Vijayanagara Express

Kannada News Portal

ನೂತನ ಶಾಸಕಿ ಎಂಪಿ ಲತಾ ಮಲ್ಲಿಕಾರ್ಜುನ್ ರವರ ಗೆಲುವಿಗೆ ಎಂಪಿ ವೀಣಾ ಮಹಾಂತೇಶ್ ರವರಿಂದ ಕೇಕ್ ಕಟ್ ಮಾಡುವ ಮೂಲಕ ವಿಜಯೋತ್ಸವ

1 min read

ನೂತನ ಶಾಸಕಿ ಎಂಪಿ ಲತಾ ಮಲ್ಲಿಕಾರ್ಜುನ್ ರವರ ಗೆಲುವಿಗೆ ಎಂಪಿ ವೀಣಾ ಮಹಾಂತೇಶ್ ರವರಿಂದ ಕೇಕ್ ಕಟ್ ಮಾಡುವ ಮೂಲಕ ವಿಜಯೋತ್ಸವ

 

ಹರಪನಹಳ್ಳಿ: ಮೇ -14, ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾಗಿ ಆಯ್ಕೆಯಾಗಿರುವ ಎಂ ಪಿ ಲತಾ ಮಲ್ಲಿಕಾರ್ಜುನ ರವರ ಗೆಲುವಿಗೆ ಅವರ ಸಹೋದರಿ ಎಂ ಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ ನ ಅಧ್ಯಕ್ಷರಾದ ಎಂ ಪಿ ವೀಣಾ ಮಹಾಂತೇಶರವರು ತಮ್ಮ ಜನ ಸಂಪರ್ಕ ಕಚೇರಿಯಲ್ಲಿ ಅವರ ಅಭಿಮಾನಿಗಳ ಕಾರ್ಯಕರ್ತರ ಜೊತೆಗೂಡಿ ಕೇಕ್ ಕಟ್ ಮಾಡುವ ಮೂಲಕ ವಿಜಯೋತ್ಸವವನ್ನು ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು.

 

ಈ ವೇಳೆ ಮಾತನಾಡಿದ ಎಂ ಪಿ ವೀಣಾ ಮಾಂತೇಶ್ ರವರು ನಮ್ಮ ಕುಟುಂಬವು ಮೂರನೇ ತಲೆಮಾರಿನ ರಾಜಕಾರಣವನ್ನು ಮಾಡಿಕೊಂಡು ಈ ನಾಡಿಗಾಗಿ ಸೇವೆಯನ್ನು ಮಾಡುತ್ತಾ ಬಂದಿದೆ ನಾವು ಕೂಡ ತಾಲೂಕಿನ ಜನರ ಕಷ್ಟ ಸುಖದಲ್ಲಿ ಭಾಗಿಯಾಗಿದ್ದೇವೆ ನಮ್ಮ ಸಹೋದರ ಎಂಪಿ ರವೀಂದ್ರ ಅವರು ಕೂಡ ಈ ತಾಲೂಕಿನಲ್ಲಿ ಶಾಸಕರಾಗಿ ಉತ್ತಮವಾದಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಈಗ ನನ್ನ ಸಹೋದರಿ ಆದ ಎಂ ಪಿ ಲತಾ ಮಲ್ಲಿಕಾರ್ಜುನ್ ರವರು ಸಹ ಶಾಸಕರಾಗಿ ಆಯ್ಕೆಯಾಗಿದ್ದಾರೆ ನಮ್ಮ ಕುಟುಂಬದ ಮೇಲೆ ಗೌರವ ಇಟ್ಟು ಪಕ್ಷೇತರವಾಗಿ ಸ್ಪರ್ಧಿಸಿದರೂ ಸಹ ಹೆಣ್ಣುಮಕ್ಕಳು ಎಂಬ ಅನುಕಂಪದಿಂದಲೂ ಸಹ ನಮಗೆ ಅತಿ ಹೆಚ್ಚು ಮತಗಳನ್ನು ಹಾಕಿ ಅತ್ಯುನ್ನತ ವಾದಂತ ಜಯವನ್ನು ಕೊಡುವಲ್ಲಿ ಈ ತಾಲೂಕಿನ ಜನರು ಪಾತ್ರರಾಗಿದ್ದೀರಿ ನಿಮ್ಮೆಲ್ಲರಿಗೂ ಅಭಿನಂದನೆಗಳನ್ನು ತಿಳಿಸಲು ಬಯಸುತ್ತೇನೆ ಎಂದರು .

 

 

ನಾಲ್ಕುವರೆ ವರ್ಷಗಳ ಕಾಲ ನಮ್ಮ ಟ್ರಸ್ಟ್ ನ ಜೊತೆಯಲ್ಲಿ ಇದ್ದುಕೊಂಡು ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ಸಹಕಾರ ನೀಡಿದ ನಮ್ಮೆಲ್ಲ ಮಹಿಳಾ ಕಾರ್ಯಕರ್ತರನ್ನು ಕರೆದು ಪ್ರತಿ ಗ್ರಾಮ ಗ್ರಾಮಗಳಲ್ಲಿ ಬೀದಿ ಬೀದಿಗಳಲ್ಲಿ ಪಕ್ಷೇತರ ಗುರುತಾದ ವ್ಯಾನಿಟಿ ಬ್ಯಾಗ್ ಗುರುತಿನ ಪರಿಚಯವನ್ನು ಮಾಡುತ್ತಾ ಸಾಕಷ್ಟು ಶ್ರಮಿಸಿದ್ದೀರೋ ಅವರೆಲ್ಲರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಈ ರೀತಿಯಾದಂತ ಅವರ ಪರಿಶ್ರಮದಿಂದಲೇ ವಿಜಯ ಆಗಿದೆ ಎಂದು ಹೇಳಿದರು ಅಲ್ಲದೆ ಕರೋನಾದ ಸಂದರ್ಭದಲ್ಲಿ ತಾಲೂಕಿನಾದ್ಯಂತ ಆಹಾರ ಕಿಟ್ಟುಗಳನ್ನು ವೈದ್ಯಕೀಯ ಕೆಲವು ಔಷಧಿಗಳನ್ನು ನಾವು ಜನರಿಗೆ ತಲುಪಿಸಲು ಸಾಧ್ಯವಾದಷ್ಟು ಪ್ರಯತ್ನಪಟ್ಟಿದ್ದೆವು. ಅದರ ಫಲವಾಗಿ ಜನರು ಇಂದು ನಮ್ಮ ಸೇವೆ ಹಾಗೂ ನಮ್ಮ ಕುಟುಂಬದ ಮೇಲೆ ಗೌರವವನ್ನು ಇಟ್ಟು ನಮಗೆ ಮತಗಳನ್ನು ಚಲಾಯಿಸಿ ಗೆಲ್ಲಿಸಿದ್ದಾರೆ ಎಂದರು .

 

ಮಹಿಳಾ ಮತದಾರರು ಲತಾ ಮಲ್ಲಿಕಾರ್ಜುನ ರವರಿಗೆ  ಹೆಚ್ಚಿನ ಸಂಖ್ಯೆಯಲ್ಲಿ ಮತಹಾಕಿ ಗೆಲ್ಲಿಸಿದ್ದಾರೆ ಹಾಗಾಗಿ  ಕೆಲವು ಮಹಿಳೆಯರು  ಅಭಿಪ್ರಾಯ ಹಂಚಿಕೊಂಡರು.

ಈ ಸಂದರ್ಭದಲ್ಲಿ ಎಂ ಪಿ ವೀಣಾ ಮಹಾಂತೇಶ ರವರ ಅಭಿಮಾನಿಗಳು ಕಾರ್ಯಕರ್ತರು ನಾಗರೀಕರು ಹಾಜರಿದ್ದರು.

Leave a Reply

Your email address will not be published. Required fields are marked *