Vijayanagara Express

Kannada News Portal

ಕಮ್ಮಾರ ಸಮಾಜದ ಪದಾಧಿಕಾರಿಗಳ ಆಯ್ಕೆ

1 min read

 

 

ಕಮ್ಮಾರ ಸಮಾಜದ ಪದಾಧಿಕಾರಿಗಳ ಆಯ್ಕೆ

 

ಹರಪನಹಳ್ಳಿ: ಕಮ್ಮಾರ ಸಮಾಜದ ಪದಾಧಿಕಾರಿಗಳ ಆಯ್ಕೆಯನ್ನು ಭಾನುವಾರ ಮಾಡಲಾಯಿತು.

ಪಟ್ಟಣದ ಶ್ರೀ ಕೋಟೆ ಕಾಳಮ್ಮ ದೇವಸ್ಥಾನದ ಆವರಣದಲ್ಲಿ ಸಭೆ ಸೇರಿ ಕಮ್ಮಾರ ಸಮಾಜದ ಮುಖಂಡರು ಸಮಾಜದ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು .

ಈ ವೇಳೆ ಮಾತನಾಡಿದ ಕಮ್ಮಾರ ಸಮಾಜದ ರಾಜ್ಯ ಗೌರವಾಧ್ಯಕ್ಷರಾದ ಕೆಪಿ ನಾಗೇಂದ್ರಪ್ಪ ರವರು ವಿಶ್ವಕರ್ಮ ಸಮಾಜದಲ್ಲಿ 5 ಕುಲಕಸಬುಗಳನ್ನು ಮಾಡುತ್ತಿರುವ ಸಮಾಜದವರು ಗುರುತಿಸಲ್ಪಟ್ಟಿದ್ದಾರೆ ಪ್ರಸ್ತುತ ವಿಶ್ವಕರ್ಮ ಸಮಾಜವು 2ಎ ಜಾತಿಯಲ್ಲಿ ಗುರುತಿಸಿಕೊಂಡಿದ್ದು ಇದರಲ್ಲಿ ಬರುವ ಕುಲಕಸುಬುಗಳ ಜಾತಿಗಳೆಂದರೆ ಅಕ್ಕಸಾಲಿಗ ,ಬಡಗಿ ,ಕಮ್ಮಾರ ,ಕಂಚುಗಾರ ,ಶಿಲ್ಪಿ ಅಥವಾ ಶಿಲ್ಪಗಾರ ಎಂಬ ಐದು ಕುಲಕಸಬುಗಳನ್ನು ಮಾಡುವ ಜನಾಂಗದವರೆಲ್ಲರೂ ಪ್ರಸ್ತುತ ವಿಶ್ವಕರ್ಮ ಎಂದು ಗುರುತಿಸಲ್ಪಟ್ಟಿದ್ದಾರೆ.

ಈ 5 ಕುಲಕಸಬು ಮಾಡುವ ಸಮಾಜಗಳಲ್ಲಿ ಕಮ್ಮಾರ ಸಮಾಜವು ಸಹ ಒಂದಾಗಿದೆ ಈ ಸಮಾಜಗಳು ಪುರಾತನ ಕಾಲದಿಂದಲೂ ಸಾಮಾಜಿಕವಾಗಿ ,ಆರ್ಥಿಕವಾಗಿ ,ಶೈಕ್ಷಣಿಕವಾಗಿ ಹಿಂದುಳಿದ ಸಮಾಜಗಳಾಗಿದ್ದು ಅತೀ ಅಲ್ಪಸಂಖ್ಯಾತ ಸಮಾಜಗಳಾಗಿ ಸರ್ಕಾರದಿಂದ ಕಡೆಗಣಿಸಲ್ಪಟ್ಟಿವೆ, ಅಲ್ಲದೆ ಕೃಷಿ ಉಪಕರಣಗಳನ್ನು ಪಡೆಯಲು ರೈತರು ಕಮ್ಮಾರ ಸಮಾಜವನ್ನೇ ಪುರಾತನ ಕಾಲದಿಂದಲೂ ಅವಲಂಬಿಸಿರುತ್ತಾರೆ ಎಂದು ಹೇಳಿದರು.

ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಚಾಮರಾಜನಗರದ ಕೊಳ್ಳೇಗಾಲ ತಾಲೂಕುಗಳಲ್ಲಿ ವಾಸಿಸುತ್ತಿರುವ ಕಮ್ಮಾರ ಜನಾಂಗವನ್ನು ಪರಿಶಿಷ್ಟ ಪಂಗಡ ಎಂದು ಅವರನ್ನು ಗುರುತಿಸಿ ಪರಿಶಿಷ್ಟ ಪಂಗಡ ಪಟ್ಟಿಗೆ ಕರ್ನಾಟಕ ಸರ್ಕಾರವು ಅವರನ್ನು ಸೇರಿಸಿದೆ.
ಆದರೆ ಕರ್ನಾಟಕದ ಉಳಿದಂತಹ ಜಿಲ್ಲೆಗಳಲ್ಲಿರುವ ಕಮ್ಮಾರ ಜನಾಂಗವು ಸಹ ಅತ್ಯಂತ ಕಡುಕಷ್ಟದ ಜೀವನವನ್ನು ನಡೆಸುತ್ತಿದ್ದು ಅತ್ಯಂತ ಹಿಂದುಳಿದ ಜನಾಂಗವಾಗಿ ಗುರುತಿಸಿಕೊಂಡಿದೆ ಹೀಗಾಗಿ ಕೊಳ್ಳೇಗಾಲ ಮತ್ತು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕಮ್ಮಾರ ಜನಾಂಗಕ್ಕೆ ಪರಿಶಿಷ್ಟ ಪಂಗಡ ಎಂದು ನೀಡುತ್ತಿರುವ ಪ್ರಮಾಣ ಪತ್ರವನ್ನು ಮತ್ತು ಆದ್ಯತೆಯನ್ನು ಉಳಿದಂತೆ ಎಲ್ಲಾ ಜಿಲ್ಲೆಗಳಿಗೂ ಕರ್ನಾಟಕದಾದ್ಯಂತ ಪರಿಶಿಷ್ಟ ಪಂಗಡ ಎಂದು ಘೋಷಿಸಬೇಕು ಹಾಗೂ ಈ ಮೀಸಲಾತಿಯನ್ನು ಕಮ್ಮಾರ ಜನಾಂಗದ ಎಲ್ಲಾ ಭಾಗಗಳಲ್ಲಿ ವಾಸಿಸುವ ಜನಾಂಗಕ್ಕೆ ಶೀಘ್ರವೇ ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದು ಹೇಳಿದರು .

ಬಲಿಷ್ಠವಾದ ಸಮಾಜಗಳು ಮೀಸಲಾತಿಯನ್ನು ಪಡೆಯುವಲ್ಲಿ ಯಶಸ್ವಿಯಾಗಿವೆ, ಉದಾಹರಣೆಗೆ ವಾಲ್ಮೀಕಿ ನಾಯಕ ಸಮಾಜವು ಮೊದಲು ಹಿಂದುಳಿದ ವರ್ಗಗಳ ಪಟ್ಟಿಯಲ್ಲಿತ್ತು ಅದನ್ನು ಆ ಸಮಾಜದ ಮುಖಂಡರ ಹೋರಾಟದ ಫಲವಾಗಿ ಸರ್ಕಾರವು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿ ಆದೇಶವನ್ನು ಹೊರಡಿಸಿತ್ತು ಇದರಿಂದಾಗಿ ಹೋರಾಟಗಳ ಮುಖಾಂತರ ಮೀಸಲಾತಿಯನ್ನು ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ನಮ್ಮ ಹಕ್ಕನ್ನು ಪಡೆಯಬಹುದು ಎಂದು ಗೊತ್ತಾಗುತ್ತದೆ ಎಂದರು.

ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು ಕಮ್ಮಾರ ಸಮಾಜದ ತಾಲೂಕು ಅಧ್ಯಕ್ಷರಾಗಿ
ಹನುಮಂತಪ್ಪ ಎಂ, ಗೌರವಾಧ್ಯಕ್ಷರಾಗಿ ರಂಗಾಪುರದ ಭರಮಪ್ಪ, ಉಪಾಧ್ಯಕ್ಷರಾಗಿ ರಂಗಾಪುರದ ಮಲ್ಲೇಶ್, ಪ್ರಧಾನ ಕಾರ್ಯದರ್ಶಿಯಾಗಿ ಟಿ ನಾಗಲಿಂಗಪ್ಪ, ಖಜಾಂಚಿಯಾಗಿ ಬಸವರಾಜ್, ಸಹ ಕಾರ್ಯದರ್ಶಿಯಾಗಿ ಜಿ ನಾಗರಾಜ್ ಹಾಗೂ ಸದಸ್ಯರುಗಳಾಗಿ ಬಸವಂತಪ್ಪ ಎಂ ,ಮುಳುಗಡೆ ನರಸಿಂಹ, ಎಂ ಮೌನೇಶ್ ,ಭರತೇಶ್ ,ನಂದೀಶ್ ಟಿ, ಮಾನಪ್ಪ ಆಯ್ಕೆಯಾಗಿದ್ದಾರೆ.

ಸಂದರ್ಭದಲ್ಲಿ ಶ್ರೀನಿವಾಸ್ ,ಆರ್ ಗೊಣೆಪ್ಪ, ವಿರುಪಾಕ್ಷಪ್ಪ, ನಂದೀಶ್, ಹಾಲೇಶ್, ಸಂತೋಷ್, ಕರಿಬಸಪ್ಪ, ಹನುಮಂತಪ್ಪ, ಬಸವಂತಪ್ಪ,ಗೋಪಿ,ಮಲ್ಲಪ್ಪ, ಶಿವರಾಜ್,ಕಾಳಪ್ಪ, ಕಾಂತರಾಜ್,ಮಧು ರಾಧಮ್ಮ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *