ಸಾರ್ವಜನಿಕ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಣೆ
1 min readಸಾರ್ವಜನಿಕ ಹಿತರಕ್ಷಣಾ ವೇದಿಕೆ ಪದಾಧಿಕಾರಿಗಳಿಗೆ ಗುರುತಿನ ಚೀಟಿ ವಿತರಣೆ
ಹರಪನಹಳ್ಳಿ : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾಹಿತಿ ಹಕ್ಕು ಹಾಗೂ ಸಾರ್ವಜನಿಕ ಹಿತರಕ್ಷಣಾ ವೇದಿಕೆ ರಾಜ್ಯ ಅಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ತಾಲೂಕು ಪದಾಧಿಕಾರಿಗಳ ಸಭೆ ನಡೆಸಲಾಯಿತು .
ಸಭೆಯಲ್ಲಿ ರಾಜ್ಯ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ್ ಮಾತನಾಡಿ ಸಾರ್ವಜನಿಕರ ಹಿತಕಾಯಲು ಹಾಗೂ ದುಷ್ಟ ವೈದ್ಯಕೀಯ ಮಾಫಿಯಾ ತಡೆಗಟ್ಟಲು ಹಾಗೂ ಕರ್ನಾಟಕ ಮಾಹಿತಿ ಹಾಗೂ ಸಾರ್ವಜನಿಕ ಹಿತ ರಕ್ಷಣಾ ವೇದಿಕೆ ಅಸ್ತಿತ್ವಕ್ಕೆ ತರಲಾಗಿದೆ ಈಗಾಗಲೇ ಹರಪನಹಳ್ಳಿಯಲ್ಲಿ ತಾಲೂಕು ಘಟಕ ಮಾಡಿದ್ದು ಹಂತ ಹಂತವಾಗಿ ಹೋರಾಟವನ್ನು ರೂಪಿಸಲಾಗುವುದು ಎಂದು ಹೇಳಿದರು.
ಈ ವೇಳೆ ಸಂಘದ ಪದಾಧಿಕಾರಿಗಳಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.
ಗುರುತಿನ ಚೀಟಿಯನ್ನು ಸ್ವೀಕರಿಸಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಮೂಲಿಮನಿ ಹನುಮಂತಪ್ಪ ತಾಲೂಕಿನಲ್ಲಿ ವೈದ್ಯಕೀಯ ಮಾಫಿಯಾ ತಡೆಗಟ್ಟಲು ಅದರ ವಿರುದ್ಧ ಹೋರಾಟ ನಡೆಸಲು ಪ್ರಾಮಾಣಿಕವಾಗಿ ಹೋರಾಟ ನಡೆಸುತ್ತೇನೆ ಎಂದರು.
ಇದರಲ್ಲಿ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಮೂಲಿಮನಿ ಹನುಮಂತಪ್ಪ, ಕಾರ್ಯದರ್ಶಿ ಚಿಕ್ಕಳ್ಳಿ ನಾಗರಾಜ್ , ಗೌರವ ಅಧ್ಯಕ್ಷ ಪುಣಭಗಟ್ಟಿ ನಿಂಗಪ್ಪ, ಟೀ ಕಾರ್ತಿಕ್ ಎಷ್ಟಿ ಸೋಮಪ್ಪ ಎಂ ಕಿರಣ್ ನಿಟ್ಟೂರ್ ಬೇಲೂರು ಶಿವರಾಜ್ ಕೆ ನಂದೀಶ್ ಮಾರುತಿ ಎ, ಕಾರ್ಯನಿರ್ತಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರು ಎಸ್ ಎನ್ ಕುಮಾರ್, ಪಟ್ನಾಮದ ವೆಂಕಟೇಶ್, ಬಿ ಸೋಮಲಿಂಗ ನಿಟ್ಟೂರು ಮುಂತಾದವರು ಉಪಸ್ಥಿತರಿದ್ದರು.