Vijayanagara Express

Kannada News Portal

ಖಾಲಿ ಕುರ್ಚಿಗಳಿಗೆ ಸಂಕಲ್ಪ ಕಥೆ ಹೇಳಿದ ಕಮಲ ನಾಯಕರು

1 min read

ಖಾಲಿ ಕುರ್ಚಿಗಳಿಗೆ ಸಂಕಲ್ಪ ಕಥೆ ಹೇಳಿದ ಕಮಲ ನಾಯಕರು

 

ಹರಪನಹಳ್ಳಿ: ಮಾ – 16 , ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಅಯೋಜಿಸಲಾಗಿದ್ದ ವಿಜಯ ಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ರಾಜ್ಯ ನಾಯಕರು ಭಾಗವಹಿಸಿದ್ದರು ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ,ಬಳ್ಳಾರಿ ಸಂಸದ ವೈ.ದೇವಿಂದ್ರಪ್ಪ ,ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್, ಸಚಿವ ಬಿ ಶ್ರೀರಾಮುಲು ಮುಂತಾದವರು ಭಾಗವಹಿಸಿದ್ದರು ಈ ವೇಳೆ ಕಾರ್ಯಕ್ರಮದಲ್ಲಿ ಜನರಿಲ್ಲದೆ ಖಾಲಿ ಕುರ್ಚಿಗಳಿಗೆ ಸಂಕಲ್ಪದ ಭಾಷಣವನ್ನು ಮಾಡಿದಂತಾಯಿತು .

ತಾಲೂಕು ಕ್ರೀಡಾಂಗಣದ ಮಧ್ಯಭಾಗದಲ್ಲಿ ವೇದಿಕೆಯನ್ನು ಹಾಕಲಾಗಿತ್ತು ವೇದಿಕೆ ಮುಂಭಾಗದಲ್ಲಿ 4000 ಕುರ್ಚಿಗಳನ್ನು ಹಾಕಲಾಗಿತ್ತು ಎಂದು ಹೇಳಲಾಗುತ್ತದೆ ಈ ಕುರ್ಚಿಗಳಲ್ಲಿ ಅಲ್ಲಲ್ಲಿ ಅರ್ಧಂಬರ್ಧ ಜನರು ಮಾತ್ರ ಕುಂತಿರೋದು ಕಂಡು ಬಂದಿತು ಆರಂಭದಲ್ಲಿ ಭಾಷಣ ಮಾಡಿದ ಜಗದೀಶ್ ಶೆಟ್ಟರ್, ಶ್ರೀರಾಮುಲು, ಸ್ಥಳೀಯ ಶಾಸಕ ಗಾಲಿ ಕರುಣಾಕರ ರೆಡ್ಡಿ ರವರುಗಳು ಭಾಷಣ ಮಾಡುವ ವೇಳೆ ಅಲ್ಪಸ್ವಲ್ಪ ಜನರ ಕುಳಿತಿದ್ದರು ನಂತರ ತಡವಾಗಿ ಆಗಮಿಸಿದ ಬಿಜೆಪಿ ರಾಜ್ಯಧ್ಯಕ್ಷ ನಳಿನ್ ಕುಮಾರ್ ಕಟೀಲು ಭಾಷಣ ಮಾಡುತ್ತಿರುವ ವೇಳೆ ಜನರು ಎದ್ದು ಹೋಗುತ್ತಿರುವುದನ್ನು ಗಮನಿಸಿದ ಶಾಸಕರುಣಾಕರ ರೆಡ್ಡಿ ಅವರು ಇನ್ನು ಕೆಲವೇ ನಿಮಿಷಗಳಲ್ಲಿ ಕಾರ್ಯಕ್ರಮವೇ ಮುಗಿಯುತ್ತದೆ ದಯವಿಟ್ಟು ಕುಳಿತುಕೊಳ್ಳಿ ಎಂದು ಜನರಲ್ಲಿ ಮನವಿ ಮಾಡಿಕೊಂಡರು ಆಗ ಇರುವಷ್ಟು ಜನರು ಕುಳಿತಲ್ಲಿಯೇ ಕುಳಿತುಕೊಂಡರು ಉಳಿದ ಕುರ್ಚಿಗಳು ಖಾಲಿ ಖಾಲಿ ಹೊಡೆಯುತ್ತಿದ್ದವು .

ವೇದಿಕೆಯಲ್ಲಿ ಕುಳಿತರೂ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ಮುನಿಸಿಕೊಂಡ ಶಾಸಕ ಕರುಣಾಕರ ರೆಡ್ಡಿ

ವಿಜಯ ಸಂಕಲ್ಪ ಯಾತ್ರೆಯ ವೇದಿಕೆಯಲ್ಲಿ ಶಾಸಕ ಕರುಣಾಕರ ರೆಡ್ಡಿಯವರು ಒಟ್ಟಿಗೆ ಕುಳಿತಿದ್ದ ಸ್ಥಳೀಯ ಬಿಜೆಪಿ ಮುಖಂಡರ ಹೆಸರುಗಳನ್ನು ತಾವು ಭಾಷಣ ಮಾಡುವ ವೇಳೆಯಲ್ಲಿ ಎಲ್ಲಿಯೂ ಹೇಳಲಿಲ್ಲ ಮಂಡಲ ಅಧ್ಯಕ್ಷರನ್ನು ಹೊರತುಪಡಿಸಿದರೆ ಯಾರ ಹೆಸರನ್ನು ಪ್ರಸ್ತಾಪ ಮಾಡಲಿಲ್ಲ ಅಲ್ಲದೇ ತಮ್ಮ ಪಕ್ಕದ ಹಾಸನದಲ್ಲಿ ಕುಳಿತಿದ್ದ ಬಿಜೆಪಿ ಮುಖಂಡ ಹಾಗೂ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿ ಯಾದ ಜಿ ನಂಜನ ಗೌಡ ರೊಟ್ಟಿಗೆ ಮಾತನಾಡಲಿಲ್ಲ ಇದು ಸ್ಥಳೀಯ ಬಿಜೆಪಿ ವಲಯದಲ್ಲಿ ಭಿನ್ನಮತ ಇರುವುದು ಸಾರ್ವಜನಿಕವಾಗಿ ಮತ್ತೊಮ್ಮೆ ಸಾಬೀತಾದಂತಾಯಿತು .

ಇದೆಲ್ಲದಕ್ಕೂ ಕಾರಣ ಕರುಣಾಕರ ರೆಡ್ಡಿ ಅವರು ಈ ಬಾರಿ ಸ್ಥಳೀಯ ಬಿಜೆಪಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಅಲ್ಲದೆ ಸ್ಥಳೀಯ ಬಿಜೆಪಿ ಮುಖಂಡರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂಬುವ ಚರ್ಚೆ ಒಂದು ಕಡೆಯಾದರೆ ಮತ್ತೊಂದು ಕಡೆ ಅನೇಕ ಗ್ರಾಮಗಳಲ್ಲಿ ಅಭಿವೃದ್ಧಿ ಕೆಲಸಗಳು ಆಗದೆ ಕಾರ್ಯಕರ್ತರು ಜನರನ್ನು ಸಂಕಲ್ಪ ಯಾತ್ರೆಯ ಕಾರ್ಯಕ್ರಮಕ್ಕೆ ಕರೆತರಲು ಹಿಂದೇಟು ಹಾಕಿದ್ದಾರೆ ಎನ್ನಲಾಗುತ್ತದೆ ಅಲ್ಲದೆ ಹರಪನಹಳ್ಳಿ ಪಟ್ಟಣದ ಬಿಜೆಪಿ ಕಾರ್ಯಕರ್ತರು ಅಭಿಮಾನಿಗಳು ಬೆರಳೆಣಿಕೆಯಷ್ಟು ಜನರು ಸಹ ಬಂದಿಲ್ಲದಿರುವುದು ಬಿಜೆಪಿ ಶಾಸಕ ಕರುಣಾಕರ ರೆಡ್ಡಿ ಅವರ ಮೇಲೆ ವಿಶ್ವಾಸವನ್ನು ಜನರು ಕಳೆದುಕೊಂಡಿದ್ದಾರೆ ಎಂದೇ ಅರ್ಥೈಸಲಾಗುತ್ತದೆ .

ಅದೇನೇ ಇರಲಿ ಸ್ಥಳೀಯ ಬಿಜೆಪಿ ವಲಯದಲ್ಲಿ ಶಾಸಕರು ಮತ್ತು ಮುಖಂಡರಿಗೂ ಭಿನ್ನಮತ ಇರುವುದು ಗುಟ್ಟಾಗಿ ಉಳಿದಿಲ್ಲ ಎಲ್ಲರಿಗೂ ಗೊತ್ತಿರುವ ವಿಚಾರವೇ ಸರಿ ಈ ಬಾರಿ ಸಾರ್ವಜನಿಕವಾಗಿ ಅದು ಬಹಿರಂಗಗೊಂಡಿದೆ ಅದು ಹೇಗೆಂದರೆ ಎಲ್ಲರಿಗೂ ಪರಸ್ಪರ ಸಮನ್ವಯತೆ ಇದ್ದಿದ್ದರೆ ಕ್ರೀಡಾಂಗಣ ಕಿಕ್ಕಿರಿದು ತುಂಬುವಷ್ಟು ಜನರು ಕಾರ್ಯಕ್ರಮಕ್ಕೆ ಬರುತ್ತಿದ್ದರು ಎಂಬುವುದರಲ್ಲಿ ಎರಡು ಮಾತಿಲ್ಲ ಏಕೆಂದರೆ ರಾಜ್ಯದಲ್ಲೂ ಬಿಜೆಪಿ ಸರ್ಕಾರ ಕೇಂದ್ರದಲ್ಲೂ ಬಿಜೆಪಿ ಸರ್ಕಾರ ತಾಲೂಕಿನಲ್ಲಿ ಬಿಜೆಪಿ ಶಾಸಕರು ಅಲ್ಲದೆ ಹೆಚ್ಚು ಉತ್ಸುಕತೆಯಿಂದ ಇರುವ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಪಾಲ್ಗೊಳ್ಳುತ್ತಿದ್ದರು ಆದರೆ ಭಿನ್ನಮತದ ಬಣಗಳಿಂದಾಗಿ ಜನರು ಕಾರ್ಯಕ್ರಮಕ್ಕೆ ಅಷ್ಟಾಗಿ ಬಂದಿರುವುದಿಲ್ಲ ಅಲ್ಲದೇ ಶಾಸಕರ ನಿರುತ್ಸಾಹ ಅದಕ್ಕೆ ಕಾರಣ ಸಹ ಎಂದು ಹೇಳಲಾಗುತ್ತದೆ ಹೋಗಲಿ ಬಿಡಿ ರಾಜ್ಯನಾಯಕರು ಕಾರ್ಯಕ್ರಮಕ್ಕೆ ಬಂದಾಗ ಇಷ್ಟು ಕಡಿಮೆ ಪ್ರಮಾಣದಲ್ಲಿ ಜನರು ಸೇರಿರುವುದು ಭವಿಷ್ಯ ಇದೆ ಮೊದಲಿರಬಹುದೇನೋ ಎಂದು ಜನರು ಕ್ಷೇತ್ರದಲ್ಲಿ ಚರ್ಚಿಸ ತೊಡಗಿದ್ದಾರೆ  ಅಲ್ಲದೆ ಈ ಕಾರ್ಯಕ್ರಮವನ್ನು ಮುಂಬರುವ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗುತ್ತದೆ  .

 

Leave a Reply

Your email address will not be published. Required fields are marked *