Vijayanagara Express

Kannada News Portal

ಭಾರತದ ಮಾಜಿ ಪ್ರಧಾನಿ ಇಂದಿರಾಗಾಂಧಿ ಜನ್ಮದಿನ ಆಚರಿಸಿದ ಎಂ. ಪಿ. ವೀಣಾ ಮಹಾಂತೇಶ್.

1 min read

ಭಾರತದ ಉಕ್ಕಿನ ಮಹಿಳೆ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಜನ್ಮದಿನ ಆಚರಿಸಿದ ಕ್ಷೇತ್ರದ ಕಾಂಗ್ರೆಸ್ ನಾಯಕಿ ಎಂ.ಪಿ.ವೀಣಾಮಹಾಂತೇಶ್.

ಹರಪನಹಳ್ಳಿ:ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ , ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ.ವೀಣಾಮಹಾಂತೇಶ್ ಅವರು ಇಂದು ತಮ್ಮ ಆಚಾರ್ಯ ಬಡಾವಣೆಯ ಜನಸಂಪರ್ಕ ಕಛೇರಿಯಲ್ಲಿ ಭಾರತ ಕಂಡ ಮೊದಲ ಮಹಿಳಾ ಪ್ರಧಾನಿ, ಉಕ್ಕಿನ ಮಹಿಳೆಯೆಂದೇ ಖ್ಯಾತಿ ಪಡೆದ ಇಂದಿರಾಗಾಂಧಿಯವರ ಜನ್ಮದಿನಾಚರಣೆಯನ್ನು ಆಚರಿಸಿದರು .

ಈ ಸಂದರ್ಭದಲ್ಲಿ ಇಂದಿರಾ ಗಾಂಧಿ ಕುರಿತು ಮಾತನಾಡಿದ ಎಂ.ಪಿ.ವೀಣಾಮಹಾಂತೇಶ್ ರವರು, ಇಂದಿರಾಗಾಂಧಿಯಂತಹ ಪ್ರಧಾನಿಯನ್ನು ಪಡೆದ ಈ ದೇಶದ ಜನತೆ ಪುಣ್ಯವಂತರು, ತಾವೂ ಒಬ್ಬ ಹೆಣ್ಣಾಗಿ ದೇಶದ ಇತಿಹಾಸದ ಪುಟಗಳಲ್ಲಿ ಬರೆದಿಡುವಂತಹ ಅಮೂಲಾಗ್ರ ಬದಲಾವಣೆಯನ್ನು ತಂದರು. ಇಂದಿರಾಗಾಂಧಿ ಅವರು ಉಳುವವನೇ ಭೂಮಿಯ ಒಡೆಯ ಎಂಬ ಮಹತ್ವದ ಕಾನೂನು ತಂದು ದೇಶದಲ್ಲಿನ ರೈತರಿಗೆ ಜೀವಾಳವಾದರು. ಇಪ್ಪತ್ತು ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ದೇಶದ ಬಡವರಿಗೆ, ನಿರ್ಗತಿಕರಿಗೆ ನಿರ್ಭಯವಾಗಿ ಜೀವಿಸುವ ಹಕ್ಕನ್ನು ಒದಗಿಸಿಕೊಟ್ಟರು. ಅವರು ನಡೆದು ಬಂದ ದಾರಿ ನಮಗೆ ಸ್ಪೂರ್ತಿದಾಯಕ ಎಂದು ನುಡಿದರು.

ಸಂದರ್ಭದಲ್ಲಿ ದಾದಾಪೀರ್ ಮಕರಬ್ಬಿ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರು ಹರಪನಹಳ್ಳಿ ಬ್ಲಾಕ್, ಗುರು ಬಸವರಾಜ್ ಅಧ್ಯಕ್ಷರು ಅಸಂಘಟಿತ ಕಾರ್ಮಿಕರ ಮುಖಂಡ,ಹರಪನಹಳ್ಳಿ ಬ್ಲಾಕ್.ಸಿ ಮಂಜುನಾಥ್ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ,ಹರಪನಹಳ್ಳಿ ಬ್ಲಾಕ್, ನೀಲಪ್ಪ ಮಾದಾಪುರ, ಬಸವರಾಜ್ ಮಾದಾಪುರ, ಕಾರ್ತಿಕ, ಮದನ್ ಸ್ವಾಮಿ, ಅರುಣ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *