Vijayanagara Express

Kannada News Portal

ಇಂದು ಕಂಚಿಕೇರಿಯಿಂದ ದಾವಣಗೆರೆ ಗಡಿಯವರೆಗೂ ಗುಣ ಮಟ್ಟದ ರಸ್ತೆ ಮಾಡಲು ಒತ್ತಾಯಿಸಿ ಬೃಹತ್ ಪ್ರತಿಭಟನೆ

1 min read

 

ಇಂದು ಕಂಚಿಕೇರಿಯಿಂದ ದಾವಣಗೆರೆ ಗಡಿಯವರೆಗೂ ಗುಣ ಮಟ್ಟದ ರಸ್ತೆ ಮಾಡಲು ಒತ್ತಾಯಿಸಿ ಬೃಹತ್ ಪ್ರತಿಭಟನೆ

ಹರಪನಹಳ್ಳಿ : ತಾಲೂಕಿನ ಕಂಚಿಕೇರಿಯಿಂದ ದಾವಣಗೆರೆ ಗಡಿ ಬಾಗದವರೆಗೂ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಾಸಕ ಕರುಣಾಕರರೆಡ್ಡಿಯ ಹಾಗೂ ದಾವಣಗೆರೆ ಸಂಸದ ಶೂನ್ಯ ಅಬಿವೃದ್ಧಿ ಶೂರ ಎಂ ಜಿ ಸಿದ್ದೇಶ್ವರ ಇವರಿಗೂ ಒಳಪಡುವ ಕ್ಷೇತ್ರದ ರಸ್ತೆಯಾಗಿದ್ದು
ಈ ರಸ್ತೆ ರಾಜ್ಯ ಹೆದ್ದಾರಿಯಾಗಿರುತ್ತದೆ ಈ ರಸ್ತೆಯಲ್ಲಿ ಪ್ರತಿದಿನ ಚಲಿಸುವ ಸವಾರರು ತೆರಿಗೆ ರೂಪದಲ್ಲಿ ರಸ್ತೆ ತೆರಿಗೆ, ಬಿಡಿಭಾಗಗಳಿಗೆ ಹಾಗೂ ಪೆಟ್ರೋಲ್ ಡೀಸೆಲ್ ತೆರಿಗೆ ಹಾಗೂ ಜಿಎಸ್ಟಿ ರೂಪದಲ್ಲಿ ದಿನಂಪ್ರತಿ ಕೋಟಿ ಕೋಟಿ ಹಣವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಕಟ್ಟುತ್ತಿದ್ದರೆ. ಈ ಹಣವನ್ನು ಪಡೆದು ರಾಜಕಾರಣಿಗಳು ಹಾಗೂ ಅದಿಕಾರಿಗಳು ಕಳಪೆ ರಸ್ತೆ ಮಾಡಿ 40 % ಕಮಿಶನ್ ಹೊಡೆಯುತ್ತಿದ್ದಾರೆ ಅದಿಕಾರಿಗಳೇ ಈ ರಸ್ತೆಯಲ್ಲಿ ಚಲಿಸುವ ಸವಾರರು ಕಾಡು ಪ್ರಾಣಿಗಳು ಅಂತ ತಿಳಿದುಕೊಂಡಿರುವರೊ ಏನೊ ಗೊತ್ತಿಲ್ಲ
ಈ ಕೆಟ್ಟ ರಸ್ತೆಯನ್ನು ಸರಿಮಾಡದ ಕಾರಣದಿಂದ ಹಲವಾರು ಸವಾರರ ಜೀವ ಹಾನಿಗಳಾಗುತ್ತಿವೆ
ಪ್ರತಿದಿನ ಅಪಘಾತದಲ್ಲಿ ಜನಗಳು ಬಿದ್ದು ಕೈ ಕಾಲು ಬೆನ್ನು ಮೂಳೆ ಮುರಿದುಕೂಂಡಿದ್ದರೆ, ಈ ರಸ್ತೆಯಲ್ಲಿ ಚಲಿಸುವ ಕೂಲಿ ಕಾರ್ಮಿಕರು ವ್ಯಾಪಾರಸ್ಥರು ತುರ್ತು ಚಿಕಿತ್ಸೆಗೆ ಹೆರಿಗೆಗಾಗಿ ಹೋಗುವ ಮಹಿಳೆಯರು ಕ್ಯಾಕರಿಸಿ ಜನಪ್ರತಿನಿಧಿಗಳಿಗೆ ಉಗಿಯುತ್ತಿದ್ದಾರೆ ನಿಮಗೆ ಮಾನ ಮರ್ಯಾದೆ ಇದ್ದರೆ
ಈ ಕೂಡಲೇ ಈ ದಿನದಂದೆ ರಸ್ತೆ ಅಭಿವೃದ್ಧಿ ಮಾಡಲು ಆರಂಭಿಸಬೇಕೆಂದು ರಸ್ತೆ ತಡೆ ಹೋರಾಟದ ಮುಖಂತರ ಎಚ್ಚರಿಕೆ ನೀಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ
ಗುಡಿಹಳ್ಳಿ ಹಾಲೇಶ್ ಕಾರ್ಯದರ್ಶಿ
ಭಾರತ ಕಮ್ಯುನಿಸ್ಟ್ ಪಕ್ಷ ಸಿಪಿಐ ತಾಲೂಕು ಮಂಡಳಿ ರವರು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *