ಇದ್ದಕ್ಕಿದ್ದಂತೆ ಉಕ್ಕಿ ಹರಿದು ಬಂದ ತುಂಗಭದ್ರಾ ನದಿ ಕೊಚ್ಚಿ ಹೋದ ಭತ್ತದ ರಾಶಿಗಳು :ರೈತ ಕಂಗಾಲು.
1 min readಇದ್ದಕ್ಕಿದ್ದಂತೆ ಹರಿದು ಬಂದ ತುಂಗಭದ್ರೆ, ಕೊಚ್ಚಿ ಹೋದ ಭತ್ತದ ರಾಸಿಗಳು :ರೈತ ಕಂಗಾಲು.
ಹರಪನಹಳ್ಳಿ ತಾಲೂಕಿನ ನಿಟ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ತಾವರೆಗುಂದಿ ಗ್ರಾಮದ ಬಳಿ ಬುಧವಾರ ತಡರಾತ್ರಿ ಇದ್ದಕ್ಕಿದ್ದಂತೆ ತುಂಗಭದ್ರಾ ನದಿ ನೀರಿನ ಹರಿವು ಹೆಚ್ಚಾದ ಪರಿಣಾಮ ಭತ್ತ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ನಡೆದಿದೆ.
ಇದ್ದಕ್ಕಿದ್ದಂತೆ ಬುಧವಾರ ರಾತ್ರಿ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿ ಪಾತ್ರದಲ್ಲಿ ಒಣಗಿಸಲು ಹಾಕಿದ್ದ ಭತ್ತದ ಫಸಲು ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ತವರಗೊಂದಿ ಗ್ರಾಮದ ಸುಮಾರು 200 ರೈತರ 3000 ಚೀಲಗಳಷ್ಟು ಭತ್ತದ ರಾಶಿಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ರೈತರು ನದಿ ಪಾತ್ರ ಕ್ಕೆ ತೆರಳಿ ತಾಡಪಾಲು, ಗೋಣಿ ಚೀಲ ಸೇರಿದಂತೆ ವಿವಿಧ ಮಾರ್ಗದಲ್ಲಿ ಬತ್ತ ಸಂಗ್ರಹಿಸಲು ರೈತರು ಹರಸಾಹಸ ಪಟ್ಟಿದ್ದಾರೆ.
ಭತ್ತವನ್ನು ಹೊಕ್ಕಲು ಮಾಡಿ ಒಣಗಿಸಲು ನದಿ ಪಾತ್ರದಲ್ಲಿ ಜಾಗ ಇರುವುದರಿಂದ ಹಾಕಿದ್ದೇವು. ರಾತ್ರಿ ಇದ್ದಕ್ಕಿದ್ದಂತೆ ಹೊಳೆ ನೀರು ಬಂದಿದ್ದು, ಸುಮಾರು5000 ಚೀಲ ಭತ್ತ ಒಣ ಹಾಕಿದ್ದು ಅದರಲ್ಲಿ 2000 ಚೀಲ ಭತ್ತ ಹೊಳೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಕೈಗೆ ಬಂದ ತುತ್ತು ಬಾಯಿ ಬರದಂತಾಗಿ ಎಂದು ರೈತ ಪೂಜಾರ್ ಶಿವಕುಮಾರ್ ತಿಳಿಸಿದ್ದಾರೆ.
ಸುಮಾರು 6 ರಿಂದ 7 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬಂದಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ನಂದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡುವಂತೆ ಕಂದಾಯ ನಿರೀಕ್ಷಕರಿಗೆ ಸೂಚನೆ ನೀಡಿದ್ದಾರೆ.