Vijayanagara Express

Kannada News Portal

ಇದು ಲೋಕಸಭಾ ಚುನಾವಣೆ ಉದ್ದೇಶಿತ ಬಜೆಟ್‌ ಆಗಿದೆ – ಮೂಲಿಮನಿ ಹನುಮಂತಪ್ಪ

1 min read

ಇದು ಲೋಕಸಭಾ ಚುನಾವಣೆ ಉದ್ದೇಶಿತ ಬಜೆಟ್‌ ಆಗಿದೆ – ಮೂಲಿಮನಿ ಹನುಮಂತಪ್ಪ

 

ಹರಪನಹಳ್ಳಿ : ಜು – 7 ,  ಮುಖ್ಯಮಂತ್ರಿ ಸಿದ್ದರಾಮಯ್ಯ ನವರು  ಮಂಡಿಸಿರುವ  ಬಜೆಟ್ ನ್ನು ಇದೊಂದು  ದೂರದೃಷ್ಟಿಯಿಲ್ಲದ ಲೋಕಸಭಾ ಚುನಾವಣೆ ಬಜೆಟ್‌  ಇದಾಗಿದೆ ಎಂದು   ಬಿಜೆಪಿ ಮುಖಂಡರಾದ ಮೂಲಿಮನಿ ಹನುಮಂತಪ್ಪ ರವರು ವಿಮರ್ಶಿಸಿ ದ್ದಾರೆ  .

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶುಕ್ರವಾರ ರಾಜ್ಯ ವಿಧಾನಸಭೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ತಮ್ಮ ಹದಿನಾಲ್ಕನೇ ಮತ್ತು ಈ ಅವಧಿಯಲ್ಲಿಯ ಪ್ರಥಮ ಬಜೆಟ್ ಅನ್ನು ಮಂಡಿಸಿದ್ದು ಇದು ದೂರದೃಷ್ಟಿಯಿಲ್ಲದ ಬಜೆಟ್‌ ಇದಾಗಿದೆ’ ಎಂದು ಹರಪನಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಹಲುವಾಗಲು ಜಿಲ್ಲಾ ಪಂಚಾಯತ್ ಕ್ಷೇತ್ರದ ಬಿಜೆಪಿ ಟಿಕೆಟ್ ನ ಪ್ರಬಲ ಆಕಾಂಕ್ಷಿ ಮೂಲಿಮನಿ ಹನುಮಂತಪ್ಪ ಟೀಕಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯೆ ನೀಡಿರುವ ಅವರು ಈ ಬಜೆಟ್‌ ಬಿಸಿಲು ಕುದುರೆಯಿದ್ದಂತೆ ಯಾರ ಕಣ್ಣಿಗೂ ಕಾಣದು, ಕೈಗೂ ಸಿಗದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದಾಯಕ್ಕಿಂತ ಹೆಚ್ಚುವರಿ ಬಜೆಟ್ ಅನ್ನು ಮಂಡಿಸಿದ್ದಾರೆ ಮತ್ತು ಕಳೆದ ಬಜೆಟ್ ಗಿಂತಲೂ ಕೊರತೆಯ ಬಜೆಟ್‌ಗಳನ್ನು ಮಂಡಿಸಿದ್ದಾರೆ ಇದು ರೈತರು, ಕಾರ್ಮಿಕ ವರ್ಗ, ಬಡವರು ಮತ್ತು ಮಹಿಳೆಯರನ್ನು ಕೇಂದ್ರೀಕರಿಸುವ ಧ್ವನಿಯಿಲ್ಲದವರ ಬಜೆಟ್ ಇದಾಗಿದೆ ಇದು ಕೇವಲ ಅಲ್ಪಸಂಖ್ಯಾತರ ಮತಗಳನ್ನು ಲೋಕಸಭೆ ಚುನಾವಣೆಗೆ ಸೆಳೆಯುವ  ಬಜೆಟ್ ಇದಾಗಿದ್ದು ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದ ಅಲ್ಪಸಂಖ್ಯಾತರಿಗೆ ಬಜೆಟ್ ನಲ್ಲಿ ಭರಪೂರ ಕೊಡುಗೆ ನೀಡಿದ್ದಾರೆ ಎಂದು ಟೀಕಿಸಿದ್ದಾರೆ.

ಈ ಬಜೆಟ್ ನಲ್ಲಿ ಯಾವುದೇ ಭರವಸೆಗಳಿಲ್ಲ ಇದರ ಪ್ರತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದಷ್ಟೇ ಅದನ್ನು ಜಾತ್ರೆಯ ಕನ್ನಡಕ ಹಾಕಿಕೊಂಡು ನೋಡಬೇಕು’ ಎಂದು ಲೇವಡಿ ಮಾಡಿದ್ದಾರೆ .

‘ಪ್ರತೀ ಮನೆಮಹಿಳೆ ಯಜಮಾನಿಗೆ 2 ಸಾವಿರ ನೀಡುವುದಾಗಿ ದೊಡ್ಡದಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ ಅದನ್ನು ಫಲಾನುಭವಿಗಳಿಗೆ ನೀಡಲು ಮೀನಾಮೇಷ ಏಣಿಸುತ್ತಿರುವುದು ಏಕೆ ಅದನ್ನು ಯಾವಾಗ ಜನತೆಗೆ ನೀಡುತ್ತೇವೆ ಎಂದು ಸ್ಪಷ್ಟಪಡಿಸಿಲ್ಲ . ಉದ್ಯೋಗ ಸೃಷ್ಟಿ, ರೈತರ ಸಬಲೀಕರಣ, ಬೆಲೆ ಏರಿಕೆಗೆ ಪರಿಹಾರ, ಕಾರ್ಮಿಕರು, ಉದ್ಯೋಗದಾತರನ್ನು ಉಳಿಸುವ ಪ್ರಯತ್ನ ಖಂಡಿತ ಮಾಡಿಲ್ಲ. ಒಟ್ಟಿನಲ್ಲಿ ಇದು ಆದಾಯಕ್ಕಿಂತ ಹೆಚ್ಚುವರಿಯ ಬಜೆಟ್ ಎಂದು ಬಿಜೆಪಿ ಮುಖಂಡ ಮೂಲಿಮನಿ ಹನುಮಂತಪ್ಪ ಟೀಕಿಸಿದ್ದಾರೆ.

ಐದು ಗ್ಯಾರಂಟಿ ಗಳು ಐದು ವರ್ಷಗಳ ಅವಧಿಯವರೆಗೆ ಸೌಲಭ್ಯ ನೀಡುವರೊ ಅಥವಾ ಲೋಕಸಭೆ ಚುನಾವಣೆ ಮುಗಿಯುವವರೆಗೂ ನೀಡುವರೊ ಎಂಬುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿಲ್ಲ ಎಂದು ವಿಮರ್ಶೆ ಮಾಡಿದ್ದಾರೆ.

Leave a Reply

Your email address will not be published. Required fields are marked *