Vijayanagara Express

Kannada News Portal

ನಾನು ಇರೋವರೆಗೂ ತಾಲೂಕಿನಲ್ಲಿ ಬಿಜೆಪಿ ಗೆದ್ದೆಗೆಲ್ಲುತ್ತೆ- ಯುವ ಮುಖಂಡ ವಿಷ್ಣುವರ್ಧನ್ ರೆಡ್ಡಿ

1 min read

ನಾನು ಇರೋವರೆಗೂ ತಾಲೂಕಿನಲ್ಲಿ ಬಿಜೆಪಿ ಗೆದ್ದೆಗೆಲ್ಲುತ್ತೆ- ಯುವ ಮುಖಂಡ ವಿಷ್ಣುವರ್ಧನ್ ರೆಡ್ಡಿ

 

ಹರಪನಹಳ್ಳಿ : ನಾನು ಇರೋವರೆಗೂ ತಾಲೂಕಿನಲ್ಲಿ ಬಿಜೆಪಿ ಗೆದ್ದೆಗೆಲ್ಲುತ್ತೆ ಕರುಣಾಕರ ರೆಡ್ಡಿಯವರು ಮತ್ತೆ ಶಾಸಕರಾಗೆ ಆಗುತ್ತಾರೆ ಎಂದು ಶಾಸಕ ಕರುಣಾಕರ ರೆಡ್ಡಿಯವರ ಪುತ್ರ ಯುವ ಮುಖಂಡ ವಿಷ್ಣುವರ್ಧನ್ ರೆಡ್ಡಿಯವರು ಹೇಳಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಗುಜರಾತ್ ಚುನಾವಣೆ ಫಲಿತಾಂಶದ ಪ್ರಯುಕ್ತ ವಿಜಯೋತ್ಸವ ಆಚರಿಸಿದ ಅವರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮ ಆಚರಣೆ ಮಾಡಿ ನಂತರ ಮಾತನಾಡಿದ ವಿಷ್ಣುವರ್ಧನ್ ರೆಡ್ಡಿ ಅವರು
ಬಿಜೆಪಿ ದೇಶದಲ್ಲಿ ಉತ್ತಮ ಆಡಳಿತವನ್ನು ನೆಡೆಸಿದೆ ಎನ್ನುವುದಕ್ಕೆ ಗುಜರಾತ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಹೊರಬಿದ್ದಿರುವ ಈ ಫಲಿತಾಂಶವೇ ಸಾಕ್ಷಿಯಾಗಿದೆ ಎಂದರು ನರೇಂದ್ರ ದಾಮೋದರ್ ದಾಸ್ ಮೋದಿಯವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಅತ್ಯೊತ್ತಮವಾದ ಕೆಲಸವನ್ನು ಮಾಡುತ್ತಿವೆ ಹಾಗಾಗಿ ದೇಶದಲ್ಲಿ ಕಾಂಗ್ರೆಸ್ ನವರು ಎಷ್ಟೇ ಬೊಬ್ಬೆಇಟ್ಟರು ಜನರು ಬಿಜೆಪಿ ಗೆ ಆಶೀರ್ವಾದ ಮಾಡಿದ್ದಾರೆ ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಾಕಷ್ಟು ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿರುವ ಕೀರ್ತಿ ಬಿಜೆಪಿ ಗೆ ಸಲ್ಲುತ್ತದೆ ಎಂದರು.

ಪುರಸಭೆ ಅಧ್ಯಕ್ಷ ಹಾರಾಳ್ ಹೆಚ್ ಎಂ ಅಶೋಕ್ ಮಾತನಾಡಿ
ಬಿಜೆಪಿ ಗೆ ದೇಶದಲ್ಲಿ ಅಭೂತಪೂರ್ವ ಜಯ ಸಿಗುತ್ತದೆ ಗುಜರಾತ್ ನಲ್ಲಿ ಸತತವಾಗಿ ಆರನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಿದೆ ಉತ್ತಮವಾದ ಆಡಳಿತವನ್ನು ನೀಡಿರುವುದರಿಂದಲೇ ಬಿಜೆಪಿ ಇಂದು ದೇಶದಲ್ಲಿ ಅಧಿಕಾರ ಹಿಡಿಯಲು ಕಾರಣವಾಗಿದೆ ಇದೆಲ್ಲದಕ್ಕೂ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ಯವರೇ ಕಾರಣ ಎಂದು ಹೇಳಿದರು.

ಮುಖಂಡ ಆರ್ ಲೋಕೇಶ್ ಮಾತನಾಡಿ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯವರು ಅಧಿಕಾರ ಇದ್ದಾಗ ಅಭಿವೃದ್ಧಿ ಮಾಡದೇ ಸಮಯ ಕಳೆದು ಜನರ ವಿರೋಧಕ್ಕೆ ಕಾರಣವಾಗಿ ಈಗ ಭಾರತ್ ಜೋಡೋ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ ಇದರ ನಂತರ ಭಾರತದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬಹುದು ಎಂದು ಅವರು ಲೆಕ್ಕಾಚಾರ ಇಟ್ಟುಕೊಂಡಿದ್ದಾರೆ ಆದರೆ ಜನರು ಈಗ ಜಾಗೃತರಾಗಿದ್ದಾರೆ ಕಾಂಗ್ರೆಸ್ ಪಕ್ಷದವರು ಏನೇ ಮಾಡಿದರೂ ಅವರನ್ನು ಜನರು ತಿರಸ್ಕರಿಸಿದ್ದಾರೆ ಎಂಬುದಕ್ಕೆ ಗುಜರಾತ್ ಚುನಾವಣೆ ಫಲಿತಾಂಶವೇ ಸಾಕ್ಷಿಯಾಗಿದೆ ಎಂದರು.

ಈ ವೇಳೆ ಟಿ ಶಿವಾನಂದಪ್ಪ,ಬಾಗಳಿ ಕೊಟ್ರೇಶಪ್ಪ, ಮಾತನಾಡಿದರು.

ಈ ಸಂದರ್ಭದಲ್ಲಿ ರೇವಣಸಿದ್ದಪ್ಪ ವಕೀಲರು, ಮೂಲಿಮನಿ ಹನುಮಂತಪ್ಪ, ಪುರಸಭೆ ಸದಸ್ಯ ಎಂ ಕೆ ಜಾವಿದ್,
ಅಲಮಲಸೀಕೇರಿ ಗೋಣಪ್ಪ,ಅಂಬ್ಲಿವಾಗೀಶ್, ಮೆಹಬೂಬ್ ಭಾಷಾ,ಪೂರ್ಯ ನಾಯ್ಕ್, ಹನುಮಂತಪ್ಪ,ವಿರೇಶ್ ಶೆಟ್ಟಿ, ಗೌಳಿ ಕೊಟ್ರೇಶ್, ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *