ಕೆಲಸ ಮಾಡಲು ಇಷ್ಟವಿಲ್ಲದ ಅಧಿಕಾರಿಗಳು ವರ್ಗಾವಣೆ ಗೊಂಡು ಹೋಗಬಹುದು – ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ
1 min read
ಕೆಲಸ ಮಾಡಲು ಇಷ್ಟವಿಲ್ಲದ ಅಧಿಕಾರಿಗಳು ವರ್ಗಾವಣೆ ಗೊಂಡು ಹೋಗಬಹುದು – ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ
ಹರಪನಹಳ್ಳಿ: ಸೆ – 11 , ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಲು ಇಷ್ಟವಿಲ್ಲದ ಸರ್ಕಾರಿ ಅಧಿಕಾರಿಗಳು ವರ್ಗಾವಣೆ ಗೊಂಡು ತಮಗಿಷ್ಟ ಬಂದಕಡೆ ಹೋಗಬಹುದು ಇದಕ್ಕೆ ನಮ್ಮ ಅಭ್ಯಂತರವಿಲ್ಲ ಬೇಕಿದ್ದರೆ ನಾನೇ ವರ್ಗಾವಣೆ ಮಾಡಿಸಿಕೊಂಡುತ್ತೇನೆ ಎಂದು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕಿ ಎಂ ಪಿ ಲತಾ ಮಲ್ಲಿಕಾರ್ಜುನ ರವರು ಅಧಿಕಾರಿಗಳಿಗೆ ವೇದಿಕೆಯಲ್ಲೇ ಹೇಳಿದರು.
ಪಟ್ಟಣದ ಬಾಣಗೇರಿ ( ಹಿಪ್ಪಿತೋಟ)ಯ ಸರ್ಕಾರಿ ಉರ್ದು ಶಾಲೆಯಲ್ಲಿ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹರಪನಹಳ್ಳಿ ಇವರ ಸಹಭಾಗಿತ್ವದಲ್ಲಿ ಸಸ್ಯ ಶ್ಯಾಮಲ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಸಿ ನೆಡುವುದರ ಮೂಲಕ ಉದ್ಘಾಟಿಸಿದರು.
ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು
ಕರ್ನಾಟಕ ರಾಜ್ಯ ಸರ್ಕಾರವು ಸಸ್ಯ ಶ್ಯಾಮಲ ಕಾರ್ಯಕ್ರಮದ ಮೂಲಕ 50 ಲಕ್ಷ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಆ ಕಾರಣದಿಂದಾಗಿ ನಾವು ನಮ್ಮ ತಾಲೂಕಿನಲ್ಲಿ ಸ್ಥಳಾವಕಾಶ ಇರುವ ಶಾಲೆಗಳಲ್ಲಿ ಎಷ್ಟು ಸಾಧ್ಯವೊ ಅಷ್ಟು ಸಸಿಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು ಇದೊಂದು ಅತ್ಯುತ್ತಮ ಕಾರ್ಯಕ್ರಮವಾಗಿದೆ ಶಾಲೆಗಳಿಗೆ ನಾವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಜನವರಿ ತಿಂಗಳೊಳಗೆ ಶಾಲೆಯಲ್ಲಿ ಅಡುಗೆ ಕೋಣೆ, ಊಟದ ಕೋಣೆ,ಶಾಲಾ ಕಾಂಪೌಂಡ್ ಹಾಗೂ ಸಾಧ್ಯವಾದರೆ ಉದ್ಯಾನವನ ಮಾಡಲು ತಯಾರಿ ಮಾಡಿಕೊಂಡಿದ್ದೇವೆ ಅದರ ಜೊತೆಗೆ. ಗೋಮಾಳ ಭೂಮಿಯಿರುವ ಭಾಗಗಳಲ್ಲಿ ಅಮೃತದಾರೆ ಎಂಬ ಕಾರ್ಯಕ್ರಮವನ್ನು ಯೋಜಿಸಿಕೊಂಡಿದ್ದೇವೆ ಮತ್ತು ಗ್ರಾಮಗಳಲ್ಲಿ ಪುಷ್ಕರಣಿಗಳು ಐತಿಹಾಸಿಕವಾದಂತ ಕಲ್ಯಾಣಿಗಳು ಇದ್ದರೆ ಸಾರ್ವಜನಿಕರು ಹಾಗೂ ಮಾಧ್ಯಮ ಮಿತ್ರರು ನಮ್ಮ ಗಮನಕ್ಕೆ ತಂದರೆ ಖಂಡಿತ ಅವುಗಳ ದುರಸ್ತಿಯನ್ನು ಮಾಡಿಸುತ್ತೇವೆ ಎಂದು ಹೇಳಿದರು ನಮ್ಮ ತಾಲೂಕಿನಲ್ಲಿ ಸಿಥಿಲಾವಸ್ಥೆಯಲ್ಲಿರುವ 198 ಶಾಲಾ ಕೊಠಡಿಗಳು ಇವೆ ಎಂದು ನಮ್ಮ ಗಮನಕ್ಕೆ ಬಂದಿದೆ ಇವುಗಳಿಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅನುದಾನದಲ್ಲಿ ಇಂತಹ ಶಾಲೆಗಳ ದುರಸ್ತಿ ಮಾಡಲು ಕ್ರಮ ಕೈಗೊಳ್ಳುತ್ತೇವೆ ಅಲ್ಲದೇ ಡಿಎಂಎಫ್ ಅನುದಾನದಲ್ಲಿಯೂ ಸಹ ಇವುಗಳನ್ನು ದುರಸ್ತಿ ಮಾಡಲು ಯೋಜನೆ ಹಾಕಿಕೊಂಡಿದ್ದೇವೆ ಎಂದು ತಿಳಿಸಿದರು.
ಅಲ್ಲದೆ ಸ್ಮಾರ್ಟ್ ಕ್ಲಾಸ್ ಗಳನ್ನು ಮಾಡಲು ಯೋಜಿಸಿದ್ದೇವೆ, ಕಲ್ಯಾಣ ಕರ್ನಾಟಕ ಭಾಗಕ್ಕೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅನುದಾನವು ಒಟ್ಟು 13000 ಕೋಟಿ ಬರುತ್ತದೆ ಅದರಲ್ಲಿ ನಮ್ಮ ತಾಲೂಕಿಗೆ 200 ರಿಂದ 300 ಕೋಟಿ ತರಲು ಪ್ರಯತ್ನ ಮಾಡುತ್ತೇನೆ ಯಾವ ಯಾವ ಇಲಾಖೆಗಳಿಂದ ಅನುದಾನ ಬರುತ್ತದೆಯೋ ಸಂಬಂಧ ಪಟ್ಟ ಮಂತ್ರಿಗಳಿಂದ ಸಾಧ್ಯವಾದಷ್ಟು ಹೆಚ್ಚು ಹೆಚ್ಚು ಅನುದಾನವನ್ನು ತಂದು ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು .
ವಲಯ ಅರಣ್ಯ ಅಧಿಕಾರಿಗಳಾದ ಮಲ್ಲಪ್ಪ ಮಾತನಾಡಿ
ಮಾನವನ ದೇಹದಲ್ಲಿ ಅಂಗಾಂಗಗಳು ಸರಿಯಾಗಿ ಕೆಲಸ ಮಾಡಲು ಕಾರಣ ಉತ್ತಮವಾದ ಪರಿಸರ ಹಾಗಾಗಿ ಹಿಂದಲ್ಲ ರಾಮಾಯಣ ಮಹಾಭಾರತ ಮತ್ತು ಪುರಾಣಗಳಲ್ಲಿ ಮನುಷ್ಯನ ಆಯಸ್ಸು ಒಂದು ನೂರು ವರ್ಷ 120 ವರ್ಷ 150 ವರ್ಷಗಳ ಕಾಲ ಬದುಕುತ್ತಿದ್ದರು ಎಂದು ಹೇಳಲಾಗುತ್ತದೆ ಇದಕ್ಕೆ ಕಾರಣ ಮಾಲಿನ್ಯವಲ್ಲದ ಪರಿಸರ ಆ ಕಾಲದಲ್ಲಿತ್ತು ಹಾಗಾಗಿ ಹೆಚ್ಚು ಕಾಲ ಅವರು ಬದುಕುತ್ತಿದ್ದರು ಎಲ್ಲದಕ್ಕೂ ಕಾರಣ ಪರಿಸರ ನಮ್ಮ ತಾಲೂಕಿನಲ್ಲಿ 60,000 ಎಕ್ಕರೆಯಷ್ಟು ಸಮೃದ್ಧವಾದ ಅರಣ್ಯವಿದೆ ಸ್ಥಳೀಯ ಶಾಸಕರ ಹತ್ತಿರ ಸಾರ್ವಜನಿಕರು ಎಲ್ಲಾ ಕಡೆಗಳಲ್ಲಿ ದೂರುಗಳನ್ನು ಹೇಳುತ್ತಿರುತ್ತಾರೆ ಇಂತಹ 10 ದೂರುಗಳಿದ್ದರೆ ಅವುಗಳ ಪೈಕಿ ಅರಣ್ಯ ಇಲಾಖೆಗೆ ಸಂಬಂಧಪಟ್ಟ ಕನಿಷ್ಠ ಎರಡು ಪ್ರಶ್ನೆಗಳಾದರೂ ಇರುತ್ತವೆ ಆದರೆ ನೂತನ ಶಾಸಕರಾಗಿ ಬಂದಂತ ಎಂಪಿ ಲತಾ ಮಲ್ಲಿಕಾರ್ಜುನರವರು ಇದುವರೆಗೂ ನಮಗೆ ಒಂದೇ ಒಂದು ಫೋನನ್ನು ಮಾಡಿ ಅರಣ್ಯಕ್ಕೆ ಸಂಬಂಧಪಟ್ಟಂತೆ ರೈತರಿಗೆ ತೊಂದರೆ ಮಾಡಬೇಡಿ ಎಂದು ಹೇಳಿರುವುದಿಲ್ಲ ಬದಲಾಗಿ ಉತ್ತಮವಾದಂತಹ ಅರಣ್ಯವನ್ನು ಬೆಳೆಸಿ ಎಂದು ಹೇಳಿರುವುದು ಶ್ಲಾಘನೀಯ ಎಂದು ಹೇಳಿದರು ಪರಿಸರ , ಅರಣ್ಯ ಇವುಗಳೆಲ್ಲವೂ ಸಾರ್ವಜನಿಕರ ಆಸ್ತಿಗಳಾಗಿವೆ ಕೇವಲ ಅರಣ್ಯ ಅಧಿಕಾರಿಗಳಷ್ಟೇ ಉಳಿಸಿದರೆ ಸಾಲದು ಇವುಗಳ ಬಗ್ಗೆ ಸಾರ್ವಜನಿಕರಿಗೂ ಕಾಳಜಿ ಇರಬೇಕು ಸಾರ್ವಜನಿಕರು ಅರಣ್ಯ ಇಲಾಖೆಯ ಜೊತೆಗೆ ಕೈಜೋಡಿಸಿದರೆ ಅತ್ಯುತ್ತಮವಾದ ಅರಣ್ಯವನ್ನು ಬೆಳೆಸಲು ಸಾಧ್ಯವಾಗುತ್ತದೆ ನೀರು, ಉಸಿರು, ಜೀವನ ಇವುಗಳೆಲ್ಲವನ್ನು ಪರಿಸರ ಕೊಡುತ್ತಿದೆ ನಾವೆಲ್ಲರೂ ಸೇರಿ ಪರಿಸರವನ್ನು ಬೆಳೆಸೋಣ ಬಳಸೋಣ ಉಳಿಸೋಣ ಎಂದು ಹೇಳಿದರು .
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಯು ಬಸವರಾಜಪ್ಪ, ಶಿಕ್ಷಣಾಧಿಕಾರಿಗಳಾದ ಪರಸಪ್ಪ ಪಿಡಿ ಭಜಂತ್ರಿ ಡಿಡಿಪಿಐ ಕಚೇರಿ ವಿಜಯನಗರ ಜಿಲ್ಲೆ, ಮುಖ್ಯ ಶಿಕ್ಷಕರಾದ ಕೆ ಶಿವಾನಂದಪ್ಪ , ಪುರಸಭಾ ಸದಸ್ಯರಾದ ಅಬ್ದುಲ್ ರಹಿಮಾನ್ , ಎಸ್ ಡಿ ಎಂ ಸಿ ಅಧ್ಯಕ್ಷರಾದ ಜೆ ನೂರ್ ಬಾಷಾ ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳಾದ ತೋಷನ್ ಕುಮಾರ್, , ಶಿಕ್ಷಣ ಸಂಯೋಜಕರಾದ ಗಿರಜ್ಜಿ ಮಂಜುನಾಥ್, ಶಿಕ್ಷಕರಾದ ಸಲೀಂ ಎಚ್, ಇನಾಯತುಲ್ಲಾ, ಅಸ್ಲಾಂ ಭಾಷಾ ಮಂಜ್ಯನಾಯ್ಕ್, ರಿಯಾಜ್ , ಶಾಂತನಾಯ್ಕ್ ನಿಲುವಂಜಿ ಅಶೋಕ, ಶಿಕ್ಷಕರು ಸೇರಿದಂತೆ ಮುಂತಾದವರು ಭಾಗವಹಿಸಿದ್ದರು .