Vijayanagara Express

Kannada News Portal

ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಸ್ ಪಡೆದಿರುವುದು ಸ್ವಾಗತ -ಹೆಚ್. ಎಂ. ಮಹೇಶ್ವರ ಸ್ವಾಮಿ ರೈತ ಹೋರಾಟಗಾರರು.

1 min read

ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಾಸ್ ಪಡೆದಿರುವುದು ಸ್ವಾಗತ -ಹೆಚ್.ಎಂ.ಮಹೇಶ್ವರ ಸ್ವಾಮಿ. ರೈತ ಹೋರಾಟಗಾರರು.

ಹರಪನಹಳ್ಳಿ : ಕೇಂದ್ರ ಸರಕಾರ ಕಳೆದ ವರ್ಷ ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದ, ವಿವಾದಾತ್ಮಕ ಮೂರು ರೈತ ವಿರೋಧಿ ಕೃಷಿ ಕಾನೂನುಗಳನ್ನು ಹಿಂತೆಗೆದು ಕೊಂಡಿರುವುದು ಪ್ರಜಾಪ್ರಭುತ್ವಕ್ಕೆ ಸಂದ ಜಯ. ಇದನ್ನು ಸ್ವಾಗತಿಸುತ್ತೇವೆ ಎಂದು ಹೆಚ್.ಎಂ.ಮಹೇಶ್ವರ ಸ್ವಾಮಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಅಧ್ಯಕ್ಷರು ಹೇಳಿದ್ದಾರೆ.
ಕೇಂದ್ರದ ಬಿಜೆಪಿ ಸರ್ಕಾರಕ್ಕೆ ಕೃಷಿ ಕಾಯ್ದೆಯನ್ನು ವಾಪಾಸ್ ಪಡೆದುಕೊಳ್ಳಲು ಮತ್ತು ಆ ಕಾಯ್ದೆಗಳು ರೈತರಿಗೆ ಮಾರಕ ಎಂದು ಅರ್ಥ ಮಾಡಿಕೊಳ್ಳಲು 355 ದಿನಗಳು ಬೇಕಿತ್ತೆ? ಎಂದು ಪ್ರಶ್ನೆಸಿದ್ದಾರೆ. ಮಳೆ ಗಾಳಿ ಚೆಳಿ ಎನ್ನದೇ ರೈತರು ಹೋರಾಟವನ್ನು ಮಾಡಿದ್ದಾರೆ ಕಾನೂನುಗಳು ರೈತರನ್ನು ರಕ್ಷಿಸಲು ಇರಬೇಕೆ ಹೊರತು ಉದ್ಯಮಿಗಳನ್ನು ರಕ್ಷಿಸಲು ಮುಂದಾಗಿದ್ದು ದುರಂತವೇ ಸರಿ , ಸರ್ಕಾರ ಜಾರಿಗೆ ತರುವ ಕಾನೂನುಗಳು ರೈತರಿಗೆ ಲಾಭ ತರಬೇಕೆ ವಿನಾ ಕಾಪೋರೇಟರ್ ಗಳ ಜೇಬು ತುಂಬಿಸುವುಗಳಾಗಬಾರದು ಎಂದರು.

ಈಗ ಕೇಂದ್ರ ಸರ್ಕಾರ ವಾಪಸ್ ಪಡೆದಿರುವ ಕೃಷಿ ಕಾಯ್ದೆಗಳು ಕೇವಲ ಪ್ರಧಾನಿ ಮೋದಿ ಸರಕಾರ ರೈತರ ಕಣ್ಣೋರೆಸುವ ರಾಜಕೀಯ ತಂತ್ರವಾಗಬಾರದು. ಈಗಾಗಲೇ ರಾಷ್ಟ್ರಪತಿಗಳ ಅಂಕಿತದೊಂದಿಗೆ ಜಾರಿಗೆ ಬಂದ ಈ ಕಾನೂನನ್ನು ಮುಂದಿನ ಲೋಕ ಸಭಾ ಅಧಿವೇಶನದಲ್ಲಿ ಸಾಂವಿಧಾನಿಕ ಮಾನ್ಯತೆಯೊಂದಿಗೆ ಅಧಿಕೃತವಾಗಿ ರದ್ದುಗೊಳಿಸಬೇಕು. ಸರಕಾರ ಈ ಆಶ್ವಾಸನೆಯನ್ನು ಜನರಿಗೆ ನೀಡಬೇಕು. ಇಲ್ಲವಾದಲ್ಲಿ ಮತ್ತೆ ರೈತ ಹೋರಾಟದ ಕಿಚ್ಚು ಭುಗಿಲೇಳುವುದು ಅನಿವಾರ್ಯ ವಾದೀತು ಎಂದು ಹೇಳಿದರು.

ಕಳೆದ ಒಂದು ವರ್ಷದಿಂದ ನಡೆದ ಹೋರಾಟದಲ್ಲಿ ಸುಮಾರು 700ಕ್ಕೂ ಹೆಚ್ಚು ರೈತರು ಅಸು ನೀಗಿದ್ದು ಇವರ ಕುಟುಂಬಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು. ಪ್ರತಿಭಟನೆಯನ್ನು ಹತ್ತಿಕ್ಕಲು ಹುನ್ನಾರ ನಡೆಸಿ ರೈತ ಕುಟುಂಬಗಳ ಕಷ್ಟ ನಷ್ಟಗಳಿಗೆ ಕಾರಣರಾದವರು ಮತ್ತು ಕೇಂದ್ರದ ಮಂತ್ರಿಯೊಬ್ಬರ ಮಗ ಧರಣಿ ನಿರತ ರೈತರ ಮೇಲೆ ಕಾರು ಹಾಯಿಸಿ ಅಪಘಾತ ಮಾಡಿದವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳ ಬೇಕು. ಇದರೊಂದಿಗೆ ಈಗಾಲೇ ಜಾರಿಗೆ ತಂದ ವಿದ್ಯುತ್ ಮಸೂದೆಯನ್ನು ರೈತರ ಹಿತದೃಷ್ಠಿಯಿಂದ ಹಿಂತೆಗೆದುಕೊಳ್ಳಬೇಕು ಎಂದು ಹೆಚ್.ಎಂ.ಮಹೇಶ್ವರಸ್ವಾಮಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಧ್ಯಕ್ಷರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *