Vijayanagara Express

Kannada News Portal

ಸಹಾಸ್ರಾರು ಅಭಿಮಾನಿಗಳೊಂದಿಗೆ ಅದ್ದೂರಿಯಾಗಿ ಸಂಕ್ರಮಣ ಆಚರಿಸಿದ ಎಂ ಪಿ ಲತಾ ಮಲ್ಲಿಕಾರ್ಜುನ

1 min read

ಸಹಾಸ್ರಾರು ಅಭಿಮಾನಿಗಳೊಂದಿಗೆ ಅದ್ದೂರಿಯಾಗಿ ಸಂಕ್ರಮಣ ಆಚರಿಸಿದ ಎಂ ಪಿ ಲತಾ ಮಲ್ಲಿಕಾರ್ಜುನ

 

ವಿಶೇಷ ವರದಿ ಪಟ್ನಾಮದ ವೆಂಕಟೇಶ್ ಹರಪನಹಳ್ಳಿ

ಹರಪನಹಳ್ಳಿ : ಜ -15 , ತಾಲೂಕಿನ ತಾವರೆಗುಂದಿ ಗ್ರಾಮದ ಬಳಿ ತುಂಗಭದ್ರಾ ನದಿತಟದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ
ಎಂ.ಪಿ .ಲತಾಮಲ್ಲಿಕಾರ್ಜುನರವರು ಜಾನಪದ ನೃತ್ಯ ವಿಶಿಷ್ಟ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಂಕ್ರಾಂತಿ ಹಬ್ಬದ ಔತಣ ಕೂಟವನ್ನು ಆಯೋಜಿಸಿದ್ದರು ಈ ಕಾರ್ಯಕ್ರಮದ ಸಂಭ್ರಮದಲ್ಲಿ ಸಾವಿರಾರು ಜನ ಭಾಗಿಯಾಗಿ ಖುಷಿಯಲ್ಲಿ
ಮಿಂದೆದ್ದು ಪರಸ್ಪರ ಶುಭಾಶಯ ಹಂಚಿಕೊಂಡರು.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಾರ್ಯಕ್ರಮವನ್ನು ನದಿಪಾತ್ರದ ಹಳ್ಳಿಯಾದ ತಾವರೆಗುಂದಿ ಗ್ರಾಮದಲ್ಲಿ ಆಯೋಜಿಸಲಾಗಿತ್ತು ಹರಪನಹಳ್ಳಿ ತಾಲೂಕಿನ ಮಾಜಿ ಶಾಸಕ ಎಂ ಪಿ ರವೀಂದ್ರ ರವರು ತಾವು ಅಧಿಕಾರಕ್ಕೆ ಬಂದಾಗಿನಿಂದ ಪ್ರತಿ ವರ್ಷ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರು ಆ ಸಾಂಪ್ರಾದಾಯವನ್ನು ಅವರ ಸಹೋದರಿ ಎಂ ಪಿ ಲತಾ ಮಲ್ಲಿಕಾರ್ಜುನ ರವರು ಅಭಿಮಾನಿಗಳಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಮುಂದುವರೆಸಿಕೊಂಡು ಬಂದಿದ್ದಾರೆ ಆ ಪ್ರಕಾರ ಈ ಬಾರಿ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.

ನದಿತಟದ ಬಯಲಿನಲ್ಲಿ ಎಲ್ಲೆಂದರಲ್ಲಿ ವಾಹನಗಳು ಸಾಲುಗಟ್ಟಿ ಕಾರ್ಯಕ್ರಮಕ್ಕೆ ತಾಲೂಕಿನ ಮೂಲೆಮೂಲೆಗಳಿಂದ ಜನರು ಆಗಮಿಸಿದ್ದರು ತಮ್ಮ ತಮ್ಮ ಸ್ವಂತ ವಾಹನಗಳಲ್ಲಿ ಕಾರು, ಬೈಕ್, ಟ್ರಾಕ್ಟರ್,ಓಮಿನಿ ವ್ಯಾನ್,ಕ್ರುಜರ್, ಬಸ್ ಗಳಲ್ಲಿ ಭಾರೀ ಸಂಖ್ಯೆಯಲ್ಲಿ ವಿಶೇಷವಾಗಿ ಮಹಿಳೆಯರು ಭಾಗವಹಿಸಿದ್ದು ವಿಶೇಷವಾಗಿತ್ತು ಸುಮಾರು 10 ರಿಂದ 12 ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು,
ಚುನಾವಣೆ ಮುಂದಿರುವ ಕಾರಣದಿಂದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು ಎಂದು ಹೇಳಲಾಗುತ್ತದೆ.

ವಿವಿಧ ಗ್ರಾಮಗಳಿಂದ ಅನೇಕ ನಾಗರಿಕರು, ಎಂ ಪಿ ರವೀಂದ್ರ ರವರ ಕಟ್ಟಾ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು ಇಷ್ಟೊಂದು ಸಂಖ್ಯೆಯಲ್ಲಿ ಜನರು ಕಾರ್ಯಕ್ರಮಕ್ಕೆ ಆಗಮಿಸಲು ಕಾರಣ ಎಂ ಪಿ ಲತಾ ರವರ ಪತಿ ಹೆಚ್.ಎಂ.ಮಲ್ಲಿಕಾರ್ಜುನ ಸ್ವಾಮಿ ರವರ ಸರಳ ಸಜ್ಜನಿಕೆಯ ಮೃದು ಸ್ವಭಾವದ ವ್ಯಕ್ತಿತ್ವ ಕಾರಣ ಎಂದೂ ಸಹ ಹೇಳಬಹುದು ಅವರ ಜನ ಸಂಪರ್ಕ ಕಚೇರಿಗೆ ಯಾರೇ ಕಾರ್ಯಕರ್ತರು ಬಂದರೂ ಸಹ ಸಮಾಧಾನವಾಗಿ ಸೌಜನ್ಯದಿಂದ ಮಾತನಾಡಿಸುವ ಸಂಸ್ಕಾರ ಹೊಂದಿರುತ್ತಾರೆ ಹಾಗಾಗಿ ಇಷ್ಟೊಂದು ಸಂಖ್ಯೆಯಲ್ಲಿ ಜನರು ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಎಂದು ಸಹ ಹೇಳಲಾಗುತ್ತದೆ ಕೆಲವೊಮ್ಮೆ ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ದೊಡ್ಡ ದೊಡ್ಡ ರಾಜಕೀಯ ವ್ಯಕ್ತಿಗಳು, ಮಂತ್ರಿಗಳು, ಮುಖ್ಯ ಮಂತ್ರಿಗಳು ಕೇಂದ್ರ ಸರ್ಕಾರದ ಮಂತ್ರಿಗಳು ಬಂದರೂ ಸಹ ಇಷ್ಟೊಂದು ಸಂಖ್ಯೆಯಲ್ಲಿ ಜನರು ಕಾರ್ಯಕ್ರಮಕ್ಕೆ ಆಗಮಿಸದೆ ಕೇವಲ ಸಾವಿರ ಜನರು ಬಾರದ ಉದಾಹರಣೆಗಳು ಸಾಕಷ್ಟಿವೆ ಇಂತಹ ಸಂದರ್ಭದಲ್ಲಿ ದುಡ್ಡು ಕೊಟ್ಟು ಜನರನ್ನು ಕಾರ್ಯಕ್ರಮಕ್ಕೆ ಕರೆಯಿಸಿ ಇವರೇ ನಮ್ಮ ಕಾರ್ಯಕರ್ತರು ಎಂದು ಬಡಾಯಿ ಕೊಚ್ಚಿಕೊಂಡು ಹೇಳಿದ ಉದಾಹರಣೆಗಳೂ ಸಾಕಷ್ಟಿವೆ.

ಇದನ್ನು ತಾಲೂಕಿನ ವಿಧಾನಸಭಾ ಕ್ಷೇತ್ರದ ಜನರು ಚುನಾವಣೆ ದಿಕ್ಸೂಚಿ ಎಂದು ಹೇಳುತ್ತಿದ್ದಾರೆ ಏಕೆಂದರೆ ಕ್ಷೇತ್ರದಲ್ಲಿ ಎಂ ಪಿ ರವೀಂದ್ರ ರವರ ಕಾಲವಾದ ‌ ನಂತರ ಈ ಪ್ರಮಾಣದಲ್ಲಿ ಜನರನ್ನು ‌ಸೇರಿಸಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡಿದ್ದು ಮತ್ತು ಕಳೆದ ಐದು ವರ್ಷಗಳಲ್ಲಿ ಇದೇ ಮೊದಲು ಎನ್ನಲಾಗಿದೆ ಇಂತಹ ಕಾರ್ಯಕ್ರಮವನ್ನು ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಯಾರೂ ಮಾಡಿರಲಿಲ್ಲ .

ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಗೆ ಅರ್ಜಿ ಸಲ್ಲಿಸಿದವರು 17 ಜನರಿದ್ದರೂ ಸಹ ಅಂತಿಮವಾಗಿ ಎಂ ಪಿ ಲತಾ ಮಲ್ಲಿಕಾರ್ಜುನ ರವರಿಗೆ ಬಿ ಫಾರಂ ಪಕ್ಕಾ ಎಂದು ಹೇಳಲಾಗುತ್ತಿದೆ ಇದಕ್ಕೆ ಕಾರಣ ಇಷ್ಟೇ ಮಾಜಿ ಶಾಸಕ ದಿವಂಗತ ಎಂ ಪಿ ರವೀಂದ್ರ ರವರು ತಾಲೂಕಿನಲ್ಲಿ ತಾವು ಮಾಡಿದ ಅಭಿವೃದ್ಧಿ ಕೆಲಸಗಳಾಗಿವೆ ಅಲ್ಲದೆ ಎಂ ಪಿ ಪ್ರಕಾಶ್ ಮತ್ತು ಸಿದ್ದರಾಮಯ್ಯ ಇಬ್ಬರೂ ಸಹ ಜೆಡಿಎಸ್ ಗರಡಿಯಿಂದ ಬಂದವರು ಹೆಚ್ಚು ಕಡಿಮೆ ಮಲ್ಲಿಕಾರ್ಜುನ ಖರ್ಗೆ ಅವರು ಸಹ ಎಂ ಪಿ ಪ್ರಕಾಶ್ ರವರ ಸಮಕಾಲೀನ ರಾಜಕೀಯ ಮುತ್ಸದ್ದಿ ಅಲ್ಲದೆ ಅವರು ಈಗ ಎಐಸಿಸಿ ಅಧ್ಯಕ್ಷರಾಗಿದ್ದಾರೆ ಹಾಗೂ ಎಂ ಪಿ ಲತಾ ಮಲ್ಲಿಕಾರ್ಜುನ ರವರು ಕ್ಷೇತ್ರದಲ್ಲಿ ಎಲ್ಲೆ ಹೋದರೂ ಅಥವಾ ಯಾವುದೇ ಗ್ರಾಮದಲ್ಲಿ ಕಾರ್ಯಕ್ರಮವನ್ನು ಮಾಡಿದರು ಸಾಕಷ್ಟು ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಇದು ಅವರ ವೈಯಕ್ತಿಕ ಮತ್ತು ರಾಜಕೀಯ ವರ್ಚಸ್ಸನ್ನು ತೋರಿಸುತ್ತದೆ ಇಷ್ಟೂಂದು ರಾಜಕೀಯ ಹಿನ್ನೆಲೆ ಮತ್ತು ಇತಿಹಾಸ ಹೊಂದಿರುವ ಇವರನ್ನು ಪಕ್ಷ ಬಹುತೇಕ ಟಿಕೆಟ್ ನೀಡಲು ಕಡೆಗಣಿಸುವುದಿಲ್ಲ ಎಂದೂ ಸಹ ಹೇಳಲಾಗುತ್ತದೆ ಹಾಗಾಗಿ ಈ ಬಾರಿಯ ಚುನಾವಣೆಯಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಇವರಿಗೆ ಪಕ್ಕಾ ಎಂದು ಕೆಲವು ಬಲ್ಲ ರಾಜಕೀಯ ಮೂಲಗಳಿಂದ ತಿಳಿದು ಬಂದಿದೆ .

ಇದಾದ ನಂತರ ಫ್ರೆಬ್ರವರಿ ತಿಂಗಳಲ್ಲಿ ಅತೃಪ್ತ ಕಾರ್ಯಕರ್ತರು ಜೆಡಿಎಸ್ ಪಕ್ಷದಿಂದ ಕಾಂಗ್ರೆಸ್ ಗೆ ಬಿಜೆಪಿ ಯಿಂದ ಕಾಂಗ್ರೆಸ್ ಗೆ, ಬಿಜೆಪಿ ಯಿಂದ ಜೆಡಿಎಸ್ ಗೆ ಎಲ್ಲಾ ಪಕ್ಷಗಳಿಂದ ಪರಸ್ಪರ ಕಾರ್ಯಕರ್ತರ ಸೇರ್ಪಡೆ ಪರ್ವ ಆರಂಭವಾಗುತ್ತದೆ ಫ್ರೆಬ್ರವರಿ ತಿಂಗಳಲ್ಲಿ ದಾಖಲೆ ಮಟ್ಟದಲ್ಲಿ ಕಾಂಗ್ರೆಸ್ ಗೆ ಸೇರ್ಪಡೆ ಪರ್ವ ತಾಲೂಕಿನಲ್ಲಿ ನಡೆಯಲಿದೆ.

ಹಿಂದೆ ತಾಲೂಕಿನಲ್ಲಿ 1994 ರಲ್ಲಿ ನಡೆದ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನದಿಪಾತ್ರದ ಗ್ರಾಮಗಳ ಜನರು ಪಕ್ಷೇತರ ಅಭ್ಯರ್ಥಿಯಾಗಿದ್ದ ಸಮಾಜಕಲ್ಯಾಣ ಇಲಾಖೆ ಮಾಜಿ ಸಚಿವ ದಿವಂಗತ ಡಿ ನಾರಯಣದಾಸ್ ರವರನ್ನು ಗೆಲ್ಲಿಸುವಲ್ಲಿ ನಿರ್ಣಾಯಕ ಮತಗಳನ್ನು ಹಾಕಿದ್ದು ಈ ನದಿ ತೀರದ ಜನರೇ ಎಂಬುದನ್ನು ಇಲ್ಲಿ ಮರೆಯುವಂತಿಲ್ಲ ಹಾಗಾಗಿ ಈ ಬಾರಿ ನದಿ ತೀರದ ಜನರು ಅತೀ ಹೆಚ್ಚು ಕಾರ್ಯಕರ್ತರು ಲತಾ ಮಲ್ಲಿಕಾರ್ಜುನ ರವರೊಂದಿಗೆ ಗುರುತಿಸಿಕೊಂಡಿದ್ದಾರೆ ಹಾಗೂ ತಾಲೂಕಿನಾದ್ಯಂತ ಎಲ್ಲಾ ಸಮುದಾಯಗಳ ಎಲ್ಲಾ ಗ್ರಾಮಗಳ ಮುಖಂಡರು, ಜನರು ಭೇದಭಾವವಿಲ್ಲದೆ ಇವರೊಂದಿಗೆ ಇರುವುದಂತೂ ಸತ್ಯ ಈ ಎಲ್ಲಾ ಅಂಶಗಳು ಇವರಿಗೆ ವರವಾಗುವ ಸಾಧ್ಯತೆ ಇದೆ ಎಂದರೆ ತಪ್ಪಾಗಲಾರದು.

ಒಟ್ಟಾರೆಯಾಗಿ  ಈ ಬಾರಿ ತಾಲೂಕಿನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಎಂ ಪಿ ಲತಾ ಮಲ್ಲಿಕಾರ್ಜುನ ರವರ ಪರ ಬಾರಿ
ಒಮ್ಮತದ ,ಜನಾಭಿಪ್ರಾಯದ ಚೆರ್ಚೆ ಆರಂಭವಾಗಿರುವುದಂತೂ ನಿಜ ಅದಕ್ಕೆ  ತಾವರೆಗುಂದಿಯಲ್ಲಿ ನಡೆದ ಸಂಕ್ರಾಂತಿ ಹಬ್ಬದ ಕಾರ್ಯಕ್ರಮವೇ ಸಾಕ್ಷಿಯಾಗಿದೆ  ಎಂದೇ ಹೇಳಬಹುದು.

ಅದೇನೇ ಇರಲಿ ಬಿಡಿ ಹರಪನಹಳ್ಳಿ ತಾಲೂಕಿನ ಜನರು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಗೆಲ್ಲಿಸುತ್ತಾರೆ ಯಾರನ್ನು ಬೇಕಾದರೂ ಸೋಲಿಸುತ್ತಾರೆ ಎಂಬುದಂತೂ ದಿಟ .

 

Leave a Reply

Your email address will not be published. Required fields are marked *