ಸಿ ಎಂ ,ಮಾಜಿ ಸಿಎಂ ಮತ್ತು ಬೆಂಗಾವಲು ಪಡೆ ವಾಹನಗಳು ರಸ್ತೆ ಸಂಚಾರ ನಿಯಮ ಉಲ್ಲಂಘನೆ – ಸಾರ್ವಜನಿಕರು ಆಕ್ಷೇಪ
1 min readಸಿ ಎಂ ,ಮಾಜಿ ಸಿಎಂ ಮತ್ತು ಬೆಂಗಾವಲು ಪಡೆ ವಾಹನಗಳು ರಸ್ತೆ ಸಂಚಾರ ನಿಯಮ ಉಲ್ಲಂಘನೆ – ಸಾರ್ವಜನಿಕರು ಆಕ್ಷೇಪ
ಹರಪನಹಳ್ಳಿ:ಫ್ರೆ – 4 , ಸಿ ಎಂ , ಮಾಜಿ ಸಿಎಂ ಮತ್ತು ಬೆಂಗಾವಲು ಪಡೆ ವಾಹನಗಳು ಸಂಚಾರ ನಿಯಮ ಉಲ್ಲಂಘನೆ ಮಾಡಿರುವ ಘಟನೆ ಶನಿವಾರ ಸಂಜೆ ಕೊಟ್ಟೂರು ವೃತ್ತದಲ್ಲಿ ನಡೆದಿದೆ.
ಪಟ್ಟಣದ ಕೊಟ್ಟೂರು ವೃತ್ತದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಇತರ ಗಣ್ಯ ವ್ಯಕ್ತಿಗಳು ಹಾಗೂ ಮುಖ್ಯಮಂತ್ರಿಗಳ ಬೆಂಗಾವಲು ಪಡೆ ವಾಹನಗಳು ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದಿಂದ ಇಟ್ಟಿಗುಡಿ, ನೀಲಗುಂದ ಕ್ರಾಸ್ ಮಾರ್ಗವಾಗಿ ಹರಪನಹಳ್ಳಿಯನ್ನು ಸಂಪರ್ಕಿಸಿ ಆ ಮೂಲಕ ಕೊಟ್ಟೂರಿನಲ್ಲಿ ನಡೆಯುತ್ತಿರುವ ತರಳುಬಾಳು ಹುಣ್ಣಿಮೆಯ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಬೇಕಿತ್ತು ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಹಾಗೂ ಅವರ ಜೊತೆಗೆ ಹೊರಟಿರುವ ಎಲ್ಲ ವಾಹನಗಳು ಹರಪನಹಳ್ಳಿ ಪಟ್ಟಣದ ಕೊಟ್ಟೂರು ವೃತ್ತದಲ್ಲಿ ಹಾಗೂ ಹರಿಹರ ವೃತ್ತದಲ್ಲಿ ಹಾದು ಹೋಗುತ್ತಿರುವಾಗ ರಸ್ತೆ ನಿಯಮಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ .
ವಿಐಪಿ ವಿವಿಐಪಿ ಗಳಿಗೆ ರಸ್ತೆಯನ್ನು (ಸಂಚಾರ ಮುಕ್ತ ) ಜೀರೋ ಟ್ರಾಫಿಕ್ ಮಾಡಿಸಿ ಗಣ್ಯ ಮತ್ತು ಅತಿ ಗಣ್ಯ ವ್ಯಕ್ತಿಗಳನ್ನು ಕರೆದುಕೊಂಡು ಹೋಗುವುದಕ್ಕೆ ಯಾವುದೇ ತೊಂದರೆಯಿಲ್ಲ ಆದರೆ ಈ ಎಲ್ಲಾ ನಿಯಮಗಳನ್ನು ಮಾಡಿದ್ದರೂ ಸಹ ರಸ್ತೆ ಸಂಚಾರ ನಿಯಮವಾದ ವೃತ್ತದಲ್ಲಿ ಇರುವ ಕ್ಲಾಕ್ ಟವರ್ ನ್ನು ಸುತ್ತುವರಿದು ಸಂಚರಿಸಬೇಕಾದ ವಾಹನಗಳು ಕ್ಲಾಕ್ ಟವರ್ ನ ಮುಂಭಾಗದಲ್ಲಿಯೇ ಏಕಾಏಕಿ ನುಗಿದ್ದು ಸಂಚಾರ ನಿಯಮದ ಉಲ್ಲಂಘನೆಯಾಗಿದೆ ಎಂದು ಸಾರ್ವಜನಿಕರು ಮಾತಾಡಿಕೊಳ್ಳುತ್ತಿದ್ದುದ್ದು ಕಂಡುಬಂದಿತು.
ಗಣ್ಯಾತಿ ಗಣ್ಯ ವ್ಯಕ್ತಿಗಳ ಮತ್ತು ಬೆಂಗಾವಲು ಪಡೆ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳೇ ಈ ರೀತಿಯ ನಿಯಮಗಳನ್ನು ಉಲ್ಲಂಘಿಸಿದರೆ ಸಾರ್ವಜನಿಕರು ಹೇಗೆ ರಸ್ತೆ ಸಂಚಾರ ನಿಯಮಗಳನ್ನು ಸ್ವೀಕರಿಸುವರು ಮತ್ತು ಅನುಸರಿಸುವರು ಎಂಬ ಚರ್ಚೆಗಳು ನಡೆಯುತ್ತಿವೆ.
ಗಣ್ಯ ಅತೀ ಗಣ್ಯ ವ್ಯಕ್ತಿ ಗಳಿಗೆ ಒಂದು ಕಾನೂನು ,ಸಾರ್ವಜನಿಕರಿಗೆ ಒಂದು ಕಾನೂನಾ ?
ಹೌದು ಈಗೊಂದು ಚರ್ಚೆ ಪಟ್ಟಣದಾದ್ಯಂತ ನಡೆಯುತ್ತಿದೆ ಗಣ್ಯ ವ್ಯಕ್ತಿಗಳಾಗಿರಲಿ ಅತೀ ಗಣ್ಯ ವ್ಯಕ್ತಿಗಳಾಗಿರಲಿ ರಸ್ತೆ ಸಂಚಾರ ನಿಯಮಗಳನ್ನ ಯಾರೂ ಉಲ್ಲಂಘಿಸುವಂತಿಲ್ಲ ಅವರ ಭದ್ರತೆ ಹಿತ ದೃಷ್ಟಿಯಿಂದ ರಸ್ತೆ ಯಲ್ಲಿ ಸಂಚರಿಸುವ ವಾಹನಗಳ ದಟ್ಟಣೆಯನ್ನು ತಪ್ಪಿಸಲು ಸಂಚಾರ ಮುಕ್ತ ಜೀರೋ ಟ್ರಾಫಿಕ್ ಅನ್ನು ಮಾಡಿಕೊಂಡು ಭದ್ರತೆ ವ್ಯವಸ್ಥೆಯನ್ನು ಕಲ್ಪಿಸಿ ಅವರನ್ನು ಕರೆದುಕೊಂಡು ಹೋಗಬಹುದು ಈ ನಡುವೆಯೂ ವೈದ್ಯಕೀಯ ತುರ್ತು ವಾಹನಗಳು ಬಂದರೆ ಮಾನವೀಯತೆ ದೃಷ್ಟಿಯಿಂದ ಅವುಗಳನ್ನು ಬಿಟ್ಟು ತುರ್ತು ವೈದ್ಯಕೀಯ ವ್ಯವಸ್ಥೆಗೆ ಅವಕಾಶ ಕಲ್ಪಿಸುವುದು ಇರುತ್ತದೆ ಇಷ್ಟೇಲ್ಲಾ ನಿಯಮಗಳಿದ್ದರೂ ಸಿಎಂ ಮತ್ತು ಮಾಜಿ ಸಿಎಂ ಹಾಗೂ ಸಿಎಂ ಭದ್ರತಾ ಪಡೆ ಹಾಗೂ ಹಿಂಬಾಲಕರ ವಾಹನಗಳು ಎಲ್ಲವೂ ಸೇರಿದಂತೆ ನೇರವಾಗಿ ವೃತ್ತದಲ್ಲಿರುವ ಕ್ಲಾಕ್ ಟವರನ್ನು ಸುತ್ತುವರಿಯದೆ ಏಕಾಏಕಿ ಅಡ್ಡವಾಗಿ ವಾಹನಗಳು ಹೋಗಿದ್ದು ಸಾರ್ವಜನಿಕರ ಕೋಪಕ್ಕೆ ಕಾರಣವಾದವು ಇದರಿಂದಾಗಿ ಗಣ್ಯ ವ್ಯಕ್ತಿಗಳಿಗೆ ಒಂದು ಕಾನೂನು ಸಾರ್ವಜನಿಕರು ಜನಸಾಮಾನ್ಯರಿಗೆ ಒಂದು ಕಾನೂನಾ ಎಂದು ಜನರು ಅಲ್ಲಲ್ಲಿ ಗೊಣಗುತ್ತಿದ್ದುದು ಕಂಡುಬಂದಿತು.
ಸಿಎಂ ವಾಹನಗಳು ಬರುವ 15 ನಿಮಿಷ ಮುಂಚೆನೇ ಒಂದು ಮಿನಿ ಆಂಬುಲೆನ್ಸ್ ಬಂದಿದ್ದನ್ನು ತಡೆದ ಪೊಲೀಸರು ಏಕಾಏಕಿ ರಸ್ತೆಯ ಬದಿಯಲ್ಲಿ ಅವರನ್ನು ಪಾರ್ಕಿಂಗ್ ಮಾಡಿಸಿದರು ಇದು ಸಹ ಮಾನವೀಯತೆಯನ್ನು ಮರತಂತೆ ಕಂಡುಬಂದಿತು ಎಂದು ಹೇಳಲಾಗುತ್ತದೆ.
ಗಂಭೀರ ಗಾಯಗೊಂಡ ರೋಗಿ, ಅಥವಾ ಹೆರಿಗೆಯ ಮಹಿಳೆ ಅಥವಾ ಇನ್ನೀತರೆ ಸಾವು ಬದುಕಿನ ನಡುವೆ ಹೋರಾಡುವಂತಹ ಯಾವುದೇ ರೋಗಿಗಳು ಕಂಡುಬಂದರೆ ಕೂಡಲೇ ಅವರನ್ನು ತುರ್ತು ವೈದ್ಯಕೀಯ ಚಿಕಿತ್ಸೆಗೆ ತೆರಳಲು ಮಾನವೀಯತೆಯ ದೃಷ್ಟಿಯಿಂದ ಚಿಕಿತ್ಸೆಗೆ ಅವಕಾಶ ಮಾಡಿಕೊಡಬೇಕು .
ಒಟ್ಟಾರೆಯಾಗಿ ಸಿ ಎಂ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಮತ್ತು ಅವರ ಬೆಂಗಾವಲು ಪಡೆಯ ಅಧಿಕಾರಿಗಳಿಗೆ ರಸ್ತೆ ಸಂಚಾರ ನಿಯಮಗಳು ಅನ್ವಯಿಸುತ್ತವೆಯೇ ? ಅಥವಾ ಅನ್ವಯಿಸುವುದಿಲ್ಲವೇ ಎಂದು ಚರ್ಚೆ ಆರಂಭವಾಗಿರುವುದಂತೂ ಸತ್ಯ.