ಕೋಮುವಾದ, ಭ್ರಷ್ಟಾಚಾರ ,ಭಯೋತ್ಪಾದನೆಗಳಿಂದ ದೇಶವನ್ನು ರಕ್ಷಿಸಬೇಕಾಗಿದೆ – ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ .ಎಚ್. ಎನ್ ನಾಗಮೋಹನ ದಾಸ ಹರಪನಹಳ್ಳಿ:ಆ-20, ಕೋಮುವಾದ, ಭ್ರಷ್ಟಾಚಾರ
1 min read
ಕೋಮುವಾದ, ಭ್ರಷ್ಟಾಚಾರ ,ಭಯೋತ್ಪಾದನೆಗಳಿಂದ ದೇಶವನ್ನು ರಕ್ಷಿಸಬೇಕಾಗಿದೆ – ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ .ಎಚ್. ಎನ್ ನಾಗಮೋಹನ ದಾಸ
ಹರಪನಹಳ್ಳಿ:ಆ-20, ಕೋಮುವಾದ, ಭ್ರಷ್ಟಾಚಾರ ಭಯೋತ್ಪಾದನೆಯಿಂದ ದೇಶವನ್ನು ರಕ್ಷಿಸಬೇಕಾಗಿದೆ ಎಂದು ಉಚ್ಚನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಎಚ್.ಎನ್ ನಾಗಮೋಹನ ದಾಸ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ಸಮತಾ ರೇಸಾರ್ಟನಲ್ಲಿ ಶನಿವಾರ ಸಂವಿಧಾನ ಓದು ಅಬಿಯಾನ ಸಮಿತಿ, ಕಾನೂನು ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ಸಂವಿಧಾನ ಓದು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮನ್ನಾಳುವ ಸರ್ಕಾರಗಳು ಶ್ರೇಷ್ಠ ಸಂವಿಧಾನವನ್ನು ತಲುಪಿಸುವಲ್ಲಿ ವಿಫಲವಾಗಿವೆ, ನಾವು ಕೂಡ ಸಂವಿಧಾನ ಓದಿ ಅರ್ಥೈಸಿಕೊಳ್ಳವಲ್ಲಿ ಹಿಂದೆ ಬಿದ್ದಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.
ಹರ್ ಘರ್ ತಿರಂಗ ಬದಲು, ಮನೆ ಮನೆಗೂ ಸಂವಿಧಾನದ ಆಶಯಗಳನ್ನು ತಲುಪಿಸುವ ಅವಶ್ಯಕತೆ ಇದೆ ,
ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಮನೆ, ಮನೆಗೂ ಸೀರೆ, ಪ್ಯಾನ್, ಪ್ರೀಡ್ಜ್, ಟಿ.ವಿ.ಸೇರಿದಂತೆ ಹಲವು ವಸ್ತುಗಳನ್ನು ತಲುಪಿಸುತ್ತವೆ ಆದರೆ ದೇಶದಲ್ಲಿ ಸಂವಿಧಾನದ ಬಗ್ಗೆ ಜಾಗೃತಿಮೂಡಿಸುವಲ್ಲಿ ವಿಫಲವಾಗಿವೆ ಎಂದರು.
ಒಂದೊಂದು ಧರ್ಮಕ್ಕೆ ಒಂದೊಂದು ಗ್ರಂಥಗಳಿವೆ ಆದರೆ ಇಡೀ ಭಾರತ ದೇಶಕ್ಕೆ ಒಂದೇ ಒಂದು ಮಹಾಗ್ರಂಥ ಅದೇ ಸಂವಿಧಾನವಾಗಿದ್ದು ಅದರ ಸಂಪೂರ್ಣ ಚರಿತ್ರೆಯನ್ನು ತಿಳಿದುಕೊಂಡು ಅದರ ಆಶಯಗಳನ್ನು ಸಾಮಾಜಿಕ ಬದುಕಿನಲ್ಲಿ ಅಳವಡಿಸಿಕೊಂಡು ಬದುಕಿದರೆ ದೇಶಕ್ಕೂ, ನಮ್ಮಗೂ ಒಳ್ಳೆಯದಾಗುತ್ತದೆ ಎಂದರು.
ಸುಮಾರು ವರ್ಷಗಳ ಕಾಲ ದೇಶವನ್ನು ಪರಕೀಯರು ಆಳ್ವಿಕೆ ನಡೆಸಿದರು, ಅದರಲ್ಲಿ ಬ್ರೀಟೀಷರು ಸಹ ಒಬ್ಬರು ಹೀಗೆ ಭಾರತಕ್ಕೆ ವಿದೇಶಿಯರು ವಲಸೆ ಬಂದು ಆಹಾರ, ಕೃಷಿ, ವ್ಯಾಪಾರಕ್ಕಾಗಿ ಸಾಮ್ರಾಜ್ಯದ ದಾಹಕ್ಕಾಗಿ,ಬಂದವರಲ್ಲಿ ಶೇ.70 ರಷ್ಟು ಜನರು ವಾಪಾಸು ಹೋಗದೆ ಇಲ್ಲಿಯೇ ನೆಲೆಯೂರಿದರು ಎಂದು ಹೇಳಿದರಲ್ಲದೆ ಅವರನ್ನು ಈಗ ವಿದೇಶಿಯರೆಂದು ಗುರುತಿಸಲು ಸಾಧ್ಯವೇ ಎಂದರು .
ಕಾನೂನಿನಡಿಯಲ್ಲಿ ಎಲ್ಲರೂ ಸಮಾನರು, ಎಲ್ಲರಿಗೂ ಉದ್ಯೋಗ, ಶಿಕ್ಷಣ, ಸೇರಿದಂತೆ ಮೂಲಭೂತಸೌಕರ್ಯ ಪಡೆಯಲು ಸಮಾನ ಅವಕಾಶವನ್ನು ಸಂವಿಧಾನ ಕಲ್ಪಿಸಿದೆ.
ಆದ್ದರಿಂದ ಸಾಮಾಜಿಕ, ರಾಜಕೀಯ, ಆರ್ಥಿಕ, ಸಾಂಸ್ಕೃತಿಕ ಅಸಮಾನತೆಯನ್ನು ಹೊಗಲಾಡಿಸಲು ಸಂವಿಧಾನವನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ ಹಾಗಾಗಿ ದೇಶವನ್ನು ಅರ್ಥ ಮಾಡಿಕೊಳ್ಳದೆ ಸಂವಿಧಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದರು.
ಸಂವಿಧಾನವನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯ, ಭಯೋತ್ಪಾದನೆ, ಕೋಮುವಾದ, ಭ್ರಷ್ಟಚಾರದಂತಹ ಸಮಸ್ಯೆಗಳ ಜೊತೆಗೆ ದೇಶ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಭಾರತ ಉಳಿಯಬೇಕಾದರೆ ಯುವಜನತೆಯಿಂದ ಮಾತ್ರ ಸಾದ್ಯವಾಗಿದ್ದು ಆ ನಿಟ್ಟಿನಲ್ಲಿ ಯುವಜನತೆ ಸಂವಿಧಾನದ ಆಶಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ಈ ಸಂದರ್ಭದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವಕರ ಪಾತ್ರ, ಭ್ರಷ್ಠಾಚಾರ ಮುಕ್ತತತೆ, ಜಾತಿ ವ್ಯವಸ್ಥೆ ಹೋಗಲಾಡಿಸುವುದು, ನ್ಯಾಯಾಂಗ ವ್ಯವಸ್ಥೆಯಲ್ಲಿ ರಾಜಕೀಯ ಪ್ರಭಾವ ಸೇರಿದಂತೆ ಇವೆ ಮುಂತಾದ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು .
ಪ್ರಾಸ್ತಾವಿಕವಾಗಿ ಅನಂತನಾಯ್ಕ ಮಾತನಾಡಿ ಇಂದಿನ ವಿದ್ಯಾರ್ಥಿ ಯುವ ಸಮೂಹಕ್ಕೆ ಸಂವಿಧಾನದ ಜಾಗೃತಿ ಅವಶ್ಯಕತೆ ಇತ್ತು, ಕಳೆದ ಮೂರು ವರ್ಷಗಳಿಂದ ರಾಜ್ಯದ ಹಲವುಕಡೆಗಳಲ್ಲಿನಿ.ನ್ಯಾ.ಎಚ್.ಎನ್.ನಾಗಮೋಹನದಾಸ್‌ರವರ ಪುಸ್ತಕ ಸಂವಿಧಾನ ಓದು ಅಭಿಯಾನ ಯಶಸ್ವಿಯಾಗಿದ್ದು ಇದರ ಸದುಪಯೋಗ ಮುಂದಿನ ಪಿಳಿಗೆ ಪಡೆಯಲಿ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎಚ್.ಎಂ.ಅಶೋಕ, ವಕೀಲರ ಸಂಘದ ಅಧ್ಯಕ್ಷ ಕೆ. ಜಗದಪ್ಪ, ಸಂವಿಧಾನ ಓದು ಅಭಿಯಾನ ಸಮಿತಿ ಸದಸ್ಯ ಬಿ.ರಾಜಶೇಖರಮೂರ್ತಿ, ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ಬಸವರಾಜ ಸಂಗಪ್ಪನವರ, ಕನ್ನಡಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ನಿವೃತ್ತ ಶಿಕ್ಷಕ ಇಸ್ಮಾಯಿಲ್ ಎಲಿಗಾರ್, ಕ.ಸಾ.ಪ.ಮಾಜಿ ಅದ್ಯಕ್ಷ ರಾಮನಮಲಿ, ಪುಣಗಟ್ಟಿ ನಿಂಗಪ್ಪ , ಚಂದ್ರಪ್ಪ ತಳವಾರ, ಗಣೇಶ್, ವೆಂಕಟೇಶ್, ರವಿನಾಯ್ಕ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು .