Vijayanagara Express

Kannada News Portal

ಕೋಟೆಯಲ್ಲಿ ಸ್ವಾಭಿಮಾನದ ಕಹಳೆ ಮೊಳಗಿಸಿದ ಸ್ವತಂತ್ರ ಅಭ್ಯರ್ಥಿ ಎಂ ಪಿ ಲತಾ ಮಲ್ಲಿಕಾರ್ಜುನ

1 min read

ಕೋಟೆಯಲ್ಲಿ ಸ್ವಾಭಿಮಾನದ ಕಹಳೆ ಮೊಳಗಿಸಿದ ಸ್ವತಂತ್ರ ಅಭ್ಯರ್ಥಿ ಎಂ ಪಿ ಲತಾ ಮಲ್ಲಿಕಾರ್ಜುನ

 

ಹರಪನಹಳ್ಳಿ : ಏ – 18 , ಪಟ್ಟಣದ ಕೋಟೆ ಪ್ರದೇಶದಲ್ಲಿರುವ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಆಶೀರ್ವಾದವನ್ನು ಪಡೆದು ಬಂಡಾಯ ಕಾಂಗ್ರೆಸ್ ಸ್ವಾತಂತ್ರ ಅಭ್ಯರ್ಥಿಯಾಗಿ ಎಂ ಪಿ ಲತಾ ಮಲ್ಲಿಕಾರ್ಜುನ ರವರು ಚುನಾವಣೆ ಕಹಳೆಯನ್ನು ಅಲ್ಲಿಂದಲೇ ಮೊಳಗಿಸಿದರು.

ಕಾಂಗ್ರೆಸ್ ಪಕ್ಷದಲ್ಲಿ ಇದ್ದುಕೊಂಡು ಕೆಳಮಟ್ಟದಿಂದ
ಸಂಘಟನೆ ಮಾಡಿ ಮನೆ ಮನೆ ಮಾತಾಗಿದ್ದರು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕಾಂಗ್ರೆಸ್ಗಾಗಿ ಟಿಕೆಟ್ಗಾಗಿ ಕೆಪಿಸಿಸಿಗೆ ಸುಮಾರು 17 ವರ್ಷಗಳು ಸಲ್ಲಿಸಲ್ಪಟ್ಟಿದ್ದವು. ಅವುಗಳ ಪೈಕಿ ಎಂ ಪಿ ಲತಾ ಮಲ್ಲಿಕಾರ್ಜುನ ರವರ ಅರ್ಜಿಯೂ ಒಂದಾಗಿತ್ತು 17 ಜನ ಆಕಾಂಕ್ಷಿಗಳಲ್ಲಿ ಅಂತಿಮವಾಗಿ ಶಶಿಧರ್ ಪೂಜಾರಿ ಅರಸಿಕೆರೆ ಎನ್ ಕೊಟ್ರೇಶ್ ಎಂಪಿ ಲತಾ ಮಲ್ಲಿಕಾರ್ಜುನ್ ತೀವ್ರತರನಾದ ಪೈಪೋಟಿಗೆ ಬಿದ್ದಿದ್ದರು ಈ ಮೂರು ಜನರ ಪೈಕಿ ಶಶಿಧರ್ ಪೂಜಾರಿ ಅವರನ್ನು ಸರಳವಾಗಿ ಹೈಕಮಾಂಡ್ ತಣ್ಣಗ ಮಾಡಿದರೆ ಕೊನೆ ಘಟ್ಟಕ್ಕೆ ಎಂಪಿ ಲತಾ ಮಲ್ಲಿಕಾರ್ಜುನ್ ಮತ್ತು ಎನ್ ಕೊಟ್ರೇಶ್ ರವರ ಹೆಸರುಗಳು ಜಿದ್ದಾಜಿದ್ದಿನಂತೆ ಬೆಂಗಳೂರು ದೆಹಲಿ ಗಳಿಗೆ ಓಡಾಡುತ್ತಾ ಏನೇ ಆದರೂ ಪರವಾಗಿಲ್ಲ ಟಿಕೆಟ್ ಪಡೆದೆತಿರಬೇಕು ಎಂಬ ಜಿದ್ದಿಗೆ ಬಿದ್ದು ಓಡಾಡತೊಡಗಿದ್ದರು .

ಎಂಪಿ ಲತಾ ಮಲ್ಲಿಕಾರ್ಜುನ್ ರವರು ಕೆಪಿಸಿಸಿ ನನಗೆ ವಹಿಸಿದ ಎಲ್ಲಾ ಕೆಲಸ ಕಾರ್ಯಗಳನ್ನು ನನ್ನ ಸಹೋದರ ದಿವಂಗತ ಎಂ ಪಿ ರವೀಂದ್ರರವರ ಅಕಾಲಿಕ ಮರಣದ ನಂತರ ಎಲ್ಲಾ ಕೆಲಸಗಳನ್ನು ನಾನು ಚಾಚು ತಪ್ಪದೆ ಮಾಡಿದ್ದೇನೆ ತಾಲೂಕಿನಲ್ಲಿ ಓಡಾಡಿ ಮನೆ ಮನೆಯಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿದ್ದೇನೆ ಪಕ್ಷವು ನನ್ನ ಸೇವೆಯನ್ನು ಗುರುತಿಸಿ ಟಿಕೆಟ್ ಅನ್ನು ನೀಡುತ್ತದೆ ಎಂಬ ಬಲವಾದ ಭರವಸೆಯಿಂದ ನನಗೆ ಟಿಕೆಟ್ ನ್ನು ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದರು ಅಲ್ಲದೆ ಇವರ ತಂದೆ ದಿವಂಗತ ಎಂಪಿ ಪ್ರಕಾಶ್ ರವರು ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಆಗಿದ್ದವರು ಹೀಗಾಗಿ ತಮಗೆ ಟಿಕೆಟ್ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇತ್ತು ಅಲ್ಲದೆ ತಮ್ಮ ತಂದೆಯವರ ಆಪ್ತರೂ,ಒಡನಾಡಿಯೂ ಆಗಿದ್ದ ಮಾಜಿ ಮುಖ್ಯಮಂತ್ರಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ತಮಗೆ ಟಿಕೆಟ್ ನ್ನು ಕೊಟ್ಟೇ ಕೊಡುತ್ತಾರೆ ಹಾಗಾಗಿ ನನಗೆ ಟಿಕೆಟ್ ಸಿಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದೇ ಭಾವಿಸಿದ್ದರು ಎಂದು ಹೇಳಲಾಗುತ್ತದೆ.


ಇತ್ತ ಕಡೆ ಅರಸೀಕೆರೆ ಎನ್ ಕೊಟ್ರೇಶ್ ರವರು ತಾನು ಎರಡು ಬಾರಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದು 27,000, 38,000 ಕ್ರಮವಾಗಿ 2 ಬಾರಿ ಪಡೆದು ಪರಾಭವಗೊಂಡಿದ್ದರು ಅಲ್ಲದೆ ಹರಪನಹಳ್ಳಿ ತಾಲೂಕಿನಲ್ಲಿ ವೀರಶೈವ ಲಿಂಗಾಯಿತ ಪಂಚಮಸಾಲಿ ಸಮುದಾಯವು ದೊಡ್ಡ ಸಮಾಜ ವಾಗಿದ್ದು ಇಡೀ ಜಿಲ್ಲೆಯಲ್ಲಿ ಅಷ್ಟೇ ಅಲ್ಲ ಸುತ್ತಮುತ್ತ ಐದು ಜಿಲ್ಲೆಗಳಲ್ಲಿ ಪಂಚಮಸಾಲಿ ಸಮಾಜದ ಅಭ್ಯರ್ಥಿಗಳಿಗೆ ಎಲ್ಲಿಯೂ ಕಾಂಗ್ರೆಸ್ ಟಿಕೆಟ್ ನೀಡಿರುವುದಿಲ್ಲ ಹಾಗಾಗಿ ಕೊಟ್ರೇಶ್ ಗೆ ಟಿಕೆಟ್ ಕೊಡಿಸಲೆಬೇಕು ಎಂದು ಮಠಾಧೀಶರು, ಎಸ್ ಎಸ್ ಮಲ್ಲಿಕಾರ್ಜುನ್ ,ಶಾಮನೂರು ಶಿವಶಂಕರಪ್ಪ ,ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ, ಮುಂತಾದವರ ಕಡೆಗಳಿಂದಲೂ ಶಿಫಾರಸು ನಡೆದಿದ್ದಲ್ಲದೆ ಜಾತಿಲಾಬಿಯನ್ನು ದೊಡ್ಡ ಮಟ್ಟದಲ್ಲಿ ನಡೆಸಿದ್ದರು ಎಂದು ಹೇಳಲಾಗಿತ್ತು ಹಾಗಾಗಿ ಎರಡು ಕಡೆಗಳಿಂದಲೂ ಸಾಕಷ್ಟು ಒತ್ತಡವನ್ನು ಮನಗಂಡಂತ ಕಾಂಗ್ರೆಸ್ ಹೈ ಕಮಾಂಡ್ ಕೊನೆಯದಾಗಿ ಜಾತಿ ಲಾಬಿಗೆ ಮಣಿದು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನ್ನು ಪಂಚಮಸಾಲಿ ಸಮಾಜದ ಅಭ್ಯರ್ಥಿಯಾದ ಅರಸೀಕೆರೆಯ ಎನ್ ಕೊಟ್ರೇಶ್ ರವರ ಕೈಗೆ ಇಟ್ಟಿತ್ತು ಹೀಗಾಗಿ ಇದರಿಂದ ಸಾಕಷ್ಟು ಬೇಸತ್ತಿದ್ದ ಎಂಪಿ ಲತಾ ಮಲ್ಲಿಕಾರ್ಜುನ್ ರವರು ಪಕ್ಷಕ್ಕೆ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದರು ಆಗ ಅವರ ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ತಾವು ಪಕ್ಷೇತರವಾಗಿ ಸ್ವತಂತ್ರ ಅಭ್ಯರ್ಥಿಯಾಗಿ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯಲೇಬೇಕು ಎಂದು ಧರಣಿ ಕೂತಿದ್ದರು. ಆಗ ತಾವು ಸಮಯವನ್ನು ತೆಗೆದುಕೊಂಡು ಯೋಚಿಸಿ ಹೇಳುತ್ತೇವೆಂದು ಅವರ ಕಾರ್ಯಕರ್ತರಿಗೆ ಎಷ್ಟೇ ಹೇಳಿದರೂ ಬಿಗಿಪಟ್ಟು ಬಿಡದಿದ್ದಾಗ ಅನಿವಾರ್ಯವಾಗಿ ನಾನು ನಿಮ್ಮೆಲ್ಲರ ಅಭಿಮಾನಕ್ಕಾಗಿ ಸ್ಪರ್ಧಿಸುತ್ತೇನೆ ಎಂದು ಘೋಷಿಸಿದರು ಆಗ ಅಭಿಮಾನಿಗಳು ಖುಷಿಯಿಂದ ತಮ್ಮತಮ್ಮ ಊರುಗಳ ಕಡೆ ನಡೆದರೂ ಅದರ ಪರಿಣಾಮವಾಗಿ ಇಂದು ಸುಮಾರು 25 ಸಾವಿರ ಅಭಿಮಾನಿಗಳು ಕಾರ್ಯಕರ್ತರು ನಾಮಪತ್ರ ಸಲ್ಲಿಕೆ ವೇಳೆ ಸೇರಿದ್ದರು ಪಟ್ಟಣದ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಪೂಜೆ ಸಲ್ಲಿಸಿ ತೆರೆದ ವಾಹನದಲ್ಲಿ ಮೆರವಣಿಗೆ ಹೊರಟ ಅವರು ರಣಕಹಳೆಯನ್ನೇ ಊದಿಸಿದಂತೆ ಚುನಾವಣೆ ಕಹಳೆಯನ್ನು ಈ ಕೋಟೆ ಪ್ರದೇಶದಲ್ಲಿ ಮೊಳಗಿಸಿದರು ಮೆರವಣಿಗೆಯು ಹೊಸಪೇಟೆ ರಸ್ತೆಯಲ್ಲಿ ಸಾಗಿ ಹಳೆ ಬಸ್ ನಿಲ್ದಾಣ ,ಪ್ರವಾಸಿ ಮಂದಿರ ವೃತ್ತಗಳ ಮುಖಾಂತರ ಮಿನಿ ವಿಧಾನಸೌಧಕ್ಕೆ ತೆರಳಿ ತಾಲೂಕು ಉಪವಿಭಾಗಾಧಿಕಾರಿಗಳಿಗೆ ನಾಮಪತ್ರವನ್ನು ಸಲ್ಲಿಸಿದರು .

ಮಂಡ್ಯದಲ್ಲಿ ಪಕ್ಷೇತರ  ಅಭ್ಯರ್ಥಿಯಾಗಿ 2019 ರ ಲೋಕಸಭಾ ಚುನಾವಣೆಯಲ್ಲಿ  ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್ ಅವರ ಫಲಿತಾಂಶ ಹರಪನಹಳ್ಳಿ ತಾಲೂಕಿನಲ್ಲಿ ಬರಲಿದೆ ಎಂದು, ಅವರ ಅಪಾರ ಅಭಿಮಾನಿಗಳು ಮಂಡ್ಯದಲ್ಲಿ ಸುಮಲತಾ ಹರಪನಹಳ್ಳಿಯಲ್ಲಿ ಎಂ ಪಿ ಲತಾ ಎಂದು ಮೆರವಣಿಗೆಯುದ್ದಕ್ಕೂ ಘೋಷಣೆ ಕೂಗುತ್ತಾ  ಸಾಗಿದರು ಈ ಹಿಂದೆ 1994 ರಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಿ ನಾರಯಣದಾಸ್ ರವರು ವಿಜಯಶಾಲಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ನಂತರ ಸುದ್ದಿಗಾರುಂದಿಗೆ ಮಾತನಾಡಿದ ಅವರು ನನ್ನ ಕಾರ್ಯಕರ್ತರಿಗೆ ನಾನು ಹೇಳಿದ್ದೇನೆ ಯಾವ ಪಕ್ಷದವರಿಗೂ ಬೈಯಬೇಡಿ ಯಾರನ್ನು ದೂರಬೇಡಿ ಯಾರಿಗೂ ಧಿಕ್ಕಾರವನ್ನು ಕೂಗಬೇಡಿ ನಮ್ಮನ್ನು ನೀವು ಸ್ವೀಕರಿಸಿದ್ದೆ ಆದರೆ ನಿಮ್ಮ ಮತಗಳನ್ನು ನಮಗೆ ನೀಡಿ ಜಯಶೀಲರನ್ನಾಗಿ ಮಾಡಲು ಸಹಕರಿಸಿ ಎಂದು ತಮ್ಮ ಅಸಂಖ್ಯಾತ ಅಭಿಮಾನಿಗಳಲ್ಲಿ ಕೋರಿಕೊಂಡರು .

 

ನಾನು ಕಳೆದ ನಾಲ್ಕುವರೆ ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಸಂಘಟಿಸಿದ್ದೇನೆ ಆದರೆ ಪಕ್ಷವು ನನಗೆ ಕಾಂಗ್ರೆಸ್ ಟಿಕೆಟ್ ಅನ್ನು ನೀಡಲು ನಿರಾಕರಿಸಿ ತಿರಸ್ಕರಿಸಿದೆ ಇದರಿಂದ ನನಗೆ ಸಾಕಷ್ಟು ನೋವು ಉಂಟಾಗಿದೆ ಹಾಗಾಗಿ ನಾನು ಬಂಡಾಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ವತಂತ್ರ ವಾಗಿ ಕಣಕ್ಕೆ ಇಳಿಯುತ್ತಿದ್ದೇನೆ ಜನರು ನನಗೆ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಇದೆ .

ಎಂ ಪಿ ಲತಾ ಮಲ್ಲಿಕಾರ್ಜುನ

1995ರ ವಿಧಾನಸಭಾ ಚುನಾವಣೆಯಿಂದ ಪ್ರಸ್ತುತ ವಿಧಾನಸಭಾ ಚುನಾವಣೆವರೆಗೂ ಯಾವುದೇ ರಾಜಕೀಯ ಕಾರ್ಯಕ್ರಮಗಳಿಗಾಗಲಿ ನಾಮಪತ್ರ ಸಲ್ಲಿಕೆಗಾಗಲಿ ಇಷ್ಟೊಂದು ಜನರು ಹರಪನಹಳ್ಳಿಯಲ್ಲಿ ಸೇರಿದ ಉದಾಹರಣೆಗಳು ಯಾವತ್ತೂ ಇಲ್ಲ ಆದರೆ ಇಷ್ಟೊಂದು ಜನರು ಸೇರಲು ಕಾರಣವಾಗಿರುವುದು ಎಂಪಿ ಲತಾ ಮಲ್ಲಿಕಾರ್ಜುನ್ ರವರು ತಾಲೂಕಿನ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಮನೆ ಮನೆಗಳಲ್ಲೂ ಪಕ್ಷ ಸಂಘಟನೆಯನ್ನು ಮಾಡಿರುವುದೇ ಮನೆಮಾತಾಗಿದ್ದುದೆ ಇದಕ್ಕೆ ಪ್ರಮುಖ ಕಾರಣವಾಗಿದೆ .

ಪಿ.ಜಯಲಕ್ಷ್ಮೀ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ .

 

ಈ ಸಂದರ್ಭದಲ್ಲಿ ಎಚ್ ಎಮ್ ಮಲ್ಲಿಕಾರ್ಜುನಯ್ಯ, ಗೌತಮ್ ಪ್ರಭು ,ಬಿಕೆ ಪ್ರಕಾಶ್ ,ಚಂದ್ರ ಗೌಡ ವಕೀಲರು, ಎಎಂ ವಿಶ್ವನಾಥ್ ,ಎಂ.ವಿ ಅಂಜಿನಪ್ಪ ,ಲಾಠಿ ದಾದಾಪೀರ್, ಗೊಂಗಡಿ ನಾಗರಾಜ್,ಕೃಷ್ಣಕಾಂತ್ ,ವಸಂತಪ್ಪ,ಚಿಕ್ಕೇರಿ ಬಸಪ್ಪ ,ಎಲ್ ಮಂಜನಾಯ್ಕ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಜಯಲಕ್ಷ್ಮಿ,ಕವಿತಾಸುರೇಶ್,ಉಮಾಶಂಕರ್,ಸುಮಜಗದೀಶ್ , ನೇತ್ರಾವತಿ, ಲಕ್ಷ್ಮೀ, ವನಜಾಕ್ಷಿ, ರೇಣುಕಮ್ಮ, ಹೇಮಾ,ಸಹನಾ ಗೊಂಗಡಿ, ಗೀತಾ, ರೇಣುಕಾ, ಭಾಗ್ಯಮ್ಮ,ಅನುಷ, ಕಂಚಿಕೇರಿ ಕೆಂಚಪ್ಪ, ನಿಟ್ಟೂರು ಸೋಮಲಿಂಗಪ್ಪ, ಉದಯಶಂಕರ್, ನಿಟ್ಟೂರು ಮಲ್ಲಿಕಾರ್ಜುನ,ಅಗ್ರಹಾರ ರವಿರಾಜ್ ,ಅಶೋಕ್ , ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಿತ್ತೂರು ಓಬಣ್ಣ, ಮಹಿಳಾ ಕಾರ್ಯಕರ್ತರು, ಮುಖಂಡರು , ಸೇರಿದಂತೆ ಮುಂತಾದವರು ಹಾಜರಿದ್ದರು.

 

 

 

Leave a Reply

Your email address will not be published. Required fields are marked *