Vijayanagara Express

Kannada News Portal

ಶಾಸಕ ಕರುಣಾಕರ ರೆಡ್ಡಿಯ ಮೇಲೆ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ಮಾಡಿರುವ  ಆರೋಪದಲ್ಲಿ ಹುರುಳಿಲ್ಲ – ತಾಲೂಕು ಬಿಜೆಪಿ ಎಸ್ಟಿ ಮೋರ್ಚಾ

1 min read

ಶಾಸಕ ಕರುಣಾಕರ ರೆಡ್ಡಿಯ ಮೇಲೆ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ಮಾಡಿರುವ  ಆರೋಪದಲ್ಲಿ ಹುರುಳಿಲ್ಲ – ತಾಲೂಕು ಬಿಜೆಪಿ ಎಸ್ಟಿ ಮೋರ್ಚಾ

ಹರಪನಹಳ್ಳಿ: ನ-5,ಅಭಿವೃದ್ಧಿ ವಿಷಯದಲ್ಲಿ ಜಗಳೂರು ಶಾಸಕ ರಾಮಚಂದ್ರಪ್ಪನವರು ಹರಪನಹಳ್ಳಿಯ ಶಾಸಕ ಕರುಣಾಕರ ರೆಡ್ಡಿ ಅವರಿಗಿಂತಲೂ ಮೇಲು ಎಂದು ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ನೀಡಿರುವ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ ಎಂದು ತಾಲೂಕು ಬಿಜೆಪಿ ಎಸ್ಟಿ ಮೋರ್ಚಾದ ಪದಾಧಿಕಾರಿಗಳು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಾಲ್ಮೀಕಿ ಸಮುದಾಯದ ಬಿಜೆಪಿ ಮುಖಂಡ ಆರ್ ಲೋಕೇಶ್ ಹರಪನಹಳ್ಳಿ ತಾಲೂಕಿನ ಜಗಳೂರು ವಿಧಾನಸಭಾ ಕ್ಷೇತ್ರದ ಕೊಣನಕಟ್ಟಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ಉಚ್ಚೇಂಗೆಪ್ಪ ಅವರು ಹರಪನಹಳ್ಳಿಯ ಶಾಸಕ ಕರುಣಾಕರ ರೆಡ್ಡಿ ಅವರು ವಾಲ್ಮೀಕಿ ಸಮಾಜದ ಬಗ್ಗೆ ಕಾಳಜಿಯೇ ಇಲ್ಲ ಎಂದು ಹೇಳಿದ್ದಾರೆ ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷರಾಗಿ ಈ ರೀತಿ ಮಾತಾನಾಡಿರುವುದು ಅವರ ಗೌರವಕ್ಕೆ ಸರಿಹೊಂದುವಂತದ್ದಲ್ಲ ಈ ರೀತಿ ಹೇಳಿಕೆಗಳನ್ನು ನೀಡಲು ಅವರಿಗೆ ಯಾವುದೇ ನೈತಿಕ ಹಕ್ಕು ಇಲ್ಲ ಏಕೆಂದರೆ ತಾವು ಯಾರಿಂದ ಹೇಗೆ ಸಮಾಜದ ಅಧ್ಯಕ್ಷ ಹುದ್ದೆ ಗಿಟ್ಟಿಸಿಕೊಂಡಿರಿವರು ಎಂಬುದನ್ನು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ವಾಗ್ದಾಳಿ ನಡೆಸಿದ ಅವರು ಶಾಸಕ ರಾಮಚಂದ್ರಪ್ಪ ಅವರನ್ನು ಓಲೈಸುವ ಉದ್ದೇಶದಿಂದ ನಮ್ಮ ಜನಪ್ರಿಯ ಶಾಸಕರಾದ ಕರುಣಾಕರ ರೆಡ್ಡಿಯವರನ್ನು ನಮ್ಮ ಸಮಾಜದ ಬಗ್ಗೆ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದ್ದಾರೆ ಎಂದು ಆರೋಪಿಸಿ ಮಾತನಾಡುವದು ಸರಿಯಲ್ಲ ಅವರು ಎಲ್ಲಾ ಸಮಾಜದವರನ್ನು ಸಮಾನವಾಗಿ ಕಾಣುವ ಗುಣ ಹೊಂದಿದ್ದಾರೆ ಎಂದು ಹೇಳಿದರು.

ಪುರಸಭೆ ಸದಸ್ಯ ರೊಕ್ಕಪ್ಪ ಮಾತಾನಾಡಿ ಇವರು ಸಮಾಜದ ಅಧ್ಯಕ್ಷರಾಗಿ ಮೂರು ವರ್ಷ ಕಳೆದಿವೆ ಸಮಾಜದ ಆಗುಹೋಗುಗಳ ಬಗ್ಗೆ ಚರ್ಚಿಸುವ ಸಲುವಾಗಿ ಎಷ್ಟು ಸಭೆಗಳನ್ನು ಕರೆದಿದ್ದಾರೆ ಎಂದು ಅವರು ಮೊದಲು ಸಮಾಜಕ್ಕೆ ತಿಳಿಸಲಿ , ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಸಮಾಜದ ವತಿಯಿಂದ ನಿಂತು ಜವಾಬ್ದಾರಿಯಿಂದ ಮಾಡಿ ತೋರಿಸಲಿ ಎಂದು ಅವರ ಹೇಳಿಕೆಗೆ ತಿರುಗೇಟು ನೀಡಿದರು.

ಪ್ರಾಣೇಶ್ ವಕೀಲರು ಮಾತನಾಡಿ ನಮ್ಮ ತಾಲೂಕಿನಲ್ಲಿ ಸುಮಾರು 151 ಜನ ಎಸ್ಟಿ ಸಮುದಾಯ ಫಲಾನುಭವಿಗಳಿಗೆ ಗಂಗಕಲ್ಯಾಣ ಕೊಳವೆಬಾವಿ ಕೊರೆಯಿಸಿ ಕೊಡಲಾಗಿದೆ,25ಜನ ಫಲಾನುಭವಿಗಳಿಗೆ ವಾಹನ ಖರೀದಿಸಲು ಸಹಾಯಧನ ನೀಡಲಾಗಿದೆ ಎಸ್ಟಿಪಿ,ಎಸ್ ಸಿಪಿ ಅನುದಾನದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ, ವಾಲ್ಮೀಕಿ ಭವನ ಹಾಗೂ ಮುಂತಾದ ಸೌಲಭ್ಯಗಳನ್ನು ನಮ್ಮ ಶಾಸಕರು ನಮ್ಮ ಸಮಾಜಕ್ಕೆ ನೀಡಿದ್ದಾರೆ ಎಂದು ತಿಳಿಸಿದರು.

ಶಿವಾನಂದ,ಗಿರಜ್ಜಿ ನಾಗರಾಜ್, ಕೆಂಗಳ್ಳಿ ಪ್ರಕಾಶ್ ವಕೀಲರು,ಪಟ್ನಾಮದ ನಾಗರಾಜ್ ತಿಮ್ಮೇಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಗುಂಡಿ ಮಂಜುನಾಥ್,ಕೆ ನಾಗರಾಜ್,ಮ್ಯಾಕಿ ದುರುಗಪ್ಪ,ಕಣಿವಿಹಳ್ಳಿ ಮಾರುತಿ,ಹುಲಿಕಟ್ಟಿ ಲಕ್ಕೇಶಪ್ಪ,ಕಣಿವಿಹಳ್ಳಿ ಪರುಸಪ್ಪ, ರಾಘವೇಂದ್ರ ಸಿ,ಕಾನಹಳ್ಳಿ ಪ್ರಕಾಶ್,ಡಿ.ಉಚ್ಚೇಂಗೆಪ್ಪ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *