ಮಾಜಿ ಸಂಸದ ಕೊಳೂರು ಬಸವನಗೌಡ ನಿಧನ :ಗಣ್ಯರು ಸಂತಾಪ
1 min read
ಮಾಜಿ ಸಂಸದ ಕೊಳೂರು ಬಸವನಗೌಡ ನಿಧನ :ಗಣ್ಯರು ಸಂತಾಪ
ಹರಪನಹಳ್ಳಿ :ನ-25,ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಲೋಕಸಭಾ ಮಾಜಿ ಸದಸ್ಯರು ಮತ್ತು ವಿ.ವಿ.ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಕೋಳೂರು ಬಸವನಗೌಡರು(89) ಶುಕ್ರವಾರ ನಿಧನರಾಗಿದ್ದಾರೆ.
1999ರಲ್ಲಿ ಸಂಸದರಾಗಿದ್ದ ಶ್ರೀಮತಿ ಸೊನಿಯಾಗಾಂಧಿ ಯವರು ರಾಯ್ ಬರೇಲಿ ಮತ್ತು ಬಳ್ಳಾರಿ ಎರಡೂಕಡೆ ಗೆದ್ದದ್ದಿ ಕಾರಣದಿಂದಾಗಿ ಬಳ್ಳಾರಿ ಕ್ಷೇತ್ರಕ್ಕೆ ರಾಜಿನಾಮೆ ನೀಡಿದ್ದರು ತೆರವಾದ ಬಳ್ಳಾರಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕೊಳೂರು ಬಸವನಗೌಡರು ಸಂಸದರಾಗಿ ಆಯ್ಕೆಯಾಗಿದ್ದರು.
ಮೃತರಿಗೆ ಪತ್ನಿ ಹಾಗೂ ಇಬ್ಬರು ಪುತ್ರ, ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆಯನ್ನು ಶನಿವಾರ ಮದ್ಯಾಹ್ನ ಬಳ್ಳಾರಿ ನಗರದ ವೀರಶೈವ ರುದ್ರಭೂಮಿಯಲ್ಲಿ ವೀರಶೈವ ಸಂಪ್ರದಾಯದ ಪ್ರಕಾರ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗಣ್ಯರ ಸಂತಾಪ: ಅವರ ಕುಟುಂಬಕ್ಕೆ ಮತ್ತು ಅಭಿಮಾನಿಗಳಿಗೆ ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಪ್ಪ, ವೀಣಾ ಮಹಾಂತೇಶ್, ಕಮ್ಮತ್ತಹಳ್ಳಿ ಮಂಜುನಾಥ, ಪಿ.ಪ್ರೇಮಕುಮಾರಗೌಡ, ಐಗೊಳ್ ಚಿದಾನಂದಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ.ಲತಾ ಮಲ್ಲಿಕಾರ್ಜುನ, ಎಂ.ಬಿ.ಯಶವಂತಗೌಡ, ಎಂ.ಅಜ್ಜಣ್ಣ, ವಿಜಯ ದಿವಾಕರ,ಪ್ರಕಾಶ್ ಪಾಟೀಲ್, ಕಂಚಿಕೇರಿ ಜಯಲಕ್ಷ್ಮೀ, ಈಡಿಗರ ವೆಂಕಟೇಶ್, ಕೆ ಎಸ್ ನಿಜಗುಣ, ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.