Vijayanagara Express

Kannada News Portal

ಹಾಸ್ಟೆಲ್ ವಿದ್ಯಾರ್ಥಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 6ನೇ ಅತ್ಯುತ್ತಮ ಶ್ರೇಣಿ

1 min read

ಹಾಸ್ಟೆಲ್ ವಿದ್ಯಾರ್ಥಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 6ನೇ ಅತ್ಯುತ್ತಮ ಶ್ರೇಣಿ

 

ಹರಪನಹಳ್ಳಿ : ಏ – 24 , ತಾಲೂಕಿನ ವಿದ್ಯಾರ್ಥಿನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಓದುವ ಪುಸ್ತಕಗಳ ಹಾಗೂ ಪೂರಕ ಸೌಲಭ್ಯ ಒದಗಿಸುವ ಪ್ರಯತ್ನ ಮಾಡಿದರೆ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹರಪನಹಳ್ಳಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರೇಣುಕಾದೇವಿ ಹೇಳಿದರು.

ಪಿಯುಸಿ ಸಂಖ್ಯೆ 2ನೇ ಹಾಸ್ಟೆಲ್ ನಲ್ಲಿ ಇದ್ದ ವಿದ್ಯಾರ್ಥಿ ಶ್ರೀ ಓಂಪತಿ ದ್ವೀತಿಯ ಪಿಯುಸಿಯಲ್ಲಿ ರಾಜ್ಯಕ್ಕೆ ಆರನೇ ಅತ್ಯುತ್ತಮ ಶ್ರೇಣಿ ಪಡೆದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ವತಿಯಿಂದ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗೆ ಸನ್ಮಾಸಿಲಾಯಿತು ಈ ವೇಳೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ರೇಣುಕಾ ದೇವಿಯವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ನಾನು ಹರಪನಹಳ್ಳಿ ಸಮಾಜ ಕಲ್ಯಾಣ ಕಛೇರಿಗೆ ಅಧಿಕಾರಿಯಾಗಿ ಬಂದಗಿಂಂದಲೂ ಎಲ್ಲಾ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡುತ್ತಿದ್ದೆವು ವಿದ್ಯಾರ್ಥಿಗಳ ಓದಿನ ಬಗ್ಗೆ ಕಾಳಜಿ ವಹಿಸಿ ವ್ಯಕ್ತಿತ್ವ ವಿಕಸನ ಮತ್ತು ಸ್ಪೂರ್ತಿದಾಯಕ ತರಗತಿಗಳನ್ನು ಆಗಾಗ ಆಯೋಜಿಸಲಾಗುತ್ತಿತ್ತು ವಿದ್ಯಾರ್ಥಿಗಳು ಕಠಿಣ ಪರಿಶ್ರಮ ಹೆಚ್ಚು ಕಾಳಜಿ ವಹಿಸುತಿದ್ದ ನಮ್ಮ ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆದಿದ್ದಾರೆ ಹಿನ್ನೆಲೆಯಲ್ಲಿ ಇಂದು ನಮ್ಮ ನಿಲಯದ ವಿದ್ಯಾರ್ಥಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದು ಹರಪನಹಳ್ಳಿ ತಾಲೂಕಿಗೆ ಕೀರ್ತಿ ತಂದಿದ್ದಾರೆ ಅಂತಹ ವಿದ್ಯಾರ್ಥಿಗಳು ಮುಂದಿನ ವರ್ಷ ಉಳಿದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಲಿದ್ದಾರೆ ಎಂದು ಹೇಳಿದರು .

ನಿಲಯ ಪಾಲಕ ಎನ್.ಜಿ.ಬಸವರಾಜ್ ಮಾತನಾಡಿ , ನಮ್ಮ ಹರಪನಹಳ್ಳಿಗೆ ರೇಣುಕಾ ದೇವಿ ಮೆಡಮ್ ಸಮಾಜ ಕಲ್ಯಾಣ ಅಧಿಕಾರಿಯಾಗಿ ಬಂದಾಗಿನಿಂದ ನಿಲಯಕ್ಕೆ ಭೇಟಿ ನೀಡುತ್ತಿದ್ದರು ಎಲ್ಲಾ ಅಧಿಕಾರಿಗಳು ಊಟ ವಿಚಾರಣೆ ತರಕಾರಿ, ಸ್ವಚ್ಚತೆ ಪರಿವೀಕ್ಷಣೆ ಮಾಡುವುದಕ್ಕಷ್ಟೇ ಸೀಮಿತವಾಗಿರುತ್ತಾರೆ ಆದರೆ ರೇಣುಕಾ ದೇವಿ ಮೇಡಮ್ ರವರು ಮಕ್ಕಳ ವಿದ್ಯಾಬ್ಯಾಸದ ಬಗ್ಗೆ ಹೆಚ್ಚು ಗಮನ ಹರಿಸಿ ಮಕ್ಕಳಿಗೆ ಓದಿನ ಆಸಕ್ತಿ ಬರುವಂತೆ ಉತ್ತಮವಾದ ವಾತಾವರಣವನ್ನು ನಿರ್ಮಾಣ ಮಾಡುತ್ತಿದ್ದರು ಅಲ್ಲದೆ ವಿದ್ಯಾರ್ಥಿಗಳು ಮೊಬೈಲ್ ಫೋನ್ ಬಳಕೆ ಮಾಡದಂತೆ ಕಠಿಣ ಕ್ರಮ ಕೈಗೊಂಡಿದ್ದರು ಹಾಗೂ ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಗಮನಹರಿಸುತ್ತಿದ್ದರು ಹಾಗಾಗಿ ಈ ಎಲ್ಲಾ ಕಾರಣದಿಂದ ಇಂದು ನಮ್ಮ ನಿಲಯದ ವಿದ್ಯಾರ್ಥಿಗಳು ಈ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದರು.

ಈ ಬಗ್ಗೆ ಸಂತೋಷ ಹಂಚಿಕೊಂಡಿರುವ ವಿದ್ಯಾರ್ಥಿ ಓಂಪತಿ ನಾನು ರಾಯಚೂರು ಜಿಲ್ಲೆಯ ಲಿಂಗಸೂರಿನ ಮೂಲದವನು ನನ್ನ ಸಹೋದರ ಪಟ್ಟಣದ ಉಜ್ಜಯಿನಿ ಜಗದ್ಗುರು ಮರುಳರಾದ್ಯ ಪದವಿಪೂರ್ವ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಹಿಂದೆ ಪದವಿ ಪೂರ್ವ ಶಿಕ್ಷಣವನ್ನು ಪಡೆದು ಶೇಕಡಾ 97 ಅಂಕಗಳನ್ನು ಪಡೆದಿದ್ದರು ಆ ಕಾರಣಕ್ಕಾಗಿ ನಾನು ಹರಪನಹಳ್ಳಿ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕಾಗಿ ಬಂದೆ, ನನ್ನ ತಂದೆ ತಾಯಿಗಳು ಕೃಷಿ ಕಾರ್ಮಿಕರು ನನ್ನ ಅಣ್ಣನ ಪ್ರೋತ್ಸಾಹ ಮತ್ತು ತಂದೆ ತಾಯಿಯ ಸಹಕಾರದಿಂದ ಇಲ್ಲಿಗೆ ಬರಲು ಸಾಧ್ಯವಾಗಿದೆ ನನ್ನ ಮುಂದಿನ ಶಿಕ್ಷಣವನ್ನು ಬಾಗಲಕೋಟೆ ಜಿಲ್ಲೆಯಲ್ಲಿ ಪದವಿ ಪಡೆಯುವ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇನೆ .
ನನ್ನ ಸಾಧನೆಗೆ ನನ್ನ ನಿಲಯ ಪಾಲಕ ಎನ್.ಜಿ.ಬಸವರಾಜ್ ಹಾಗೂ ಕಾಲೇಜಿನ ಶಿಕ್ಷಕರ ಪ್ರೋತ್ಸಾಹವೇ ಕಾರಣ. ಅವರ ಪ್ರೋತ್ಸಾಹದಿಂದ ಇಂದು ಈ ಸಾಧನೆ ಮಾಡಿದ್ದೇನೆ. ಮುಂದೆ ಕೆಎಎಸ್ ಅಧಿಕಾರಿಯಾಗುವ ಕನಸು ಇದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಧಿಕಾರಿಗಳಾದ ಶ್ರೀಮತಿ ರೇಣುಕಾದೇವಿ ಕಛೇರಿ ಅಧೀಕ್ಷಕರಾದ ಶ್ರೀಮತಿ ವ್ಯವಸ್ಥಾಪಕರಾದ ಯಾಸ್ಮೀನ್, ದೇವೇಂದ್ರಪ್ಪ ನಿಲಯದ ವಾರ್ಡನ್ ಗಳಾದ ಬಸವರಾಜ ಎನ್ ಜಿ , ಶ್ರೀಮತಿ ಸುನೀತಾ ಶ್ರೀ ರವಿಗೌಡರ ಎಸ್ ಜಿ. ಶ್ರೀಮತಿ ಯಲ್ಲಮ್ಮ , ಶ್ರೀಮತಿ ಸುಮಾ ಮತ್ತು ಶ್ರೀ ಇಬ್ರಾಹಿಂಂ ST ಮೇನೇಜರ್ ಹಾಗೂ ಇಲಾಖಾ ಸಿಬ್ಬಂದಿಯವರು ಸೇರಿದಂತೆ ಮುಂತಾದವರು ಹಾಜರಿದ್ದರು

Leave a Reply

Your email address will not be published. Required fields are marked *