲು ಕಾರಣ ಜಾನುವಾರುಗಳಿಗೆ ಕಾಲು ಬಾಯಿ ರೋಗಗಳು ಬಾರದಿರುವಂತೆ ಮಕ್ಕಳು ಮರಿಗಳಿಗೆ ಅಮ್ಮಬಾರದಂತೆ ಕಾಪಾಡಲು, ಮಳೆ ಬೆಳೆ ಚೆನ್ನಾಗಿ ಆಗಲಿ ಎಂದು, ನಾಡಿಗೆ ಸುಖ ಶಾಂತಿ ಸಮೃದ್ಧಿ ಉಂಟಾಗಲಿ ಎಂದು ಈ ಹಬ್ಬವನ್ನು ಆಚರಿಸಲಾಗುತ್ತದೆ.

ಎಲ್ಲಾ ಸಮಾಜದವರು ಸೇರಿಕೊಂಡು ನಡೆ ಮಡಿ ಯಿಂದ ಅಜ್ಜಿ ಅಮ್ಮನಿಗೆ ಪೂಜೆ ಸಲ್ಲಿಸಲು ಮಣ್ಣಿನಿಂದ ಚೌತ ಮನೆ ಯನ್ನು ಮಾಡಲಾಗಿರುತ್ತದೆ ಅಲ್ಲಿ ದೇವಿಯನ್ನು ತಂದು ಚೌತಮನಿ ಕಟ್ಟಿಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಹೊಸ ಬಟ್ಟೆ ಧರಿಸಿ ಬಡಿಗೇರ ನಾಗರಾಜ್ ಮಾನಪ್ಪನವರ ಮನೆಯಿಂದ ತಂದ ಕೇಳಲು ಮತ್ತು ತೇರು ಪೂಜೆ ಸಲ್ಲಿಸಿದ ನಂತರ ಜನರೆಲ್ಲರೂ ಅವರವರ ಮನೆಯಿಂದ ಹೊಸ ಮರದಲ್ಲಿ ತಂದಿರುವ ಬೇವಿನ ಸೊಪ್ಪು, ತೆಂಗಿನಕಾಯಿ ಮತ್ತು ನೈವೇದ್ಯವನ್ನು ಮನೆಗಳಿಂದ ತಂದು ದೇವಿಯ ಸನ್ನಿಧಿಯಲ್ಲಿ ಸಾಲಾಗಿ ಇಟ್ಟು ಎಲ್ಲರೂ ಭಕ್ತಿಯಿಂದ ಸಮರ್ಪಿಸಿ ಉಘೇ ಉಘೇ ಎಂದು ಭಕ್ತಿಯಿಂದ ನಮಿಸಿ ಎಲ್ಲಾ ಮನೆಗಳಿಂದಲೂ ಎಡೆ ನೈವೇದ್ಯ ದ ಮರಗಳು ಬರುವವರೆಗೂ ಉಘೇ ಉಘೇ ಎಂದು ಘೋಷಣೆ ಕೂಗುತ್ತಾ ಜನರೆಲ್ಲರೂ ಹಲಗೆ ವಾದ್ಯ ಬಾರಿಸುತ್ತಾ ಸಾಗುವಾಗ ದೇವಿಯ ಕೇಲನ್ನು ಹೊತ್ತುಕೊಂಡು ಬಡಿಗೇರ ನಾಗರಾಜ್ ಮತ್ತು ರಾಜಪ್ಪ, ಸಾಗುತ್ತಿರುವಾಗ ಮಕ್ಕಳು, ಯುವಕರು, ವೃದ್ದರು, ಮಹಿಳೆಯರು ಎಲ್ಲರೂ ಹೆಜ್ಜೆ ಹಾಕುತ್ತಾ ದಾರಿಯುದ್ದಕ್ಕೂ ನೀರನ್ನು ಹಾಕಿ ಉಘೇ ಉಘೇ ಎಂದು ಘೋಷಣೆ ಕೂಗುತ್ತ ಊರಿನ ಕರಿಗಲ್ಲಿನವರೆಗೂ ಸಾಗಿ ನಂತರ ತಯಾರಿಗೊಳಿದ ವಾಹನದಲ್ಲಿ ದೇವಿಗೆ ಪೂಜೆ ನೆರವೇರಿಸಿ ಮೂರು ದಿನಗಳ ಒಳಗೆ ಮಳೆ ಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಕೋರಿಕೊಂಡು ದೇವಿಯನ್ನು ಬಿಳ್ಕೊಡುತ್ತಾರೆ .

ಈ ಸಂದರ್ಭದಲ್ಲಿ ಮುಖಂಡರಾದ ಆಲೂರು ಚೌಡಪ್ಪ, ನಿಟ್ಟೂರು ದೊಡ್ಡ ಹಾಲಪ್ಪ ಮಂಡಕ್ಕಿ ಸುರೇಶ್,ಬಿ.ವೀರುಪಾಕ್ಷಿ,ತಳವಾರ ನಾಗಪ್ಪ, ರಾಯದುರ್ಗದ ದುರುಗಪ್ಪ,ಪಟ್ನಾಮದ ಹಾಲಸಿದ್ದಪ್ಪ, ಪುರಸಭೆ ಸದಸ್ಯ ಹೆಚ್ ಕೊಟ್ರೇಶ್, ಕಮ್ಮಾರ ದೊಡ್ಡ ಹಾಲಪ್ಪ,ಗಿಡ್ಡಳ್ಳಿ ನಿಂಗಪ್ಪ,ಮ್ಯಾಕಿ ದುರುಗಪ್ಪ,ಪಟ್ನಾಮದ ದುರುಗಪ್ಪ, ದ್ಯಾಮಜ್ಜಿ ಹನುಮಂತಪ್ಪ, ಹೊರಕೇರಿ ರಂಗಪ್ಪ, ಮ್ಯಾಕಿ ಸಣ್ಣ ದುರುಗಪ್ಪ, ಬಡಿಗೇರ ನಾಗರಾಜ್, ಮಂಜುನಾಥ್,ವಿರೇಶ್ ಹಾಗೂ ಮೂರು ಕೇರಿಯ ದೈವಸ್ಥರು ಸರ್ವ ಭಕ್ತ ಬಂಧು ಸಮೂಹ ಹಾಜರಿದ್ದರು.

Leave a Reply

Your email address will not be published. Required fields are marked *