ಶಾಸಕರ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕ ಗಾಲಿ ಕರುಣಾಕರ ರೆಡ್ಡಿ
1 min read
ಶಾಸಕರ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಜನರ ಸಮಸ್ಯೆಗಳನ್ನು ಆಲಿಸಿದ ಶಾಸಕ ಗಾಲಿ ಕರುಣಾಕರ ರೆಡ್ಡಿ
ಹರಪನಹಳ್ಳಿ: ಜು26, ಶಾಸಕ ಜಿ.ಕರುಣಾಕರ ರೆಡ್ಡಿಯವರು ಮಂಗಳವಾರ ವಿಧಾನಸಭಾ ಕ್ಷೇತ್ರದ ಲಕ್ಷ್ಮೀಪುರ ಗ್ರಾಮ ಪಂಚಾಯಿತಿಯ ಸತ್ತೂರು, ಚೌಡಾಪುರ, ಹೊಸಹಳ್ಳಿ, ಗೊಲ್ಲರಹಟ್ಟಿ ಗ್ರಾಮಗಳಲ್ಲಿ ಜೆ.ಜೆ.ಎಂ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು .
ಶಾಸಕ ಜಿ.ಕರುಣಾಕರರೆಡ್ಡಿಯವರು ಸತ್ತೂರು ಗ್ರಾಮಸ್ಥರ ಕುಂದು ಕೊರತೆಗಳನ್ನು ಅಲಿಸುವ ಸಂದರ್ಭದಲ್ಲಿ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಕ್ಕೆ ಸರ್ವೇ 36/ಬಿ,ಎ ರಲ್ಲಿನ ವಿಸ್ತೀರ್ಣ 7.91ಸೆಂಟ್ಸ್ ನಷ್ಟು ಸ್ಥಳವಕಾಶ ಲಭ್ಯವಿದ್ದು ಶೀಘ್ರವೇ ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಬೇಕು, ಅನೇಕರಿಗೆ ಮನೆಗಳು ಇಲ್ಲ, ನಿವೇಶನವಿಲ್ಲ ಎಂದು ಗ್ರಾಮಸ್ಥರು ಮನವಿ ಮಾಡಿದಾಗ ಆಶ್ರಯ ಕಾಲೋನಿ ನಿರ್ಮಾಣಕ್ಕೆ ಸೂಕ್ತ ಸರ್ಕಾರಿ ಜಾಗವನ್ನು ಹುಡುಕುವಂತೆ ತಹಶೀಲ್ದಾರ್ ಹಾಗೂ ಗ್ರಾಮಲೆಕ್ಕಾಧಿಕಾರಿಗೆ ಸೂಚಿಸಿದರು.
ಚೌಡಾಪುರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ದೇವಸ್ಥಾನಕ್ಕೆ ದೀಪಮಾಲಿ ಕಂಬಕ್ಕೆ ಸಹಾಯಧನ, ಮನೆಗಳನ್ನು ನೀಡುವಂತೆ ಗ್ರಾಮಸ್ಥರು ಕೋರಿದರು, ಪ್ರಯತ್ನ ಮಾಡುವುದಾಗಿ ಉತ್ತರ ಹೇಳಿದರು.
ಹೊಸಹಳ್ಳಿ ಗ್ರಾಮಕ್ಕೆ ಶಾಸಕರು ಬೇಟಿ ನೀಡಿದಾಗ ಗ್ರಾಮಸ್ಥರು ಕುಡಿಯುವ ನೀರು ಸರಿಯಾಗಿ ಸಿಗುತ್ತಿಲ್ಲ, ಮುಖ್ಯರಸ್ತೆಯವರೆಗೆ ಹೋಗಲು ಬ್ರಿಡ್ಜ್ ದುರಸ್ಥಿ, ಹಾಗೂ ಗ್ರಾಮವನ್ನು ಸಂಪೂರ್ಣವಾಗಿ ಹದ್ದುಬಸ್ತು ಮಾಡಿಕೊಡಲು ಮನವಿ ಮಾಡಿದರು. ಈ ವೇಳೆ ಶಾಸಕರು ಮಾತನಾಡಿ ಸಿ.ಸಿ.ರಸ್ತೆಗೆ ಅಂದಾಜು ಪಟ್ಟಿ ತಯಾರಿಸಲು ಇಂಜಿನಿಯರ್‌ಗೆ ಸೂಚಿಸಿದರು, ನೀರಿನ ಸಮಸ್ಯೆಗೆ ಸ್ಥಳದಲ್ಲಿ ಪಿಡಿಓ ಕರೆದು ಕೂಡಲೇ ಸರಿಪಡಿಸಿ ಅವರಿಗೆ ನೀರು ಕೊಡಿ ಎಂದು ಹೇಳಿದರು, ಇನ್ನೂ ಗ್ರಾಮದ ಹದ್ದುಬಸ್ತಿಗೆ ತಹಸೀಲ್ದಾರ, ಗ್ರಾಮ ಲೆಕ್ಕಾಧಿಕಾರಿಗೆ ಒಂದು ವಾರದಲ್ಲಿ ಮಾಡುವುದಕ್ಕೆ ಸೂಚಿಸಿದರು.
ಹೊಸಳ್ಳಿ ಗ್ರಾಮದ ಗ್ರಾಮಸ್ಥರು ಗ್ರಾಮದ ಸಮಸ್ಯೆಗಳ ಕುರಿತಾಗಿ ಚರಂಡಿ, ರಸ್ತೆ , ಕುಡಿಯುವ ನೀರು ವಿದ್ದುದ್ದೀಪ ಮುಖ್ಯವಾಗಿ ಈ ಸ್ವತ್ತು ಅಂತಹ ವಿಷಯಗಳಿಗೆ ಸಂಬಂಧಿಸಿದಂತೆ ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಉಮೇಶ್ ರವರ ಬಳಿ ಹೋಗಿ ನಮಗೆ ಈ ಸೌಲಭ್ಯಗಳನ್ನು ಮಾಡಿಕೊಡಿ ಎಂದು ಕೇಳಿದಾಗ ಸಣ್ಣ ಊರಿಗೆ ನಿಮಗೇಕೆ ಎಲ್ಲಾ ಸೌಲಭ್ಯಗಳು ಎಂದು ಗದರಿಸಿದ್ದರು ಹಾಗೂ ದುರ್ವರ್ತನೆ ತೊರಿದ್ದರು ಎಂದು ಶಾಸಕರ ಬಳಿ ಗ್ರಾಮಸ್ಥರೆಲ್ಲರೂ ನೋವನ್ನು ತೋಡಿಕೊಂಡರು ಅದಕ್ಕೆ ಶಾಸಕರು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಉಮೇಶ್ ರವರನ್ನು ಕರೆದು ತರಾಟಗೆ ತೆಗೆದುಕೊಂಡು ಚಿಕ್ಕ ಊರು ಇದ್ದರೆ ಅವರು ಮನುಷ್ಯರಲ್ಲವೇ ಎಂದು ಖಾರವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಕೇಳಿದರು ಇದಕ್ಕೆ ಉತ್ತರಿಸಿದ ಉಮೇಶ್ ಇನ್ನು ಮುಂದೆ ಈ ರೀತಿ ಆಗದಂತೆ ಹಾಗೂ ದುರ್ವರ್ತನೆತೊರದಂತೆ ನಡೆದುಕೊಳ್ಳುವೆ ಸರ್ ಎಂದು ಸಮಜಾಯಿಸಿ ಉತ್ತರವನ್ನು ನೀಡಿದರು.
ಹೊಸಹಳ್ಳಿಯಿಂದ ಮುಖ್ಯರಸ್ತೆಗೆ ಕೂಡುವ ರಸ್ತೆಗೆ ತೆರಳುವಾಗ ಬ್ರಿಡ್ಜ್ ರಸ್ತೆ ಸಂಪೂರ್ಣ ಹಾಳಾಗಿರುವುದನ್ನು ಖುದ್ದು ಪರಿಶೀಲಿಸಿದ ಅವರು ಇದು ಕಳಪೆಯಾಗಿದ್ದು ಕೂಡಲೇ ದುರಸ್ಥಿಗೊಳಿಸಿ, ಗ್ರಾಮಸ್ಥರ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಲೋಕೋಪಯೋಗಿ ಇಲಾಖೆ ಜೆಇ ಅವರಿಗೆ ಸೂಚಿಸಿದರು.
ಗೊಲ್ಲರಹಟ್ಟಿ ಗ್ರಾಮದಲ್ಲಿ ಸಿ.ಸಿ.ರಸ್ತೆ, ಕುಡಿಯುವ ನೀರಿನ ಪೈಪ್ ಲೈನ್ ಅರ್ದವಾಗಿದೆ ಎಂದು ಗ್ರಾಮಸ್ಥರು ಕೇಳಿದಾಗ 250 ಮಿ.ಉದ್ದದ ಹೆಚ್ಚುವರಿ ಕಾಮಗಾರಿ ಕೈಗೊಂಡು ಕುಡಿಯುವ ನೀರಿನ ಪೈಪ್‌ಲೈನ್ ಪೂರ್ಣಗೊಳಿಸಲು ತಿಳಿಸಿದರು.
ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಶಾಲೆಗೆ ಬೇಟಿ ನೀಡಿ ಅಡುಗೆ ಕೊಠಡಿ ಸೋರುತ್ತಿದೆ, ಅಂಗನವಾಡಿ ಶಿಥಿಲಗೊಂಡಿರುವುದನ್ನು ಶಾಸಕರು ಪರಿಶೀಲಿಸಿದರು ಬಳಿಕ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿದ ಅವರು ಲಕ್ಷಿö್ಮಪುರ ಗ್ರಾಮದಿಂದ ಮುಖ್ಯರಸ್ತೆಯವರೆಗೆ ಹಾಗೂ ಎಸ್.ಸಿ.ಕಾಲೋನಿಗೆ ಅನುದಾನ ಮಂಜೂರಾಗಿದ್ದು ಟೆಂಡರ್ ಹಂತದಲ್ಲಿದೆ ಎಂದರು, ನಂತರ ಗ್ರಾಮದಲ್ಲಿ 25 ಹಾಸಿಗೆಯ ಸಾರ್ವಜನಿಕ ಆಸ್ಪತ್ರೆ ನಿರ್ಮಾಣಕ್ಕೆ ಮನವಿ ಮಾಡಿಕೊಂಡರು.
ಜಂಬುಬುಲಿಂಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದಾಗ ಕಂಚಿಕೇರಿ, ದಾವಣಗೆರೆ ಮುಖ್ಯ ರಸ್ತೆ ಇತ್ತೀಚೆಗಷ್ಟೆ ಸಿ.ಸಿ.ರಸ್ತೆ ನಿರ್ಮಾಣವಾಗಿದೆ ಆದರೆ ಅದು ಗುಣಮಟ್ಟ ಸರಿಯಾಗಿಲ್ಲವೆಂದು ಗ್ರಾಮಸ್ಥರು ದೂರಿದರು. ಇದನ್ನು ಸರಿಪಡಿಸುವಂತೆ ಇಂಜಿನಿಯರ್ ಅವರಿಗೆ ಶಾಸಕರು ಸೂಚಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಡಿ.ರೊಕ್ಕಪ್ಪ, ತಹಶೀಲ್ದಾರ ಡಾ.ಶಿವಕುಮಾರ ಬಿರಾದಾರ, ವಲಯ ಅರಣ್ಯಾಧಿಕಾರಿ ಮಲ್ಲಪ್ಪ, ಬಿಇಓ ಯು.ಬಸವರಾಜ, ತೋಟಗಾರಿಕೆ ಸಹಾಯಕ ನಿರ್ದೇಶಕ ಜಯಸಿಂಹ, ತಾಪಂ ಇಒ ಪ್ರಕಾಶ್ ನಾಯ್ಕ, ಪಿಎಸ್‌ಐ ಪ್ರಶಾಂತ, ಬಿಜೆಪಿ ಯುವ ಮುಖಂಡರಾದ ವಿಷ್ಣುವರ್ದನರೆಡ್ಡಿ, ಪಿ.ಟಿ.ಶಿವಾಜಿನಾಯ್ಕ, ಚೌಡಪುರ ಷಣ್ಮುಖಪ್ಪ, ಹಾಲೇಶ್, ಮಾಜಿ ತಾಪಂ ಸದಸ್ಯ ನಾಗರಾಜ, ಆರ್.ಲೋಕೇಶ್, ಎಂ.ಮಲ್ಲೇಶ್, ಕುಮಾರನಾಯ್ಕ, ಹೇಮಂತನಾಯ್ಕ, ಬಾಗಳಿ ಕೊಟ್ರೇಶಪ್ಪ, ಪಿ.ಮಹೇಶ್, ಕೆ.ಪ್ರಕಾಶ್, ಹೇಮಂತಕುಮಾರ, ತಳವಾರ ಮನೋಜ್, ಸೇರಿದಂತೆ ಇತರರು ಇದ್ದರು.
ಹರಪನಹಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮದಿಂದ ಮುಖ್ಯರಸ್ತೆವರೆಗೆ ಸಂಪರ್ಕಿಸುವ ರಸ್ತೆಯಲ್ಲಿ ದುರಸ್ಥಿಗೊಂಡ ಸೇತುವೆಯನ್ನು ಶಾಸಕ ಜಿ.ಕರುಣಾಕರೆಡ್ಡಿ ಪರಿಶೀಲಿಸಿದರು.