September 18, 2024

Vijayanagara Express

Kannada News Portal

ಪ್ರಾಂಶುಪಾಲ ಎನ್ ಮುತ್ತೇಶ ಅವರಿಗೆ ದಾವಣಗೆರೆ ವಿವಿ ಯಿಂದ ಡಾಕ್ಟರೇಟ್ ಪದವಿ ಪ್ರದಾನ

1 min read

 

 

ಪ್ರಾಂಶುಪಾಲ ಎನ್ ಮುತ್ತೇಶ ಅವರಿಗೆ ದಾವಣಗೆರೆ ವಿವಿ ಯಿಂದ ಡಾಕ್ಟರೇಟ್ ಪದವಿ ಪ್ರದಾನ

 

ಹರಪನಹಳ್ಳಿ: ಪಟ್ಟಣದ ಹಿರೇ ಮೇಗಳಗೆರೆ ಪಾಟೀಲ್ ಸಿದ್ದನಗೌಡ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಎನ್ ಮುತ್ತೇಶ್ ಅವರಿಗೆ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಿದೆ.

ಎನ್ ಮುತ್ತೇಶ ಮೂಲತಹ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕು ಭರಮಸಮುದ್ರ ಗ್ರಾಮದವರು ಈ ಮೊದಲು ಇವರು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು ನಂತರ ಸಿರಿಗೇರಿಯ ತರಳುಬಾಳು ಸಂಸ್ಥೆಯ ಹರಪನಹಳ್ಳಿ ಪಟ್ಟಣದಲ್ಲಿರುವ ಎಚ್‌ಪಿಎಸ್ ಕಾಲೇಜಿನಲ್ಲಿ ಒಂದು ವರ್ಷದಿಂದ ಪ್ರಾಂಶುಪಾಲರಾಗಿ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು, ಇವರು ಮಂಡಿಸಿ ಪ್ರಕಟಿಸಿದ “ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಪ್ರಾಕ್ಟಿಸಸ್ ಇನ್ ಪಬ್ಲಿಕ್ ಅಂಡ್ ಪ್ರೈವೇಟ್ ಸೆಕ್ಟರ್ ಎಂಟರ್ಪ್ರೈಸಸ್ ಇನ್ ಕರ್ನಾಟಕ” ( corporate social responsibility practices in public and private sector enterprises in Karnataka ) ಕರ್ನಾಟಕದಲ್ಲಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯಮಗಳಲ್ಲಿ ಕಾರ್ಪೊರೇಟ್ ಗಳ ಸಾಮಾಜಿಕ ಜವಾಬ್ದಾರಿ ಮತ್ತು ಅಭ್ಯಾಸಗಳು, ಎಂಬ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಇವರನ್ನು ಕಾಲೇಜು ಆಡಳಿತ ಮಂಡಳಿ ಉಪನ್ಯಾಸಕ ವೃಂದ ಮತ್ತು ವಿದ್ಯಾರ್ಥಿಗಳು ಶುಭ ಕೋರಿ ಹಾರೈಸಿ ಅಭಿನಂದಿಸಿದ್ದಾರೆ.

 

 

Leave a Reply

Your email address will not be published. Required fields are marked *