Vijayanagara Express

Kannada News Portal

ಈ ಗೆಲುವು ನನ್ನ ಗೆಲುವಲ್ಲ, ಜನರ ಗೆಲುವು – ಎಂಪಿ ಲತಾ ಮಲ್ಲಿಕಾರ್ಜುನ್

1 min read

ಈ ಗೆಲುವು ನನ್ನ ಗೆಲುವಲ್ಲ, ಜನರ ಗೆಲುವು – ಎಂಪಿ ಲತಾ ಮಲ್ಲಿಕಾರ್ಜುನ್

 

ಹರಪನಹಳ್ಳಿ: ಮೇ – 25 ,ಈ ಗೆಲುವು ನನ್ನದಲ್ಲ ಜನರ ಗೆಲುವು ಆಗಿದೆ ಎಂದು ನೂತನ ಶಾಸಕಿ ಎಂಪಿ ಲತಾ ಮಲ್ಲಿಕಾರ್ಜುನ್ ರವರು ಹೇಳಿದರು .

ತಾಲೂಕು ಪಂಚಾಯಿತಿಯ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗೆಲುವಿನ ಸಂಭ್ರಮದ ಹರ್ಷದಲ್ಲಿರುವ ತಾವು ತಾಲೂಕಿನ ಜನರಿಗೆ ಏನನ್ನು ಹೇಳುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಈ ಗೆಲುವಿನ ಹರ್ಷದಲ್ಲಿ ನಾನು ಇಲ್ಲ ತಾಲೂಕಿನ ಜನರು ಇದ್ದಾರೆ ಈ ಗೆಲುವು ನನ್ನ ಗೆಲುವಲ್ಲ ತಾಲೂಕಿನ ಜನರ ಗೆಲುವು ಆಗಿದೆ ಎಂದು ಹೇಳಿದರು.
ಕ್ಷೇತ್ರದಲ್ಲಿ ಚುನಾವಣೆಯ ಸಂದರ್ಭದಲ್ಲಿ ಹಣಬಲ ಜಾತಿಬಲ ತೋಳ್ಬಲ ಅವುಗಳು ಹರಿದಾಡಿದ್ದವು ಅವುಗಳೆಲ್ಲವನ್ನು ಬದಿಗಿಟ್ಟು ಕ್ಷೇತ್ರದ ಮತದಾರರು ತಮ್ಮನ್ನು ಗೆಲ್ಲಿಸಿದ್ದಾರೆ ಹಾಗಾದರೆ ಇಲ್ಲಿ ಯಾವುದು ಗೆದ್ದಿದೆ ಎಂದು ಹೇಳುತ್ತೀರಿ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಹಣಬಲ ಜಾತಿ ಬಲ ನಮ್ಮ ತಾಲೂಕಿನಲ್ಲಿ ಯಾವುದೂ ಕೆಲಸ ಮಾಡಿಲ್ಲ ಇಲ್ಲಿ ಪ್ರೀತಿ ಅಭಿಮಾನ ವಿಶ್ವಾಸ ಸ್ವಾಭಿಮಾನ ಗೆದ್ದಿದೆ ಎಂದು ಹೇಳಿದರು.
ತಾಲೂಕಿನಲ್ಲಿ ಸಾಕಷ್ಟು ಸವಾಲುಗಳಿವೆ ಯಾವುದಕ್ಕೆ ತಮ್ಮ ಮೊದಲ ಆದ್ಯತೆ ನೀಡುವಿರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಎಲ್ಲಾ ತಾಲೂಕುಗಳಲ್ಲಿ ಸಾಕಷ್ಟು ಸಮಸ್ಯೆಗಳು ಇರುವುದು ಸಹಜ ಹಾಗಾಗಿ ನಮ್ಮ ತಾಲೂಕಿನಲ್ಲೂ ಸಹ ಅನೇಕ ಸಮಸ್ಯೆಗಳು ಇವೆ ತಾಲೂಕಿನಲ್ಲಿ ನೀರಾವರಿ ವ್ಯವಸ್ಥೆ ರೈತರ ಸಮಸ್ಯೆಗಳನ್ನು ಇನ್ನು ಅನೇಕ ಸಮಸ್ಯೆಗಳು ಇವೆ ಮೊಟ್ಟಮೊದಲನೆಯದಾಗಿ ನಾನು ಹರಪನಹಳ್ಳಿ ಪಟ್ಟಣದ ಸ್ವಚ್ಛತೆ ಬಗ್ಗೆ ಹೆಚ್ಚು ಗಮನಹರಿಸುತ್ತೇನೆ ಮೊದಲನೇ ಆದ್ಯತೆ ಅದಕ್ಕೆ ನೀಡುತ್ತೇನೆ ಎಂದರು.

ತಾವು ಸಚಿವ ಆಕಾಂಕ್ಷಿಯಾಗಿದ್ದೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಖಂಡಿತ ಇಲ್ಲ ಎಂದು ಹೇಳಿದರು ಉದ್ಯೋಗವನ್ನು ಹರಸಿ ತಾಲೂಕಿನ ಜನರು ಬೇರೆ ಬೇರೆ ದೂರದ ನಗರಗಳ ಕಡೆಗೆ ಹೊಲಸೆ ಹೋಗುತ್ತಾರೆ ಇದಕ್ಕೆ ತಾವು ಯಾವ ರೀತಿ ಕ್ರಮಗಳನ್ನು ಕೈಗೊಳ್ಳುತ್ತಿರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇಲ್ಲಿ ಕೈಗಾರಿಕೆಗಳು ಯಾವುವು ಇರುವುದಿಲ್ಲ ಹಾಗಾಗಿ ಮುಂದಿನ ದಿನಮಾನಗಳಲ್ಲಿ ವಿವಿಧ ರೀತಿಯ ಉದ್ಯೋಗಗಳ ತರಬೇತಿಯನ್ನು ಮಹಿಳೆಯರಿಗೂ ಸೇರಿ ಯುವಕ ಯುವತಿಯರಿಗೆ ಕೊಡಿಸಲು ತಯಾರಿದ್ದೇನೆ ಸೋಲಾರ್ ಪಾರ್ಕ್ ಅನ್ನುತೆರೆಯುವುದು
ನನ್ನ ಸಹೋದರ ಮಾಜಿ ಶಾಸಕ ದಿವಂಗತ ಎಂ ಪಿ ರವೀಂದ್ರ ರವರ ಕನಸಾಗಿತ್ತು ಅದನ್ನು ಮಾಡಿದರೆ ಸುಮಾರು 5000 ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ ಹಾಗಾಗಿ ಅದನ್ನು ಮಾಡಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು .

Leave a Reply

Your email address will not be published. Required fields are marked *