Vijayanagara Express

Kannada News Portal

ಕತ್ತಲಾದರೂ ಮತದಾನ ಮಾಡಲು ಸಾಲಿನಲ್ಲಿ ನಿಂತು ಕಾದ ಮತದಾರರು

1 min read

ಕತ್ತಲಾದರೂ ಮತದಾನ ಮಾಡಲು ಸಾಲಿನಲ್ಲಿ ನಿಂತು ಕಾದ ಮತದಾರರು

 

 

ಹರಪನಹಳ್ಳಿ : ಮೇ – 10 , ತಾಲೂಕಿನಲ್ಲಿ ಬಹುತೇಕವಾಗಿ ಬೆಳಿಗ್ಗಿನಿಂದಲೇ ಮತದಾನ ಬಿರುಸಿನಿಂದ ನಡೆದಿದ್ದರೂ 12 ರಿಂದ 3 ಗಂಟೆವರೆಗೆ ಅತಿ ಹೆಚ್ಚು ಬಿಸಿಲಿನ ತಾಪಮಾನದಿಂದಾಗಿ ಮತದಾನದ ಪ್ರಮಾಣದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿತು ನಂತರ 3:00 ಗಂಟೆಯಿಂದ ಚುರುಕುಗೊಂಡ ಮತದಾನ 6:00 ಗಂಟೆಯಾದರೂ ಜನರು ಮತಗಟ್ಟೆಗೆ ಬರುತ್ತಲೇ ಇದ್ದರು 6:00 ಗಂಟೆಯೊಳಗಾಗಿ ಮತದಾನ ಮಾಡಲು ಮತಗಟ್ಟೆಯ ಕಾಂಪೌಂಡ್ ಒಳಗೆ ಹಾಜರು ಇದ್ದ ಪ್ರತಿಯೊಬ್ಬರಿಗೂ ಮತದಾನದ ಅವಕಾಶವನ್ನು ಮಾಡಿಕೊಡುವ ನಿಯಮದಿಂದಾಗಿ ಸಂಜೆ 6 ಗಂಟೆಗೆ ಮತಗಟ್ಟೆಗಳ ಕಾಂಪೌಂಡ್ ಗಳಿಗೆ ಬೀಗವನ್ನು ಹಾಕಲಾಯಿತು ನಂತರ ಬಂದ ಮತದಾರರನ್ನು ಒಳಗೆ ಬಿಡಲಾಗಲಿಲ್ಲ ಸಂಜೆಯ ವೇಳೆ ಕತ್ತಲಾದರೂ ಜನರು ಕಾಂಪೌಂಡಿನ ಒಳಗಡೆ ಸರತಿಯ ಸಾಲಿನಲ್ಲಿ ನಿಂತು ಮತದಾನ ಮಾಡಲು ನಿಂತಿದ್ದುದು ಕಂಡುಬಂದಿತು ಗಂಟೆ ಗಟ್ಟಲೆ ಮತದಾರರು ನಿಂತು ನಿಂತು ಸುಸ್ತಾಗಿ ನಿಂತಲ್ಲಿಯೇ ಕುಳಿತುಕೊಂಡ ದೃಶ್ಯ ಮತಗಟ್ಟೆಗಳ ಹೊರಗಡೆ ಕಂಡು ಬಂದಿತು ವಿಶೇಷವಾಗಿ ಹರಪನಹಳ್ಳಿ ಪಟ್ಟಣದ ಪುರಸಭೆ ಕಾರ್ಯಾಲಯ ಮತಗಟ್ಟೆ ಎಂಟನೇ ವಾರ್ಡಿನಲ್ಲಿರುವ ವಾಲ್ಮೀಕಿ ನಗರದ ಮತಗಟ್ಟೆ, ಮೇಗಳ ಉಪ್ಪರಗಿರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ, ಮೇಘಳಪೇಟೆ ಸರಕಾರಿ ಶಾಲೆಯ ಮತಗಟ್ಟೆ ಸೇರಿದಂತೆ ಹಾಗೂ ತಾಲೂಕಿನ ವಿವಿಧಡೆ ಇದೆ ಪರಿಸ್ಥಿತಿಯು ಕಂಡುಬಂದಿತು .

ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಂತೆ ಬಹುತೇಕ ಶಾಂತಿಯುತವಾದ ಮತದಾನ ಯಶಸ್ವಿಯಾಗಿ ನಡೆದಿದೆ ಯಶಸ್ವಿಗೆ ಸಹಕಾರ ನೀಡಿದ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಮತದಾನಕ್ಕೆ ವಿವರಿಸಿರುವ ಎಲ್ಲ ಸಿಬ್ಬಂದಿಗೂ ಅಭಿನಂದನೆಯನ್ನು ಸಲ್ಲಿಸಿ ಧನ್ಯವಾದಗಳನ್ನು ತಾಲೂಕು ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ .

ತಾಲೂಕಿನಲ್ಲಿ ಒಟ್ಟು ಶೇಕಡ 78 ರಷ್ಟು ಮತದಾನವಾಗಿದೆ ಎಂದು ತಿಳಿದು ಬಂದಿದೆ

Leave a Reply

Your email address will not be published. Required fields are marked *