ತಹಶೀಲ್ದಾರರು ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ – ಬಿಜೆಪಿ ರೈತ ಮೋರ್ಚಾದ ಕಾರ್ಯಕರ್ತರು ಆರೋಪ
1 min readತಹಶೀಲ್ದಾರರು ಕಾಂಗ್ರೆಸ್ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ – ರೈತ ಬಿಜೆಪಿ ಮೋರ್ಚಾದ ಕಾರ್ಯಕರ್ತರು ಆರೋಪ
ಹರಪನಹಳ್ಳಿ : ಸೆ – 8 , ಹರಪನಹಳ್ಳಿ ತಾಲೂಕಿನ ತಹಶೀಲ್ದಾರರಾದ ಗಿರೀಶ್ ಬಾಬು ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿ ಕೆಲಸಮಾಡುತ್ತಿದ್ದಾರೆ ಎಂದು ತಾಲೂಕು ಬಿಜೆಪಿ ರೈತ ಮೋರ್ಚಾದ ಕಾರ್ಯಕರ್ತರು ಆರೋಪ ಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ಮಿನಿವಿಧಾನಸೌಧದಲ್ಲಿ ನಡೆಯಿತು.
ಪಟ್ಟಣದ ಮಿನಿವಿಧಾನಸೌಧದಲ್ಲಿ ನೂರಾರು ಬಿಜೆಪಿ ಮೋರ್ಚಾದ ಕಾರ್ಯಕರ್ತರು ಬಿಜೆಪಿ ಕಚೇರಿಯಿಂದ ಕಾಲ್ನಡಿಗೆಯಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಬಂದು ತಹಶೀಲ್ದಾರ್ ಗಿರೀಶ್ ಬಾಬು ರವರಿಗೆ ಮನವಿಯನ್ನು ಸಲ್ಲಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದರು ಬಿಜೆಪಿಯ ಅನೇಕ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಬಗ್ಗೆ ಕುರಿತು ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತನಾಡುತ್ತಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು ಒಬ್ಬರಾದ ನಂತರ ಒಬ್ಬ ಬಿಜೆಪಿ ಕಾರ್ಯಕರ್ತರು ಹೀಗೆ ಮಾತನಾಡುವ ಸರಣಿ ಮುಂದುವರೆಯಿತು ಆಗ ತಾಶೀಲ್ದಾರರು ತಾಲೂಕು ಕಚೇರಿಯಿಂದ ಹೊರ ಬಂದು ತಮ್ಮ ವಾಹನವನ್ನೇರಿ ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮ ಇರುವುದರಿಂದ ನಾವು ಹೋಗಬೇಕು ಎಂದು ಕುಳಿತುಕೊಂಡಿದ್ದರು ಇದೇ ವೇಳೆ ಬಿಜೆಪಿ ಕಾರ್ಯಕರ್ತರು ತಹಶೀಲ್ದಾರ್ ಗಿರೀಶ್ ಬಾಬುರವರು ಕಾಂಗ್ರೆಸ್ನ ಏಜೆಂಟರಂತೆ ವರ್ತಿಸುತ್ತಿದ್ದಾರೆ ತಾಲೂಕಿನ ಜನರು ಮಳೆ ಬೆಳೆ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ ಜನರ ಪರ ರೈತರ ಪರ ನಾವು ಹೋರಾಟವನ್ನು ಮಾಡುತ್ತಿದ್ದು ಇದನ್ನು ಕಣ್ಣಾರೆ ನೋಡಿದರೂ ಮನವಿಯನ್ನು ಸ್ವೀಕರಿಸದೆ ತಾತ್ಸಾರ ಭಾವನೆ ತೋರಿ ಇದ್ದಕ್ಕಿದ್ದಂತೆ ಪಾಲಾಯನ ಮಾಡುತ್ತಿದ್ದಾರೆ ಹಾಗಾಗಿ ಅವರ ವಿರುದ್ಧ ದಿಕ್ಕಾರವನ್ನು ಕೂಗುತ್ತಿದ್ದೇವೆ ಎಂದು ಹೇಳಿದರು ತಾಹಶೀಲ್ದಾರ್ ಅವರಿಗೆ ಧಿಕ್ಕಾರವನ್ನು ಕೂಗಿದ್ದು ಹರಪನಹಳ್ಳಿ ತಾಲೂಕು ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಆಗಿರುವುದಕ್ಕೆ ಅಧಿಕಾರಿಗಳ ಬೇಜವಾಬ್ದಾರಿತನ ಕಾರಣವಾಗಿದೆ ಹಾಗೂ ಶಾಸಕರ ಇಚ್ಚಾಶಕ್ತಿಯ ಕೊರತೆ ಕಾರಣ ಎಂದು ಆರೋಪಿಸಿದ ಅವರು ಇಂತಹ ನಿರ್ಲಕ್ಷ ಅಧಿಕಾರಿಗಳನ್ನು ತಾಲೂಕಿನಲ್ಲಿ ಇಟ್ಟುಕೊಂಡಿರುವ ಪರಿಣಾಮ ಕೆಲಸ ಕಾರ್ಯಗಳನ್ನು ಮಾಡಲಾಗಿಲ್ಲ ಎಂದು ಕಿಡಿಕಾರಿದರು ಈ ವೇಳೆ ನೂರಾರು ಜನ ಬಿಜೆಪಿ ಕಾರ್ಯಕರ್ತರು ಆಕ್ರೋಶ ಭರಿತರಾಗಿ ತಾಶೀಲ್ದಾರರ ವಿರುದ್ಧ ದಿಕ್ಕಾರ ಕೂಗಿದ್ದು ಕಂಡುಬಂದಿತು.
ಈ ಸಂದರ್ಭದಲ್ಲಿ ಒಂಕಾರಗೌಡ, ಬಾಗಳಿ ಕೊಟ್ರೇಶಪ್ಪ , ಚಿಗಟೇರಿ ಉದಯಕುಮಾರ್,ಲಿಂಬ್ಯಾನಾಯ್ಕ್, ಪುರಸಭೆ ಮಾಜಿ ಅಧ್ಯಕ್ಷ ಹಾರಳ್ ಹೆಚ್ ಎಂ ಅಶೋಕ್,ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಮಂಜ್ಯನಾಯ್ಕ್, ಗಿರೀಶಪ್ಪ ಹಲುವಾಗಲು, ಶಿರಾಗನಹಳ್ಳಿ ವಿಶ್ವನಾಥ, ಶಿವಾಜಿ ನಾಯ್ಕ್, ಕಿರಣ್ ಶಾನುಭೋಗರ, ಬಾಗಳಿ ಜಗದೀಶ್, ವಿರೇಶ್ ಶೆಟ್ಟಿ,ಕಣಿವಿಹಳ್ಳಿ ಮಾರುತಿ, ನೀಲಗುಂದ ಮನೋಜ್,ಕಲ್ಲಳ್ಳಿ ಪರಸಪ್ಪ,ವಾಮಪ್ಪ ಇಟ್ಟಿಗುಡಿ,ದಾದಾಪುರ ಶಿವಾನಂದ , ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಿಂಗ್ರಿಹಳ್ಳಿ ಟಿ ನಾಗರಾಜ್,ಅರಸನಾಳು ಕೊಟ್ರೇಶ್,ರವಿನಾಯ್ಕ್, ಶೃಂಗಾರತೋಟದ ಲಿಂಗರಾಜ್ ಸೇರಿದಂತೆ ಮುಂತಾದವರು ಹಾಜರಿದ್ದರು.