Vijayanagara Express

Kannada News Portal

ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಬಸ್ ಒದಗಿಸುವಂತೆ ಒತ್ತಾಯಿಸಿ ಬಸ್ ನಿಲ್ದಾಣಕ್ಕೆ ಮುತ್ತಿಗೆ

1 min read

ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಬಸ್ ನಿಲ್ದಾಣಕ್ಕೆ ಮುತ್ತಿಗೆ.

ಹರಪನಹಳ್ಳಿ : ಶಾಲಾ ಕಾಲೇಜ್ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಬಸ್ ಸೌಲಭ್ಯಒದಗಿಸುವಂತೆ ಒತ್ತಾಯಿಸಿ SFI ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ಗುರುವಾರ ಹರಪನಹಳ್ಳಿ ಪಟ್ಟಣದ ಬಸ್ ನಿಲ್ದಾಣದ ಬಳಿ ಬಸ್ ತಡೆದು ಪ್ರತಿಭಟನೆ ನಡೆಸಲಾಯಿತು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಕಾಲೇಜುಗಳಾದ ಉಜ್ಜನಿ ಪೀಠದ ಎಸ್ ಯು ಜೆ ಎಂ ಪಿಯು ಕಾಲೇಜ್,ಬಳ್ಳಾರಿ ವಿವಿ ಸಂಘದ ಎ ಡಿ ಬಿ ಪದವಿ ಕಾಲೇಜ್ , ಎಸ್ ಎಸ್ ಹೆಚ್ ಜೈನ್ ಪಿಯು ಕಾಲೇಜ್,ಸಿರಿಗೆರೆ ಪೀಠದ ಹೆಚ್ ಪಿ ಎಸ್, ಪಿಯು ಕಾಲೇಜ್,ಮತ್ತು ಸರ್ಕಾರಿ ಪದವಿ ಕಾಲೇಜ್, ಹಾಗೂ ಐ ಟಿ ಐ, ಡಿಪ್ಲೊಮ, ಮುಂತಾದ ಕೋರ್ಸ್ ಗಳಿಗೆ ಪ್ರವೇಶಾತಿ ಪಡೆದಿರುವ ಸಾವಿರಾರು ವಿದ್ಯಾರ್ಥಿಗಳು ಸರ್ಕಾರಿ ಬಸ್ ಸೌಲಭ್ಯವಿಲ್ಲದಿರುವುದರಿಂದ ಪ್ರತಿನಿತ್ಯ ಪಟ್ಟಣಕ್ಕೆ ಆಟೋಗಳಲ್ಲಿ ಮತ್ತು ಖಾಸಗಿ ಬಸ್ ಗಳಲ್ಲಿ ಆಗಮಿಸುವ ದೃಶ್ಯ ಕಂಡುಬರುತ್ತದೆ,ಈಗ ಡೀಸೆಲ್ ರೇಟ್ ನ ಕಾರಣ ವೊಡ್ಡಿ ಆಟೋ ಮತ್ತು ಖಾಸಗಿ ಬಸ್ ಗಳಲ್ಲಿ ದುಪ್ಪಟ್ಟು ಹಣವನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡುತ್ತಿದ್ದಾರೆ. ಆದ್ದರಿಂದ ಸಮರ್ಪಕವಾಗಿ ಸರ್ಕಾರಿ ಬಸ್ ಸಂಚಾರ ಆರಂಭಿಸಬೇಕೆಂದು ಒತ್ತಾಯಿಸಿದರು.

ಸರಿಸುಮಾರು ಹರಪನಹಳ್ಳಿ ಬಸ್ ಡಿಪೋ ದಲ್ಲಿ 5000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಹಣ ನೀಡಿ ಬಸ್ ಪಾಸ್ ಪಡೆದುಕೊಂಡಿದ್ದಾರೆ. ಆದರೆ ಸಾರಿಗೆ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳ ಸಂಕೇಗನುಗುಣವಾಗಿ ಬಸ್ ಸಂಚಾರ ಆರಂಭಿಸದೆ ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ ಈ ಕೂಡಲೇ ವಿದ್ಯಾರ್ಥಿಗಳ ಅಗತ್ಯಕ್ಕಾನುಗುಣವಾಗಿ ಬಸ್ ಸಂಚಾರ ಆರಂಭಿಸಿ ಮಕ್ಕಳ ಭವಿಷ್ಯಕ್ಕೆ ನೇರವಾಗಬೇಕೆಂದು ಅಗ್ರಹಿಸಿದರು.

ವಿದ್ಯಾರ್ಥಿಗಳ ಮನವಿ ಸ್ವೀಕರಿಸಿದ KSRTC ಡಿಪೋ ವ್ಯವಸ್ಥಾಪಕರು ಮಾತನಾಡಿ ನಾವು ವಿದ್ಯಾರ್ಥಿಗಳ ಬಸ್ ಸಮಸ್ಯೆ ಯನ್ನು ಬಗೆಹರಿಸಲು ನಿರಂತರ ಪ್ರಯತ್ನಿಸುತ್ತಿದ್ದೇವೆ ಶಾಲಾ ಮತ್ತು ಕಾಲೇಜ್ ಸಮಯಕ್ಕೆ ಸರಿಯಾಗಿ ಬಸ್ ಸಂಚಾರ ಪ್ರಾರಂಭಿಸಲು ಮತ್ತು ಮಾರ್ಗ ಬದಲಾವಣೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಪ್ರತಿಭಟನಾ ಕಾರರಿಗೆ ಭರವಸೆಯನ್ನು ನೀಡಿದರು.

ಈ ಸಂದರ್ಭದಲ್ಲಿ SFI ತಾಲೂಕು ಅಧ್ಯಕ್ಷರಾದ ಲಕ್ಷ್ಮಣ್ ರಾವತ್, ಕಾರ್ಯದರ್ಶಿ. ವೆಂಕಟೇಶ್ ನಾಯ್ಕ್, ರವಿ ಚೌಹಾನ್ , ಪ್ರಸನ್ನ, ಲಕ್ಯ ನಾಯ್ಕ, ಕುಮಾರ್, ಸಂತೋಷ, ಪೂಜಾ, ಕಾವ್ಯ, ಸ್ವಾತಿ, ಪ್ರತಿಭಾ ಸೇರಿದಂತೆ ಹಲವರು ವಿದ್ಯಾರ್ಥಿಗಳು ಪ್ರತಿಭಟನೆ ಯ ನೇತೃತ್ವವಹಿಸಿದ್ದರು.

Leave a Reply

Your email address will not be published. Required fields are marked *