Vijayanagara Express

Kannada News Portal

ವಿದ್ಯುತ್ ಅವಗಡ : ಹೊರಗುತ್ತಿಗೆ ಕಾರ್ಮಿಕ ಸಾವು

1 min read

ವಿದ್ಯುತ್ ಅವಗಡ : ಹೊರಗುತ್ತಿಗೆ ಕಾರ್ಮಿಕ ಸಾವು

 

ಹರಪನಹಳ್ಳಿ: ಜ – 8 , ಪಟ್ಟಣದ ಟೀಚರ್ಸ್ ಕಾಲೋನಿಯ ಹತ್ತಿರ ಇರುವ ಪೆಟ್ರೋಲ್ ಬಂಕ್ ಹತ್ತಿರವಿರುವ ಖಾಲಿ ನಿವೇಶನಗಳ ಬಳಿ ವಿದ್ಯುತ್ ಕಂಬದಲ್ಲಿ ಕಾರ್ಯನಿರ್ವಹಿಸುತ್ತಿರುವಾಗ ಅವಗಢ ಉಂಟಾಗಿ ಕಾರ್ಮಿಕ ಜಿ ಪರಶುರಾಮಪ್ಪ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ನಡೆದಿದೆ .

ತಾಲೂಕಿನ ಕುಮಾರನಹಳ್ಳಿ ಗ್ರಾಮದ ಜಿ ಪರಶುರಾಮಪ್ಪ ತಂದೆ ಕೆಂಚಪ್ಪ ( 38) ಮೃತ ದುರ್ದೈವಿಯಾಗಿರುತ್ತಾರೆ ಈತನಿಗೆ ಪತ್ನಿ ಮೂರು ಜನ ಮಕ್ಕಳು ಇರುತ್ತಾರೆ .

ಮೃತ ಕೆಂಚಪ್ಪ ಕಳೆದ 12 ವರ್ಷಗಳಿಂದ ಕೆಇಬಿ ಯಲ್ಲಿ ಹೊರಗುತ್ತಿಗೆ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಇಂದು ಸಹ ವಿದ್ಯುತ್ ಕಂಬದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ ಈ ಘಟನೆ ಅಕಸ್ಮಾತ್ತಾಗಿ ನೆಡೆದಿದೆ ಎಂದು ಹೇಳಲಾಗುತ್ತದೆ , ಈ ಕುರಿತು ಹರಪನಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Leave a Reply

Your email address will not be published. Required fields are marked *