Vijayanagara Express

Kannada News Portal

ಸಮಸ್ಯೆಗಳಿದ್ದರೂ ಶಾಸಕರ ಬಳಿ ಸುಳಿದಾಡದ ಗ್ರಾಮಸ್ಥರು

1 min read

 

 

ಸಮಸ್ಯೆಗಳಿದ್ದರೂ ಶಾಸಕರ ಬಳಿ ಸುಳಿದಾಡದ ಗ್ರಾಮಸ್ಥರು

ಹರಪನಹಳ್ಳಿ :ಜು-26, ಗ್ರಾಮದಲ್ಲಿ ಅನೇಕ ಸಮಸ್ಯೆಗಳಿದ್ದರೂ ಶಾಸಕರ ಬಳಿ ಗ್ರಾಮಸ್ಥರು ಸುಳಿದಾಡದ ಘಟನೆ ಮಂಗಳವಾರ ಲಕ್ಷ್ಮೀಪುರ ಗ್ರಾಮದಲ್ಲಿ ನಡೆಯಿತು.

ತಾಲೂಕಿನ ಲಕ್ಷ್ಮಿಪುರ ಗ್ರಾಮದ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಪಟ್ಟಂತೆ ಮಂಗಳವಾರ ಶಾಸಕರು ,ಶಾಸಕರ ನಡೆ ಗ್ರಾಮದ ಕಡೆ ಎನ್ನುವ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಯೋಜನೆಯಂತೆ ಶಾಸಕರು ಮಂಗಳವಾರ ಲಕ್ಷ್ಮಿಪುರ ಗ್ರಾಮಕ್ಕೆ ಭೇಟಿ ನೀಡಿದ್ದು ಆ ಊರಿನ ಬಿಜೆಪಿ ಮುಖಂಡರಾದ ಹರಪನಹಳ್ಳಿ ತಾಲೂಕಿನ ಮಾಜಿ ಶಾಸಕರೂ ಹೂವಿನ ಹಡಗಲಿ ತಾಲೂಕಿನ ಹಾಲಿ ಶಾಸಕರೂ ಆದ ಪಿಟಿ ಪರಮೇಶ್ವರ ನಾಯ್ಕ್ ರವರ ಸಹೋದರರಾದ ಪಿ ಟಿ ಶಿವಾಜಿ ನಾಯ್ಕ್ ಮತ್ತು ಗುತ್ತಿಗೆದಾರ ಕುಮಾರ್ ನಾಯ್ಕ್, ಮಂಜ್ಯನಾಯ್ಕ್ ರವರು ಊರ ಶಾಲೆಯ ಮುಂದೆ ಟೇಬಲ್ ಕುರ್ಚಿಗಳನ್ನಾಕಿ ಶಾಸಕರಿಗೆ ಕುಳಿತು ಕೊಂಡು ಜನರ ಸಮಸ್ಯೆಗಳನ್ನು ಆಲಿಸಲು ವ್ಯವಸ್ಥೆಯನ್ನು ಹಣಿಗೊಳಿಸಿದ್ದರು ಶಾಸಕರು ಬಂದು ಕುಳಿತುಕೊಂಡ ನಂತರ ಪ್ರತಿ ಗ್ರಾಮದಲ್ಲಿ ಗ್ರಾಮಸ್ಥರ ಹವಾಲುಗಳನ್ನು ಹೇಳಿಕೊಳ್ಳಲು ಬಂದಂತೆ ಶಾಸಕರ ಬಳಿ ಗ್ರಾಮಸ್ಥರು ಬರುತ್ತಾರೆ ಎಂದೇ ಭಾವಿಸಲಾಗಿತ್ತು ಆದರೆ ಶಾಸಕರ ಬಳಿ ಯಾರು ಬರಲಿಲ್ಲ ಆಗ ಆಯೋಜಕರಾದ ಹೇಮ ರಾಜ ನಾಯ್ಕ್, ಶಿವಾಜಿ ನಾಯ್ಕ್, ಮೋತಿಲಾಲ್, ನಾಗರಾಜ್ ನಾಯ್ಕ್,ವೆಂಕಟೇಶ್ ನಾಯ್ಕ್ ,ಕುಮಾರ್ ನಾಯ್ಕ್,ಶಾಸಕರನ್ನು ಸನ್ಮಾನಿಸಿ ಹೊರಡುತ್ತಿದ್ದರು ಆಗ ಶಾಸಕರು ಯಾರು ಬಂದು ಸಮಸ್ಯೆಗಳನ್ನು ಹೇಳದಿದ್ದರೆ ನಾವು ಹೊರಡುತ್ತೇವೆ ಎಂದರು.

ಆಗ ಶಾಲೆಯ ಆವರಣದಲ್ಲಿ ಭೇಟಿ ನೀಡಿದರು ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಿಸಿ ಊಟದ ಅಡುಗೆ ಸಹಾಯಕಿಯೊಬ್ಬರು ನಮ್ಮ ಮನೆಯ ಹತ್ತಿರ ಚರಂಡಿ ಸ್ವಚ್ಛತೆ ಇರುವುದಿಲ್ಲ ಸರ್ ಎಂದು ಭಯದಿಂದ ಹೇಳಿಕೊಂಡರು ಇದಕ್ಕೆ ಶಾಸಕರು ಗುತ್ತಿಗೆದಾರ ಕುಮಾರನನ್ನು ವಿಚಾರಿಸಿದರು ಅದಕ್ಕೆ ಸಂಬಂಧಪಟ್ಟಂತೆ ಸ್ವಚ್ಛತೆಗೆ ಕ್ರಮ ಕೈಗೊಳ್ಳುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು .

ಇದಕ್ಕೆ ಕಾರಣವಿಷ್ಟೇ ಲಕ್ಷ್ಮೀಪುರ ಗ್ರಾಮವು ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ , ಹಾಗೂ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕರೂ ಆದಂತ ಪಿಟಿ ಪರಮೇಶ್ವರ್ ನಾಯ್ಕ್ ರವರ ಸ್ವಗ್ರಾಮವಾಗಿದೆ .
ಆದುದರಿಂದ ಅವರ ಭಯದಿಂದಾಗಿ ಯಾರೂ ಇಲ್ಲಿ ಬಿಜೆಪಿ ಸೇರುತ್ತಿಲ್ಲ ಅಥವಾ ಬಿಜೆಪಿ ಮನಸಿನೊಳಗಿದ್ದರೂ ಭಯದಿಂದಲೊ ಏನೋ ಬಹಿರಂಗವಾಗಿ ಬಿಜೆಪಿ ಪರ ನಿಲ್ಲುತ್ತಿಲ್ಲ ಎಂದು ಹೇಳಲಾಗುತ್ತದೆ.

ಶಾಸಕರು ಬಂದ ತಕ್ಷಣ ಆಗಲಿ ಬಿಜೆಪಿ ಪರ ಆಗಲಿ ಯಾರೊಬ್ಬರೂ ಮುಂದೆ ಬಾರದಿರುವುದು ಕಂಡು ಬಂತು ಇದರಿಂದ ಲಕ್ಷ್ಮೀಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಲಕ್ಷ್ಮಿಪುರ ಗ್ರಾಮದಲ್ಲಿ ಮಾತ್ರ ಕಾಂಗ್ರೆಸ್ ನ ಭದ್ರಕೋಟೆ ಭದ್ರವಾಗಿಯೇ ಉಳಿದಿದೆ ಎಂದು ಹೇಳಲಾಗುತ್ತದೆ.

ಇದರಿಂದ ಲಕ್ಷ್ಮೀಪುರ ಗ್ರಾಮದ ಕಾಂಗ್ರೆಸ್ ಭದ್ರ ಕೋಟೆಯನ್ನು ಶಾಸಕ ಕರುಣಾಕರ ರೆಡ್ಡಿ ಅವರಿಂದ ಚಿದ್ರಗೊಳಿಸಲು ಸಾಧ್ಯವಿಲ್ಲದಂತಾಗಿದೆ ಎಂದು ಹೇಳಲಾಗುತ್ತದೆ. ಏಕೆಂದರೆ ಕಳೆದ ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ಪಿಟಿ ಪರಮೇಶ್ವರ ನಾಯ್ಕ್ ರವರ ಪುತ್ರ ಪಿಟಿ ಭರತ್ ಅವರಿಗೆ ಪಿ ಟಿ ಶಿವಾಜಿ ನಾಯ್ಕ್ ಎದುರಾಳಿಯಾಗಿ ನಿಂತು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಪಿ ಟಿ ಶಿವಾಜಿ ನಾಯ್ಕ್ ರವರು ಪರಾಭವಗೊಂಡಿದ್ದರು ಇದು ಶಾಸಕ ಕರುಣಾಕರ ರೆಡ್ಡಿ ಅವರಿಗೆ ತೀವ್ರ ಹಿನ್ನಡೆಯಾದಂತಾಗಿತ್ತು ಎಂದು ಹೇಳಲಾಗಿತ್ತು .

ಇದರಿಂದಾಗಿ ಬಿಜೆಪಿಯ ಕೋಟೆ ಅಲ್ಲಿ ಭದ್ರವಾಗುತ್ತದೆ ಎಂದೇ ಭಾವಿಸಲಾಗಿತ್ತು ಆದರೆ ಅಲ್ಲಿ ಲೆಕ್ಕಾಚಾರ ಎಲ್ಲವೂ ಬುಡಮೇಲು ಆಗಿದೆ ಎಂದೇ ಹೇಳಲಾಗುತ್ತದೆ ಆದುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ರೀತಿಯಾದಂತ ಪರಿಣಾಮಗಳು ಲಕ್ಷ್ಮಿಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಿಜೆಪಿ ಪರ ಉಂಟಾಗುತ್ತವೆ ಎಂಬುದನ್ನು ಹಾಗೂ ಗ್ರಾಮದಲ್ಲಿ ನಡೆಯುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದೇ ಹೇಳಲಾಗುತ್ತದೆ.

 

Leave a Reply

Your email address will not be published. Required fields are marked *