Vijayanagara Express

Kannada News Portal

ಮಹಾ ಮಳೆಗೆ ತಮ್ಮ ಪಸಲು ಕಳೆದುಕೊಂಡು ಕಂಗಲಾದ ರೈತರಿಗೆ ಧೈರ್ಯ ತುಂಬಿದ ಕಾಂಗ್ರೆಸ್ ನಾಯಕಿ ಎಂ. ಪಿ. ವೀಣಾ ಮಹಾಂತೇಶ್.

1 min read

ಮಹಾಮಳೆಯಿಂದ ತಮ್ಮ ಫಸಲು ಕಳೆದುಕೊಂಡು ಕಂಗಾಲದ ರೈತರಿಗೆ ಧೈರ್ಯ ತುಂಬಿದ ಕಾಂಗ್ರೆಸ್ ನಾಯಕಿ ಎಂ.ಪಿ.ವೀಣಾಮಹಾಂತೇಶ್.

 

ಹರಪನಹಳ್ಳಿ :ಇತ್ತೀಚೆಗೆ ಬಿಟ್ಟುಬಿಡದೇ ಸುರಿಯುತ್ತಿರುವ ಮಹಾಮಳೆಗೆ ಹಾಗೂ ಡ್ಯಾಮ್ ನಿಂದ 7ರಿಂದ 8ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಟ್ಟಿರುವ ಪರಿಣಾಮ ತುಂಗಭದ್ರಾ ನದಿಯ ದಡದಲ್ಲಿ ಕಟಾವು ಮಾಡಿ ಸಂಗ್ರಹಿಸಿಟ್ಟಿದ್ದ ಭತ್ತದ ಫಸಲು ಏಕಾಏಕಿ ನದಿನೀರು ಹರಿದು ಕೊಚ್ಚಿಕೊಂಡು ಹೋದ ಘಟನೆ ತಾಲ್ಲೂಕಿನ ತಾವರೆಗುಂದಿ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿತ್ತು ಇದರಿಂದ ಪಸಲನ್ನು ಕಳೆದುಕೊಂಡ ರೈತರು ಸಾಲ ಶೂಲ ಮಾಡಿ ಭತ್ತದ ಬೆಳೆಯನ್ನುಬೆಳೆದ ರೈತನು ತಲೆಯಮೇಲೆ ಕೈ ಹೊತ್ತು ಕುಳಿತಿದ್ದಾನೆ ಈ ವಿಷಯ ತಿಳಿದಕೂಡಲೇ ಮಾಜಿ ಉಪಮುಖ್ಯಮಂತ್ರಿ ಯಾಗಿದ್ದ ದಿ.ಎಂ.ಪಿ.ಪ್ರಕಾಶ್ ರವರ ಮಗಳಾದ ಎಂ.ಪಿ.ವೀಣಾ ಮಹಾಂತೇಶ್ ರವರು ಕ್ಷೇತ್ರ ವ್ಯಾಪ್ತಿಯ ತಾವರಗೊಂದಿ ಗ್ರಾಮದ ರೈತರೆಡೆಗೆ ರಾತ್ರೋರಾತ್ರಿ ದೌಡಾಯಿಸಿ ಆತ್ಮಸ್ಥೈರ್ಯ ತುಂಬಿದ ಹರಪನಹಳ್ಳಿ ಕ್ಷೇತ್ರದ ಜನಪರ ಹೋರಾಟಗಾರ್ತಿ ಜನರ ಕಷ್ಟಕ್ಕೆ ಮಿಡಿದು ರೈತರಿಗೆ ಧೈರ್ಯ ತುಂಬಿ ನಿಮ್ಮ ಜೊತೆಗೆ ನಾವಿದ್ದೇವೆ ಎಂದು ಧೈರ್ಯ ಹೇಳಿದ್ದಾರೆ. ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ.ವೀಣಾಮಹಾಂತೇಶ್ ಅವರು ಇಂದು ಕೂಡ ಆ ಗ್ರಾಮಕ್ಕೆ ತೆರಳಿ ಹಾನಿಗೊಳಗಾದ ರೈತರ ಮನೆಗೆ ಭೇಟಿಕೊಟ್ಟು ಧೈರ್ಯ ತುಂಬಿದರು.

 

ಈ ವಿಷಯವಾಗಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಇಂತಹ ನಷ್ಟ ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ರೈತರು ಕಷ್ಟಪಟ್ಟು ತಮ್ಮಲ್ಲಿರುವ ಅಷ್ಟೋಇಷ್ಟೋ ಜಮೀನುಗಳಲ್ಲಿ ಸಾಲ ಶೂಲ ಮಾಡಿ ಬೆಳೆಸಿದ ಪೈರು, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ. ಯಾವುದೇ ಕಾರಣಕ್ಕೂ ಧೃತಿಗೆಡದೆ ಧೈರ್ಯವಾಗಿ ಇರಿ ನಿಮ್ಮೊಂದಿಗೆ ಸದಾ ನಾನಿರುವೆ. ನಿಮ್ಮ ಕಷ್ಟಕ್ಕೆ ಸ್ಪಂದಿಸುವೆ ಎನ್ನುವ ಭರವಸೆಯನ್ನಿತ್ತು, ರೈತರಿಗೆ ಭರವಸೆಯ ನುಡಿಗಳನ್ನು ಹೇಳಿದರು.

ಈ ಸಂದರ್ಭದಲ್ಲಿ ರೈತರಾದ  ಬಸವರಾಜ್, ವಿರೂಪಾಕ್ಷ ಗೌಡ, ಸಾರಥಿ. ಸುರೇಶ, ವಾಗೀಶ್, ಪೂಜಾರ್ ಹಾಲೇಶ್, ಮಹೇಶ್ವರಪ್ಪ, ದೇವೇಂದ್ರಪ್ಪ, ಚಂದ್ರಕಾಂತ, ಕೊಟ್ರೇಶ್, ಚಂದ್ರಪ್ಪ ಮತ್ತು ತಾವರೆಗುಂದಿ  ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *