Vijayanagara Express

Kannada News Portal

ಕೃಷಿ ಕಾಯ್ದೆಯನ್ನು ವಾಪಸ್ ಪಡೆದಿರುವುದು ಸ್ವಾಗತರ್ಹ -ಎಂ. ಪಿ. ಲತಾಮಲ್ಲಿಕಾರ್ಜುನ

1 min read

ಕೃಷಿ ಕಾಯ್ದೆ ವಾಪಸ್ ಪಡೆದಿರುವುದು ಸ್ವಾಗತರ್ಹ:
ಎಂ.ಪಿ.ಲತಾ ಮಲ್ಲಿಕಾರ್ಜುನ್
ಹರಪನಹಳ್ಳಿ: ದೇಶದ ಮೊದಲ ಮಹಿಳಾ ಪ್ರಧಾನಮಂತ್ರಿ
ಶ್ರೀಮತಿ ಇಂದಿರಾಗಾಂಧಿ ಅವರ ಜನ್ಮ ದಿನದಂದು ಕೃಷಿ ಕಾಯ್ದೆ
ವಾಪಸ್ ಪಡೆದಿರುವುದು ಸ್ವಾಗತರ್ಹ ಎಂದು ಕೆಪಿಸಿಸಿ ಮಹಿಳಾ
ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಎಂ.ಪಿ.ಲತಾ
ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಕೊನೆಗೂ ದೆಹಲಿ ಗಡಿಭಾಗದಲ್ಲಿ ಹೋರಾಟ
ನಡೆಸುತ್ತಿದ್ದ ಹಾಗೂ ರೈತರು ವಿರೋಧಿಸುತ್ತಿದ್ದ ಮೂರು
ನೂತನ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ
ಮಹತ್ವದ ನಿರ್ಧಾರವನ್ನು ಮಾಡಿದೆ. ಪ್ರಧಾನ ಮಂತ್ರಿ
ನರೇಂದ್ರ ಮೋದಿ ಅವರು 3 ಕೃಷಿ ತಿದ್ದುಪಡಿ ಕಾಯ್ದೆಗಳನ್ನು
ವಾಪಸ್ ಪಡೆಯಲಾಗುವುದು. ಈ ತಿಂಗಳ ಅಂತ್ಯದಲ್ಲಿ ಸಂಸತ್ತಿನ
ಚಳಿಗಾಲ ಅಧಿವೇಶನ ಆರಂಭವಾಗುತ್ತಿದ್ದು, ಅದರಲ್ಲಿಯೇ ೩
ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ
ಪ್ರಧಾನಿ ಮೋದಿ ಪ್ರಕಟಿಸಿದ್ದಾರೆ. ಆದರೆ ಸತ್ಯಾಗ್ರಹದ ಮೂಲಕ
ದೇಶದ ರೈತರು ‘ಅಹಂಕಾರ’ವನ್ನು ಸೋಲಿಸಿದ್ದಾರೆ. ಅನ್ಯಾಯದ
ವಿರುದ್ಧ ರೈತರು ಪಡೆದ ಗೆಲುವಿನ ಶುಭಾಶಯಗಳು
ಎಂದಿದ್ದಾರೆ.
ರೈತರ ಹೋರಾಟವನ್ನು ಬೆಂಬಲಿಸಿ ಹಾಗೂ ಕೃಷಿ
ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ನನ್ನ
ನೇತೃತ್ವದಲ್ಲಿ ಕಳೆದ 13 ಫೆಬ್ರವರಿ 2021ರಂದು ಹರಪನಹಳ್ಳಿ
ಪಟ್ಟಣದ ಎಪಿಎಂಸಿ ಆವರಣದಿಂದ ಕೊಟ್ಟೂರು ರಸ್ತೆ ಮೂಲಕ
ಹಿರೇಕೆರೆ ವೃತ್ತದಿಂದ ಹೊಸಪೇಟೆ ರಸ್ತೆ ಮಾರ್ಗವಾಗಿ ಮಿನಿ
ವಿಧಾನಸೌಧದವರೆಗೆ ಪಾದಯಾತ್ರೆ ನಡೆಸಿ ತಾಲೂಕು
ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಎಂದು ಹೋರಾಟವನ್ನು
ಸ್ಮರಿಸಿಕೊಂಡಿರುವ ಅವರು, ರೈತರು ನಿರಂತರ ಹೋರಾಟ
ನಡೆಸಿದ್ದು, ಕೊನೆಗೂ ಕೇಂದ್ರ ಸರ್ಕಾರ ರೈತ ಮುಂದೆ
ಮಂಡಿಯೂರುವಂತೆ ಆಗಿದೆ ಎಂದು ತಿಳಿಸಿದ್ದಾರೆ.
ರೈತರ ನಿರಂತರ ಹೋರಾಟಕ್ಕೆ ದೊರೆತ ವಿಜಯವಾಗಿದೆ.
ಹೋರಾಟದಲ್ಲಿ 700ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ರೈತರು ಅನುಭವಿಸಿದ ಸಂಕಷ್ಟಗಳಿಗೆ ಸರ್ಕಾರ ಪರಿಹಾರ
ನೀಡಬೇಕಿದೆ. ಒಂದು ವರ್ಷಗಳ ಕಾಲ ರೈತರ ಹೋರಾಟವನ್ನು
ಕಡೆಗಣಿಸಿದ್ದ ಕೇಂದ್ರ ಸರ್ಕಾರ ಚುನಾವಣೆಗಳಲ್ಲಿ ಸೋಲು

ಮತ್ತು ಮುಂಬರುವ ಉತ್ತರ ಪ್ರದೇಶ ಚುನಾವಣೆಯನ್ನು
ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು
ಕೈಗೊಂಡಿರಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ
ಟೀಕಿಸಿದ್ದಾರೆ.

Leave a Reply

Your email address will not be published. Required fields are marked *