ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮಹಾಭಾಗ್ಯ – ಬಸವರಾಜ್ ಸಂಗಪ್ಪನವರ್
1 min readಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮಹಾಭಾಗ್ಯ – ಬಸವರಾಜ್ ಸಂಗಪ್ಪನವರ್
ಹರಪನಹಳ್ಳಿ: ಜು-29 , ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದೇ ಮಹಾಭಾಗ್ಯ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ್ ಸಂಗಪ್ಪನವರ್ ಹೇಳಿದರು.
ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಹರಪನಹಳ್ಳಿ ಪಶ್ಚಿಮ ವಲಯಮಟ್ಟದ ಪ್ರಾಥಮಿಕ ಶಾಲೆಗಳ ಕ್ರೀಡಾ ಕೂಟವನ್ನು
ವಿವಿ ಎಸ್ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಆಯೋಜನೆ ಮಾಡಿದ್ದರು ಶಾಲೆಯ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್ ಗುಂಡು ಎಸೆತದ ಮೂಲಕ ಕ್ರೀಡೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು
ಸಂಘಟನಾತ್ಮಕ ಸ್ಪರ್ಧಾತ್ಮಕ ಕುಶಲತೆಯಿಂದ ಮಾಡುವ ದೈಹಿಕ ಚಟುವಟಿಕೆಯೇ ಕ್ರೀಡೆ, ಸೋಲು ಗೆಲುವು ಮುಖ್ಯವಲ್ಲ ಕ್ರೀಡೆಯಲ್ಲಿ ಭಾಗವಹಿಸುವುದೇ ಮಹಾಭಾಗ್ಯ ಎನ್ನುವ ರೀತಿಯಲ್ಲಿ ಎಲ್ಲ ಮಕ್ಕಳು ಕ್ರೀಡಾ ಮನೋಭಾವದಿಂದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು .
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿದ್ದಲಿಂಗನಗೌಡ ಜಿಲ್ಲಾ ಗೌರವಾಧ್ಯಕ್ಷರಾದ ದೇವೆಂದ್ರಗೌಡ ,ಸಂಘಟನಾ ಕಾರ್ಯದರ್ಶಿಗಳಾದ ಮನ್ಸೂರ್ ಆಹ್ಮದ್,ಹರಪನಹಳ್ಳಿ ದಕ್ಷಿಣ ವಿಭಾಗದ ಸಿಆರ್ ಪಿ ಶಿವಪ್ರಕಾಶ,ಉತ್ತರ ವಿಭಾಗದ ಸಿಆರ್ ಪಿ ಮೋಹನ್,ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್. ಆರ್. ಮಾರೇರ್,ಮುಂತಾದವರು ಭಾಗವಹಿಸಿದ್ದರು.