October 11, 2024

Vijayanagara Express

Kannada News Portal

ಉಚ್ಚಂಗಿದುರ್ಗಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಭೇಟಿ

1 min read

ಉಚ್ಚಂಗಿದುರ್ಗಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಭೇಟಿ

ಹರಪನಹಳ್ಳಿ/ಜಗಳೂರು: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದ ಶಕ್ತಿ ದೇವತೆ ಶ್ರೀ ಉಚ್ಚೇಂಗೆಮ್ಮ ದೇವಿಯ ಭಕ್ತರು ಉತ್ತರ ಕರ್ನಾಟಕ ಹಾಗೂ ಮಧ್ಯ ಕರ್ನಾಟಕದ ಮತ್ತು ಹೊರ ರಾಜ್ಯಗಳಲ್ಲಿ ಸಹ ಲಕ್ಷಾಂತರ ಭಕ್ತರು ನೆಲೆಸಿದ್ದಾರೆ , ಉಚ್ಚಂಗಿದುರ್ಗದ ಉಚ್ಚಂಗೆಮ್ಮದೇವಿ ಜಾತ್ರಾಮಹೋತ್ಸವ ಕಾರ್ಯಕ್ರಮವು ಪ್ರತಿವರ್ಷ ಫ್ರೆಬ್ರವರಿ ತಿಂಗಳಲ್ಲಿ ಭರತ ಹುಣ್ಣಿಮೆಯ ದಿನದಂದು ಅದ್ದೂರಿಯಾಗಿ ನಡೆಯುತ್ತಿತ್ತು, ಈ ವರ್ಷ ಕೋವಿಡ್- 19 ಸಾಂಕ್ರಾಮಿಕ ಕಾಯಿಲೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಬಾರಿ ಸಂಖ್ಯೆ ಯಲ್ಲಿ ಜನರು ಸೇರುವುದನ್ನು ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಗುರುವಾರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು, ಉಚ್ಚಂಗಿದುರ್ಗದ ಶಕ್ತಿ ದೇವಿಯಾದ ಶ್ರೀ ಉಚ್ಚೇಂಗೆಮ್ಮ ದೇವಿಯ ಜಾತ್ರೆಯ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶ ನಿಷೇಧ ಸೇರಿದಂತೆ ವಿವಿಧ ರೀತಿಯ ಮುಂಜಾಗ್ರತೆ ಕ್ರಮಗಳ ಕುರಿತಂತೆ ಪರಿಶೀಲನೆ ನಡೆಸಿದರು.

ಕೋವಿಡ್-19 ಮತ್ತು ಓಮಿಕ್ರಾನ್ ಸಾಂಕ್ರಾಮಿಕ ಕಾಯಿಲೆಯ ಹರಡುವಿಕೆಯನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯದ ಎಲ್ಲಾಕಡೆಗಳಲ್ಲಿ ನೆಡೆಯುತ್ತಿರುವ ಜಾತ್ರೆ, ಉತ್ಸವ ಸೇರಿದಂತೆ ಎಲ್ಲಾ ರೀತಿಯ ಉತ್ಸವಗಳ ಮೇಲೆ ನಿರ್ಬಂಧ ವಿಧಿಸುವ ಮೂಲಕ ಸರಳ ಹಾಗೂ ಸಾಂಕೇತಿಕ ಆಚರಣೆಗೆ ಮಾರ್ಗಸೂಚಿ ಹೊರಡಿಸಿದೆ. ಈ ಕಾರಣದಿಂದಾಗಿ ವಿಜಯನಗರ ಜಿಲ್ಲಾಡಳಿತವೂ ಸಹ ಉಚ್ಚಂಗೆಮ್ಮದೇವಿ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿಷೇಧ ಹೇರಿ ಆದೇಶ ಜಾರಿಮಾಡಲಾಗಿದೆ . ಹಾಗೂ ಜಾತ್ರೆಯಲ್ಲಿಯೂ ಸಹ ಭಕ್ತರು ಗುಂಪು ಗುಂಪಾಗಿ ಸೇರುವಿಕೆಗೂ ನಿರ್ಬಂಧ ಹೇರಿದೆ. ಜಾತ್ರೆಯಲ್ಲಿ ನೆರೆಯ ಮಹಾರಾಷ್ಟ್ರ ಹಾಗೂ ತೆಲಂಗಾಣ, ಆಂಧ್ರಪ್ರದೇಶದ ಭಕ್ತರು ಕೂಡ ಪಾಲ್ಗೊಳ್ಳುತ್ತಿರುತ್ತಾರೆ ಹೀಗಾಗಿ, ಜಾತ್ರೆಯಲ್ಲಿ ಭಕ್ತರ ಪ್ರವೇಶದ ಮೇಲೆ ನಿರ್ಬಂಧವನ್ನು ವಿಧಿಸಿದೆ.
ಕರ್ನಾಟಕ ರಾಜ್ಯ ರಸ್ತೆಸಾರಿಗೆ ಸಂಸ್ಥೆಯ (KSRTC) ಬಸ್ ಸೇವೆ ಸೇರಿದಂತೆ ಖಾಸಗೀ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದೆ. ಹಾಗಾಗಿ ಭಕ್ತರು, ಸರ್ಕಾರದ ಜೊತೆಗೆ ಸಹಕರಿಸುವಂತೆ ಭಕ್ತರಲ್ಲಿ ಮನವಿ ಮಾಡಿದರು.

ಗ್ರಾಮದಲ್ಲಿ ಹಾದುಹೋಗಿರುವ ಮಂಡ್ಯ- ಹೂವಿನಹಡಗಲಿ ರಾಜ್ಯಹೆದ್ದಾರಿ ಸೇರಿದಂತೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳಿಗೂ ಊರಹೊರಗೆ ಬ್ಯಾರಿಕೇಡ್ ಹಾಕಿ, ಸಾರ್ವಜನಿಕರ ಪ್ರವೇಶ ನಿಷೇಧಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಪೊಲೀಸ್ ಇಲಾಖೆಯ ಡಿವೈಎಸ್‍ಪಿ ಹಾಗೂ ಸಿಪಿಐಗೆ ಪೊಲೀಸ್ ವರಿಷ್ಠಾಧಿಕಾರಿ ಕಟ್ಟುನಿಟ್ಟಿನ ಕ್ರಮಗಳ ಬಗ್ಗೆ ಮಾರ್ಗದರ್ಶನ ನೀಡಿದರು.
ಜಾತ್ರೆಯ ಸಂದರ್ಭದಲ್ಲಿ ನಡೆಯಲಾಗುತ್ತದೆ ಎನ್ನಲಾಗುತ್ತಿರುವ ಅನೇಕ ಸಾಮಾಜಿಕ ಅನಿಷ್ಠ ಪಿಡುಗುಗಳ ಆಚರಣೆಯ ಮೇಲೂ ಹದ್ದಿನ ಕಣ್ಣಿಟ್ಟು ತೀವ್ರತರನಾದ ಕಟ್ಟೆಚ್ಚರವಹಿಸುವಂತೆ ಪೊಲೀಸ್ ವರಿಷ್ಠಾಧಿಕಾರಿ ಡಾ . ಅರುಣ್ ಅವರು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳಲು ಡಿವೈಎಸ್ಪಿಗೆ ನಿರ್ದೇಶನ ನೀಡಿದರು.

ಜಗಳೂರು ಮತಕ್ಷೇತ್ರ ವ್ಯಾಪ್ತಿಯ ಐತಿಹಾಸಿಕ ಗ್ರಾಮ ಉಚ್ಚೇಂಗಿದುರ್ಗದ ಶ್ರೀ ಉಚ್ಚೇಂಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರನ್ನು, ಜಗಳೂರು ಕ್ಷೇತ್ರದ ಶಾಸಕರೂ , ಹಾಗೂ ಮಹರ್ಷಿವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಎಸ್.ವಿ. ರಾಮಚಂದ್ರ ಅವರು, ಗ್ರಾಮಸ್ಥರ ಪರವಾಗಿ ಶಾಲು ಹೊದಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಉಚ್ಚೇಂಗಿದುರ್ಗ ಗ್ರಾಮದ ಮುಖಂಡರು ಹರಪನಹಳ್ಳಿ ಡಿವೈಎಸ್‍ಪಿ ಹಾಲಮೂರ್ತಿರಾವ್, ಸಿಪಿಐ ನಾಗರಾಜ ಕಮ್ಮಾರ್, ಅರಸೀಕೆರೆ ಠಾಣೆ ಪಿಎಸ್‍ಐ ನಾಗರತ್ನ, ಮುಖಂಡರಾದ ಎಂ.ಜಿ. ಸಿದ್ದನಗೌಡ, ಸೇರಿದಂತೆ ಮುಂತಾದವರು ಹಾಜರಿದ್ದರು .

Leave a Reply

Your email address will not be published. Required fields are marked *