Vijayanagara Express

Kannada News Portal

ದೇಶಕ್ಕಾಗಿ ಹೋರಾಡಿದ ಮಹಾತ್ಮರನ್ನು ನಿರ್ಲಕ್ಷಿಸಿರುವುದೇ ತ್ರಿಬ್ಬಲ್ ಇಂಜಿನ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿದೆ – ಎಂ ಪಿ ವೀಣಾ ಮಹಾಂತೇಶ್ ಆರೋಪ

1 min read

 

ದೇಶಕ್ಕಾಗಿ ಹೋರಾಡಿದ ಮಹಾತ್ಮರನ್ನು ನಿರ್ಲಕ್ಷಿಸಿರುವುದೇ
ತ್ರಿಬ್ಬಲ್ ಇಂಜಿನ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿದೆ – ಎಂ ಪಿ ವೀಣಾ ಮಹಾಂತೇಶ್ ಆರೋಪ

 

ಹರಪನಹಳ್ಳಿ : ಆ-13,ದೇಶಕ್ಕಾಗಿ ಹೋರಾಡಿದ ಮಹಾತ್ಮರನ್ನು ನಿರ್ಲಕ್ಷಿಸಿರುವುದೇ ತ್ರಿಬಲ್ ಇಂಜಿನ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿಯಾಗಿದೆ ಎಂದು ಕೆಪಿಸಿಸಿ ಬಳ್ಳಾರಿ ಜಿಲ್ಲೆಯ ಮಾಧ್ಯಮ ವಿಶ್ಲೇಷಕಿ ಎಂ ಪಿ ವೀಣಾ ಮಹಾಂತೇಶ್ ರವರು ಶನಿವಾರ ಆರೋಪ ಮಾಡಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶಾಲೆಯ ಕಾಲೇಜಿನ ಸಾಲು ಕಂಬಗಳಿಗೆ ತಮ್ಮದೇ ಖರ್ಚಿನಲ್ಲಿ ಕೇಸರಿ ಬಿಳಿ ಹಸಿರು ಬಣ್ಣಗಳ ಗುರುತಿರುವ ಕಂಬಗಳಿಗೆ ಬಣ್ಣವನ್ನು ಬಳಿಯಲು ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದಲ್ಲಿ ಬಿಜೆಪಿ ಸರ್ಕಾರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದನ್ನು ಬಿಜೆಪಿ ನಾಯಕರುಗಳು ಡಬ್ಬಲ್ ಇಂಜಿನ್ ಸರ್ಕಾರ ಎಂದು ಬೊಗಳೆ ಬಿಡುತ್ತಿದ್ದಾರೆ ಹಾಗಾದರೆ ರಾಷ್ಟ್ರದಲ್ಲಿ ಡಬಲ್ ಇಂಜಿನ್ ಸರ್ಕಾರ ಮತ್ತು ತಾಲೂಕಿನಲ್ಲಿ ಬಿಜೆಪಿ ಶಾಸಕರು ಇದ್ದಾರೆ ಈ ತ್ರಿಬ್ಬಲ್ ಇಂಜಿನ್ ಸರ್ಕಾರಗಳಿಗೆ ಮಹಾತ್ಮರು ಉಳಿದುಕೊಂಡಂತ ಪವಿತ್ರವಾದ ಈ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ ಗೋಡೆಗಳಿಗೆ ಸುವರ್ಣ ಮಹೋತ್ಸವ ಆಚರಣೆ ಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಕಟ್ಟಡದ ಒಳಗಡೆಗೆ ಸುಣ್ಣ ಬಣ್ಣವನ್ನು ಬಳಸಬೇಕೆಂಬ ಕನಿಷ್ಠ ಪ್ರಜ್ಞೆಯೂ ಇಲ್ಲದಿರುವುದು ದುರಂತದ ಸಂಗತಿಯಾಗಿದೆ ಎಂದರು.

1891 ರಲ್ಲಿ ಬ್ರಿಟಿಷರಿಂದ ಸ್ಥಾಪನೆಗೊಂಡ ಸರ್ಕಾರಿ ಜೂನಿಯರ್ ಕಾಲೇಜು ಈಗ 131 ವರ್ಷ ತುಂಬಿದೆ ಅದೆಲ್ಲದಕ್ಕಿಂತಲೂ ಮುಖ್ಯವಾಗಿ 1934 ರಲ್ಲಿ ಮಹಾತ್ಮ ಗಾಂಧೀಜಿ ಅವರು ಇಲ್ಲಿಗೆ ಬಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಂಗಿದ್ದ ಕೊಠಡಿ ಐತಿಹಾಸಿಕವಾಗಿದೆ ಇದನ್ನು ಮಹಾತ್ಮ ಗಾಂಧಿ ಸ್ಮಾರಕ ಭವನ ಎಂದು ಕರೆಯಲಾಗುತ್ತದೆ,ಅಲ್ಲದೆ ನನ್ನ ಸಹೋದರ ಎಂಪಿ ರವೀಂದ್ರರವರು ಶಾಸಕರಾಗಿದ್ದ ಕಾಲದಲ್ಲಿ ಕೃಷ್ಣಶಿಲೆಯಿಂದ ಮಹಾತ್ಮಾ ಗಾಂಧೀಜಿಯವರ ಪ್ರತಿಮೆ ಹಾಗೂ ಅವರ ಹೋರಾಟದ ಉಬ್ಬು ಶಿಲ್ಪಗಳಿರುವ ಚಿತ್ರಗಳನ್ನು ಕೃಷ್ಣ ಶಿಲೆಯಲ್ಲಿ ಕೆತ್ತಿಸಿ ಅದನ್ನು 2018 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯರವರನ್ನು ಹರಪನಹಳ್ಳಿಗೆ ಕರೆಯಿಸಿ ಉದ್ಘಾಟನೆಯನ್ನು ಮಾಡಿಸಲಾಗಿತ್ತು ಇಂಥ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಈ ಸರ್ಕಾರಿ ಕಾಲೇಜಿಗೆ, ಸ್ವತಂತ್ರ ಬಂದು ಇಂದಿಗೆ 75 ವರ್ಷ ತುಂಬಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ದೇಶದಲ್ಲೆಡೆ ಸಂಭ್ರಮದಿಂದ ಆಚರಿಸುತ್ತಿರುವ ಈ ಸಮಯದಲ್ಲಿ ಇದಕ್ಕೆ ಸುಣ್ಣ ಬಣ್ಣವನ್ನು ಬಳಿಯದೆ ನಿರ್ಲಕ್ಷಿಸಿರುವುದು ಇಲ್ಲಿನ ತಾಲೂಕು ಆಡಳಿತದ ನಿರ್ಲಕ್ಷ ಮತ್ತು ಜನಪ್ರತಿನಿಧಿಗಳ ವೈಪಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಬಹುದು ಎಂದರು.

ಕಳೆದ ವರ್ಷ, ಗಾಂಧೀಜಿಯವರು ತಂಗಿದ್ದ ಕೊಠಡಿಯಲ್ಲಿ ಗಾಂಧಿಯವರ ಮೂರ್ತಿಯ ಮೇಲೆ ಗಾಂಧೀಜಿಯವರು ಇರುವ ಭಾವಚಿತ್ರವನ್ನು ಹಾಕಲಾಗಿತ್ತು ಅದು ಹರಿದು ಹಾಳಾಗಿ ಹೋಗಿದ್ದನ್ನು ಗಮನಿಸಿದ ಮಾಧ್ಯಮದವರು ಪತ್ರಿಕೆಗಳಲ್ಲಿ ಪ್ರಕಟಿಸಿದ್ದರೂ ತಾಲೂಕು ಆಡಳಿತವಾಗಲಿ , ಪುರಸಭೆ ಅಧಿಕಾರಿಗಳಾಗಲಿ ಫೋಟೋವನ್ನು ಬದಲಿಸಿರಲಿಲ್ಲ ಆಗಲು ನಾವೇ ಆ ಫೋಟೋವನ್ನು ತೆಗೆದು ಬೇರೆ ಫೋಟೋವನ್ನು ಹಾಕಿ ಬಂದಿದ್ದೆವು ಎಂದರು .

ಹರ್ ಘರ್ ತಿರಂಗ ,ಮನೆಮನೆಗೂ ಬಾವುಟವನ್ನು ಆರಿಸಿ ಎಂದು ಹೇಳುವ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಮನೆ ಇಲ್ಲದವರಿಗೆ ಮನೆಯನ್ನು ನೀಡಿ ಅಭಿವೃದ್ಧಿ ಬಗ್ಗೆ ಮಾತನಾಡಲು ಬಯಸುವುದಿಲ್ಲ .
ಹೀಗೆ ದೇಶಕ್ಕಾಗಿ ಹೋರಾಡಿದ ಮಹನೀಯರ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿರುವುದು ಗಾಂಧಿಜೀಗೆ ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅಪಮಾನವಾಗಿದೆ
ಇವರು ರಾಷ್ಟ್ರ ಭಕ್ತಿ ಬಗ್ಗೆ ಮಾತಾನಾಡುತ್ತಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಹಾಡಿದಂತೆ ಆಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಾದ ದಾದಪೀರ್, ಶಿವು, ಗುರುಬಸವರಾಜ್, ನೇತ್ರಾವತಿ, ರೇಣುಕಮ್ಮ,ಮಮತ ಮುಂತಾದವರು ಉಪಸ್ಥಿತರಿದ್ದರು.

 

 

 

 

Leave a Reply

Your email address will not be published. Required fields are marked *