Vijayanagara Express

Kannada News Portal

ನಮ್ಮ ಊರುಗಳನ್ನು ಇಂದಿಗೂ ಜಾತಿಯ ಹೆಸರಿನಲ್ಲಿ ಕರೆಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ – ಅಗ್ರಹಾರ ಅಶೋಕ್ 

1 min read

 

ನಮ್ಮ ಊರುಗಳನ್ನು ಜಾತಿಯ ಹೆಸರಿನಲ್ಲಿ ಕರೆಯುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ – ಅಗ್ರಹಾರ ಅಶೋಕ್

 

‌ಹರಪನಹಳ್ಳಿ : ಆ – 31, ನಮ್ಮ ಊರುಗಳನ್ನು ಜಾತಿಯ ಹೆಸರಿನಲ್ಲಿ ದುರದೃಷ್ಟಕರ ಸಂಗತಿಯಾಗಿದೆ  ಎಂದು  ಕೊರಚ ಸಮಾಜದ ಮುಖಂಡ ಅಗ್ರಹಾರ ಅಶೋಕ್ ಹೇಳಿದರು.

ಇಂದು  ಪಟ್ಟಣದ ಮಿನಿ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ನಾರಾಯಣ ಗುರು ಜಯಂತಿ ಹಾಗೂ ನುಲಿಯ ಚಂದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು  ಸ್ವತಂತ್ರ  ಬಂದು 77 ವರ್ಷಗಳು ಕಳೆದಿದ್ದರೂ ಇಂದಿಗೂ ನಾವು ಎಲ್ಲಿ ಬದುಕುತ್ತಿದ್ದೇವೆ ಎಂಬ ಅನುಮಾನ ಕಾಡುತ್ತಿದೆ ಸಾಕಷ್ಟು ಜನಸಂಖ್ಯೆಯನ್ನು ಹೊಂದಿ ದೊಡ್ಡ ಗ್ರಾಮವಿದ್ದರೂ ನಮ್ಮ ಹಟ್ಟಿಗಳನ್ನು ಇನ್ನೂ ಸ್ವತಂತ್ರ ಹೆಸರಿನಿಂದಾಗಲಿ ಕಂದಾಯ ಗ್ರಾಮವೆಂದಾಗಲಿ ಸರ್ಕಾರವು ಗುರುತಿಸಿಲ್ಲ ಅಕ್ಕಪಕ್ಕದ ಸಣ್ಣ ಹಳ್ಳಿಗಳ ಹೆಸರಿನ ಮುಂದೆ ನಮ್ಮ ಸಮುದಾಯದ ಹೆಸರನ್ನು ಇಟ್ಟು ಹಟ್ಟಿಗಳನ್ನು ಗುರುತಿಸಲಾಗುತ್ತದೆ ಇದು ದುರದೃಷ್ಟಕರ ಸಂಗತಿ ಆಗಿದೆ ಎಂದು ಕಳವಳ ವ್ಯಕ್ತಪಡಿಸಿದರಲ್ಲದೆ ಸಮಾಜವು ಇಂದಿಗೂ ಜಾತಿಯ ಜಾಡ್ಯತೆಯಲ್ಲಿ ಮುಳುಗಿ ಹೋಗಿದೆ.

ಸರ್ಕಾರಗಳಿಗೆ ಸಣ್ಣಪುಟ್ಟ ಸಮಾಜಗಳ ಅವಶ್ಯಕತೆ ಇಲ್ಲವಾಗಿದೆ ಕೇವಲ ದೊಡ್ಡ ದೊಡ್ಡ ಸಮಾಜಗಳನ್ನು ರಾಜಕೀಯ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಅಂತಹ ಸಮಾಜಗಳಿಗೆ ಮಾತ್ರ ಹೆಚ್ಚು ಹೆಚ್ಚು ಮಾನ್ಯತೆಯನ್ನ ನೀಡುತ್ತಿವೆ ಆದರೆ ನಮ್ಮಂತ ಸಣ್ಣಪುಟ್ಟ ಸಮಾಜಗಳನ್ನು ಸರ್ಕಾರ ಗುರುತಿಸುವಲ್ಲಿ ವಿಫಲವಾಗಿದೆ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಶಾಸಕರ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ತಿಳಿಸಿದರು .

ಆರ್ಯ ಈಡಿಗ ಸಮುದಾಯದ ಮುಖಂಡರಾದ ತೆಲಿಗಿ ಗಂಗಾಧರ ಮಾತನಾಡಿ ಎಲ್ಲಾ  ದಾರ್ಶನಿಕರ ಚಿಂತನೆಗಳ ಉದ್ದೇಶ ಒಳಿತನ್ನ ಬಯಸುವುದೇ ಆಗಿದೆ ಎಂದು ಹೇಳಿದರಲ್ಲದೆ ಇಂದು ಆಚರಿಸುವ ನುಲಿಯ ಚಂದಯ್ಯ ಸಮಾಜದ ಕೊರವ ಕೊರಚ ಹಾಗೂ ನಾರಾಯಣ ಗುರು ಜಯಂತಿ ಈ ಸಮುದಾಯಗಳು ಈಚಲು ಮರದ ರೆಂಬೆ ಕೊಂಬೆಗಳಿದಂತೆ ಈಚಲು ಮರವನ್ನು ಒಂದು ಸಮುದಾಯ ಬಳಸಿ ಒಂದು ಉತ್ಪನ್ನವನ್ನು ಮಾಡಿದರೆ ಮತ್ತೊಂದು ಸಮುದಾಯವು ಇನ್ನೊಂದು ಉತ್ಪನ್ನಗಳ ವೃತ್ತಿ ಕಸಬನ್ನು ಮಾಡಿದರೆ ಅದರ ಗರಿಯಿಂದ ಕೊರವ ಸಮಾಜದವರು ಪುಟ್ಟಿ ಕಸಪರಿಕೆಯನ್ನು ತಯಾರಿಸುವರು ನಾರಿನಿಂದ ಕೊರಚ ಸಮಾಜದವರು ಅಗ್ಗ ಮುಂತಾದ ಉತ್ಪನ್ನಗಳನ್ನು ಮಾಡಿ ವೃತ್ತಿ ಕಸುಬನ್ನು ನಡೆಸಿದ್ದರು ಇದರಿಂದ ಗೊತ್ತಾಗುತ್ತದೆ ನಾವೆಲ್ಲರೂ ಒಂದೇ ಮರದ ರೆಂಬೆ ಕೊಂಬೆಗಳಿದ್ದತೆ ಒಂದೇ ಮರದ ಬೇರೆ ಬೇರೆ ಉತ್ಪನ್ನಗಳ ತಯಾರಿಕೆಯಿಂದಾಗಿ ಭಿನ್ನ-ಭಿನ್ನವಾದಂತ ಸಮುದಾಯಗಳಾಗಿ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದರು.

ಈಡಿಗರ ಸಮಾಜದ ತಾಲೂಕು ಕಾರ್ಯದರ್ಶಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಓಬಿಸಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಂಚಿಕೇರಿ ಈಡಿಗರ ವೆಂಕಟೇಶ್ ಮಾತನಾಡಿ ಸಮಾಜಕ್ಕೆ ಆರ್ಯ ಈಡಿಗ ಸಮಾಜದ ಕೊಡುಗೆ ಅಪಾರವಾಗಿದೆ ರಾಜ್ಯದಲ್ಲಿ ರಾಜಕೀಯ ಕ್ಷೇತ್ರಕ್ಕೆ ಬಂದರೆ ಬಂಗಾರಪ್ಪ ,ವಿಜ್ಞಾನ ಕ್ಷೇತ್ರಕ್ಕೆ ಬಂದರೆ (ಚಂದ್ರಯಾನ 3 ಉಡಾವಣೆಯಲ್ಲಿ) ಡಾ. ಸೋಮನಾಥ್ ಕಲಾಕ್ಷೇತ್ರಕ್ಕೆ ಬಂದರೆ ಡಾಕ್ಟರ್ ರಾಜಕುಮಾರ್ ಹಾಗೂ ಅವರ ಕುಟುಂಬ ಸಾಮಾಜಿಕ ಹೋರಾಟಕ್ಕೆ ಬಂದಾಗ ನಾರಾಯಣ ಗುರು ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಮಾಜದ ಕೊಡುಗೆ ಅನನ್ಯವಾಗಿದೆ ಆದರೆ ನಮ್ಮನ್ನು ಸರ್ಕಾರಗಳು ಗುರುತಿಸಲು ಹಿಂದೇಟು ಹಾಕುತ್ತಿರುವುದು ಸಮುದಾಯದ ದೌರ್ಭಾಗ್ಯವಾಗಿದೆ ಎಂದು ಹೇಳಿದರು .

ಅಖಿಲ ಕರ್ನಾಟಕ ಕೊರಚ ಮಹಾಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಮಾಚಿಹಳ್ಳಿ ನಾಗರಾಜ್ , ಬಂಡ್ರಿ ಕಾಳೇಶಪ್ಪ ಅಖಿಲ ಕರ್ನಾಟಕ ಕೊರವರ ಸಂಘದ ರಾಜ್ಯ ನಿರ್ದೇಶಕ ರಾಜಕುಮಾರ್ ಎ, ಜಗದೀಶ್ ಗೌಡ್ರು ಮಾತನಾಡಿದರು.
ಈ ವೇಳೆ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಗಿರೀಶ್ ಬಾಬು, ತಾಲೂಕು ಕಚೇರಿ ಸಿಬ್ಬಂದಿ ವಸಂತ್ ಕುಮಾರ್, ಕೊರವ ಸಮಾಜದ ತಾಲೂಕು ಅಧ್ಯಕ್ಷ ಕೆ .ದುರುಗಪ್ಪ,ಈ ,ಶಶಿಕಲಾ, ಶೈಲಜಾ, ಜೀವಪ್ಪ, ಕೆ ಪದ್ಮನಾಭ, ದೇವದಾಸ್,ಶರತ್,ತೊಗರಿಕಟ್ಟಿ , ಗುರುಶಾಂತಪ್ಪ,ಬಿ ವಿಜಯಕುಮಾರ್, ನಾಗೇಂದ್ರಪ್ಪ, ಸಿಂಗ್ರಿಹಳ್ಳಿ ದಿವಾಕರ್, ಎಲ್ಲಾಪುರದ ಕೆಂಚಪ್ಪ,ಹಳ್ಳಳ್ಳಿ ಹನುಮಂತಪ್ಪ,ಪಾವನಪುರದ ಹನುಮಂತಪ್ಪ, ಗಜಲಿ ಪುಲಿಕೇಶಿ ಚಿತ್ರಕಲಾವಿದ, ಮತ್ತೂರು ಮಾರುತಿ, ಕೆ ಪ್ರಕಾಶ್,ಇಟ್ಟಿಗುಡಿ ವಸಂತ್,ವಿರೇಶ್, ತೆಲಿಗಿ, ಹರಿಯಮ್ಮನಹಳ್ಳಿ ಮಾರುತಿ ನಾಗೇಂದ್ರಪ್ಪ, ಪಿ ಮಂಜುನಾಥ್,ಬಿ ಹನುಮಂತಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *