Vijayanagara Express

Kannada News Portal

ಶಾಸಕರು ಮತ್ತು ಸ್ಥಳೀಯ ನಾಯಕರ ನಾಯಕತ್ವದಲ್ಲಿ ಪಕ್ಷ ಸಂಘಟಿಸಲು ನಿರ್ಧಾರ

1 min read

ಶಾಸಕರು ಮತ್ತು ಸ್ಥಳೀಯ ನಾಯಕರ ನಾಯಕತ್ವದಲ್ಲಿ ಪಕ್ಷ ಸಂಘಟಿಸಲು ನಿರ್ಧಾರ

 

ಹರಪನಹಳ್ಳಿ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಜಿಲ್ಲಾ ಪಂಚಾಯತಿ ಸ್ಥಾಯಿ ಸಮಿತಿ ನಾಮರ್ದೇಶಿತ ಸದಸ್ಯ, ಬಿಜೆಪಿ ಹಿರಿಯ ಮುಖಂಡರಾದ ಕಣವಿಹಳ್ಳಿ ಮಂಜುನಾಥ ಅವರ ನೇತೃತ್ವದಲ್ಲಿ ಸಭೆ ನಡೆಸಿರುವ ಕ್ಷೇತ್ರದ ಮಾದಿಗ ಸಮಾಜದ ಬಿಜೆಪಿ ಮುಖಂಡರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಹಿನ್ನಲೆಯಲ್ಲಿ
ಯಾವುದೇ ಒಬ್ಬ ನಾಯಕರ ಜೊತೆ ಗುರುತಿಸಿಕೊಳ್ಳದೇ ಶಾಸಕರಾದ ಜಿ.ಕರುಣಾಕರೆರಡ್ಡಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರ ಮಾರ್ಗದರ್ಶನದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ, ತಾಲೂಕು ಅಧ್ಯಕ್ಷ ಸತ್ತೂರು ಹಾಲೇಶ್ ಸಾರಥ್ಯದಲ್ಲಿ ಪಕ್ಷವನ್ನು ಸಂಘಟಿಸಲು ನಿರ್ಧಾರ ಕೈಗೊಂಡಿದ್ದಾರೆ.

ಸಭೆಯ ನೇತೃತ್ವವಹಿಸಿದ್ದ ಕಣವಿಹಳ್ಳಿ ಮಂಜುನಾಥ ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಜನಪರವಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಹೀಗಾಗಿ ಹರಪನಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಗೆಲ್ಲುವ ಅವಕಾಶಗಳು ಹೆಚ್ಚಾಗಿವೆ. ಮಾದಿಗ ಸಮಾಜವೂ ಕೂಡ ಬಿಜೆಪಿ ಪಕ್ಷದ ಜೊತೆಗೆ ಗುರುತಿಸಿಕೊಂಡಿದೆ. ಕಾಂಗ್ರೆಸ್ ಪಕ್ಷದವರು ಸ್ಪೃಶ್ಯ ಜಾತಿಗಳನ್ನು ಸೇರಿಸಿ ಅಸ್ಪೃಶ್ಯ ಜಾತಿಗಳಿಗೆ ಅನ್ಯಾಯ ಮಾಡಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಮಾದಿಗರು ಒಗ್ಗಟ್ಟು ಪ್ರದರ್ಶಿಸಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಪಣತೊಡಬೇಕೆಂದು ಕರೆ ನೀಡಿದರು.

ದಲಿತ ಮುಖ್ಯಮಂತ್ರಿ ಮಾಡುವುದು ಬಿಜೆಪಿ ಪಕ್ಷದಿಂದ ಮಾತ್ರ ಸಾಧ್ಯ. ಒಳ ಮೀಸಲಾತಿ ಕೊಡುವ ಎಲ್ಲಾ ಲಕ್ಷಣಗಳು ಕೂಡ ಇದೆ. ಸದಾಶಿವ ಆಯೋಗವನ್ನು ಕೂಡ ಅನುಷ್ಠಾನಕ್ಕೆ ತರಲು ಬಿಜೆಪಿ ಸರ್ಕಾರ ಬದ್ದವಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯವಾಗಿ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಅವರನ್ನು ಬೆಂಬಲಿಸೋಣ. ಈ ತಿಂಗಳ ಕೊನೆಯಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಸುವ ಕಾರ್ಯಕ್ರಮ ಆಯೋಜಿಸೋಣ ಎಂದರು.

ಮುಖಂಡ ತೆಲಿಗಿ ಹನುಮಂತಪ್ಪ ಮಾತನಾಡಿ, ಮಾದಿಗ ಸಮಾಜ ಒಗ್ಗಟ್ಟಾಗಿ ಬಿಜೆಪಿ ಬೆಂಬಲಿಸೋಣ, ಜಿಲ್ಲಾಧ್ಯಕ್ಷರು, ತಾಲೂಕು ಅದ್ಯಕ್ಷರು, ಶಾಸಕರನ್ನು ಒಳಗೊಂಡು ಕಾರ್ಯಕ್ರಮ ರೂಪಿಸುವಂತೆ ಸಲಹೆ ನೀಡಿದರು.

ಮುಖಂಡ ಹಲುವಾಗಲು ನೆರೆತಲೆ ರಮೇಶ್ ಮಾತನಾಡಿ, ಮಾದಿಗ ಸಮಾಜವೂ ಕೂಡ ಮೇಲ್ವರ್ಗದವರಂತೆ ಸಂಘಟಿತರಾಗಬೇಕು. ನಮ್ಮಲ್ಲಿ ಒಳಜಗಳ ಮರೆತು ಮಾದಿಗ ಜನಾಂಗ ಬಿಜೆಪಿ ಬೆಂಬಲಿಸುತ್ತದೆ
ಎಂಬುವುದನ್ನು ನಾವು ತೋರಿಸೋಣ. ಕ್ಷೇತ್ರದಲ್ಲಿ ನಮ್ಮ ಮತಗಳು ಹೆಚ್ಚಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸೋಣ ಜೊತೆಗೆ ಕಾರ್ಯಕ್ರಮ ಆಯೋಜಿಸೋಣ ಎಂದರು.

ಮುಖಂಡ ಮೈದೂರು ಪಕ್ಕೀರಪ್ಪ ಮಾತನಾಡಿ, ಮೊದಲು ಜಾತಿ, ನಂತರ ಪಕ್ಷ ಎಂಬುವುದನ್ನು
ಮಾದಿಗರು ಮರೆಯಬಾರದು. ನಮ್ಮ ಜಾತಿಗೆ ಅನ್ಯಾಯವಾದರೆ ಹೋರಾಟ ಮಾಡಬೇಕು. ನಮ್ಮನ್ನು ಒಡೆದಾಳುವವರಿದ್ದಾರೆ, ಅವರ ಬಗ್ಗೆ ಎಚ್ವರವಾಗಿರಬೇಕು. ಕಾಲು ಹಿಡಿದು ಕೆಳಗೆ ಎಳೆಯುವವರನ್ನು ನಾವು ದೂರ ಇಡಬೇಕು ಎಂದು ಹೇಳಿದರು.

ಮುಖಂಡ ಕಂಚಿಕೆರೆ ಕೆಂಚಪ್ಪ ಮಾತನಾಡಿ, ಕಣವಿಹಳ್ಳಿ ಮಂಜುನಾಥ ಅವರು ಮಾದಿಗ ಸಮಾಜದ ಶಕ್ತಿಯಾಗಿದ್ದಾರೆ. ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮ ಮಾಡುವ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡೋಣ, ತಾಲೂಕಿನಲ್ಲಿ ಸುಮಾರು 50 ಸಾವಿರ ಮತದಾರರಿದ್ದರೂ ನಮ್ಮನ್ನು
ಹೊಡೆದಾಳುವ ಶಕ್ತಿಯ ಬಗ್ಗೆ ಎಚ್ವರವಾಗಿರೋಣ ಎಂದು ತಿಳಿಸಿದರು.

ವಕೀಲ ಪೃಥ್ವೇಶ್ವರ ಪ್ರಭು ಮಾತನಾಡಿ, ಮಾದಿಗ ಸಮಾಜ ಕ್ಷೇತ್ರದಲ್ಲಿ ಸದಾ ಬೆಜೆಪಿ ಬೆಂಬಲಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಪಕ್ಷ ವಿಜಯ ಸಂಕಲ್ಪ ಯಾತ್ರೆ ನಡೆಸಲು ರಾಜ್ಯ ಮಟ್ಟದ ನಾಯಕರನ್ನು ಆಹ್ವಾನಿಸಿ ಸ್ಥಳೀಯ ಶಾಸಕರು ಮತ್ತು ಮುಖಂಡರ
ಮಾರ್ಗದರ್ಶನದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸುವ ಮೂಲಕ ಪಕ್ಷವನ್ನು ಸಂಘಟಿಸೋಣ
ಎಂದು ಸಲಹೆ ನೀಡಿದರು.

ಮುಖಂಡರಾದ ಯರಬಾಳು ನಾಗಪ್ಪ, ಅಡವಿಹಳ್ಳಿ ರಾಜಪ್ಪ, ಹಲುವಾಗಲು ಇಂದ್ರಪ್ಪ, ಕೊಂಗಹೊಸೂರು ಜಗದೀಶ್, ಕಣವಿಹಳ್ಳಿ ಭೀಮಪ್ಪ, ಶೀರನಹಳ್ಳಿ ಹಾಲೇಶ್, ಗುಂಡಗತ್ತಿ ಚಿರಂಜೀವಿ, ಭಂಗಿ ರಮೇಶ್, ಹಿರೇಮೇಗಳಗೆರೆ ಹನುಮಂತಪ್ಪ, ಶೃಂಗಾರದೋಟ ದುರುಗಪ್ಪ, ಹಲುವಾಗಲು ಹಿರಿಯಮ್ಮ ಮಾತನಾಡಿದರು.

ಮುಖಂಡರಾದ ನಂದಿಬೇವೂರು ಚಾರೆಪ್ಪ,  ಯಡಿಯಳ್ಳಿ ಅಂಜಿನಪ್ಪ,
ಬಾಪೂಜಿನಗರ ರಮೇಶ್, ಬಾಗಳಿ ಪರುಶುರಾಮ, ಹುಲಿಕಟ್ಟಿ ಪಕ್ಕೀರಪ್ಪ, ಮುತ್ತಿಗಿ ನಾಗಣ್ಣ, ಚಿಕ್ಕಮೇಳಗೆರೆ ಹನುಮಂತಪ್ಪ, ಬಳಿಗನೂರು ಸಣ್ಣಪ್ಪ, ಮತ್ತಿಹಳ್ಳಿ ಮಂಜುನಾಥ, ಕೂಲಹಳ್ಳಿ ಪಕ್ಕೀರಪ್ಪ, ಶೀರನಹಳ್ಳಿ ಬಸವರಾಜ್, ಅರಸನಾಳು ನಾಗರಾಜ್, ಮಂಜುನಾಥ್, ಮೈದೂರು ಶೇಖರಪ್ಪ, ಕಡಬಗೆರೆ ನಾಗರಾಜ್, ಮೈದೂರು , ಗೋಣಪ್ಪ, ಸೇರಿದಂತೆ ಅನೇಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *