Vijayanagara Express

Kannada News Portal

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದಭಕ್ತರಿಗೆ ಅರಿಶಿಣ ಕುಂಕುಮ ಹಸಿರು ಬಳೆಗಳ ವಿತರಣೆ

1 min read

 

ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದಭಕ್ತರಿಗೆ ಅರಿಶಿಣ ಕುಂಕುಮ ಹಸಿರು ಬಳೆಗಳ ವಿತರಣೆ

ಹರಪನಹಳ್ಳಿ: ಅ-5,ಭಕ್ತರಿಗೆ ಅರಿಶಿಣ ಕುಂಕುಮ ಹಸಿರು ಬಳೆಗಳ ವಿತರಣೆಯ ಕಾರ್ಯಕ್ರಮವನ್ನು ತಹಸಿಲ್ದಾರ್ ಶಿವಕುಮಾರ್ ಬಿರಾದರ್ ರವರು ಶುಕ್ರವಾರ ನೆರವೇರಿಸಿದರು.

ಪಟ್ಟಣಕ್ಕೆ ಹೊಂದಿಕೊಂಡಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಆಗಮಿಸಿದ ಮಹಿಳಾ ಭಕ್ತರಿಗೆ ಹರಿಶಿಣ ಕುಂಕುಮ ಮತ್ತು ಹಸಿರು ಬಳೆಗಳನ್ನು ನೀಡುವ ಕಾರ್ಯಕ್ರಮವನ್ನುಆಯೋಜಿಸಲಾಗಿತ್ತು .


ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ದೇವಸ್ಥಾನಕ್ಕೆ ಆಗಮಿಸುವ ಎಲ್ಲಾ ಮಹಿಳಾ ಭಕ್ತರಿಗೆ ಹರಿಶಿಣ ಕುಂಕುಮ ಮತ್ತು ಹಸಿರು ಬಳೆಗಳನ್ನು ವಿತರಣೆ ಮಾಡುವಂತೆ ಸರ್ಕಾರ ಆದೇಶಿಸಿದ್ದು ಆ ಪ್ರಕಾರ ಇಂದು ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಸ್ಥಾನಗಳಲ್ಲಿ ದೇವಾಲಯಕ್ಕೆ ಆಗಮಿಸುವ ಮಹಿಳಾ ಭಕ್ತರಿಗೆ ಅರಿಶಿಣ ಕುಂಕುಮ ಮತ್ತು ಹಸಿರು ಬಳೆಗಳನ್ನು ವಿತರಿಸಲಾಯಿತು.

ಆ ಪ್ರಕಾರ ದೇವರ ತಿಮ್ಮಲಾಪುರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಆಡಳಿತ ಅಧಿಕಾರಿಗಳಾದ ಶ್ರೀ ಶಿವಕುಮಾರ್ ಬಿರಾದರ್ ರವರು ಮಹಿಳಾ ಭಕ್ತರಿಗೆ ಅರಿಶಿಣ ಕುಂಕುಮ ಮತ್ತು ಹಸಿರು ಬಳೆಗಳನ್ನು ವಿತರಿಸಿದರು ,ವಿತರಿಸಿ ಮಾತನಾಡಿದ ತಹಸಿಲ್ದಾರ್ ಶಿವಕುಮಾರ್ ಬಿರಾದರ್ ಅವರು ಸರ್ಕಾರದ ಆದೇಶದಂತೆ ಈ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸರ್ಕಾರ ಈ ತೀರ್ಮಾನವನ್ನು ಕೈಗೊಂಡಿರುತ್ತದೆ ಆ ಪ್ರಕಾರವಾಗಿ ಇಂದು ದೇವಸ್ಥಾನಕ್ಕೆ ಆಗಮಿಸುವ ಎಲ್ಲಾ ಮಹಿಳಾ ಮಹಿಳೆಯರಿಗೆ ಅರಿಶಿಣ ಕುಂಕುಮ ಮತ್ತು ಹಸಿರು ಬಳೆಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆ ಮತ್ತು ಮುಜರಾಯಿ ಇಲಾಖೆಯ ಸಿಬ್ಬಂದಿಯಾದ ಶಿವಕುಮಾರ್ ಪ್ರಧಾನ ಅರ್ಚಕರಾದ ಪೂಜಾರ್ ಶ್ರೀನಿವಾಸ ಆಚಾರ್ಯ ,ಹಾಗೂ ಅವರ ಶ್ರೀಮತಿಯರಾದ ಪೂಜಾರ್ ಪುನೀತ ಆಚಾರ್ಯ, ಗ್ರಾಮಸ್ಥರಾದ ನಾಗರಾಜಪ್ಪ, ಜೆ ಬಸವರಾಜ್, ಪಟ್ನಾಮದ ವೆಂಕಟೇಶ್, ಸುರೇಶ್ ಮಂಡಕ್ಕಿ, ಗ್ರಾಮದ ಮಹಿಳೆಯರು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *