September 18, 2024

Vijayanagara Express

Kannada News Portal

ಪ್ರಧಾನಿ ಮೋದಿಗೆ ,ಮಾಜಿ ಮಂತ್ರಿ ಪಿಟಿಪಿ ಅವಾಚ್ಯ ಶಬ್ದದಿಂದ ನಿಂದನೆ – ನೆಟ್ಟಿಗರು ಪಿಟಿಪಿಗೆ ಹಿಗ್ಗಾಮುಗ್ಗಾ ತರಾಟೆ

1 min read

ಪ್ರಧಾನಿ ಮೋದಿಗೆ ,ಮಾಜಿ ಮಂತ್ರಿ ಪಿಟಿಪಿ ಅವಾಚ್ಯ ಶಬ್ದದಿಂದ ನಿಂದನೆ – ನೆಟ್ಟಿಗರು ಪಿಟಿಪಿಗೆ ಹಿಗ್ಗಾಮುಗ್ಗಾ ತರಾಟೆ

 

ಹೂವಿನಹಡಗಲಿ:ನ-25,ಪ್ರಧಾನಮಂತ್ರಿ ನರೇಂದ್ರ ಮೋದಿ ಯವರಿಗೆ ,ಮಾಜಿ ಮಂತ್ರಿ , ಹೂವಿನಹಡಗಲಿ ಹಾಲಿ ಶಾಸಕ ಪಿ.ಟಿ.ಪರಮೇಶ್ವರನಾಯ್ಕ್ ರವರು ಅವಾಚ್ಯ ಶಬ್ದದಿಂದ ನಿಂದನೆ ಮಾಡಿರುವ ಘಟನೆ ಹರಪನಹಳ್ಳಿ   ತಾಲೂಕಿನಲ್ಲಿ ನೆಡೆದಿದೆ .

ಪಿ ಟಿ ಪರಮೇಶ್ವರ್ ನಾಯ್ಕ್ ಅವರು  ಮೊನ್ನೆಯಷ್ಟೇ ನಡೆದ ಪಿಕಾರ್ಡ್ ಬ್ಯಾಂಕ್ ನ ಚುನಾವಣೆ ಹಿನ್ನೆಲೆಯಲ್ಲಿ ಹರಪನಹಳ್ಳಿ ತಾಲೂಕಿನ ತಮ್ಮ ಕಾರ್ಯಕರ್ತರ ಜೊತೆಗೆ ತೋಟ ಒಂದರಲ್ಲಿ  ಹರಪಪನಹಳ್ಳಿ ರಾಜಕೀಯದ ಬಗ್ಗೆ ಮಾತನಾಡುತ್ತಿರುವಾಗ  ಮಾತನಾಡುತ್ತಾ ನರೇಂದ್ರ ಮೋದಿಗೆ ಭೈದಿರುವ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಈಗ ಹರಿದಾಡುತ್ತಿವೆ ಇದರಿಂದ ನೆಟ್ಟಿಗರು ಗರಂ ಆಗಿದ್ದಾರೆ ಪರಮೇಶ್ವರ್ ನಾಯ್ಕ್ ಅವರ ಬೆಂಬಲಿಗರು ಹರಪನಹಳ್ಳಿಯ ರಾಜಕಾರಣಕ್ಕೆ ಬರುವಂತೆ ಒತ್ತಾಯ ಮಾಡಿ ಹಡಗಲಿ ಹರಪನಹಳ್ಳಿಯ ರಾಜಕೀಯ ಕುರಿತು ಚರ್ಚಿಸುತ್ತಿರುವಾಗ ಏಕಾಏಕಿಯಾಗಿ ಸಿಟ್ಟಿನಿಂದ ಪಿ ಟಿ ಪರಮೇಶ್ವರ್ ನಾಯ್ಕ್ ಅವರು ನರೇಂದ್ರ ಮೋದಿಯವರನ್ನು ದೇಶದ ಪ್ರಧಾನ ಮಂತ್ರಿ ಎಂದೂಸಹ ಲೆಕ್ಕಿಸದೆ ಅವಾಚ್ಯವಾಗಿ ತುಚ್ಚ ಪದಗಳನ್ನು ಬಳಸಿ ಬೈದಿರುವುದು ಸಾಮಾಜಿಕ ಜಾಲ ತಾಣಗಳಲ್ಲಿ ಬಾರಿ ಚೆರ್ಚೆಗೆ ಗ್ರಾಸವಾಗಿದೆ.

ನಾಲ್ಕು ಬಾರಿ ಶಾಸಕರಾಗಿ,ಎರಡು ಬಾರಿ ಮಂತ್ರಿಯಾಗಿ ಜವಾಬ್ದಾರಿ ನಿಭಾಯಿಸಿದ ಪರಮೇಶ್ವರ್ ನಾಯ್ಕ್ ಅವರು ಈ ರೀತಿ ಮಾತನಾಡಿರುವುದು ಅವರ ಘನತೆಗೆ ಸರಿಹೊಂದುವಂತದ್ದಲ್ಲ ಎಂದು ಕೆಲವು ನೆಟ್ಟಿಗರು ಭೈದರೆ ಮತ್ತೆ ಕೆಲವರು ರಾಜಕಾರಣಕ್ಕೆ ಪಿ ಟಿ ಪರಮೇಶ್ವರ್ ನಾಯ್ಕ್ ನಾಲಾಯಕ್ ಎಂದು ತಿವಿದಿದ್ದಾರೆ ಈ ಹಿಂದೆ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿ ಒಬ್ಬರಿಗೆ ನಿಂದಿಸಿದ ಆರೋಪೋಸವಾಗಿ ತನ ಮೇಲಿದೆ ಈತನ ಇತರ ವರ್ತನೆಗೆ ನಮ್ಮದು ಧಿಕ್ಕಾರವಿದೆ ಎಂದು ಅನೇಕ ನೆಟ್ಟಿಗರು ಪಿ ಟಿ ಪರಮೇಶ್ವರ್ ನಾಯ್ಕ್ ಅವರ ಮೇಲೆ ಹರಿಹಾಯ್ದಿದ್ದಾರೆ

ಅದೇನೇ ಇರಲಿ ಪಿ ಟಿ ಪರಮೇಶ್ವರ ನಾಯ್ಕ್ ರವರು ಹಾಲಿ ಹೂವಿನಹಡಗಲಿ ಶಾಸಕರಾಗಿರುವ ಹಿನ್ನೆಲೆಯಲ್ಲಿ ಇಂಥ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರೊಬ್ಬರು ಈ ರೀತಿಯಾಗಿ ಹುಚ್ಚುತನದಿಂದ ಉಂಬುತನದಿಂದ ಅಸಂವಿಧಾನಿಕ ಪದಗಳನ್ನು ಬಳಸಿ ಸಾರ್ವಜನಿಕವಾಗಿ ದೇಶದ ಪರಮಾಧಿಕಾರಿಯೊಬ್ಬರ ಮೇಲೆ ಈ ರೀತಿಯಾಗಿ ಅವಾಚ್ಯವಾಗಿ ತುಚ್ಚ ಪದಗಳನ್ನು ಬಳಸಿ ಬೈದಿರುವುದು ಖಂಡನೀಯಾ ಎಂದೇ ಹೇಳಬಹುದು.

ದೇಶದ ಪ್ರಧಾನಮಂತ್ರಿಯೊಬ್ಬರ ಮೇಲೆ ಸಾರ್ವಜನಿಕವಾಗಿ ಅವಾಚ್ಯ ಶಬ್ದಗಳನ್ನು ಬಳಸಿ ಬರೆದಿರುವುದು ಶಾಸಕರ ದುರ್ವರ್ತನೆಯನ್ನು ತೋರಿಸುತ್ತದೆ ಇಂತಹ ಶಾಸಕರಿಗೆ ಅವರ ಪಕ್ಷದ ವರೆ ಶಿಸ್ತು ಕ್ರಮವನ್ನು ಜರುಗಿಸಬೇಕು.

ಸತ್ತೂರು ಹಾಲೇಶ್ ಬಿಜೆಪಿ ಮಂಡಲ ಅಧ್ಯಕ್ಷ

ಹೂವಿನಹಡಗಲಿ ಹಾಲಿ ಶಾಸಕರು ಮಾಜಿ ಮಂತ್ರಿಗಳು ಆದ ಪಿ ಟಿ ಪರಮೇಶ್ವರ್ ನಾಯ್ಕ್ ರವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಈ ರೀತಿಯಾಗಿ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ಖಂಡಿಸುತ್ತೇವೆ ಇಂಥ ದುರವರ್ತನೆಯನ್ನು ಜವಾಬ್ದಾರಿ ಸ್ಥಾನದಲ್ಲಿರುವವರು ಮಾತನಾಡಿರುವುದು ದುರಂತ.

ಮೂಲಿಮನಿ ಹನುಮಂತಪ್ಪ ಬಿಜೆಪಿ ಮುಖಂಡರು ಹರಪನಹಳ್ಳಿ

 

 

Leave a Reply

Your email address will not be published. Required fields are marked *