Vijayanagara Express

Kannada News Portal

ಹಣ ರಹಿತ ಚುನಾವಣೆಯೇ ನನ್ನ ಗುರಿ ರಾಯಸಂ ಸುಮಂತ್ ಕುಮಾರ್

1 min read

ಹಣ ರಹಿತ ಚುನಾವಣೆಯೇ ನನ್ನ ಗುರಿ ರಾಯಸಂ ಸುಮಂತ್ ಕುಮಾರ್

ಹರಪನಹಳ್ಳಿ: ಜೂ-25 ,ಹಣರಹಿತ ಚುನಾವಣೆ ಎದುರಿಸುವುದೇ ನನ್ನ ಪ್ರಮುಖ ಗುರಿಯಾಗಿದೆ ಎಂದು ರಾಯಸಂ ಸುಮಂತ್ ಕುಮಾರ್ ವಿಧಾನಸಭಾ ಕ್ಷೇತ್ರದ ಸಂಭವನೀಯ ಪಕ್ಷೇತರ ಅಭ್ಯರ್ಥಿಯಾದ ಇವರು ಹೇಳಿದರು .

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಚಲಿತ ದಿನಮಾನದಲ್ಲಿ ಚುನಾವಣೆ ಎಂಬುದು ಕಲುಸಿತ ಆಗಿಹೋಗಿದೆ ಈ ಕಾರಣಕ್ಕಾಗಿಯೇ ಕ್ಷೇತ್ರಗಳು ಅಭಿವೃದ್ಧಿಯಾಗುತ್ತಿಲ್ಲ ಬದಲಾವಣೆ ಬರುತ್ತಿಲ್ಲ ಉತ್ತಮ ಜನಪ್ರತಿನಿಧಿಗಳು ದೊರೆಯುತ್ತಿಲ್ಲ ಎಂದು ವಾಗ್ಧಾಳಿ ನಡೆಸಿದ ಅವರು ನಾನು ಹರಪನಹಳ್ಳಿ ಪಟ್ಟಣದ ಹಾಸ್ಯ ಸಾಹಿತಿಯಾಗಿದ್ದ ಬೀಚೀ ( ರಾಯಸಂ ಭೀಮಸೇನ್ ರಾವ್ ) ರವರ ಮನೆತನಕ್ಕೆ ಸಂಬಂಂಧ ಪಟ್ಟವನು ಮಠದ ಕೇರಿಯ ಬಡ ಕುಟುಂಬವೊಂದರಲ್ಲಿ ಹುಟ್ಟಿದ್ದೇನೆ ನಾನು ಪಟ್ಟಣದ ನ್ಯಾಷನಲ್ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಶಿಕ್ಷಣವನ್ನೂ ಮತ್ತು ಸರ್ಕಾರಿ ಪದವಿಪೂರ್ವ ಕಾಲೇಜಿನ ಲ್ಲಿ ಪಿಯುಸಿಯನ್ನೂ ಹೆಚ್.ಪಿ.ಎಸ್.ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪದವಿಯನ್ನು ಪೂರೈಸಿ ಸಿ.ಎ. ಪದವಿಯನ್ನು ಬೆಂಗಳೂರಿನಲ್ಲಿ ಪೂರೈಸಿದ್ದೇನೆ .

ಈಗ ನಾನು ಹರಪನಹಳ್ಳಿ ತಾಲೂಕಿನ ಅಭಿವೃದ್ಧಿ ಬಗ್ಗೆ ಯೋಚಿಸಿ ನಮ್ಮ ತಾಲೂಕು ಬೇರೆ ತಾಲೂಕಿನ ಹಾಗೆ ಅಭಿವೃದ್ಧಿ ಕಂಡಿರುವುದಿಲ್ಲ ಇಲ್ಲಿ ಆಡಳಿತ ಮಾಡಿದ ಶಾಸಕರು ಇದರ ಬಗ್ಗೆ ಯಾವುದೇ ಯೋಚನೆ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ.
ವಿದ್ಯಾವಂತ ಯುವಕರು ಉದ್ಯೋಗ ಕಂಡುಕೋಳ್ಳಲು ಕೈಗಾರಿಕೆಗಳು ಇಲ್ಲ , ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಇಲ್ಲಿ ಪ್ರೊತ್ಸಹವಿಲ್ಲ ಸುಧಾರಿತ ಗ್ರಂಥಾಲಯಗಳಿಲ್ಲ ಗ್ರಂಥಾಲಯ ಗಳಿದ್ದರೂ ಡಿಜಿಟಲೀಕರಣ ಗೊಂಡಿಲ್ಲ ಉತ್ತಮವಾದ ಪುಸ್ತಕಗಳು ಗ್ರಂಥಾಲಯಗಳಲ್ಲಿ ಲಭ್ಯವಿಲ್ಲ ಹೀಗಿದ್ದಾಗ ಉನ್ನತ ಪರೀಕ್ಷೆಗಳಾದ ಕೆಎಎಸ್ ಐಎಎಸ್ ಅಂತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಗ್ರಾಮಾಂತರ ಭಾಗದ ವಿದ್ಯಾರ್ಥಿಗಳಿಗೆ ಹೇಗೆ ಸಾಧ್ಯವಾದೀತು ಎಂಬುದು ಸರ್ವ ಸತ್ಯ.

ಹೀಗಾಗಿ ಇಲ್ಲಿ ಸಂಪೂರ್ಣ ನೀರಾವರಿ ಮಾಡಲು ಎಲ್ಲಾ ಕೆರೆಗಳಿಗೆ ನೀರುಣಿಸಲು ಮತ್ತು ಕೈಗಾರಿಕೆ ಸ್ಥಾಪಿಸಲು ,ತಾಲೂಕಿನಲ್ಲಿ ರಸ್ತೆಗಳಂತೂ ಹಾಳಾಗಿ ಹೋಗಿವೆ ಐವತ್ತು ವರ್ಷಗಳ ಹಿಂದಿದ್ದ ರಸ್ತೆಗಳಿಗೂ ಈಗಿನ ರಸ್ತೆಗಳಿಗೂ ಯಾವುದೇ ವ್ಯತ್ಯಾಸವಿಲ್ಲದಂತೆ ಭಾಸವಾಗುತ್ತಿವೆ ಅಭಿವೃದ್ಧಿ ಮರೀಚಿಕೆಯಾಗಿದೆ ಕ್ಷೇತ್ರದ ಪ್ರತಿಯೊಬ್ಬ ಪ್ರಜೆಗೂ ಕ್ಷೇತ್ರಕ್ಕೆ ಬಂದಿರುವ ಅನುದಾನ ಗೊತ್ತಾಗಬೇಕು ಅಂತಹ ಮಾಹಿತಿಗಳು ಜನರಿಗೆ ಲಭ್ಯವಾಗುವಂತೆ ಸುಧಾರಿತ ಮೊಬೈಲ್ ಆಪ್ ಗಳನ್ನು ಜನರಿಗೆ ಪರಿಚಯಿಸಬೇಕು ಈ ಎಲ್ಲಾ ಕೆಲಸಗಳನ್ನು ಜನಪ್ರತಿನಿಧಿಗಳಾದವರು ಮಾಡಬೇಕಾಗುತ್ತದೆ ಅಂದಾಗ ಮಾತ್ರ ತಾಲೂಕು ಅಭಿವೃದ್ಧಿಯನ್ನು ಕಾಣಲು ಸಾಧ್ಯವಾಗುತ್ತದೆ ಎಂದರು.

ನಾನು ಪಕ್ಷೇತರ ಅಭ್ಯರ್ಥಿಯಾಗಿ 2023ನೇ ಸಾಲಿನಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಹರಪನಹಳ್ಳಿಯಿಂದ ಸ್ಪರ್ಧಿಸಲು ಇಚ್ಚಿಸಿರುತ್ತೇನೆ ಈಗಾಗಲೇ ತಾಲೂಕಿನಲ್ಲಿ 62 ಹಳ್ಳಿಗಳನ್ನು ಸಂಪರ್ಕ ಮಾಡಿರುತ್ತೇನೆ ನಾನು ಹೋದಲ್ಲೆಲ್ಲ ಯುವಕರ ಪಡೆಯು ಅಭೂತಪೂರ್ವವಾದ ಸ್ವಾಗತವನ್ನು ನೀಡುತ್ತಿದ್ದಾರೆ ಅಲ್ಲದೆ ಹಿರಿಯರು ಬೆಂಬಲವನ್ನು ಕೊಡುತ್ತಿದ್ದಾರೆ ಮುಂದಿನ ದಿನಗಳಲ್ಲಿ ಎಲ್ಲಾ ಯುವಕರ ಸಹಕಾರವನ್ನು ಪಡೆದು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಪಡೆಯಲು ಪ್ರಯತ್ನವನ್ನು ಮಾಡುತ್ತೇನೆ ಎಂದು ಹೇಳಿದರು.

ಗ್ರಾಮಗಳಲ್ಲಿರುವ ಸಮಸ್ಯೆಗಳ ಬಗ್ಗೆ ನಾನು ಸಮೀಕ್ಷೆ ನಡೆಸಿದ್ದೇನೆ ಅಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಶುದ್ದ ಕುಡಿಯುವ ನೀರು, ರಸ್ತೆ, ಚರಂಡಿ ನಿರ್ಮಾಣ,ಬೀದಿ ದೀಪಗಳು, ಮುಂತಾದವುಗಳಾಗಿವೆ.ಪ್ರಮುಖವಾಗಿ ರೈತರಿಗೆ ಸುಧಾರಿತ ಬಿತ್ತನೆ ಬೀಜಗಳು, ರಸಗೊಬ್ಬರ ಗಳು ತ್ವರಿತವಾಗಿ ಸಾಕಷ್ಟು ಪ್ರಮಾಣದಲ್ಲಿ ಸಿಗುತ್ತಿಲ್ಲ ಆದುದರಿಂದ ನಾನು ಗೆದ್ದರೆ ಇಂತಹವುಗಳಿಗೆ ಮೊದಲ ಆದ್ಯತೆ ನಿಡುತ್ತೇನೆ ಎಂದು ರಾಯಸಂ ಸುಮಂತ್ ಕುಮಾರ್ ಹೇಳಿದರು.

ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವ ತಾವು ಯಾವ ರೀತಿಯ ಅಜೆಂಡಾವನ್ನು ಇಟ್ಟುಕೊಂಡು ಚುನಾವಣೆ ಕಡೆ ಮುಖ ಮಾಡುತ್ತಿದ್ದೀರಿ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನನಗೆ ಎರಡು ಪ್ರಾದೇಶಿಕ ಪಕ್ಷ ದ ಮುಖಂಡರು ಆಹ್ವಾನ ನೀಡಿದ್ದಾರೆ ಆ ಪಕ್ಷಗಳು ಯಾವುವೆಂದು ನಾನು ಈಗ ಬಹಿರಂಗ ಪಡಿಸುವುದಿಲ್ಲ ಸಂದರ್ಭ ಬಂದಾಗ ನಾನೇ ಬಹಿರಂಗ ಪಡಿಸುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಶಿಧರ್ ಹಾರಕನಾಳ್, ಸಂಜೀವ್, ಸುಹಾಸ್, ಪಾಲಾಕ್ಷಪ್ಪ ಯರಬಾಳು,ನಿಂಗಪ್ಪ, ವಾಸಿಂ, ಲಿಂಗ ನಾಯಕ್, ಇಂತಿಯಾಜ್,ಸೊಹೇಲ್,ಸಂಜುನಾಯ್ಕ್, ಪ್ರಥಪ್ ಅಮೀನ್, ಇಸ್ಮಾಯಿಲ್,ಶಹಾಬಾಜ್, ಪ್ರಶಾಂತ್,ವರುಣ್, ಸುನೀಲ್.ಕೊಂಗನುಸಿರು, ಶಶಿ.ಟಿ, ಹರೀಶ್ ನಾಯಕ್, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *