ಶಾಸಕರಿಂದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ
1 min readಶಾಸಕರಿಂದ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ
ಹರಪನಹಳ್ಳಿ:ಡಿ -10 , ತಾಲೂಕಿನ ವಿವಿಧೆಡೆ ಶಾಸಕ ಗಾಲಿ ಕರುಣಾಕರ ರೆಡ್ಡಿಯವರು ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆಯನ್ನು ನೆರವೇರಿಸಿದರು.
ಪಟ್ಟಣದ ತೆಲುಗರಹೋಣಿಯಲ್ಲಿ 10 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಾಣ, ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕೊಠಡಿಯ ಉದ್ಘಾಟನೆ, ಭೈರಾಪುರ ಗ್ರಾಮದಲ್ಲಿ 3 ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಸ್ತೆ ನಿರ್ಮಾಣ ಈ ರಸ್ತೆಯು ಮರಿಯಮ್ಮನಹಳ್ಳಿ ಶಿವಮೊಗ್ಗ ರಾಜ್ಯ ಹೆದ್ದಾರಿ 25 ರಿಂದ ಭೈರಾಪುರ,ಗುರುಶಾಂತನಹಳ್ಳಿ, ಮಾರ್ಗವಾಗಿ ಮಾಚಿಹಳ್ಳಿಯವರೆಗೆ ರಸ್ತೆ ಕಾಮಗಾರಿಗೆ ಶಾಸಕ ಕರುಣಾಕರ ರೆಡ್ಡಿಯವರು ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ಅನೇಕ ಕಡೆ ಉತ್ತಮವಾದ ರಸ್ತೆಗಳನ್ನು ಮಾಡಲು ಕ್ರಮ ಕೈಗೊಂಡಿದ್ದೇನೆ ಬೈರಾಪುರ ಗ್ರಾಮದಲ್ಲೂ ಸಹ ರಸ್ತೆ ನಿರ್ಮಾಣ ಮಾಡಲು ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿದ್ದೇನೆ ಬೈರಾಪುರ ಗ್ರಾಮದಲ್ಲಿ ಕಳೆದ ಎರಡು ತಿಂಗಳುಗಳ ಹಿಂದೆ ಕಾರ್ಯಕ್ರಮವನ್ನು ಮಾಡಿ ಕಾಡುಗೊಲ್ಲರ ಅಲೆಮಾರಿ ಕುಟುಂಬಗಳಿಗೆ 150 ಮನೆಗಳನ್ನ ಫಲಾನುಭವಿಗಳಿಗೆ ನೀಡಿ ಹಕ್ಕುಪತ್ರಗಳನ್ನು ವಿತರಿಸಿದ್ದೆ ಅಲ್ಲದೆ ಸಿಸಿ ರಸ್ತೆ ಚರಂಡಿಗಳನ್ನು ಮಾಡಿಸಿದ್ದೇನೆ ಎಂದು ಹೇಳಿದರು ಆಗ ಸ್ಥಳದಲ್ಲೇ ಇದ್ದ ಅಲೆಮಾರಿ ಕುಟುಂಬಗಳಿಗೆ ನೀಡಿರುವ ಮನೆಯ ಪಲಾನುಭವಿಯೊಬ್ಬರು ಸರ್ ಆ ಮನೆ ಕಟ್ಟಲು ಈಗ ಮರಳಿನ ಸಮಸ್ಯೆ ಎದುರಾಗಿದೆ ಎಂದು ತಿಳಿಸಿದರು ಹಳ್ಳಗಳಲ್ಲಿ ಎಲ್ಲಿಯೂ ಮರಳಿಲ್ಲ ತುಂಗಭದ್ರ ನದಿಯಿಂದ ಮರಳನ್ನು ತರಲು ಅವಕಾಶ ಮಾಡಿಕೊಡಬೇಕು ಸರ್ ಎಂದು ಮನವಿ ಮಾಡಿಕೊಂಡರು .
ಇದಕ್ಕೆ ಪ್ರತಿಕ್ರಿಸಿದ ಶಾಸಕರು ಅವರು ಒಂದು ಮನೆ ಕಟ್ಟಲು ಎಷ್ಟು ಮರಳು ಬೇಕಾಗುತ್ತದೆ ಎಂದು ಸ್ಥಳದಲ್ಲಿ ಹಾಜರಿದ್ದ ಅಭಿಯಂತರರನ್ನು ಕೇಳಿದರು ಸುಮಾರು 4 ಲೋಡ್ ಮರಳು ಬೇಕಾಗುತ್ತದೆ ಎಂದು ಹೇಳಿದ್ದಕ್ಕೆ ಶಾಸಕರು ನಾನು ಶೀಘ್ರದಲ್ಲಿಯೇ ತುಂಗಭದ್ರ ನದಿಯಿಂದ ಮರಳನ್ನು ತಾವು ಪಡೆಯಲು ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆಯನ್ನು ನಡೆಸಿ ಸಾಧ್ಯವಾದಷ್ಟು ಮಟ್ಟಿಗೆ ವ್ಯವಸ್ಥೆ ಮಾಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿಮುಖಂಡರಾದ ಆರ್ ಲೋಕೇಶ್ ,ವಿಷ್ಣುವರ್ಧನ್ ರೆಡ್ಡಿ,ಟಿ.ಶಿವಾನಂದಪ್ಪ ,ರೇವಣಸಿದ್ದಪ್ಪ ವಕೀಲರು, ಕೆಂಗಳ್ಳಿ ಪ್ರಕಾಶ್ ವಕೀಲರು,ಪ್ರಕಾಶ್ ಇಂಜಿನಿಯರ್, ಗ್ರಾಮದ ಮುಖಂಡರಾದ ಬಣಕಾರ ಮಂಜುನಾಥ, ಗ್ರಾಮ ಪಂಚಾಯತ್ ಸದಸ್ಯರಾದ ಬಡಿಗಾರ ಆನಂದ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಗಣೇಶ್ ಮೂರ್ತಿ, ಎಸ್ಪಿ ಶಿವಣ್ಣ ,ಎನ್ ರಾಮಪ್ಪ, ಹೆಚ್ ಹನುಮಂತಪ್ಪ ,ಆರ್ ಲಕ್ಷ್ಮಪ್ಪ ,ಎಂ ನಾಗರಾಜ್, ಎಸ್ ತಿರುಪತಿ , ಆರ್ ಲೋಹಿತ್, ಬಿ ಮಲ್ಲಪ್ಪ ,ಎನ್ ಕೆಂಚಪ್ಪ, ಮೋಹನ್ ಬಿ, ಬಸವರಾಜ್ ಆರ್ ,ನಾಗಪ್ಪ ಎಚ್, ಜಗದೀಶ್ ಆರ್ ,ರಾಘು , , ಪೂಜಾರ್ ಮಹೇಶ್,ಮಾಚಿಹಳ್ಳಿ ಮಲ್ಲೇಶ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.