Vijayanagara Express

Kannada News Portal

ವಾಲ್ಮೀಕಿ ಜಾತ್ರ ಸಮಿತಿ ತಾಲ್ಲೂಕು ಅಧ್ಯಕ್ಷರಾಗಿ ಅರಸೀಕೆರೆ ವೈ ಡಿ ಅಣ್ಣಪ್ಪ ಆಯ್ಕೆ

1 min read

ವಾಲ್ಮೀಕಿ ಜಾತ್ರ ಸಮಿತಿ ತಾಲ್ಲೂಕು ಅಧ್ಯಕ್ಷರಾಗಿ ಅರಸೀಕೆರೆ ವೈ ಡಿ ಅಣ್ಣಪ್ಪ ಆಯ್ಕೆ

ಹರಪನಹಳ್ಳಿ: ಜ – 6 , ವಾಲ್ಮೀಕಿ ಜಾತ್ರ ಸಮಿತಿ ತಾಲ್ಲೂಕು ಅಧ್ಯಕ್ಷರಾಗಿ ಅರಸೀಕೆರೆ ವೈ ಡಿ ಅಣ್ಣಪ್ಪರವರು ಆಯ್ಕೆಯಾಗಿದ್ದಾರೆ .

ಪಟ್ಟಣದ ವಾಲ್ಮೀಕಿ ನಗರದಲ್ಲಿರುವ ವಾಲ್ಮೀಕಿ ಭವನದಲ್ಲಿ ವಾಲ್ಮೀಕಿ ಜಾತ್ರ ಪೂರ್ವಭಾವಿ ಸಭೆಯ ಪ್ರಯುಕ್ತ ಶ್ರೀ ಮಠದ ಪ್ರಸನ್ನಾನಂದಪುರಿ ಸ್ವಾಮಿಗಳ ನೇತೃತ್ವದಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು ಕಳೆದ ವರ್ಷ ಕರೋನಾದ ನಿಯಮಗಳು ಜಾರಿಯಲ್ಲಿದ್ದುದರಿಂದ ಜಾತ್ರೆಯನ್ನು ನಡೆಸಲಾಗಲಿಲ್ಲ ಈ ಬಾರಿ ಜಾತ್ರೆಯನ್ನು ಅರ್ಥಗರ್ಭಿತವಾಗಿ ನಡೆಸಲು ನಿರ್ಧರಿಸಲಾಗಿದೆ.

ಜಾತ್ರೆಯನ್ನು ನಡೆಸುವ ಉದ್ದೇಶ ಸಮಾಜವನ್ನು ಸಂಘಟಿಸಲು , ಜಾಗೃತಿ ಮೂಡಿಸುವ ಸಲುವಾಗಿ ಜಾತ್ರೆಯನ್ನು ಮಾಡಲಾಗುತ್ತದೆ ವಾಲ್ಮೀಕಿ ನಾಯಕ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಶೇಕಡಾ 3 ರಿಂದ ಶೇಕಡಾ 7. 1/5 ಗೆ ಏರಿಸುವಂತೆ ರಾಜನಹಳ್ಳಿ ಯಿಂದ ರಾಜಧಾನಿ ವರೆಗೆ ಪಾದಯಾತ್ರೆ ಹೋಗಿ ಸರ್ಕಾರಕ್ಕೆ ಮನವಿಯನ್ನು ಮಾಡಿಕೊಂಡರೂ ಪ್ರಯೋಜನವಾಗಿರಲಿಲ್ಲ ಹಾಗಾಗಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೆ ಆಗ ಸಮಾಜಕ್ಕೆ ನಾನು ಮನವಿ ಮಾಡಿಕೊಂಡದ್ದೆನೆಂದರೆ ಕರೋನ ನಿಯಮಗಳನ್ನು ಸರ್ಕಾರ ಹೋರಡಿಸಿರುವುದರಿಂದ ಯಾರೊಬ್ಬರೂ ಧರಣಿ ಸತ್ಯಾಗ್ರಹ ಕೂರಲು ಬರಬೇಡಿರಿ ನಾನೊಬ್ಬನೇ ಧರಣಿ ಸತ್ಯಾಗ್ರಹ ಮಾಡುತ್ತೇನೆ ನಾನು ಕರೆ ಕರೆ ಕೊಟ್ಟಾಗ ಎಲ್ಲರೂ ಹೋರಾಟ ಮಾಡಲು ತಯಾರಾಗಿರಿ ಎಂದು ಕರೆ ನೀಡಿದ್ದೆ ಅದರಂತೆ ತಾಲೂಕಿನ ಜನರು ನಾನು ಧರಣಿ ಸತ್ಯಾಗ್ರಹ ಕುಳಿತಾಗ ನನಗೆ ಬೆನ್ನಿಗೆ ನಿಂತು ಪ್ರೋತ್ಸಾಹ ನೀಡಿದ್ದಾರೆ ಅಲ್ಲದೆ ಪರಿಶಿಷ್ಟ ಜಾತಿಯ ಸಮುದಾಯದ ಜನರು ಮುಖಂಡರು, ಹೋರಾಟಗಾರರು ಮಠಾಧೀಶರು, ನಮಗೆ ಪ್ರೋತ್ಸಾಹ ನೀಡಿದ್ದಾರೆ ಅದಕ್ಕಾಗಿ ನಾವು ಆಭಾರಿಯಾಗಿದ್ದೇನೆ ಎಂದು ಹೇಳಿದರಲ್ಲದೆ ಫ್ರೆಬ್ರುವರಿ 8 ಮತ್ತು 9 ನೇ ತಾರೀಖಿನಂದು ಜಾತ್ರೆಯನ್ನು ವೈಚಾರಿಕ ಕಾರ್ಯಕ್ರಮವನ್ನಾಗಿ ಆಚರಿಸಲಾಗುತ್ತದೆ ಎಂದು ತಿಳಿಸಿದರು .

ಈ ವೇಳೆ ಜಾತ್ರ ಸಮಿತಿಯ ತಾಲೂಕು ಅಧ್ಯಕ್ಷರನ್ನಾಗಿ ಬಳ್ಳಾರಿ ಸಂಸದ ವೈ ದೆವೇಂದ್ರಪ್ಪ ನವರ ಪುತ್ರ ವೈ ಡಿ ಅಣ್ಣಪ್ಪನವರನ್ನು ಆಯ್ಕೆ ಮಾಡಲಾಯಿತು ಇದನ್ನು ಸಭೆಯಲ್ಲಿ ಸೇರಿದ್ದ ಜನರೆಲ್ಲರೂ ಚಪ್ಪಾಳೆ ತಟ್ಟುವ ಮೂಲಕ ಅನುಮೋದಿಸಿದರು.

ಜಾತ್ರಾ ಸಮಿತಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವೈ ಡಿ ಅಣ್ಣಪ್ಪ ಮಾತನಾಡಿ ಈ ಬಾರಿ ಜಾತ್ರೆಯನ್ನು ಅದ್ದೂರಿಯಾಗಿ ಮಾಡಲು ನಮ್ಮ ತಾಲೂಕಿನಿಂದ ಆರ್ಥಿಕ ಸಂಪನ್ಮೂಲ ಕ್ರೂಡೀಕರಣ ಸೇರಿದಂತೆ ಎಲ್ಲಾ ತರಹದ ಸಹಕಾರವನ್ನು ನೀಡುತ್ತೇನೆ ಎಂದು ಹೇಳಿದರು.

ಈ ವೇಳೆ ಜಾತ್ರಸಮಿತಿಯ ಮಾಜಿ ಅಧ್ಯಕ್ಷರಾದ ಆಲದಹಳ್ಳಿ ಷಣ್ಮುಖಪ್ಪ,ಹೆಚ್.ಕೆ. ಹಾಲೇಶ್, ಹಾಗೂ ವಾಲ್ಮೀಕಿ ಸಮುದಾಯದ ತಾಲೂಕು ಅಧ್ಯಕ್ಷ ಕೋರಿಶೆಟ್ಟಿ ಉಚ್ಚೆಂಗೆಪ್ಪ ಮಾತನಾಡಿದರು.

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಗಿರೀಶಪ್ಪ, ಚಿಕ್ಕೇರಿ ಬಸವರಾಜ್, ಪರಶುರಾಮಪ್ಪ, ಶಿರಹಟ್ಟಿ ದಂಡ್ಯಪ್ಪ, ಮ್ಯಾಕಿ ಸಣ್ಣಹಾಲಪ್ಪ, ಕಮ್ಮಾರ ಹಾಲಪ್ಪ, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಜಯಲಕ್ಷ್ಮಿ, ಬಿಜೆಪಿ ಮುಖಂಡ ಆರ್ ಲೋಕೇಶ್, ಗಿರಜ್ಜಿ ನಾಗರಾಜ್, ದಾದಪುರದ ಶಿವಾನಂದ್, ಮೂಲಿಮನಿ ಹನುಮಂತಪ್ಪ,ಪಣಿಯಾರ ಲಿಂಗರಾಜ್, ರೇವಣಸಿದ್ದಪ್ಪ, ಉಮಾಕಾಂತ, ಕೆಂಗಳ್ಳಿ ಪ್ರಕಾಶ್ ವಕೀಲರು, ಪಟ್ನಾಮದ ಪರಶುರಾಮ, ಬಾಣದ ಅಂಜಿನಪ್ಪ, ಹಾದಿಮನಿ ಸಂತೋಷ್, ಹರಿಯಮ್ಮನಹಳ್ಳಿ ಮಂಜುನಾಥ್, ಮಹಾಂತೇಶ್, ಕೆಂಚನಗೌಡ, ಬೆಂಡಿಗೇರಿ ಚಂದ್ರಪ್ಪ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *