Vijayanagara Express

Kannada News Portal

ಅದ್ದೂರಿಯಾಗಿ ಜರುಗಿದ ದಾದಪ್ಪನಾಯಕ ರಥೋತ್ಸವ

1 min read

ಅದ್ದೂರಿಯಾಗಿ ಜರುಗಿದ ದಾದಪ್ಪನಾಯಕ ರಥೋತ್ಸವ

ಹರಪನಹಳ್ಳಿ: ಡಿ – 8,ಪಟ್ಟಣದ ಹೊರವಲಯದಲ್ಲಿರುವ ದೇವರ ತಿಮ್ಮಲಾಪುರದಲ್ಲಿ ದಾದಪ್ಪ ನಾಯಕನ ( ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ) ರಥೋತ್ಸವವು ಅದ್ದೂರಿಯಾಗಿ ಸಡಗರ ಸಂಭ್ರಮದಿಂದ ಅಂಗವಾಗಿ ಸಾಹಸ್ರಾರು ಜನರ ಸಮ್ಮುಖದಲ್ಲಿ ರಥೊತ್ಸವವು ಜರುಗಿತು.

ಪಟ್ಟಣಕ್ಕೆ ಹೊಂದಿಕೊಂಡಿರುವ ದೇವರ ತಿಮ್ಮಲಾಪುರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಹೊಸ್ತಿಲು ಹುಣ್ಣಿಮೆಯ (ಸ್ಥಳೀಯ ಭಾಷೆಯಲ್ಲಿ ದಾದಣ್ಣನ ಹುಣ್ಣಿಮೆಯ) ದಿನದಂದು ಮಹಾರಾಜ ದಾದಣ್ಣ ನಾಯಕರ ಜನ್ಮದಿನದ ಪ್ರಯುಕ್ತ ನಡೆಯುವ ( ಶ್ರೀ ಲಕ್ಷ್ಮಿ ವೆಂಕಟೇಶ್ವರ )ಮಹಾರಾಜ ದಾದಣ್ಣ ನಾಯಕರ ರಥೋತ್ಸವವನ್ನು ಈ ಬಾರಿ ವಿಜೃಂಭಣೆಯಿಂದ ನೆರವೇರಿಸಲಾಯಿತು ಗ್ರಾಮದ ಮುಖಂಡರು ಧಾರ್ಮಿಕ ಮತ್ತು ದತ್ತಿ ಇಲಾಖೆಯ ಸಿಬ್ಬಂದಿಗಳು ಅಧಿಕಾರಿಗಳು ಗ್ರಾಮಸ್ಥರ ಸಮ್ಮುಖದಲ್ಲಿ ಅದ್ದೂರಿಯಾಗಿ ಜಾತ್ರೆಯನ್ನು ನಡೆಸಲಾಯಿತು.

ಬೆಳಗಿನಿಂದಲೇ ದೇವಾಲಯದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು ಸಂಜೆ ಲಕ್ಷ್ಮೀ ವೆಂಕಟೇಶ್ವರನ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ದೇವಸ್ಥಾನದ ವಿವಿಧ ಬಾಬುದಾರರು ಬಾಜಭಜಂತ್ರಿ ವಾದ್ಯ ಮೇಳ ಗಳೊಂದಿಗೆ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ತೇರಿನ ಬಯಲು ಜಾಗಕ್ಕೆ ಬಂದು ಪೂಜೆ ನೆರವೇರಿಸಿ ರಥದಲ್ಲಿ ಉತ್ಸವ ಮೂರ್ತಿಯನ್ನು ಇಟ್ಟು ನಂತರ ಸ್ವಾಮಿಯ ಪಟವನ್ನು ಹರಾಜು ಮಾಡಲಾಯಿತು ಪಟವನ್ನು ಹರಪನಹಳ್ಳಿ ಪಟ್ಟಣದ ಶ್ರೀ ಹರಿ ಎಂಬುವವರಿಗೆ ಬರೋಬ್ಬರಿ 2,10000 ಗಳಿಗೆ, ಹಾಗೂ ಹೂವಿನ ಹಾರವನ್ನು ವಾಲ್ಮೀಕಿ ನಗರದ ಅರ್ಜುನ್ ಎಂಬುವವರಿಗೆ 45000, ರೂಗೆ ಹರಾಜು ಕೂಗಿಕೊಂಡು ಭಕ್ತಿಯನ್ನು ಸಮರ್ಪಿಸಿದರು.

ನಂತರ ರಥೋತ್ಸವಕ್ಕೆ ಚಾಲನೆ ನೀಡಿದರು ನೆರೆದಿದ್ದ ಸಾವಿರಾರು ಭಕ್ತರು ರಥಕ್ಕೆ ಬಾಳೆಹಣ್ಣುಗಳನ್ನು ಎಸೆಯುವ ಮೂಲಕ ಭಕ್ತಿಯನ್ನು ಸಮರ್ಪಿಸಿದರು.
ಕಳೆದ ಎರಡು ವರ್ಷಗಳಿಂದ ಕರೋನದ ಕರಿನೆರಳಿನಲ್ಲಿ ರಥೋತ್ಸವವನ್ನು ಸರಳವಾಗಿ ಆಚರಿಸಲಾಗಿತ್ತು ಈ ಬಾರಿ ಕರೋನ ಕೊನೆಗೊಂಡು ಮುಕ್ತವಾದ ಜನರ ಜೀವನ ಆರಂಭವಾಗಿದ್ದ ಹಿನ್ನೆಲೆಯಲ್ಲಿ ಜಾತ್ರಾ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ವೈಭವದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಕರುಣಾಕರ ರೆಡ್ಡಿ, ತಹಶೀಲ್ದಾರ್ ಶಿವಕುಮಾರ್ ಬಿರಾದರ್,ಚಂದ್ರಶೇಖರ ಭಟ್, ಪಿ ಟಿ ಅವಿನಾಶ್, ಪ್ರಧಾನ ಅರ್ಚಕರಾದ ಶ್ರೀನಿವಾಸ್ ಪೂಜಾರ್, ಅಡಿವಿಹಳ್ಳಿ ಗ್ರಾಮ ಪಂಚಾಯತಿ ಸದಸ್ಯರುಗಳಾದ ಪ್ರಸನ್ನ ಪೂಜಾರ್, ನಾಗರಾಜ್, ರೇಣುಕಾ ಮಂಜುನಾಥ್, ಧರ್ಮ ಕರ್ತರಾದ ಕಟ್ಟಿ ಹರ್ಷ, ದಂಡಿನ ಹರೀಶ್, ಹಿರಿಯ ,ಅಧಿಕಾರಿಗಳಾದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಸಿ ಪ್ರಕಾಶ್, ಆರೋಗ್ಯ ಅಧಿಕಾರಿ ಹಾಲಸ್ವಾಮಿ, ಮುಜರಾಯಿ ಇಲಾಖೆಯ ಸಿಬ್ಬಂದಿಗಳಾದ ರಮೇಶ್, ಶಿವಕುಮಾರ್, ಗ್ರಾಮದ ಮುಖಂಡರುಗಳಾದ ಸಣ್ಣ ನಿಂಗಪ್ಪ, ಭೀಮಪ್ಪ ,ಮೂಡಲಪ್ಪ ,ನಾಗರಾಜ್, ಬಣಕಾರ್ ನಾಗರಾಜ್, ತಳವಾರ್ ಸತ್ಯ ,ತಳವಾರ್ ಗೋಣಪ್ಪ, ಭರಮಪ್ಪ, ಶಿಲ್ಪಾಚಾರ್, ಚೆನ್ನೇಶ್ ಆಚಾರ್ ಮೌನೇಶ್ ಆಚಾರ್ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

 

 

Leave a Reply

Your email address will not be published. Required fields are marked *