September 18, 2024

Vijayanagara Express

Kannada News Portal

ಜನಪರ ಕಾಳಜಿ ಇಲ್ಲದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಿರಿ – ಸಿದ್ದರಾಮಯ್ಯ

1 min read

ಜನಪರ ಕಾಳಜಿ ಇಲ್ಲದ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಿರಿ – ಸಿದ್ದರಾಮಯ್ಯ

 

 

 

ಹರಪನಹಳ್ಳಿ :ಏ – 29 , ರೈತಪರ ಜನಪರ ಕಾಳಜಿ ಇಲ್ಲದ 40% ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಿರಿ ಎಂದು ಮಾಜಿ ಮುಖ್ಯಮಂತ್ರಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಹೆಚ್‌ಪಿಎಸ್ ಕಾಲೇಜ್ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎನ್.ಕೊಟ್ರೇಶ್ ಪರ ಮತ ಯಾಚನೆಗೆ ಆಗಮಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಬಿಜೆಪಿ ಸರ್ಕಾರ ಅಕ್ರಮವಾಗಿ ಅನೈತಿಕವಾಗಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ಜನಪರ ಯೋಜನೆಗಳನ್ನು ಜಾರಿಗೆ ತರದೇ ರಾಜ್ಯದ ಬೊಕ್ಕಸವನ್ನು ಲೂಟಿ ಹೊಡೆದ ಬಿಜೆಪಿಯವರಿಂದ ರಾಜ್ಯದ ಅಭಿವೃದ್ಧಿ ಹೇಗೆ ಸಾದ್ಯ ಎಂದು ಪ್ರಶ್ನಿಸಿದರು.

ಕಳೆದ 2018 ರ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗದ ಅತಂತ್ರ ವ್ಯವಸ್ಥೆಯಲ್ಲಿ ಕಾಂಗ್ರೆಸ್ 80 ಸೀಟ್, ಬಿಜೆಪಿ 104, ಜೆಡಿಎಸ್ 37 ಪಡೆದ ಹಿನ್ನಲೆ 37 ಸಂಖ್ಯಾಬಲ ಹೊಂದಿರುವ ಜೆಡಿಎಸ್‌ ನೊಂದಿಗೆ ನಾವು ಮೈತ್ರಿಮಾಡಿಕೊಂಡಿದ್ದೇವು ಆಗ ಜೆಡಿಎಸ್ ನವರಿಗೆ ಮುಖ್ಯಮಂತ್ರಿ ಸ್ಥಾನದ ಅಧಿಕಾರ ನೀಡಬೇಕಾಯಿತು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ 104 ಸೀಟ್ ಪಡೆದ ಬಿಜೆಪಿ ಪಕ್ಷ ಶೇ 36% ಮತ ಪಡೆದರೆ ನಾವು 38 ರಷ್ಟು ಮತ ಪಡೆದಿದ್ದಾಗ್ಯೂ ಅಧಿಕಾರ ಹಿಡಿಯಲು ಸಾಧ್ಯವಾಗಲಿಲ್ಲ.


ನಾನು ಮುಖ್ಯಮಂತ್ರಿಯಾಗಿದ್ದಾಗ 15 ಲಕ್ಷ ಮನೆಗಳನ್ನು ಮಂಜೂರು ಮಾಡಿದ್ದೇನೆ. ಬಿಜೆಪಿ 4 ವರ್ಷದಲ್ಲಿ ಒಂದು ಮನೆಯನ್ನು ಕಟ್ಟಿ ತೋರಿಸಲಿಲ್ಲ. ಭ್ರಷ್ಟಚಾರಕ್ಕೆ ಸಾಕ್ಷಿ ಕೇಳುವ ಬಿಜೆಪಿಯವರು ಪಿಎಸ್.ಐ ನೇಮಕಾತಿಯಲ್ಲಿ ಎ.ಡಿ.ಜಿ.ಪಿ ಜೈಲಿಗೆ ಹೋಗಿ ಬಂದಿದ್ದಕ್ಕಿಂತ ಸಾಕ್ಷಿ ಬೇಕೇ ಎಂದು ಪ್ರಶ್ನಿಸಿದ ಅವರು ಬೆಳಗಾವಿಯ ಮೂಲದ ಗುತ್ತಿಗೆದಾರ ಸಂತೋಷ್ ಅವರು 40% ಕಮಿಷನ್‌ ನ್ನು ನೀಡಲಾಗದೆ ಅದಕ್ಕಾಗಿ ನನಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಹಾಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಬರೆದಿಟ್ಟ ಡೆತ್ ನೋಟು ಸಾಕ್ಷಿಯಲ್ಲವೇ ಎಂದು ಹೇಳಿದರು .

ಪಕ್ಷೇತರ ಅಭ್ಯರ್ಥಿ ಎಂ.ಪಿ ಪ್ರಕಾಶ್ ಪುತ್ರಿ ಲತಾ ಮಲ್ಲಿಕಾರ್ಜುನ್ ನನ್ನ ಹೆಸರನ್ನು ಕ್ಷೇತ್ರದಲ್ಲಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಗಮನಕ್ಕೆ ಬಂದಿದೆ. ನಾನು ಯಾರನ್ನೂ ಚುನಾವಣೆಯಲ್ಲಿ ನಿಲ್ಲು ಅಂತ ಹೇಳಿಲ್ಲ ಅದು ಶುದ್ದ ಸುಳ್ಳು, ಒಂದು ವೇಳೆ ಅವರು ಈ ರೀತಿ ಹೇಳುತ್ತಿದ್ದರೆ ಎಂ.ಪಿ ಲತಾ ಮಲ್ಲಿಕಾರ್ಜುನ್ ರವರು ರಾಜಕೀಯಕ್ಕೆ ನಾಲಯಕ್ ಅಂತವರಿಗೆ ಮತ ಹಾಕಬೇಡಿ ನಮ್ಮ ಅಭ್ಯರ್ಥಿ ಎನ್.ಕೊಟ್ರೇಶ್ ರೈತ ಪರ, ಜನಪರ, ಬಡವರ ಪರ, ಕಾಳಜಿ ಇರುವ ವ್ಯಕ್ತಿ ಇಂತವರು ವಿಧಾನಸೌಧಕ್ಕೆ ಬರಬೇಕೆಂಬುದು ನಮ್ಮ ಆಸೆ ಹಾಗಾಗಿ ಕೊಟ್ರೇಶ್ ಅವರನ್ನು ಗೆಲ್ಲಿಸಲು ಹಸ್ತದ ಗುರುತಿಗೆ ಮತವನ್ನು ಹಾಕುವ ಮೂಲಕ ಪ್ರಚಂಡ ಬಹುಮತದಿಂದ ಆರಿಸಿ ಕಳುಹಿಸಬೇಕೆಂದು ಹೇಳಿದರು.

ಮಾಜಿ ಸಚಿವ ಪಿ.ಟಿ.ಪರಮೇಶ್ವರನಾಯ್ಕ ಮತನಾಡಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ಕಳೆದ 15 ವರ್ಷಗಳಿಂದ ಸ್ಥಳೀಯ ಅಭ್ಯರ್ಥಿಗಳಿಲ್ಲದೇ ಅನಾಥವಾಗಿತ್ತು. ಈಗ ಅದು ಸ್ಥಳೀಯ ಅಭ್ಯರ್ಥಿ ಎನ್.ಕೊಟ್ರೇಶ್‌ಗೆ ಕಾಂಗ್ರೆಸ್ ಟಿಕೇಟ್ ನೀಡಿದ್ದು, ವಿಶೇಷ ಎಂದರೆ 70 ವರ್ಷದ ನಂತರ ಪಂಚಮಶಾಲಿ ಸಮಾಜಕ್ಕೆ ಕಾಂಗ್ರೆಸ್ ಟಿಕೇಟ್ ನೀಡಿದೆ ನಿರ್ಲಕ್ಷ ವಹಿಸದೇ ಮತವನ್ನು ಹಾಕುವುದರ ಜೊತೆಗೆ ಪಕ್ಷೇತರ ಅಭ್ಯರ್ಥಿಗೆ ಯಾರೂ ಸ್ಪಂಧಿಸಬೇಡಿ ಎಂದರು.

 

ಅಭ್ಯರ್ಥಿ ಎನ್.ಕೊಟ್ರೇಶ್ ಮಾತನಾಡಿ ಹರಪನಹಳ್ಳಿ ಕ್ಷೇತ್ರದಲ್ಲಿ 2 ಬಾರಿ ನಾನು ಸೋಲು ಕಂಡಿದ್ದೇನೆ. ಈ ಬಾರಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಸ್ಥಳೀಯನಾದ ನನಗೆ ಟಿಕೇಟ್ ನೀಡಿದೆ ಬರದ ನಾಡದ ಹರಪನಹಳ್ಳಿಯನ್ನು ಅಭಿವೃದ್ಧಿಪಡಿಸಲು ನನ್ನನ್ನು ಆಯ್ಕೆ ಮಾಡಬೇಕೆಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಲೂರು ಅಂಜಿನಪ್ಪ, ಪ್ರೇಮ್‌ಕುಮಾರ್ ಕಮ್ಮತ್ತಹಳ್ಳಿ ,ಎಸ್.ಮಂಜುನಾಥ, ಮುಖಂಡರಾದ ಹೆಚ್.ಕೆ ಹಾಲೇಶ್, ಹೆಚ್.ಪಿ. ಪರಶುರಾಮಪ್ಪ, ಶಶಿಧರ ಪೂಜಾರ್, ಅಂಬಾಡಿ ನಾಗರಾಜ, ಹಾಲೇಶ್ ಗೌಡ, ಮುತ್ತಿಗಿ ಜಂಭಣ್ಣ, ಪಿ.ಟಿ ಭರತ್, ಪೊಮ್ಯನಾಯ್ಕ, ಆಲದಹಳ್ಳಿ ಷಣ್ಮುಖಪ್ಪ, ಎನ್. ನಂದೀಶ್‌ನಾಯ್ಕ, ಜಿ.ಆರ್. ರವಿನಾಯ್ಕ, ಬಿ.ನಜೀರ್‌ಸಾಬ್, ಜಯಪ್ರಕಾಶ್ ತಾವರೆಗುಂದಿ, ಮೂಸಾಸಾಬ್, ಕುಮಾರ್ ರೋಹಿತ್, ಜಿಸಾನ್, ಶ್ರೀಕಾಂತ್, ಪೂಜಾರ್ ಮಾರುತಿ ಭಟ್, ಪ್ರಕಾಶ್ ಪಾಟೀಲ್ ಉಮೇಶ್‌ನಾಯ್ಕ, ಸೇರಿದಂತೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *