Vijayanagara Express

Kannada News Portal

ರೈಲ್ವೆ ಧಿಕಾರಿಗಳಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ

1 min read

ರೈಲ್ವೆ ಇಲಾಖೆ ಅಧಿಕಾರಿಗಳಿಂದ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ

ಹರಪನಹಳ್ಳಿ: ಪಟ್ಟಣದ ವಾಲ್ಮೀಕಿ ನಗರದಲ್ಲಿ ರೈಲ್ವೆ ಅಧಿಕಾರಿಗಳಿಂದ ಸಾರ್ವಜನಿಕರನ್ನು ಕುರಿತು ಅರಿವು ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ನಡೆಸಲಾಯಿತು.

ಪಟ್ಟಣದಲ್ಲಿ ರೈಲ್ವೆ ಇಲಾಕೆ ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಕಡಿಮೆಯಾಗುತ್ತಿದ್ದು ಅದನ್ನು ಕುರಿತಾಗಿ ಜಾಗೃತಿ ಮೂಡಿಸುವ ಸಲುವಾಗಿ ವಾಲ್ಮೀಕಿ ನಗರದಲ್ಲಿ ಇಂದು ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಭಾಗವಹಿಸಿದ್ದ ವೃತ್ತ ನಿರೀಕ್ಷಕ ಕುಬೇರಪ್ಪರವರು ಮಾತನಾಡಿ ದನಕರುಗಳನ್ನು, ಕುರಿಗಳನ್ನು ಟ್ರ್ಯಾಕ್ ಹತ್ತಿರ ಬಿಡಬಾರದು ಇತ್ತೀಚೆಗೆ ಕೊಲ್ಲೂರಿನಲ್ಲಿ 108 ಕುರಿಗಳು ಸತ್ತುಹೋಗಿವೆ ಅಲ್ಲದೆ ತೆಲಿಗಿ ಗ್ರಾಮದ ಬಳಿ 10 ಜಾನುವಾರುಗಳು ಸತ್ತಿವೆ ಹಾಗಾಗಿ ಪ್ರಮುಖವಾಗಿ ದನಕರುಗಳ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು ಎಂದರು
ರೈಲ್ವೆ ಹಳಿಗಳನ್ನು ಅನಾವಶ್ಯಕವಾಗಿ ದಾಟ ಬೇಡಿರಿ ಇತ್ತೀಚೆಗೆ ಯುವಕ ಯುವತಿಯರು ಕಿವಿಯಲ್ಲಿ ಇಯರ್ ಫೋನ್ ಇಟ್ಟುಕೊಂಡು ಟ್ರ್ಯಾಕ್ ದಾಟುವುದು ಇಲಾಖೆಯ ಯಾವುದೇ ಪರವಾನಿಗೆ ಇಲ್ಲದೆ ಶೂಟಿಂಗ್ ಮಾಡುವುದು ಫ್ಯಾಷನ್ ಆಗಿದೆ .
ಟ್ರ್ಯಾಕ್ ಸುತ್ತಮುತ್ತ ಕಲ್ಲು ಕಬ್ಬಿಣ ಸಿಮೆಂಟ್ ಇಟ್ಟಿಗೆ ಮಣ್ಣಿನ ಇಟ್ಟಿಗೆ ಅಂತ ವಸ್ತುಗಳನ್ನು ರೈಲ್ವೆ ಅಳಿಯ ಮೇಲೆ ಇಟ್ಟು ಅನಾವಶ್ಯಕವಾದ ತೊಂದರೆಗಳನ್ನು ಮಾಡಬೇಡಿರಿ ಜೊತೆಗೆ ರೈಲ್ವೆ ನಿಲ್ದಾಣದ ಒಳಗಡೆ ಬರುವಾಗ ಪ್ಲಾಟ್ ಫಾರಂ ಟಿಕೆಟ್ ಅನ್ನು ಕಡ್ಡಾಯವಾಗಿ ಹತ್ತು ರೂಪಾಯಿ ಕೊಟ್ಟು ಖರೀದಿಸಿ ಪ್ಲಾಟ್ಫಾರ್ಮ್ ಮೇಲೆ ಓಡಾಡಿರಿ ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದರೆ ರೈಲ್ವೆ ಇಲಾಖೆಯ ನಿಯಮಾನುಸಾರ ದಂಡನೆಗೆ ಗುರಿಯಾಗಬೇಕಾಗುತ್ತದೆ ಎಂದು ತಿಳಿಸಿದರಲ್ಲದೆ ರೈಲಿನಲ್ಲಿ ಪ್ರಯಾಣಿಸುವಾಗ ಅಥವಾ ರೈಲಿನ ಬಗ್ಗೆ ಯಾವುದಾದರೂ ದೂರನ್ನು ನೀಡುವುದಾದರೆ ಇಡೀ ದೇಶಾದ್ಯಂತ ಟೋಲ್ ಫ್ರೀ ನಂಬರ್ 139 ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ಅಥವಾ ದೂರನ್ನು ನೀಡಬಹುದು ಎಂದು ತಿಳಿಸಿದರು .


ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯ ನಿಯಾಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಏಕೆಂದರೆ ಸರ್ಕಾರದ ಆಸ್ತಿ ಎಂದರೆ ಸಾರ್ವಜನಿಕರ ಆಸ್ತಿ ಆಗಿರುತ್ತದೆ ಹಾಗಾಗಿ ಸಾರ್ವಜನಿಕರ ಆಸ್ತಿಯನ್ನು ಕಾಪಾಡುವುದು ಎಲ್ಲಾ ಸಾರ್ವಜನಿಕರ ಕರ್ತವ್ಯವಾಗಿರುತ್ತದೆ ಈ ಕಾರಣದಿಂದ ರೈಲ್ವೆ ಕಂಬಿಯನ್ನು ಹಾಳು ಮಾಡುವುದಾಗಲಿ, ಇನ್ನಿತರ ರೈಲ್ವೆಗೆ ಸಂಬಂಧಿಸಿದ ವಸ್ತುಗಳನ್ನು ಮುರಿಯುವುದು ಹಾಳು ಮಾಡುವುದು ಅಥವಾ ಚಲಿಸುವ ರೈಲಿನಲ್ಲಿರುವ ಗಾಜುಗಳನ್ನು ಕಲ್ಲಿನಿಂದ ಹೊಡೆಯುವುದು ಅಥವಾ ಹಾನಿ ಮಾಡುವುದು ಇವೆಲ್ಲವುಗಳು ಅಪರಾಧವಾಗಿರುತ್ತದೆ ಆದುದರಿಂದ ರೈಲ್ವೆ ಇಲಾಖೆಯ ನಿಯಮಾವಳಿಗಳನ್ನು ಎಲ್ಲರೂ ಪಾಲಿಸುವುದು ಸೂಕ್ತವಾಗಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ನಗರದ ದೊಡ್ಡಗರಡಿಕೇರಿಯ ಮುಖಂಡರಾದ ಕಮ್ಮಾರ ಹಾಲಪ್ಪ, ಪಟ್ನಾಮದ ಹಾಲಸಿದ್ದಪ್ಪ, ಮ್ಯಾಕಿ ಹಾಲಪ್ಪ,ಮ್ಯಾಕಿ ದುರುಗಪ್ಪ, ಕಮ್ಮಾರ ಸಲಿಹಾಲಪ್ಪ,ಮರಿಯಪ್ಪ, ದ್ಯಾಮಜ್ಜಿ ದುರುಗಪ್ಪ,ಮೆಲ್ಲಿನಕೇರಿ ಅಂಜಿನಪ್ಪ, ರಾಯದುರ್ಗದ ಶಿವಣ್ಣ,ಕೆ ಗೊಣಪ್ಪ,ಕಳ್ಳಿ ಕರಿಬಸಪ್ಪ,ಕೊಮಾರನಹಳ್ಳಿ ನಾಗರಾಜ್, ರೈಲ್ವೆ ಇಲಾಖೆಯ ಸಿಬ್ಬಂದಿಗಳಾದ ಉಪನಿರೀಕ್ಷಕ ಷಣ್ಮುಖಪ್ಪ, ಸತೀಶ್, ಪರಮೇಶ್ವರ್,ದಾದಾಪೀರ್, ಬಸವರಾಜ್, ಅಭಿಯಂತರರಾದ ಸಂಜಯ್ ಕುಮಾರ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *