Vijayanagara Express

Kannada News Portal

ಪಾದಯಾತ್ರೆ ಹೆಸರಿನಲ್ಲಿ ನಗೆ ಪಾಟಲಿಗೀಡಾದ ಅಂಬಾಡಿ ನಾಗರಾಜ್

1 min read

 

ವಿಶೇಷ ವರದಿ ಪಟ್ನಾಮದ ವೆಂಕಟೇಶ್  ಹರಪನಹಳ್ಳಿ

ಪಾದಯಾತ್ರೆ ಹೆಸರಿನಲ್ಲಿ ನಗೆ ಪಾಟಲಿಗೀಡಾದ ಅಂಬಾಡಿ ನಾಗರಾಜ್

 

ಹರಪನಹಳ್ಳಿ: ತಾಲೂಕಿನಾದ್ಯಂತ ಪಾದಯಾತ್ರೆ ಮಾಡುತ್ತೇನೆ ಎಂದು ಹಗರಿಬೊಮ್ಮನಹಳ್ಳಿ ಮೂಲದ ಅಂಬಾಡಿ ನಾಗರಾಜ್ ಎಂಬುವವರು ಪಾದಯಾತ್ರೆ ಹೆಸರಿನಲ್ಲಿ ನಗೆಪಾಟಲಿಗೀಡಾದ ಘಟನೆ ತಾಲೂಕಿನಲ್ಲಿ ನಡೆಯುತ್ತಿದೆ .

ಹೌದು ಅಂಬಾಡಿ ನಾಗರಾಜ್ ಎಂಬ ಹಗರಿ ಬೊಮ್ಮನಹಳ್ಳಿ ಮೂಲದ ಕಾಂಗ್ರೆಸ್ ಕಾರ್ಯಕರ್ತರೊಬ್ಬರು ನಾನು ಹರಪನಹಳ್ಳಿ ತಾಲೂಕಿನ ವಿಧಾನಸಭಾ ಕ್ಷೇತ್ರದ ಸೇವಾಕಾಂಕ್ಷಿ ಎಂದು ಹೇಳಿಕೊಂಡು ತಾಲೂಕಿನಲ್ಲಿ 182 ಹಳ್ಳಿಗಳಲ್ಲಿ ಪಾದಯಾತ್ರೆ ಮಾಡುತ್ತೇನೆ ಎಂದು ಸಿದ್ಧತೆಯನ್ನು ಮಾಡಿಕೊಂಡು ಪಾದಯಾತ್ರೆ ಮಾಡಲು ಆರಂಭಿಸಿದ್ದಾರೆ.

ಪಾದಯಾತ್ರೆ ಉದ್ದೇಶವನ್ನು ಕೇಳಿದರೆ ಜನ ನಗುವುದಂತು ಸತ್ಯ ಏಕೆಂದರೆ ಕೇಂದ್ರ ಸರ್ಕಾರದ ಬೆಲೆ ಏರಿಕೆ ಕ್ರಮವನ್ನು ವಿರೋಧಿಸಿ ದಿನಸಿ ವಸ್ತುಗಳ ಬೆಲೆ, ಅಡುಗೆ ಅನಿಲ,ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‌ಟಿ , ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೇವಾ ತೆರಿಗೆಗಳು ಸೇರಿದಂತೆ ವಿವಿಧ ವಸ್ತುಗಳ ಮೇಲಿನ ತೆರಿಗೆಗಳು ಸಹ ಗಗನಕ್ಕೆ ಏರಿರುವ ಹಾಗೂ ಜನಸಾಮಾನ್ಯರ ಜೀವನಾವಶ್ಯಕ ವಸ್ತುಗಳಾದ, ತಿಂಡಿ ತಿನಿಸುಗಳ ಹಣ್ಣು ಹಂಪಲು ಮೇಲೂ ವಿಪರೀತ ತೆರಿಗೆಯನ್ನು ಹೆಚ್ಚಿಸಿರುವ ಮೂಲಕ ಜನರ ಜೀವನಕ್ಕೆ ಬರೆ ಎಳೆದಿರುವುದರ ವಿರುದ್ಧ ದೇಶದಾದ್ಯಂತ ವಿರೋಧ ಎದ್ದಿದೆ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳ ವಿರುದ್ಧ ಮುಷ್ಕರವನ್ನು ನಡೆಸಿ ಅಗತ್ಯ ಸರಕುಸರಂಜಾಮುಗಳ ಬೆಲೆ ಕಡಿಮೆ ಮಾಡಲು ಸರ್ಕಾರಗಳಿಗೆ ಬಿಸಿ ಮುಟ್ಟಿಸಬೇಕಾದಂತ ಕಾರ್ಯವನ್ನು ಮಾಡಿದ್ದಿದ್ದರೆ  ಅದಕ್ಕೊಂದು ಅರ್ಥ ಇರುತ್ತಿತ್ತು .

ಆದರೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳಿಗೆ ಬಿಸಿ ಮುಟ್ಟಿಸುವುದನ್ನ ಬಿಟ್ಟು ತಾವು ತಾಲೂಕಿನ  182 ಹಳ್ಳಿಗಳಲ್ಲಿ ಸಂಚರಿಸಿ ಇದರ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತೇನೆ ಎಂದು ಹೇಳುತ್ತಿರುವುದು ಅಪಹಾಸ್ಯಕ್ಕೀಡಾದಂತಾಗಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಏಕೆಂದರೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕಾದರೆ ಬೆಂಗಳೂರು ಚಲೋ ಇಲ್ಲವೆ ದೆಹಲಿ ಚಲೋ ಕಾರ್ಯಕ್ರಮವನ್ನು ಮಾಡಲಿ ತಮ್ಮ ಸ್ವಂತ ಖರ್ಚಿನಲ್ಲಿ ಕ್ಷೇತ್ರದ ಜನರನ್ನು ಬೆಂಗಳೂರು ಇಲ್ಲವೆ ದೆಹಲಿಗೆ ಕರೆದುಕೊಂಡು ಹೋಗಿ  ಪಂಜಾಬ್ ನ ಜನರು ದೆಹಲಿಯಲ್ಲಿ ಹೋರಾಟ ಮಾಡಿದ ರೀತಿ ಮಾಡಲಿ ಹಾಗೆ ಮಾಡುವುದರಿಂದ ಸರ್ಕಾರಕ್ಕೆ ಬಿಸಿ ಮುಟ್ಟುವುದಲ್ಲದೆ ಸರ್ಕಾರ ಅದರ ಬಗ್ಗೆ ಚಿಂತನೆ ನಡೆಸಿ ಸ್ವಲ್ಪವಾದರೂ ಇವುಗಳಲ್ಲಿ ಬದಲಾವಣೆಮಾಡಬಹುದೆನೊ, ಅದನ್ನು ಬಿಟ್ಟು ತಾಲೂಕಿನ ಗ್ರಾಮಗಳಲ್ಲಿ ಜನರ ಬಳಿ ಹೋಗುತ್ತಿರುವುದು ಚುನಾವಣೆ ಉದ್ದೇಶಕ್ಕೂ ಅಥವಾ ಜನರಿಗೆ ಅನುಕೂಲವಾಗಲೆಂದೊ ಅರ್ಥವಾಗುತ್ತಿಲ್ಲ ಎಂದು ಜನ ದೂರುತ್ತಿದ್ದಾರೆ .

 

ಈಗ ಚುನಾವಣೆ ಮುಂದಿರುವಾಗ ಪಾದಯಾತ್ರೆ ನಾಟಕ ಏಕೆ

ಅಂಬಾಡಿ ನಾಗರಾಜ್ ಎಂಬ ಹೆಸರು ಕಳೆದ ಒಂದು ತಿಂಗಳಿನಿಂದ ಹರಪನಹಳ್ಳಿ ಯಲ್ಲಿ ಕೇಳಿ ಬರುತ್ತಿದೆ ಬಾಯೆತ್ತಿದರೆ ಇವರು ,ನಾನು ಚಿಗಟೇರಿಯ ಮೊಮ್ಮಗ , ಅಳಿಯ ಎಂದು ಹೇಳಿಕೊಂಡು ಪರಿಚಯ ಆಗುತ್ತಾ ನಾನು ಕಾಂಗ್ರೆಸ್ ಪಕ್ಷದಿಂದ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದೇನೆ ಎಂದು ಹೇಳುತ್ತಿದ್ದಾರೆ.

ಚುನಾವಣೆ ಆರು ತಿಂಗಳು ಬಾಕಿ ಇರುವಾಗ ಈಗ ಬಂದು ನಾನು ವಿಧಾನಸಭಾ ಕ್ಷೇತ್ರದ ಆಕಾಂಕ್ಷಿಯಾಗಿದ್ದೇನೆ ಹೈಕಮಾಂಡ್ ಟಿಕೆಟ್ ನೀಡಿದರೆ ನಾನು ಚುನಾವಣೆಯನ್ನು ಎದುರಿಸುತ್ತೇನೆ ಎಂದು ಹೇಳುತ್ತಾ ಪಾದಯಾತ್ರೆಯನ್ನು ಆರಂಭಿಸಿದ್ದಾರೆ ತಾಲೂಕಿನ ಜನರ ಮೇಲೆ ಅಷ್ಟೊಂದು ಅಭಿಮಾನ , ಅಕ್ಕರೆ,ಜನಪರ ಕಾಳಜಿ ಇದ್ದಿದ್ದರೆ ಕಳೆದ ನಾಲ್ಕು ವರ್ಷಗಳಿಂದ ಇಂತಹ ಹೋರಾಟಗಳನ್ನ ಅಥವಾ ಕಾಂಗ್ರೆಸ್ ಪಕ್ಷದ ಸಂಘಟನೆ ಏಕೆ ಮಾಡಲಿಲ್ಲ? ಅವರು ಜನಪರವಾದ ಕೆಲಸಗಳನ್ನು ಮಾಡಿದ್ದಿದ್ದರೆ ಭವಿಷ್ಯ ಅವರು ಪಾದಯಾತ್ರೆ ಆರಂಭಿಸಿರುವುದಕ್ಕೆ ಅರ್ಥ ಇರುತ್ತಿತ್ತೊ ಏನೋ? ಈ ತಾಲೂಕಿಗೆ ಇವರ ಕೊಡುಗೆ ಏನು ಎಂದು ಜನರು ಪ್ರಶ್ನಿಸುತ್ತಿದ್ದಾರೆ ಆದರೆ ದಿಡೀರನೆ ಬಂದು ನಾನು ತಾಲೂಕನ್ನು ಸ್ವರ್ಗ ಮಾಡುತ್ತೇನೆ ಇಂದ್ರನ ಅರಮನೆ ಮಾಡುತ್ತೇನೆ ಎಂದು ಹೇಳುವ ರೀತಿಯಲ್ಲಿ ತಾಲೂಕಿನಲ್ಲಿ ಪಾದಯಾತ್ರೆ ಆರಂಭ ಮಾಡಿರುವುದು ನಿಜಕ್ಕೂ ಹಾಸ್ಯಾಸ್ಪದವಾಗಿದೆ .

ಸ್ಥಳೀಯ ಶಾಸಕರು ಕೃಷಿ ಅಧಿಕಾರಿಗಳ ಸಭೆಯನ್ನು ಇದುವರೆಗೂ ಕರೆದಿಲ್ಲ ನಾಲ್ಕು ವರ್ಷ ಬಳ್ಳಾರಿಯಲ್ಲಿದ್ದು ಚುನಾವಣೆ 9 ತಿಂಗಳು ಬಾಕಿ ಇರುವಾಗ ಹರಪನಹಳ್ಳಿ ಕಡೆ ಮುಖ ಮಾಡಿದ್ದಾರೆ ಅಲ್ಲದೆ ಅನೇಕ ಕಾಮಗಾರಿಗಳನ್ನು ಪೂರ್ಣಗೊಳಿಸಿರುವುದಿಲ್ಲ ವಿಶೇಷವಾಗಿ ಗರ್ಭಗುಡಿ ಬಿಡ್ಜ್ ಕಂ ಬ್ಯಾರೇಜ್ ,60 ಕೆರೆಗಳಿಗೆ ನೀರು ತುಂಬಿಸುವುದು  ಈ ಯೋಜನೆಗಳು ಕಾರ್ಯಗತಗೊಳಿಸಲು ಶಾಸಕರು ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಪಾದಯಾತ್ರೆ ಆರಂಭಿಸಿ ರೈತರ ಪರ ಹೋರಾಟದ ನೆಪದಲ್ಲಿ ತಮ್ಮ ಚುನಾವಣಾ ಬೇಳೆಕಾಳನ್ನು ಬೆಯಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ .

ಎಂ ಪಿ ರವೀಂದ್ರ ರವರು ಮಾಡಿದ ಜನಪರ ಕೆಲಸಗಳ ಮೇಲಿದ್ದ ಪ್ರೀತಿ ಅವರ ಕುಟುಂಬದ ಮೇಲೆಕಿಲ್ಲ

ಎಂಪಿ ರವೀಂದ್ರರವರು ಮಾಡಿದ ಜನಪ್ರಿಯ ಕೆಲಸಗಳನ್ನು ಅಂದರೆ 60 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಗರ್ಭಗುಡಿ ಬ್ರಿಡ್ಜ್ ಕಮ್ ಬ್ಯಾರೇಜ್ ಹೈದರಾಬಾದ್ ಕರ್ನಾಟಕ ವಿಶೇಷ ಮೀಸಲಾತಿ 371 ಜೆ ಕಾಲಂ ಜಾರಿಗೊಳಿಸಿರುವುದು ಮುಂತಾದ ಯಶಸ್ವಿ ಯೋಜನೆಗಳನ್ನು ಇಟ್ಟುಕೊಂಡು ಪಾದಯಾತ್ರೆಯನ್ನು ಆರಂಭಿಸಿದ್ದಾರೆ ಇದು ಹಾಸ್ಯಾಸ್ಪದವಲ್ಲದೆ ಮತ್ತಿನ್ನೇನು ?ಏಕೆಂದರೆ ಮಾಜಿ ಶಾಸಕ ದಿವಂಗತ ಎಂಪಿ ರವೀಂದ್ರರವರು ಕಾಲವಾದ ನಂತರ ಅವರ ಸಹೋದರಿಯರಾದ ಎಂಪಿ ಲತಾ ಮಲ್ಲಿಕಾರ್ಜುನ್ ಮತ್ತು ಎಂ ಪಿ ವೀಣಾ ಮಹಾಂತೇಶ್ ರವರು ಪಕ್ಷದಲ್ಲಿ ಸಕ್ರಿಯವಾಗಿದ್ದು ಕಳೆದ ನಾಲ್ಕು ವರ್ಷಗಳಿಂದ ಪಕ್ಷವನ್ನು ಸಂಘಟಿಸಲು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಾಲೂಕನ್ನು ಸುತ್ತುತ್ತಿದ್ದಾರೆ ಹಾಗಾದರೆ ರವೀಂದ್ರ ಅವರ ಕೆಲಸದ ಮೇಲೆ ಗೌರವ ಕೊಡುವುದಾದರೆ ಅಥವಾ ಅವರ ಕುಟುಂಬದವರಿಗೆ ಗೌರವ ಕೊಡುವುದಾದರೆ ಅವರೇ ಇಲ್ಲಿ ಚುನಾವಣೆಯನ್ನು ಎದುರಿಸುತ್ತಾರೆಂಬದು ಗೊತ್ತಿದ್ದರೂ ಸಹ  ತಾವು ಅವರಿಗೆ ಪೈಪೋಟಿ ಎಂಬಂತೆ ಕ್ಷೇತ್ರದ ಆಕಾಂಕ್ಷಿ ಎಂದು ಹೇಳಿಕೊಂಡು ಚುನಾವಣಾ ಉದ್ದೇಶದಿಂದ ಈ ರೀತಿ ಪಾದಯಾತ್ರೆ ಮಾಡುತ್ತಿರುವುದನ್ನು ಏನೆಂದು ಹೇಳಬೇಕೊ ತಿಳಿದಾಗಿದೆ ಎಂದು ಜನರು ಹೇಳುತ್ತಿದ್ದಾರೆ ಎನ್ನಲಾಗುತ್ತಿದೆ.

ತಾಲೂಕಿನಲ್ಲಿ ಗುರುತಿಸಿಕೊಳ್ಳುವ ಪ್ರಯತ್ನಕ್ಕಷ್ಟೆ ಈ ಪಾದಯಾತ್ರೆ ಸೀಮಿತ

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ವೈಫಲ್ಯಗಳನ್ನು ಖಂಡಿಸಲು ಸಾಕಷ್ಟು ಮಾರ್ಗಗಳಿವೆ ಅದನ್ನು ತಾಲೂಕಿನಲ್ಲೇ ಮಾಡಬೇಕೆಂದೇನಿಲ್ಲ ಗ್ರಾಮಗಳಿಗೇ ಹೋಗಬೇಕೆಂದೇನಿಲ್ಲ ಆದರೂ ಈ ರೀತಿ ತಾಲೂಕಿನ 182 ಹಳ್ಳಿಗಳಲ್ಲಿ ಸುತ್ತುವರಿಯುತ್ತೇನೆ ಎಂದು ಹುಚ್ಚುತನದ ಪಾದಯಾತ್ರೆ ಆರಂಭಿಸಿರುವುದು ಏಕೆ ಎಂಬುದು ಕ್ಷೇತ್ರದ ಜನರ ಪ್ರಶ್ನೆಯಾಗಿದೆ.

ಅದೇನೇ ಇರಲಿ ತಾಲೂಕನ್ನು ಒಂದು ಬಾರಿ ಸುತ್ತುವರಿಯಲು ಸಜ್ಜಾಗಿ ಜನಾಕ್ರೋಶ ಪಾದಯಾತ್ರೆ ಅಭಿಯಾನವನ್ನು ಆರಂಭಿಸಿದ್ದಾರೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರಂತೆ ಹಂಗಾಯಿತು ಇವರ ಪಾದಯಾತ್ರೆ , ಅದನ್ನು ಬಿಟ್ಟು ನೇರವಾಗಿ ನಾನು ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ  ಜನರ ಭೇಟಿಗೆ ಪಾದಯಾತ್ರೆ ಮಾಡುತ್ತೇನೆ ಎಂದು ಹೇಳಿದ್ದಿದ್ದರೆ ಅದು ಸೂಕ್ತವಾಗುತ್ತಿತ್ತು ,ಏಕೆಂದರೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳಿಗೆ ಬಿಸಿ ಮುಟ್ಟಿಸಬೇಕಾದ ಇವರ ಹೋರಾಟವು  ಬರೀ ಹರಪನಹಳ್ಳಿ ತಾಲೂಕಿಗೆ  ಮಾತ್ರ ಸೀಮಿತವಾಗಬಾರದು . ಹೋರಾಟದ ನೆಪ ಮಾಡಿಕೊಂಡು ತಾಲೂಕಿನ ಜನರ ಮನೆಮನೆಗೆ ತಿರುಗುತ್ತಿರುವುದು ಗಣೇಶನ ಮಾಡು ಅಂದ್ರೆ ಅವರಪ್ಪನ್ ಮಾಡಿದಂಗೆ ಆಗಿದೆ ಎಂದು ಹೇಳಿದರೆ ತಪ್ಪೇನೂ ಆಗಲಾರದು .

ಹೊಗಲಿಬಿಡಿ ,ಇವರು ತಾಲೂಕಿನಾದ್ಯಂತ 1000 ಕಿ.ಮೀ 115 ದಿನಗಳ ಕಾಲ ಪಾದಯಾತ್ರೆ ಮಾಡಿ ಹೋರಾಟದಿಂದ ಎಚ್ಚೆತ್ತು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರವು ಇವರು ಹರಪನಹಳ್ಳಿ ತಾಲೂಕಿನಲ್ಲಿ ಮಾಡಿದ ಪಾದಯಾತ್ರೆಗೆ ಮಣಿದು 350 ರೂಪಾಯಿಗೆ ಅಡುಗೆ ಅನಿಲ 45 ರೂಗೆ ಪೆಟ್ರೋಲ್ ,40 ರೂಗೆ ಡೀಸೆಲ್, ಜಿಎಸ್ಟಿ ಯಲ್ಲಿ ಕಡಿತ ,ಸೇವಾ ತೆರಿಗೆಗಳಲ್ಲಿ ರಿಯಾಯಿತಿ, ಸಣ್ಣಪುಟ್ಟ ತೆರಿಗೆಗಳನ್ನ ರದ್ದುಗೊಳಿಸಿ ಕೇಂದ್ರ ಮತ್ತು ರಾಜ್ಯ  ಬಿಜೆಪಿ ಸರ್ಕಾರಗಳು ಆದೇಶ ಹೊರಡಿಸಿದರೆ  ತಾಲೂಕಿನ ಜನತೆಗೆ ಅದಕ್ಕಿಂತ ಇನ್ನೇನು ಬೇಕಲ್ವಾ , ಇದೆಲ್ಲಾ ಶೀಘ್ರದಲ್ಲೇ ಜಾರಿಗೊಂಡರೆ  ದೇಶದ ಜನತೆಗೆ ಅನುಕೂಲವಾಗುತ್ತದೆ .

ತಾಲೂಕಿಗೆ ಅಂಬಾಡಿ ನಾಗರಾಜ ಅವರ ಕೊಡುಗೆ ಏನು ಎಂದು ಮೊದಲು ಕ್ಷೇತ್ರದ ಜನತೆಗೆ ತಿಳಿಸಲಿ ಆಮೇಲೆ ಶಾಸಕರು ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸರಿಯಾಗಿ ಅಂಕಿಅಂಶಗಳನ್ನು ತಿಳಿದುಕೊಂಡು ಮಾತನಾಡಲಿ, ಚುನಾವಣೆ ಮುಂದಿರುವಾಗ ದಿಢೀರನೆ ತಾಲೂಕಿಗೆ ಬಂದು ತಪ್ಪು ಮಾಹಿತಿ ನೀಡುತ್ತಿರುವುದು ತಪ್ಪು ,ನಾನು ಪಾದಯಾತ್ರೆ ಮಾಡುತ್ತೇನೆ ಎಂಬುದರ ಉದ್ದೇಶ ಏನು ಎಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ ಜನರೇನು ದಡ್ಡರಲ್ಲ, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮುಂದಿನ ದಿನಗಳಲ್ಲಿ ಜನರು ಇವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂಬುದನ್ನು ಅವರೇ ಕಾದು ನೋಡಲಿ .

ಆರ್ ಲೋಕೇಶ್ ಬಿಜೆಪಿ ಮುಖಂಡರು ಹರಪನಹಳ್ಳಿ

 

Leave a Reply

Your email address will not be published. Required fields are marked *