Vijayanagara Express

Kannada News Portal

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

1 min read

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ


ಹರಪನಹಳ್ಳಿ: ಜುಲೈ 1, ತಾಲೂಕಿನ ಕಂಚಿಕೇರಿ ಗ್ರಾಮದಲ್ಲಿ ಬಿಜೆಪಿಯ ಕಾರ್ಯಕರ್ತರು ಬಿಜೆಪಿ ಪಕ್ಷವನ್ನು ತೊರೆದು ಡಾ.ಉಮೇಶ್ ಬಾಬುರವರ ನೇತೃತ್ವದಲ್ಲಿ ಕಾಂಗ್ರೆಸ್ಸ್ ಗೆ ಸೇರ್ಪಡೆ ಗೊಂಡರು.

ಕಂಚಿಕೆರೆ ಗ್ರಾಮದ ಹೊರ ವಲಯದಲ್ಲಿರುವ ಶ್ರೀ ಕೋಡಿ ಸಿದ್ದೇಶ್ವರ ದೇವಸ್ಥಾನ ಹಾಗೂ ಕಲ್ಯಾಣ ಮಂಟಪ ಆವರಣದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಸೇರ್ಪಡೆ ಕಾರ್ಯಕ್ರಮವನ್ನು
ಆಯೋಜಿಸಲಾಗಿತ್ತು .


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕೆಪಿಸಿಸಿ ಓಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಶಂಕರನಹಳ್ಳಿ ಡಾಕ್ಟರ್ ಉಮೇಶ್ ಬಾಬು ಮಾತನಾಡಿ ಕಾಂಗ್ರೆಸ್ ಪಕ್ಷದಲ್ಲಿ ಹರಪನಹಳ್ಳಿ ತಾಲೂಕಿನಲ್ಲಿ ಅನೇಕ ಜನರು ವಿಧಾನಸಭಾ ಪಕ್ಷದ ಟಿಕೆಟ್ ಆಕಾಂಕ್ಷಿಗಳಿದ್ದಾರೆ ಪಕ್ಷವೂ ಟಿಕೆಟ್ ಅನ್ನು ಯಾರಿಗೆ ಕೊಡುತ್ತದೆಯೋ ಬಿಡುತ್ತದೆಯೋ ಅದು ಮುಖ್ಯವಲ್ಲ ನಾವೆಲ್ಲರೂ ಸೇರಿ ಇಲ್ಲಿ ಪಕ್ಷವನ್ನು ಸಂಘಟಿಸುವುದು ಮುಖ್ಯವಾಗಿದೆ ಎಂದರು.


ದೇಶದಲ್ಲಿ ರಾಜ್ಯದಲ್ಲೂ ಮತ್ತು ನಮ್ಮ ತಾಲೂಕಿನಲ್ಲಿ ಸಹ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಲು ಜನರು ಸಾಗರೋಪಾದಿಯಲ್ಲಿ ಬರುತ್ತಿದ್ದಾರೆ ಇದಕ್ಕೆ ಪ್ರಮುಖ ಕಾರಣ ,ಬಿಜೆಪಿಯವರ ದುರಾಡಳಿತ, ಸುಳ್ಳು ಆಶ್ವಾಸನೆಗಳು ಅವರ ವೈಫಲ್ಯಗಳೇ ಪ್ರಮುಖವಾಗಿವೆ.

ತಾಲೂಕಿನ ಕಂಚಿಕೇರಿ ಗ್ರಾಮದ ಅನೇಕ ಜನ ಬಿಜೆಪಿ ಕಾರ್ಯಕರ್ತರು ನಮ್ಮ ಗ್ರಾಮಗಳಲ್ಲಿ ಅಭಿವೃದ್ಧಿ ಆಗುತ್ತಿಲ್ಲ ಆದ್ದರಿಂದ ಜನರಿಗೆ ನಾವು ಉತ್ತರಿಸಲು ಸಾಧ್ಯವಾಗುತ್ತಿಲ್ಲ ಆದುದರಿಂದಾಗಿ ನಾವು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದೇವೆ ನಮ್ಮನ್ನು ಸೇರ್ಪಡೆ ಮಾಡಿಕೊಳ್ಳಿ ಎಂದು ಹಳ್ಳಿಕೇರಿ ಗ್ರಾಮದ ರಾಹುಲ್ ರೆಡ್ಡಿ ಮತ್ತು ಅವರ ಒಡನಾಡಿಗಳು ನಮ್ಮ ಕಚೇರಿಗೆ ಬಂದು ಕೋರಿಕೊಂಡಿದ್ದರು ಆದುದರಿಂದ ಈ ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2014 ರಿಂದ ಇಲ್ಲಿಯವರೆಗೆ ಆಡಳಿತವನ್ನು ನಡೆಸಿದೆ ಎಲ್ಲಾ ಬಡವರ ಜನಧನ್ ಖಾತೆಗೆ 15 ಲಕ್ಷ ರೂಪಾಯಿ ಹಾಕುತ್ತೇವೆ ಎಂದವರು ಇದುವರೆಗೂ ಕೇವಲ 10 ಸಾವಿರ ರೂಪಾಯಿಗಳನ್ನೂ ಸಹ ಹಾಕಿರುವುದಿಲ್ಲ ಕಪ್ಪು ಹಣದ ಬಗ್ಗೆ ಮಾತನಾಡುತ್ತಿದ್ದ ಮೋದಿ ಈಗ ಅದರ ಬಗ್ಗೆ ತುಟಿ ಬಿಚ್ಚುತ್ತಿಲ್ಲ, ಕಪ್ಪು ಹಣದ ಅವರ ಲೆಕ್ಕಾಚಾರ ತಪ್ಪಾಗಿ ಹೋಗಿದೆ.

ಇದುವರೆಗೂ ನರೇಂದ್ರ ಮೋದಿಯವರು ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸಿ ಜನತೆಗೆ ಉತ್ತರ ಹೇಳಿರುವುದಿಲ್ಲ ವರ್ಷಕ್ಕೆ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ ಎಂದು ಹೇಳಿದವರು ಎಂಟು ವರ್ಷದ ಅವಧಿಯಲ್ಲಿ ನಾಲ್ಕು ಲಕ್ಷ ಮಾತ್ರ ಉದ್ಯೋಗಗಳನ್ನು ಸೃಷ್ಟಿ ಮಾಡಿದ್ದಾರೆ ದೇಶದಲ್ಲಿ ದುರಾಡಳಿತ ತುಂಬಿ ತುಳುಕುತ್ತಿದೆ, ರೈತ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದು ರೈತರ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನ ಮಾಡಿದರು.

ದಿನನಿತ್ಯದ ಅಗತ್ಯ ಸರಕುಗಳು ದುಬಾರಿಯಾಗಿ ಜನಸಾಮಾನ್ಯರ ಜೀವನವು ದುಸ್ತರವಾಗಲು ಬಿಜೆಪಿ ಸರ್ಕಾರವೇ ಕಾರಣ.
ಇಡಿ ಮತ್ತು ಸಿಬಿಐ ಗಳನ್ನು ಕೇಂದ್ರ ಸರ್ಕಾರ ಕೈಗೊಂಬಾಗಳಾಗಿ ಬಳಸಿಕೊಳ್ಳಲಾಗುತ್ತಿದೆ ಶಾಸಕರ ಮಾರಾಟಕ್ಕೆ ಬ್ರೋಕರ್ ಗಳು ಶುರುವಾಗಿರುವುದು ಬಿಜೆಪಿ ಸರ್ಕಾರದಿಂದಲೇ ಇದನ್ನೇ ಆಪರೇಷನ್ ಕಮಲ ಎಂದು ಕರೆಯಲಾಗುತ್ತದೆ ಎಂದು ಹೇಳಿದರು.
ಕರೋನಾದ ಸಂದರ್ಭದಲ್ಲಿ ಜನರುಗಳಿಗೆ ಅಗತ್ಯವಾದ ವೈದ್ಯಕೀಯ ಸೌಲಭ್ಯಗಳು ಆಹಾರ ಮುಂತಾದ ಸೌಲಭ್ಯಗಳ ಕೊರತೆಯಿಂದಾಗಿ ಜನರ ಜೀವನ ತತ್ತರಿಸಿ ಹೋಗಿದ್ದು ಸುಳ್ಳೇನಲ್ಲ ಎಂದು ಬಿಡಿಬಿಡಿಯಾಗಿ ಬಿಜೆಪಿ ಸರ್ಕಾರದ ವೈಫಲ್ಯಗಳನ್ನು ಮತ್ತು ಅವರ ದುರಾಡಳಿತವನ್ನು ಟಿಕಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಕಾರ್ಯಕರ್ತ ಹಳ್ಳಿಕೇರಿಯ ರಾಹುಲ್ ರೆಡ್ಡಿ ಶಾಸಕ ಕರುಣಾಕರ ರೆಡ್ಡಿ ಯವರು ತಮ್ಮ ಕೈಗೆ ಸಿಗುತ್ತಿಲ್ಲ ನಮ್ಮ ತಾಲೂಕಿಗೆ ಸಕ್ರಿಯವಾಗಿ ಬರುತ್ತಿಲ್ಲ ನಮ್ಮ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಿಲ್ಲ ಇವುಗಳಿಂದಾಗಿ ನಾವು ಬೇಸತ್ತು ಹೋಗಿದ್ದೇವೆ ಜನರಿಗೆ ನಾವು ಉತ್ತರಿಸಲು ಸಾಧ್ಯವಾಗುತ್ತಿಲ್ಲ ಆ ಕಾರಣಕ್ಕಾಗಿಯೇ ನಾವು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷವನ್ನು ಸಾಮೂಹಿಕವಾಗಿ ಸೇರ್ಪಡೆಗೊಳ್ಳುತ್ತಿದ್ದೇವೆ ಎಂದರು.

ಇನ್ನು ಮುಂದೆ ನಮ್ಮ ತಾಲೂಕಿನಲ್ಲಿ ಹೊರಗಿನಿಂದ ಬಂದು ಗೆಲ್ಲುವ ಅಭ್ಯರ್ಥಿಗಳಿಗೆ ನಾವು ಮತ ಹಾಕುವುದಿಲ್ಲ ಯಾರನ್ನೇ ಆಯ್ಕೆ ಮಾಡಿದರೂ ಸಹ ನಾವು ಸ್ಥಳೀಯರಲನ್ನೇ ಆಯ್ಕೆ ಮಾಡಬೇಕು ಏಕೆಂದರೆ ಗೆದ್ದವರು ತಾಲೂಕು ಕೇಂದ್ರ ಸ್ಥಾನದಲ್ಲಿ ಇದ್ದು ಜನರ ಕೈಗೆ ಸಿಗಬೇಕು ಆದರೆ ವಿಪರ್ಯಾಸ ವೆಂದರೆ ನಮ್ಮ ಶಾಸಕರು ಬಳ್ಳಾರಿಯ ನಿವಾಸದಲ್ಲಿ ಆರಾಮವಾಗಿ ಇರುತ್ತಾರೆ ಇಲ್ಲಿ ಜನರು ಅವರನ್ನು ಕಾಣಲು ಸಂಕಷ್ಟಪಡುತ್ತಿದ್ದಾರೆ ಇದರಿಂದ ತಾಲೂಕಿನ ಅಭಿವೃದ್ಧಿಗೆ ಹಿನ್ನಡೆ ಉಂಟಾಗಿದೆ ಆದ್ದರಿಂದ ಈ ಹಿಂದೆ ಮಾಡಿದ ತಪ್ಪನ್ನು ಮುಂದಿನ ಚುನಾವಣೆಯಲ್ಲಿ ನಮ್ಮ ತಾಲೂಕಿನ ಜನ ಮಾಡುವುದಿಲ್ಲ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ  8 ನೇ ಅತ್ಯೂನ್ನತ ಶ್ರೇಣಿ ಪಡೆದುಕೊಂಡ ತಾಲೂಕಿನ ವಿದ್ಯಾರ್ಥಿಗೆ ಸನ್ಮಾನ ಮಾಡಲಾಯಿತು.

ಈ ವೇಳೆ ಗಂಗನರಸಿ ನಾಗರಾಜ್, ಸೊಪ್ಪಿನ ಭೀಮಪ್ಪ ,ಹಳ್ಳಿಕೇರಿ ಬಸವರಾಜ, ಮಾತನಾಡಿದರು.

ಈ ಸಂದರ್ಭದಲ್ಲಿ ಸೊಪ್ಪಿನ ಭೀಮಪ್ಪ ಗಂಗನರಸಿ ನಾಗರಾಜ್ ಹಳ್ಳಿಕೇರಿ ಬಸವರಾಜ್ ಬೆಂಡಿಗೇರಿ ಕರಿಬಸಪ್ಪ, ಸಾರಥಿ ನಾಗರಾಜ್, ಕೆಸಿ ಶಿವಕುಮಾರ್ ,ಹಳ್ಳಿಕೇರಿ ಮೈಲಪ್ಪ, ಹಳ್ಳಿಕೇರಿ ಮಂಜಪ್ಪ, ಗಣೇಶ್, ರವಿಕುಮಾರ್ ,ನಿರಂಜನ್ ಬಾರ್ಕಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *