ಶಾಸಕ, ಸಂಸದರಿಂದ, ರಸ್ತೆ ಕಾಮಗಾರಿ ಭೂಮಿ ಪೂಜೆ
1 min read
ಶಾಸಕ, ಸಂಸದರಿಂದ, ರಸ್ತೆ ಕಾಮಗಾರಿ ಭೂಮಿ ಪೂಜೆ
ಹರಪನಹಳ್ಳಿ: ತಾಲೂಕಿನ ಚಿಗಟೇರಿ ಗ್ರಾಮದಲ್ಲಿ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಹಾಗೂ ಹರಪನಹಳ್ಳಿ ಶಾಸಕ ಜಿ.ಕರುಣಾಕರ ರೆಡ್ಡಿಯವರು ಇಂದು ಹೂವಿನ ಹಡಗಲಿ ತಾಲೂಕು ಗಡಿಭಾಗದಿಂದ ನಜೀರ್ ನಗರದವೆಗೆ ಇಟ್ಟಿಗುಡಿ ಕಂಚಿಕರೆ ಗ್ರಾಮ ರಾಜ್ಯ ಹೆದ್ದಾರಿ 151 ರಸ್ತೆ ಮಾರ್ಗ ಚಿಗಟೆರಿ ಕಡಬಗೆರೆ ಅರಸೀಕೆರೆ ಮತ್ತು ಕಂಚಿಕೆರೆ ರಸ್ತೆ ಆಯ್ದ ಭಾಗದ ರಸ್ತೆ ಕಾಮಗಾರಿ 21 ಕೋಟೆ 50 ರೂ ವೆಚ್ಚದಲ್ಲಿ SHDP ಯೋಜನೆ ಅಡಿಯಲ್ಲಿ ಕಾಮಗಾರಿ ಭೂಮಿ ಪೂಜೆ ಮಾಡಿದರು.
ರಸ್ತೆ ಕಾಮಗಾರಿ ಭೂಮಿ ಪೂಜೆ ನೆರವೇರಿಸಿದ ನಂತರ ಹರಪನಹಳ್ಳಿ ಶಾಸಕರ ಜಿ.ಕರುಣಾಕರ ರೆಡ್ಡಿಯವರು ಚಿಗಟೆರಿ ಗ್ರಾಮದ ಸಾರ್ವಜನಿಕರ ಸಮಸ್ಯೆಗಳ ಕುರಿತು ಅರ್ಜಿ ಗಳನ್ನು ಸ್ವೀಕರಿಸಿ ಮಾತನಾಡಿದ ಅವರು ಈ ಗ್ರಾಮಕ್ಕೆ ನಾನು ಬರುತ್ತಲೆ ಇರುತ್ತೇನೆ ಸಾರ್ವಜನಿಕರ ಸಮಸ್ಯೆ ಕುರಿತಾಗಿ ಯಾವುದಾದರೂ ಕುಂದುಕೊರತೆ ಇದ್ದರೆ ಎಲ್ಲಾ ಬಗೆ ಹರಿಸುವೆ ಎಂದು ಹೇಳಿದರು.
ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ ಕಾಮಗಾರಿ ಗುಣಮಟ್ಟದ್ದಾಗಲಿ ಎಂದು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಹೇಳಿದರು ನಂತರ ಶಾಸಕರು ಹಾಗೂ ಸಂಸದರು ಚಿಗಟೆರಿ ಗ್ರಾಮದ ಐತಿಹಾಸಿಕ ದೇವಾಲಯದಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು .
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತೀಶ್ ಪಾಟೀಲ್ ,ಜೆಇ ಕುಬೆಂದ್ರ ನಾಯ್ಕ ,ಜೆಇ ನಾಗೇಶ್ ಹಾಗೂ ಗುತ್ತಿಗೆದಾರರಾದ ಎಂ ಈರಣ್ಣ ಮಾನ್ವಿ , ಬಿಜೆಪಿ ಯುವ ಮುಖಂಡ ವಿಷ್ಣುವರ್ಧನ ರೆಡ್ಡಿ , ಬಿಜೆಪಿ ಮುಖಂಡರಾದ ಆರ್ ಲೋಕೇಶ್, ಪ್ರಾಣೇಶ್ ವಕೀಲರು,ಮಾಚಿಹಳ್ಳಿ ಮಲ್ಲೇಶ್ ನಾಯ್ಕ್, ದಾದಾಪುರದ ಶಿವಾನಂದ್, ಕೆಂಗಳ್ಳಿ ಪ್ರಕಾಶ್ ವಕೀಲರು,ಭಂಗಿ ಚಂದ್ರಪ್ಪ, ಮತ್ತಿಹಳ್ಳಿ ಪ್ರಕಾಶ್,ಹಾಗೂ ಚಿಗಟೆರಿ ಗ್ರಾಮದ ಮುಖಂಡರು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು.