Vijayanagara Express

Kannada News Portal

ಅಭಿವೃದ್ಧಿ ವಿಷಯದಲ್ಲಿ ಶಾಸಕ ರಾಮಚಂದ್ರಪ್ಪ, ಕರುಣಾಕರ ರೆಡ್ಡಿ ಗಿಂತಲೂ ಮೇಲು

1 min read

 

ಅಭಿವೃದ್ಧಿ ವಿಷಯದಲ್ಲಿ ಶಾಸಕ ರಾಮಚಂದ್ರಪ್ಪ, ಕರುಣಾಕರ ರೆಡ್ಡಿ ಗಿಂತಲೂ ಮೇಲು

 

ಹರಪನಹಳ್ಳಿ: ನ-2,ಅಭಿವೃದ್ಧಿ ವಿಷಯದಲ್ಲಿ ಜಗಳೂರು ಶಾಸಕ ರಾಮಚಂದ್ರಪ್ಪನವರು ಹರಪನಹಳ್ಳಿಯ ಶಾಸಕ ಕರುಣಾಕರ ರೆಡ್ಡಿ ಅವರಿಗಿಂತಲೂ ಮೇಲು ಎಂದು ವಾಲ್ಮೀಕಿ ನಾಯಕ ಸಮಾಜದ ತಾಲ್ಲೂಕು ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ಹೇಳಿದರು.

ಹರಪನಹಳ್ಳಿ ತಾಲೂಕಿನ ಜಗಳೂರು ವಿಧಾನಸಭಾ ಕ್ಷೇತ್ರದ ಕೊಣನಕಟ್ಟಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಅವರು ವಾಲ್ಮೀಕಿ ಸಮಾಜದ ಬಗ್ಗೆ ಕಾಳಜಿಯೇ ಇಲ್ಲ ಕಳೆದ ವರ್ಷ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಮಹರ್ಷಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದ ನಾನು,ವಾಲ್ಮೀಕಿ ಮಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮಿಗಳು 7.5 ಮೀಸಲಾತಿಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ಕುಳಿತಿದ್ದರು ಅದನ್ನು ಕುರಿತಾಗಿ ಸದನದಲ್ಲಿ ಧ್ವನಿ ಎತ್ತಿರಿ ಎಂದು ನಾನು ನನ್ನ ಭಾಷಣದ ವೇಳೆ ಮನವಿ ಮಾಡಿಕೊಂಡೆ ಆದರೆ ತಾವು ಸದನದಲ್ಲಿ ವಾಲ್ಮೀಕಿ ಜನಾಂಗದವರಿಗೆ ಈ ಮೀಸಲಾತಿ ಬಗ್ಗೆ ಮಾತನಾಡುವೆ ಎಂದು ತಮ್ಮ ಭಾಷಣದಲ್ಲಿ ಒಂದೇ ಒಂದು ಮಾತನ್ನೂ ಚಕಾರವೆತ್ತಿಲಿಲ್ಲ ಅಲ್ಲದೆ ಇಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವೇದಿಕೆ ಭಾಷಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿದ್ದ ನಾನು ಮಾತನಾಡುವಾಗ ಕನ್ನಡ ಸಾಹಿತ್ಯ ಪರಿಷತ್ತು ಭವನ ಶಿಥಿಲಗೊಂಡಿದೆ ಅದನ್ನು ದುರಸ್ಥಿ ಮಾಡಿಸುವಂತೆ ಮನವಿ ಮಾಡಿಕೊಂಡೆ, ಅಲ್ಲದೇ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ ಸಾಹಿತಿ ಸುಭದ್ರಮ್ಮ ಮಾಡ್ಲಗೇರಿ ಅವರು ತಮ್ಮ ಉಪನ್ಯಾಸದಲ್ಲಿ ಈಗಾಗಲೇ ತಮಿಳುನಾಡು ಸರ್ಕಾರ ತಮಿಳರಿಗೆ ಉದ್ಯೋಗದಲ್ಲಿ 7.5 ಮೀಸಲಾತಿ ನೀಡಲಾಗುತ್ತದೆ ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗದಲ್ಲಿ 7.5 ಮೀಸಲಾತಿ ನೀಡಬೇಕು ಎಂದು ಶಾಸಕರು ಸದನದಲ್ಲಿ ಧ್ವನಿ ಎತ್ತಿರಿ ಎಂದು ಮನವಿ ಮಾಡಿಕೊಂಡರು ಈ ಎಲ್ಲಾ ಮನವಿಗಳಿಗೆ ಕಿವಿಗೊಡದೆ ಕೇವಲ ವೇದಿಕೆಯಲ್ಲಿ ಯಾಂತ್ರಿಕವಾಗಿ ಆಲಂಕಾರಿಕ ಭಾಷಣ ಮಾಡಿ ನಿರ್ಗಮಿಸಿದರು.

ಎಲ್ಲ ಮನವಿಗಳ ಬಗ್ಗೆ ಶಾಸಕ ಕರುಣಾಕರ ರೆಡ್ಡಿ ಅವರು ಸೌಜನ್ಯಕ್ಕಾದರೂ ಒಂದೇ ಒಂದು ಮಾತನ್ನು ಪ್ರಸ್ತಾಪ ಮಾಡದಿರುವುದು ಅವರ ನಿರ್ಲಕ್ಷವನ್ನು ಎತ್ತಿ ತೋರಿಸುತ್ತದೆ ಎಂದರು ಹಾಗಾಗಿ ಶಾಸಕ ರಾಮಚಂದ್ರಪ್ಪನವರನ್ನು ಹರಪನಹಳ್ಳಿಯ ಶಾಸಕ ಕರುಣಾಕರ ರೆಡ್ಡಿ ಅವರೊಂದಿಗೆ ಹೋಲಿಸಿದರೆ ಸಾವಿರ ಪಟ್ಟು ಉತ್ತಮ ಎಂದು ಹೇಳಿದರು.

ಈ ವೇಳೆ ಮಾತನಾಡಿದ ಜಗಳೂರು ಶಾಸಕ ಎಸ್ ವಿ ರಾಮಚಂದ್ರಪ್ಪ ಅವರು ನಾನು ಜನರೊಂದಿಗೆ ಸರಳವಾಗಿ ಜೀವನ ನಡೆಸಬೇಕೆಂಬುದೇ ನನ್ನ ಆಸೆ, ನನ್ನ ರಾಜಕೀಯ ಜೀವನ ಆರಂಭವಾಗಿದ್ದೆ ಕೋಣನ ಕಟ್ಟೆಯಿಂದ 2008 ರಲ್ಲಿ ಜಗಳೂರು ಕ್ಷೇತ್ರವು ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿ ಘೋಷಣೆಯಾದಾಗ ಕೋಣನಕಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನನ್ನ ಸ್ನೇಹಿತರೊಂದಿಗೆ ಊಟವನ್ನು ಮಾಡುತ್ತಿದ್ದೆ ಆಗ ನನ್ನ ರಾಜಕೀಯ ಸ್ನೇಹಿತರೊಬ್ಬರು ಜಗಳೂರು ಕ್ಷೇತ್ರ ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರವಾಗಿದೆ ಎಂದು ಹೇಳಿದರು ಅಲ್ಲದೆ ನೀವೇ ಶಾಸಕರಾಗುತ್ತೀರಿ ಎಂದು ಸಮೀಪವಿದ್ದವರು ಘೋಷಣೆ ಕೂಗಿದರು ಹಾಗಾಗಿ ಅದರಂತೆ ನಾನು ಶಾಸಕನಾಗಿ ಹಾರಿಸಿ ಬಂದೆ ಎಂದು ಸ್ಮರಿಸಿಕೊಂಡರು ಅಲ್ಲದೆ ನನ್ನ ರಾಜಕೀಯ ಜೀವನ ಆರಂಭ ಆಗಿದ್ದೆ ಈ ಗ್ರಾಮದಿಂದ ಎಂದು ಹೇಳಿದರಲ್ಲದೆ ನಾನು ಅನೇಕ ಜನಪರ ಕೆಲಸಗಳನ್ನು ಮಾಡಿದ್ದೇನೆ ಗ್ರಾಮೀಣಮಟ್ಟದಲ್ಲಿ ಕುಡಿಯುವ ನೀರು ಶೌಚಾಲಯ ಚರಂಡಿ ವ್ಯವಸ್ಥೆ ಶಾಲೆಗಳು ಇಂಥವುಗಳ ಬಗ್ಗೆ ಹೆಚ್ಚು ಗಮನ ಹರಿಸಿ ಅನುದಾನವನ್ನು ತಂದಿದ್ದೇನೆ ಅಲ್ಲದೆ ಅಧಿಕಾರಿಗಳಿಗೆ ಇವುಗಳ ಬಗ್ಗೆ ಕ್ರಮವಹಿಸುವಂತೆ ಸೂಚಿಸಿದ್ದೇನೆ ಎಂದರು.

ಈ ಸಂದರ್ಭದಲ್ಲಿ ಯುವ ಮುಖಂಡ ಬಿಸ್ತುವಳ್ಳಿ ಬಾಬು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸೊಕ್ಕೆ ನಾಗರಾಜ್, ಗ್ರಾಮದ ಮುಖಂಡರಾದ ಅಣ್ಣಪ್ಪ,ದುರುಗೇಶ್, ಎಂ ಸುರೇಶ್, ಬಾಲೆನಹಳ್ಳಿ ಕೆಂಚನಗೌಡ,ಬಸಪ್ಪ, ನಾಗರಾಜ್, ಆರ್ ಮಂಜುನಾಥ್, ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *